Hansika Motwani: ಆ ನಟ ಪದೇ ಪದೇ ಅದನ್ನೇ ಕೇಳ್ತಿದ್ದ, ಭಯಾನಕ ಅನುಭವ ಬಿಚ್ಚಿಟ್ಟ ನಟಿ!

ತೆಲುಗು ನಟಿ ಹನ್ಸಿಕಾ ಮೋಟ್ವಾನಿ ತಮಗೆ ತೆಲುಗು ನಟನೊಬ್ಬ ನೀಡುತ್ತಿದ್ದ ಕಿರುಕುಳದ ಕುರಿತು ಮಾತನಾಡಿದ್ದಾರೆ. ಏನು ಹೇಳಿದ್ದಾರೆ ಅವರು?
 

Heroine Hansika casting couch issue with Telugu hero

'ಶಕಲಕಾ ಬೂಮ್ ಬೂಮ್', 'ಕೋಯಿ ಮಿಲ್ ಗಯಾ' ಮುಂತಾದ ಚಿತ್ರಗಳಲ್ಲಿ ಬಾಲ ಕಲಾವಿದೆಯಾಗಿ ಕಾಣಿಸಿಕೊಂಡಿರುವ ಹಂಸಿಕಾ ಮೋಟ್ವಾನಿ ಈಗ ಸೌತ್ ಚಿತ್ರರಂಗದ ಪ್ರಮುಖ ನಟಿ. ಹನ್ಸಿಕಾ ಮೋಟ್ವಾನಿ ಚಿಕ್ಕ ವಯಸ್ಸಿನಲ್ಲೇ ನಾಯಕಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟರು. ತೆಲುಗಿನ ಟಾಪ್ ಹೀರೋ ಅಲ್ಲು ಅರ್ಜುನ್ (Allu Arjun) ಜೊತೆ ಹೀರೋಯಿನ್ ಆಗಿ ಪ್ರೇಕ್ಷಕರ ಮನ ಗೆದ್ದವರೀಕೆ. ತಮ್ಮ ಮುದ್ದು ಮೊಗ ಹಾಗೂ ಅಭಿನಯದಿಂದ ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿದ್ದಾರೆ ಹನ್ಸಿಕಾ. ಇತ್ತೀಚೆಗೆ ಅವರು ಹಾರ್ಮೋನ್ ಇಂಜೆಕ್ಷನ್ (Harmon Injuction) ಕುರಿತಂತೆ ಬಹಳ ಚರ್ಚೆಗೆ ಗ್ರಾಸವಾಗಿದ್ದರು. ಬಾಲಕಿಯಾಗಿರುವಾಗಲೇ ಯುವತಿಯಂತೆ ಕಾಣಲು ಈಕೆ ಹಾರ್ಮೋನ್ ಇಂಜೆಕ್ಷನ್  ತೆಗೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿತ್ತು. 31 ವರ್ಷದ  ಹನ್ಸಿಕಾ ಮೋಟ್ವಾನಿ 2007 ರಲ್ಲಿ ಹಿಮೇಶ್ ರೇಶಮಿಯಾ (Himesh Reshmiya) ಅವರ 'ಆಪ್ಕಾ ಸುರೂರ್' ಚಿತ್ರದಲ್ಲಿ ನಾಯಕಿಯಾಗಿ ಬಾಲಿವುಡ್‌ಗೆ ಪದಾರ್ಪಣೆ ಮಾಡಿದಾಗ, ಅವರ ದೈಹಿಕ ರೂಪಾಂತರವನ್ನು ಕಂಡು ಎಲ್ಲರೂ ಆಶ್ಚರ್ಯಚಕಿತರಾದರು. ಆಗಲೇ ಗುಸುಗುಸು ಶುರುವಾಗಿತ್ತು.

