Asianet Suvarna News Asianet Suvarna News

ಅಶ್ಲೀಲ ವಿಡಿಯೋ ಪ್ರಕರಣ; ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಗೆ ನಿರೀಕ್ಷಣಾ ಜಾಮೀನು ನೀಡಿದ ಸುಪ್ರೀಂ ಕೋರ್ಟ್

ಅಶ್ಲೀಲ ವಿಡಿಯೋ  ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದ್ದಂತೆ  ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾಗೆ ಬಿಗ್ ರಿಲೀಫ್ ಸಿಕ್ಕಿದೆ.

Pornography case: Shilpa Shetty husband Raj Kundra gets anticipatory bail from Supreme Court sgk
Author
First Published Dec 13, 2022, 3:51 PM IST

ಅಶ್ಲೀಲ ವಿಡಿಯೋ  ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದ್ದಂತೆ  ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾಗೆ ಬಿಗ್ ರಿಲೀಫ್ ಸಿಕ್ಕಿದೆ. ರಾಜ್ ಕುಂದ್ರ ಮತ್ತು ಇತರ ನಾಲ್ವರು ಆರೋಪಿಗಳಿಗೆ ಇಂದು (ಡೆಸಂಬರ್ 13) ಸುಪ್ರೀಂ ಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಇವರಲ್ಲಿ ಶರ್ಲಿನ್ ಚೋಪ್ರಾ ಮತ್ತು ಪೂನಂ ಪಾಂಡೆ ಕೂಡ ಸೇರಿದ್ದಾರೆ. ಅಶ್ಲೀಲ ವಿಡಿಯೋ ಚಿತ್ರಿಸಿ ವಿತರಣೆ ಮಾಡುತ್ತಿದ್ದ ಆರೋಪದ ಮೇಲೆ ರಾಜ್ ಕುಂದ್ರ ವಿರುದ್ಧ ಎಫ್ ಐ ಆರ್ ದಾಖಲಾಗಿತ್ತು.  

ನ್ಯಾಯಮೂರ್ತಿಗಳಾದ ಕೆಎಂ ಜೋಸೆಫ್ ಮತ್ತು ಬಿ ವಿ ನಾಗರತ್ನ ಅವರ ನ್ಯಾಯಪೀಠವು ಅರೋಪಿಗಳಿಗೆ ಜಾಮೀನು ಮಂಜೂರು ಮಾಡಿ ಎಲ್ಲಾ ತನಿಖೆಗಳಿಗೂ ಸಹಕರಿಸುವಂತೆ ಸೂಚಿಸಿದೆ. ಹಿರಿಯ ವಕೀಲ ಆರ್ ಬಸಂತ್ ಆರೋಪಿಗಳಲ್ಲಿ ಒಬ್ಬರ ಪರ ಹಾಜರಾಗಿದ್ದರು. ಆರೋಪಿಗಳು ತನಿಖೆಗೆ ಸಹಕರಿಸುತ್ತಿದ್ದಾರೆ ಎಂದು ಈ ಪ್ರಕರಣದಲ್ಲಿ ಈಗಾಗಲೇ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ ಎಂದು ಹೇಳಿದರು. ಈ ಹಿಂದೆ ಪ್ರಕರಣದಲ್ಲಿ ರಾಜ್ ಕುಂದ್ರ ಬಂಧನಕ್ಕೆ ಸುಪ್ರೀಂ ಕೋರ್ಟ್ ಮಧ್ಯಂತರ ರಕ್ಷಣೆ ನೀಡಿತ್ತು.

ಮುಖ ಮುಚ್ಚಿಕೊಂಡು ಓಡಾಡ್ತಿರೋ ರಾಜ್ ಕುಂದ್ರಾ: ಇದಕ್ಕೆ ಶಿಲ್ಪಾ ಶೆಟ್ಟಿ ಕಾರಣವಂತೆ!

