Hansika Motwani: ದೊಡ್ಡವಳಂತೆ ಕಾಣಲು ಇಂಜೆಕ್ಷನ್ ಪಡೆದುಕೊಂಡಿದ್ರಾ?
ಬಾಲ ಕಲಾವಿದೆಯಾಗಿ ಚಿತ್ರರಂಗಕ್ಕೆ ಕಾಲಿಟ್ಟಿದ್ದ ಹಂಸಿಕಾ ಮೋಟ್ವಾನಿ ಅವರು ಚಿಕ್ಕ ವಯಸ್ಸಿನಲ್ಲಿಯೇ ದೊಡ್ಡವಳಂತೆ ಕಾಣಲು ಅವರ ತಾಯಿ ಇಂಜೆಕ್ಷನ್ ನೀಡಿದ್ದರು ಎಂಬ ಆರೋಪವಿದೆ. ಅದರ ಬಗ್ಗೆ ನಟಿ ಹೇಳಿದ್ದೇನು?
'ಶಕಲಕಾ ಬೂಮ್ ಬೂಮ್', 'ಕೋಯಿ ಮಿಲ್ ಗಯಾ' ಮುಂತಾದ ಚಿತ್ರಗಳಲ್ಲಿ ಬಾಲ ಕಲಾವಿದೆಯಾಗಿ ಕಾಣಿಸಿಕೊಂಡಿರುವ ಹಂಸಿಕಾ ಮೋಟ್ವಾನಿ ಈಗ ಸೌತ್ ಚಿತ್ರರಂಗದ ಪ್ರಮುಖ ನಟಿ. ಹನ್ಸಿಕಾ ಮೋಟ್ವಾನಿ ಚಿಕ್ಕ ವಯಸ್ಸಿನಲ್ಲೇ ನಾಯಕಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟರು. ತೆಲುಗಿನ ಟಾಪ್ ಹೀರೋ ಅಲ್ಲು ಅರ್ಜುನ್ (Allu Arjun) ಜೊತೆ ಹೀರೋಯಿನ್ ಆಗಿ ಪ್ರೇಕ್ಷಕರ ಮನ ಗೆದ್ದವರೀಕೆ. ತಮ್ಮ ಮುದ್ದು ಮೊಗ ಹಾಗೂ ಅಭಿನಯದಿಂದ ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿದ್ದಾರೆ ಹನ್ಸಿಕಾ.
ಆದರೆ ಇವರ ಮೇಲೆ ಬಹು ದೊಡ್ಡ ಆರೋಪ ಮೊದಲಿನಿಂದಲೂ ಕೇಳಿಬರುತ್ತಿದೆ. ಅದೇನೆಂದರೆ, ಯುವತಿಯಂತೆ ಕಾಣಲು ಹಾರ್ಮೋನ್ ಇಂಜೆಕ್ಷನ್ (Harmon Injuction) ತೆಗೆದುಕೊಂಡ ಆರೋಪಕ್ಕೆ ಗುರಿಯಾಗಿದ್ದಾರೆ. 31ರ ಹರೆಯದ ಹನ್ಸಿಕಾ ತಮ್ಮ ಇತ್ತೀಚಿನ ‘ಲವ್ ಶಾದಿ ಡ್ರಾಮಾ’ ಕಾರ್ಯಕ್ರಮದ ಸಂಚಿಕೆಯಲ್ಲಿ ಈ ಆರೋಪಗಳಿಗೆ ಸ್ಪಷ್ಟನೆ ನೀಡಿದ್ದಾರೆ. ವಾಸ್ತವವಾಗಿ, ಹನ್ಸಿಕಾ ಮೋಟ್ವಾನಿ 2007 ರಲ್ಲಿ ಹಿಮೇಶ್ ರೇಶಮಿಯಾ (Himesh Reshmiya) ಅವರ 'ಆಪ್ಕಾ ಸುರೂರ್' ಚಿತ್ರದಲ್ಲಿ ನಾಯಕಿಯಾಗಿ ಬಾಲಿವುಡ್‌ಗೆ ಪದಾರ್ಪಣೆ ಮಾಡಿದಾಗ, ಅವರ ದೈಹಿಕ ರೂಪಾಂತರವನ್ನು ಕಂಡು ಎಲ್ಲರೂ ಆಶ್ಚರ್ಯಚಕಿತರಾದರು. ಆಗಲೇ ಗುಸುಗುಸು ಶುರುವಾಗಿತ್ತು. ಸಿನಿಮಾದಲ್ಲಿ ಅವಕಾಶ ಕೈತಪ್ಪಿ ಹೋಗಬಾರದು ಎಂಬ ಕಾರಣಕ್ಕೆ ಹನ್ಸಿಕಾ (Hansika Motwani) ಇಂಜೆಕ್ಷನ್ ಬಳಸಿದ್ದು, ಇದು ನಟಿ ದಿಢೀರ್ ದಪ್ಪಗಾಗಲು ಕಾರಣ ಎನ್ನಲಾಗಿತ್ತು. ಬೊಜ್ಜು ಕರಗಲು ಅಥವಾ ದೇಹಕ್ಕೆ ಸುಂದರ ರೂಪ ನೀಡಲು ವಿಧವಿಧ ಚುಚ್ಚುಮದ್ದುಗಳನ್ನು ತೆಗೆದುಕೊಳ್ಳುವುದು ಸಿನಿ ರಂಗದಲ್ಲಿ ಮಾಮೂಲಾಗಿರುವ ಕಾರಣ, ಹನ್ಸಿಕಾ ಕೂಡ ಇದೇ ರೀತಿ ಮಾಡಿದ್ದರು ಎನ್ನಲಾಗಿತ್ತು.