ಸಿನಿಮಾದಲ್ಲಿ ಅವಕಾಶ ಕೈತಪ್ಪಿ ಹೋಗಬಾರದು ಎಂಬ ಕಾರಣಕ್ಕೆ ಹನ್ಸಿಕಾ (Hansika Motwani) ಇಂಜೆಕ್ಷನ್ ಬಳಸಿದ್ದು, ಇದು ನಟಿ ದಿಢೀರ್ ದಪ್ಪಗಾಗಲು ಕಾರಣ ಎನ್ನಲಾಗಿತ್ತು. ಬೊಜ್ಜು ಕರಗಲು ಅಥವಾ ದೇಹಕ್ಕೆ ಸುಂದರ ರೂಪ ನೀಡಲು ವಿಧವಿಧ ಚುಚ್ಚುಮದ್ದುಗಳನ್ನು ತೆಗೆದುಕೊಳ್ಳುವುದು ಸಿನಿ ರಂಗದಲ್ಲಿ ಮಾಮೂಲಾಗಿರುವ ಕಾರಣ, ಹನ್ಸಿಕಾ ಕೂಡ ಇದೇ ರೀತಿ ಮಾಡಿದ್ದರು ಎನ್ನಲಾಗಿತ್ತು.   ಹನ್ಸಿಕಾ ಕೊನೆಗೂ ತಮ್ಮ  ‘ಲವ್ ಶಾದಿ ಡ್ರಾಮಾ’ ಕಾರ್ಯಕ್ರಮದ ಸಂಚಿಕೆಯಲ್ಲಿ ಈ ಆರೋಪಗಳಿಗೆ ಸ್ಪಷ್ಟನೆ ನೀಡಿದ್ದರು. ಈ ಆರೋಪಗಳನ್ನು ತಳ್ಳಿಹಾಕಿದ್ದರು. 

ತಮಿಳಿನ ಟಾಪ್ ಹೀರೋಗಳ ಎದುರು ನಟಿಸಿದ್ದ ಹನ್ಸಿಕಾಗೆ ವಿಶೇಷ ಅಭಿಮಾನಿ ಬಳಗವಿದೆ. ಅಲ್ಲಿದ್ದ ಅಭಿಮಾನಿಗಳು ಹನ್ಸಿಕಾಗೆ ದೇವಸ್ಥಾನವನ್ನೂ ಕಟ್ಟಿದ್ದರು. ದೊಡ್ಡ ಹಿಟ್ ಚಿತ್ರಗಳಿಲ್ಲದಿದ್ದರೂ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ನಾಯಕಿ ಹನ್ಸಿಕಾ ಮಿಂಚಿದ್ರು. ಇಂತಿಪ್ಪ ನಟಿ, ಈಗ ತಾವು  ತೆಲುಗು ಹೀರೋಯಿಂದಾಗಿ ಸಾಕಷ್ಟು ಸಂಕಷ್ಟ ಎದುರಿಸಿದ್ದ ಬಗ್ಗೆ ಬಹಿರಂಗಗೊಳಿಸಿದ್ದಾರೆ. ಕಾಸ್ಟ್​ ಕೌಚಿಂಗ್​ ಕುರಿತಂತೆ ಇದಾಗಲೇ ಕೆಲವು ನಟಿಯರು ಮನಬಿಚ್ಚಿ ಮಾತನಾಡಿದ್ದಾರೆ. ತಮಗೆ ಅವಕಾಶ ನೀಡಲು ಮಂಚಕ್ಕೆ ಕರೆದ ಬಗ್ಗೆ, ಲೈಂಗಿಕತೆಗೆ (Sexuality) ಉತ್ಸುಕರಾದ ಬಗ್ಗೆ, ಅಡ್ಜಸ್ಟ್​ ಮಾಡಿಕೊಳ್ಳುವಂತೆ ಹೇಳಿದ್ದ ಬಗ್ಗೆ ಮುಕ್ತವಾಗಿ ಹೇಳಿಕೊಂಡಿದ್ದಾರೆ. ಅಂಥದ್ದೇ ಒಂದು ಕೆಟ್ಟ ಅನುಭವವನ್ನು  ಹನ್ಸಿಕಾ ಕೂಡ ಎದುರಿಸಿದ್ದರಂತೆ. ಈ ಕುರಿತು ಅವರು ಈಗ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ತಾವು ಕೂಡ ಈ ಕಾಸ್ಟ್​ ಕೌಚಿಂಗ್​ಗೆ ಒಳಗಾಗಿರುವ ಬಗ್ಗೆ ಹೇಳಿಕೊಂಡಿದ್ದಾರೆ.

Hansika Motwani: ದೊಡ್ಡವಳಂತೆ ಕಾಣಲು ಇಂಜೆಕ್ಷನ್​ ಪಡೆದುಕೊಂಡಿದ್ರಾ?
 
