Asianet Suvarna News Asianet Suvarna News

ಧ್ರುವ ಸರ್ಜಾ 'KD' ಚಿತ್ರಕ್ಕೆ ಶಿಲ್ಪಾ ಶೆಟ್ಟಿ ನಾಯಕಿ; ಪ್ರೇಮ್ಸ್‌ ಚಿತ್ರಕ್ಕೆ ಹೊಸ ಟ್ವಿಸ್ಟ್‌?

ಆಕ್ಷನ್ ಪ್ರಿನ್ಸ್‌ ಚಿತ್ರಕ್ಕೆ ರಾಧನಾ ರಾಮ್ ಅಥವಾ ಶಿಲ್ಪಾ ಶೆಟ್ಟಿ ಎಂಟ್ರಿ? ಧ್ರುವ ಸರ್ಜಾ ಕೊಟ್ಟ ಕ್ಲಾರಿಟಿ ಇದು..

Shilpa shetty to act in Dhruva Sarja KD film vcs
Author
First Published Nov 27, 2022, 6:48 PM IST

ಕನ್ನಡ ಚಿತ್ರರಂಗದ ಡಿಫರೆಂಟ್ ಡೈರೆಕ್ಟರ್ ಜೋಗಿ ಪ್ರೇಮ್ ನಿರ್ದೇಶನ ಮಾಡುತ್ತಿರುವ 9ನೇ ಸಿನಿಮಾ ಕೆಡಿ. ಈ ಚಿತ್ರಕ್ಕೆ ಆಕ್ಷನ್ ಪ್ರಿನ್ಸ್‌ ಧ್ರುವ ಸರ್ಜಾ ನಾಯಕನಾಗಲಿದ್ದು ಐದು ಭಾಷೆಯಲ್ಲಿ ರಿಲೀಸ್‌ಗೆ ಸಜ್ಜಾಗಿದೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿಯಲ್ಲಿ ಪೋಸ್ಟರ್ ರಿಲೀಸ್ ಮಾಡಲಾಗಿದ್ದು ಅಭಿಮಾನಿಗಳಿಗೆ ಮೆಚ್ಚುಗೆ ವ್ಯಕ್ತವಾಗಿತ್ತು.  ಕೆಡಿ ಚಿತ್ರದ ಮೂಲಕ ಪ್ರೇಮ್ ಪ್ಯಾನ್‌ ಇಂಡಿಯಾ ಸಿನಿಮಾ ಡೈರೆಕ್ಟರ್ ಲಿಸ್ಟ್‌ಗೆ ಸೇರಿಕೊಳ್ಳಿದ್ದಾರೆ. 

ಧ್ರುವ ಸರ್ಜಾ ಚಿತ್ರಕ್ಕೆ ನಾಯಕಿ ಆಗಿ ಯಾರೇ ಆಯ್ಕೆ ಆಗಿದ್ದರು ಅವರಿಗೆ ಸಿಗುವ ಫೇಮ್ ತುಂಬಾನೇ ಡಿಫರೆಂಟ್. ಹೀಗಾಗಿ ಯಾರು ಎಂದು ನೆಟ್ಟಿಗರು ಗೆಸ್ ಮಾಡುತ್ತಿದ್ದರು. ಕೆಲವು ಮೂಲಗಳಿಂದ ತಿಳಿದು ಬಂದಿರುವ ಮಾಹಿತಿ ಪ್ರಕಾರ ಕನಸಿನ ರಾಣಿ ಮಾಲಾಶ್ರೀ ಮಗಳು ರಾಧಾನಾ ರಾಮ್‌ ಅಥವಾ ಬಾಲಿವುಡ್‌ನಲ್ಲಿ ಮಿಂಚುತ್ತಿರುವ ಮಂಗಳೂರು ಮೀನು ಶಿಲ್ಪಾ ಶೆಟ್ಟಿ ಎನ್ನುತ್ತಾರೆ. ಇಬ್ಬರೂ ಸೂಪರೋ ಸೂಪರ್‌ ಯಾರ್ ಬಂದ್ರು ಓಕೆ ಅಂತಾರೆ ಫ್ಯಾನ್ಸ್‌. 

ಧ್ರುವ ಮಾತು:

'ಚಿತ್ರದ ನಾಯಕಿ ಬಗ್ಗೆ ನನಗೆ ಮಾಹಿತಿ ಇಲ್ಲ ಆದರೆ ಶಿಲ್ಪಾ ಶೆಟ್ಟಿ ಬಹುತೇಕ ಕನ್ಫರ್ಮ್ ಮಾಡಿದ್ದಾರೆ. ಇನ್ನೂ ಏನೂ ಹೇಳಿಲ್ಲ ಈ ತಿಂಗಳು ಅಥವಾ ಒಂದು ವಾರ ಆದ್ಮೇಲೆ ಕೆಡಿ ಸಿನಿಮಾ ಸೆಟ್‌ಗೆ ಸೇರಿಕೊಳ್ಳುತ್ತೀನಿ ಆಗ ನಿಮಗೆ ನಾನು ಸಂಪೂರ್ಣ ಮಾಹಿತಿ ಕೊಡುವೆ' ಎಂದು ಖಾಸಗಿ ಟಿವಿ ಸಂದರ್ಶನದಲ್ಲಿ ಧ್ರುವ ಸರ್ಜಾ ಹೇಳಿದ್ದರು. 