ನಾಲ್ಕು ಮಕ್ಕಳಾದ ಮೇಲೆ ಸಲ್ಮಾನ್ ಖಾನ್ ಅಪ್ಪನ ಕಣ್ಣು ನಟಿ ಹೆಲೆನ್ ಮೇಲೆ ಬಿದ್ದಾಗ...
ಅದರಲ್ಲಿಯೂ ಎಲ್ಲರೂ ಅವರ ತಾಯಿಯ ಮೇಲೆ ಗೂಬೆ ಕುಳ್ಳರಿಸಿದ್ದರು. ಹನ್ಸಿಕಾ ಅವರ ತಾಯಿ ಮೋನಾ ಮೋಟ್ವಾನಿ (Mona Motwani) ಅವರು ಅವಧಿಗೂ ಮುನ್ನವೇ ಅವಳನ್ನು ಯೌವನಕ್ಕೆ ತರಲು ಚುಚ್ಚುಮದ್ದನ್ನು ನೀಡಿದ್ದರು ಎಂದು ಆರೋಪಿಸಲಾಗಿತ್ತು. ಏಕೆಂದರೆ ಮೋನಾ ಮೋಟ್ವಾನಿಯವರು ಸ್ಕಿನ್ ಸ್ಪೆಷಲಿಸ್ಟ್ ಆಗಿದ್ದು, ಅವರೇ ಬೇಗನೆ ಮಗಳು ಬೆಳೆಯಲು ಹಾರ್ಮೋನುಗಳ ಚುಚ್ಚುಮದ್ದನ್ನು ನೀಡಿದ್ದಾರೆ ಎಂದು ಆರೋಪಿಸಲಾಗಿತ್ತು. ಒಂದು ಹಂತದಲ್ಲಿ ಅವರ ತಂದೆ ಕೂಡ ಆರೋಪಿಸಿದ್ದರಿಂದ ಇದು ಬಹು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಈಗ ಹನ್ಸಿಕಾ ಮತ್ತು ಮೋನಾ 'ಲವ್ ಶಾದಿ ಡ್ರಾಮಾ' ಶೋನಲ್ಲಿ ಈ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ್ದಾರೆ. ಈ ಬಗ್ಗೆ ತುಂಬಾ ನೋವಿನಿಂದ ಅವರು ನುಡಿದಿದ್ದಾರೆ. 'ಸೆಲೆಬ್ರಿಟಿ ಆಗಿದ್ದಕ್ಕೆ ಅದರ ಬೆಲೆ ತೆತ್ತಿದ್ದೆ, ಈಗಲೂ ಅದೇ ವಿಷಯ ಹೇಳುತ್ತಿರುವುದನ್ನು ಕೇಳಿ ಈಗಲೂ ಬೆಲೆ ತೆರುತ್ತಿದ್ದೇನೆ' ಎಂದಿದ್ದಾರೆ. 'ನಾನು 21 ವರ್ಷದವಳಿದ್ದಾಗ ನನ್ನ ಬಗ್ಗೆ ಬರೀ ಬರಹಗಳನ್ನು ಬರೆಯಲಾಗಿತ್ತು. ನನಗೆ ನನ್ನ ಅಮ್ಮ ದೊಡ್ಡವಳಾಗಿ ಕಾಣುವಂತೆ ಮಾಡಲು ಹಾರ್ಮೋನ್ ಚುಚ್ಚುಮದ್ದು ಕೊಟ್ಟಿದ್ದಾರೆ ಎನ್ನಲಾಗಿತ್ತು. ಇದು ಶುದ್ಧ ಸುಳ್ಳು.ಇದರಿಂದ ನಾವು ಅನುಭವಿಸಿದ ಹಿಂಸೆ ಅಷ್ಟಿಷ್ಟಲ್ಲ ಎಂದಿದ್ದಾರೆ. ಬೇಗ ಬೆಳೆಯಲು ಚುಚ್ಚುಮದ್ದು (Injnuction) ತೆಗೆದುಕೊಂಡಳು ಎಂದು ಹಲವರು ಬರೆದುಕೊಂಡಿದ್ದಾರೆ. 8ನೇ ವಯಸ್ಸಿನಲ್ಲಿ ನಟಿಯಾದರು ಎಂಬುದನ್ನೇ ಮರೆತಿದ್ದಾರೆ. ತಾಯಿ ಹಾರ್ಮೋನ್ ಚುಚ್ಚುಮದ್ದು ನೀಡಿ ಬೇಗ ಬೆಳೆಯುವಂತೆ ಮಾಡಿದ್ದಾರೆ ಎಂಬ ಆರೋಪದಲ್ಲಿ ಸತ್ಯಾಂಶವಿಲ್ಲ ಎಂದಿದ್ದಾರೆ ನಟಿ.