ತನ್ನ ಸಿನಿ ಕೆರಿಯರ್​ ಆರಂಭದಲ್ಲಿ ತೆಲುಗು ನಾಯಕನೊಬ್ಬ ನನಗೆ ತುಂಬಾ ತೊಂದರೆ ಕೊಡುತ್ತಿದ್ದ ಎಂದಿರುವ   ಹನ್ಸಿಕಾ, ತಮಗೆ ತೊಂದರೆ ಕೊಡುತ್ತಿದ್ದ  ನಾಯಕನ ಹೆಸರು ಮಾತ್ರ ಬಾಯಿ ಬಿಡಲಿಲ್ಲ. ಆತ ಪದೇ ಪದೇ ಡೇಟಿಂಗ್​ಗೆ ಬರುವಂತೆ ಕಿರುಕುಳ ಕೊಡುತ್ತಿದ್ದ. ಇದರಿಂದ ಬೇಸತ್ತು ಹೋಗಿದ್ದೆ. ಕೊನೆಗೆ  ಆ ನಟನಿಗೆ ತಕ್ಕ ಪಾಠ ಕಲಿಸಿರುವುದಾಗಿ ಹೇಳಿದ್ದಾರೆ. ಈಕೆ ಹೀಗೆ ಹೇಳುತ್ತಿದ್ದಂತೆಯೇ ಯಾರಿರಬಹುದು ಎಂಬ ಚರ್ಚೆ ಟಾಲಿವುಡ್​ನಲ್ಲಿ ಶುರುವಾಗಿದೆ.  

ಇನ್ನು ಹನ್ಸಿಕಾ ಅವರ ಬಗ್ಗೆ ಹೇಳುವುದಾದರೆ, 4 ಡಿಸೆಂಬರ್ 2022 ರಂದು, ಹನ್ಸಿಕಾ ಮೋಟ್ವಾನಿ ಜೈಪುರದ (Jaipur)ಮುಂಡೋಟಾ ಫೋರ್ಟ್ ಮತ್ತು ಅರಮನೆಯಲ್ಲಿ ದೀರ್ಘಕಾಲದ ಗೆಳೆಯ ಮತ್ತು ಉದ್ಯಮಿ ಸೊಹೈಲ್ ಖತುರಿಯಾ ಅವರನ್ನು ವಿವಾಹವಾದರು. ಸೋಹೈಲ್ ಹನ್ಸಿಕಾ ಅವರ ಆತ್ಮೀಯ ಸ್ನೇಹಿತೆ ರಿಂಕಿಯ ಪತಿ. ಇದರಿಂದಾಗಿ ಹನ್ಸಿಕಾ ತನ್ನ ಸ್ನೇಹಿತೆಯ ಪತಿಯನ್ನು ಕದ್ದಿದ್ದಾಳೆ ಎಂಬ ಆರೋಪ ಕೇಳಿಬಂದಿತ್ತು. ಆದರೆ, ಈ ಬಗ್ಗೆ ನಟಿಯೂ ಪ್ರತಿಕ್ರಿಯಿಸಿದ್ದಾರೆ.  ಇವೆಲ್ಲಾ ಸುಳ್ಳು. ಸಾರ್ವಜನಿಕ ವ್ಯಕ್ತಿಯಾಗಿರುವುದರಿಂದ ಜನರು ಸುಲಭವಾಗಿ ಗುರುತಿಸುತ್ತಾರೆ. ನನ್ನತ್ತ ಬೆರಳು ಮಾಡಿ ನನ್ನನ್ನು ಖಳನಾಯಕನನ್ನಾಗಿ ಮಾಡಿ. ಸೆಲೆಬ್ರಿಟಿಯಾಗಿರುವುದು ನಾನು ತೆರಬೇಕಾದ ಬೆಲೆ ಎಂದಿದ್ದರು. 

ನಟ ಅಮಿತಾಭ್​ ಬಚ್ಚನ್​ ಅರೆಸ್ಟ್​? ಅಭಿಮಾನಿಗಳನ್ನ ಬೆಚ್ಚಿ ಬೀಳಿಸಿದೆ ಇನ್​ಸ್ಟಾಗ್ರಾಮ್​ ಪೋಸ್ಟ್​!

Latest Videos
Follow Us:
Download App:
  • android
  • ios