ಅಶ್ಲೀಲ ವಿಡಿಯೋ ಚಿತ್ರಿಸಿ ಅಪ್‌ಲೋಡ್ ಮಾಡುತ್ತಿದ್ದ ಪ್ರಕರಣದಲ್ಲಿ ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್ ಕುಂದ್ರ ಅವರನ್ನು 2021ರಲ್ಲಿ ಜುಲೈನಲ್ಲಿ ಬಧಿಸಲಾಗಿತ್ತು. ಬಳಿಕ ಅನೇಕ ತಿಂಗಳ ನಂತರ ರಾಜ್ ಕುಂದ್ರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಈ ಪ್ರಕರಣವನ್ನು ಮುಂಬೈ ಕ್ರೈಂ ಬ್ರಾಂಚ್‌ಗೆ ವರ್ಗಾಯಿಸಲಾಗಿದೆ. ರಾಜ್ ಕುಂದ್ರ ವಿರುದ್ಧ ಭಾರತೀಯ ದಂಡ ಸಂಹಿತೆ 420 (ವಂಚನೆ), 292 ಮತ್ತು 293 (ಅಶ್ಲೀಲ ಮತ್ತು ಅಸಭ್ಯ ಜಾಹೀರಾತು ಚಿತ್ರ ಮತ್ತು ಪ್ರದರ್ಶನಕ್ಕೆ ಸಂಬಂಧಿಸಿದ) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆ ಮತ್ತು ಮಹಿಳೆಯರ ಅಸಭ್ಯ ಪ್ರಾತಿನಿಧ್ಯ (ನಿಷೇಧ) ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಎಫ್‌ಐಆರ್‌ನಲ್ಲಿ ಶೆರ್ಲಿನ್ ಚೋಪ್ರಾ ಮತ್ತು ಪೂನಂ ಪಾಂಡೆ ಅವರನ್ನು ಸಹ ಆರೋಪಿಗಳೆಂದು ಹೆಸರಿಸಲಾಗಿದೆ.

ಕರ್ವಾ ಚೌತ್‌ನಲ್ಲೂ ಮುಖ ಮುಚ್ಚಿಕೊಂಡಿದ್ದ ಶಿಲ್ಪಾ ಶೆಟ್ಟಿ ಪತಿ; ರಾಜ್ ಕುಂದ್ರ ಕಾಲೆಳೆದ ನೆಟ್ಟಿಗರು

ಜೈಲಿನಿಂದ ಹೊರಬಂದ ಬಳಿಕ ರಾಕ್ ಕುಂದ್ರ ಮುಖ ಮುಚ್ಚಿಕೊಂಡೇ ಓಡಾಡುತ್ತಿದ್ದಾರೆ. ಹೆಚ್ಚಾಗಿ ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಮುಖ ಮುಚ್ಚಿಕೊಂಡು ಓಡಾಡುವ ರಾಜ್ ಕುಂದ್ರ ಅವರನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡಲಾಗಿತ್ತು. ಆದರೆ ಯಾವುದಕ್ಕೂ ಪ್ರತಿಕ್ರಿಯೆ ನೀಡದೆ ಕುಂದ್ರ ಸೈಲೆಂಟ್ ಆಗಿದ್ದರು. ಕೊನೆಯದಾಗಿ ಕುಂದ್ರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕುವ ಮೂಲಕ ಅಚಚ್ರಿ ಮೂಡಿಸಿದ್ದರು. 'ಒಂದು ವರ್ಷವಾಗಿದೆ. ಶೀಘ್ರದಲ್ಲೇ ಸತ್ಯ ಹೊರಬೀಳಲಿದೆ. ನನ್ನ ಹಿತೈಶಿಗಳಿಗೆ ಧನ್ಯವಾದಗಳು. ನನ್ನನ್ನು ಬಲಪಡಿಸಿದ ಟ್ರೋಲ್‌ಗಳಿಂದ ದೊಡ್ಡ ಧನ್ಯವಾದಗಳು' ಎಂದು ಹೇಳಿದ್ದರು. 

 

Follow Us:
Download App:
  • android
  • ios