ಈ ಆರೋಪಗಳಿಗೆ ಹನ್ಸಿಕಾ ತಾಯಿ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಅದೇ ನಿಜವಾಗಿದ್ದಲ್ಲಿ ಟಾಟಾ, ಬಿರ್ಲಾಗಿಂತಲೂ ಶ್ರೀಮಂತನಾಗುತ್ತಿದ್ದೆ. ಬೇಗ ಬೆಳೆಯಲು ಉಪಾಯ ಹೇಳಲು ಎಲ್ಲರೂ ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದರು ಎಂದು ಟಾಂಗ್ ಕೊಟ್ಟಿದ್ದಾರೆ. ನಾವು ಪಂಜಾಬಿ ಜನರು, ನಮ್ಮ ಹೆಣ್ಣುಮಕ್ಕಳು 12 ರಿಂದ 16 ವರ್ಷದೊಳಗಿನವರು ದೊಡ್ಡವರಾಗುತ್ತಾರೆ. ಅದನ್ನೇ ಇಟ್ಟುಕೊಂಡು ಈ ರೀತಿಯ ಕೆಟ್ಟ ಆರೋಪ ಮಾಡಿರುವುದು ಸರಿಯಲ್ಲ ಎಂದಿದ್ದಾರೆ.
Swara Bhaskar ಮದುವೆ ಅಸಿಂಧು ಎಂದ ಧರ್ಮಗುರು: ರಕ್ಷಣೆಗೆ ಬಂದ ಆರ್ಜೆ ಸಯೇಮಾ
ಇನ್ನು ಹನ್ಸಿಕಾ ಅವರ ಬಗ್ಗೆ ಹೇಳುವುದಾದರೆ, 4 ಡಿಸೆಂಬರ್ 2022 ರಂದು, ಹನ್ಸಿಕಾ ಮೋಟ್ವಾನಿ ಜೈಪುರದ (Jaipur)ಮುಂಡೋಟಾ ಫೋರ್ಟ್ ಮತ್ತು ಅರಮನೆಯಲ್ಲಿ ದೀರ್ಘಕಾಲದ ಗೆಳೆಯ ಮತ್ತು ಉದ್ಯಮಿ ಸೊಹೈಲ್ ಖತುರಿಯಾ ಅವರನ್ನು ವಿವಾಹವಾದರು. ಸೋಹೈಲ್ ಹನ್ಸಿಕಾ ಅವರ ಆತ್ಮೀಯ ಸ್ನೇಹಿತೆ ರಿಂಕಿಯ ಪತಿ. ಇದರಿಂದಾಗಿ ಹನ್ಸಿಕಾ ತನ್ನ ಸ್ನೇಹಿತೆಯ ಪತಿಯನ್ನು ಕದ್ದಿದ್ದಾಳೆ ಎಂಬ ಆರೋಪ ಕೇಳಿಬಂದಿತ್ತು. ಆದರೆ, ಈ ಬಗ್ಗೆ ನಟಿಯೂ ಪ್ರತಿಕ್ರಿಯಿಸಿದ್ದಾರೆ. ಇವೆಲ್ಲಾ ಸುಳ್ಳು. ಸಾರ್ವಜನಿಕ ವ್ಯಕ್ತಿಯಾಗಿರುವುದರಿಂದ ಜನರು ಸುಲಭವಾಗಿ ಗುರುತಿಸುತ್ತಾರೆ. ನನ್ನತ್ತ ಬೆರಳು ಮಾಡಿ ನನ್ನನ್ನು ಖಳನಾಯಕನನ್ನಾಗಿ ಮಾಡಿ. ಸೆಲೆಬ್ರಿಟಿಯಾಗಿರುವುದು ನಾನು ತೆರಬೇಕಾದ ಬೆಲೆ ಎಂದಿದ್ದರು.