Shilpa shetty to act in Dhruva Sarja KD film vcs

ಬಿ-ಟೌನ್ ಸ್ಟಾರ್ ಎಂಟ್ರಿ:

ಖಡಕ್ ಖದರ್,  ಭರ್ಜರಿ ಆಕ್ಷನ್, ಜಬರ್ದಸ್ತ್ ಡೈಲಾಗ್ ಹೊಡೆದು ಅಭಿಮಾನಿಗಳ ಹೃದಯ ಸಿಂಹಾಸದಲ್ಲಿ ಮನೆ ಮಾಡಿರೋ ಧ್ರುವ ಸರ್ಜಾ ಹಾಗೂ ದಿ ಶೋ ಮ್ಯಾನ್ ಜೋಗಿ ಪ್ರೇಮ್ ಕಾಂಬಿನೇಷನ್ ನಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ಸಿದ್ಧವಾಗ್ತಿದೆ. ಈ ಸಿನಿಮಾಗಾಗಿ ಸಂಜಯ್ ದತ್ ಎಂಟ್ರಿ ಕೊಡುತ್ತಿದ್ದಾರೆ. ಈಗಾಗಲೇ ಪ್ರೇಮ್ ಸಂಜಯ್ ದತ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಇನ್ನೇನಿದ್ರು ಅಧಿಕೃತ ಘೋಷಣೆಯೊಂದೆ ಬಾಕಿ. ಶೋ ಮ್ಯಾನ್ ಜೋಗಿ ಪ್ರೇಮ್ ಸಿನಿಮಾ ಅಂದ್ರೆನೇ ಹಾಗೆ ಸ್ಪೆಷಲ್ ಟ್ರೀಟ್ಮೆಂಟ್ ಒಂದನ್ನ ಇಟ್ಟಿರ್ತಾರೆ. ಲವ್, ಎಮೋಷನ್ ಸೂಪರ್ ಹಾಡುಗಳು ಮಾತ್ರ ಅಲ್ಲ, ಬಿಗ್ ಸ್ಟಾರ್ ಕಾಸ್ಟ್ ಅನ್ನ ತಮ್ಮ ಸಿನಿಮಾದಲ್ಲಿ ತೋರಿಸೋ ಪಂಟರ್ ಪ್ರೇಮ್.

ಅವ್ರು ಫ್ಯಾನ್ ಇವ್ರು ಫ್ಯಾನ್ ಅಂತ ವಾರ್ ಮಾಡುವವರಿಗೆ ಕಿವಿ ಮಾತು ಹೇಳಿದ ಧ್ರುವ ಸರ್ಜಾ!

'ಇದು ಪ್ಯಾನ್‌ ಇಂಡಿಯಾ ಸಿನಿಮಾ. 1970ರಲ್ಲಿ ನಡೆದ ನೈಜ ಘಟನೆಗಳಿಂದ ಸ್ಫೂರ್ತಿಗೊಂಡಿದೆ. ಬೇರೆ ಬೇರೆ ಭಾಷೆಯ ಕಲಾವಿದರೂ ಚಿತ್ರದಲ್ಲಿ ನಟಿಸಲಿದ್ದಾರೆ. ಮುಂದೆ ಅವರ ಪಾತ್ರದ ಲುಕ್ಕಿನ ಜತೆಗೆ ಮಾತನಾಡುತ್ತೇನೆ.ಈಗಾಗಲೇ 7 ಕೆಜಿ ತೂಕ ಇಳಿಸಿಕೊಂಡಿದ್ದೇನೆ. ರೆಟ್ರೋ ಸ್ಟೈಲ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಮಾಸ್‌ ಹಾಗೂ ಆ್ಯಕ್ಷನ್‌ ಥ್ರಿಲ್ಲರ್‌ ಕತೆ. ನನ್ನ ಪಾತ್ರದ ಹೆಸರು ಕಾಳಿದಾಸ. ಅದರ ಸಂಕ್ಷಿಪ್ತ ರೂಪವೇ ಕೆಡಿ ಅಂದುಕೊಳ್ಳಿ. ನಾನು ಹುಟ್ಟಿದ್ದು 6ನೇ ತಾರಿಖು. ನನ್ನ ಲಕ್ಕಿ ನಂಬರ್‌ 6. ಕೆಡಿ ನನ್ನ ನಟನೆಯ 6ನೇ ಸಿನಿಮಾ. ಈ ವಿಚಾರದಲ್ಲಿ ನಾನು ಲಕ್ಕಿ’ ಎಂದರು ಧ್ರುವ ಸರ್ಜಾ

 ಕೆವಿಎನ್‌ ಪ್ರೊಡಕ್ಷನ್‌ ನಿಶಾ ಕೋನಾವೆಂಕಟ್‌, ಸುಪ್ರಿತ್‌ ಅವರು ಟೈಟಲ್‌ ಬಗ್ಗೆ ಮಾತನಾಡಿದರು. ಅರ್ಜುನ್‌ ಜನ್ಯ ಸಂಗೀತ, ವಿಲಿಯಂ ಡೇವಿಡ್‌ ಸಿನಿಮಾಟೋಗ್ರಾಫಿ ಚಿತ್ರಕ್ಕಿದೆ. ಶೀಘ್ರದಲ್ಲಿಯೇ ಚಿತ್ರೀಕರಣ ಪ್ರಾರಂಭವಾಗಲಿದೆ ಎನ್ನುತ್ತಿದೆ ಚಿತ್ರತಂಡ.

Follow Us:
Download App:
  • android
  • ios