Asianet Suvarna News Asianet Suvarna News

ಬಾಲಿವುಡ್​ನ ಈ ಸೂಪರ್​ಸ್ಟಾರ್​ಗಳು​ 12ನೇ ತರಗತಿಯಲ್ಲಿ ಪಡೆದ ಮಾರ್ಕ್ಸ್ ಎಷ್ಟು?

ಕೆಲವು ಖ್ಯಾತನಾಮ ಬಾಲಿವುಡ್ ತಾರೆಯರು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಪಡೆದಿರುವ ಅಂಕಗಳು ಎಷ್ಟು ಗೊತ್ತಾ?
 

Heres How Much These Bollywood Celebs Got In Their Class 12 Boards
Author
First Published Apr 21, 2023, 3:37 PM IST

ಇಂದು ಪಿಯುಸಿ ಫಲಿತಾಂಶ (PUC Result) ಪ್ರಕಟವಾಗಿದೆ. ವಿದ್ಯಾರ್ಥಿಗಳೆಲ್ಲರೂ ಖುಷಿ-ದುಃಖವನ್ನು ಹಂಚಿಕೊಳ್ಳುತ್ತಿದ್ದಾರೆ. ಅಂಕಗಳೇ ಸರ್ವಸ್ವ ಅಲ್ಲ ಎನ್ನುವುದನ್ನು ಇದಾಗಲೇ ಹಲವಾರು ಗಣ್ಯ ವ್ಯಕ್ತಿಗಳು ಸಾಬೀತು ಮಾಡಿ ತೋರಿಸಿದ್ದಾರೆ. ಶಾಲೆಯ ಮೆಟ್ಟಿಲನ್ನೇ ಹತ್ತದವರು ಇಂದು ಕೋಟ್ಯಧಿಪತಿಗಳೂ ಆಗಿದ್ದಾರೆ, ಡಬಲ್​ ಗ್ರಾಜ್ಯುಯೇಟ್​ ಆದವರಿಗೆ ತಮ್ಮ ಸಂಸ್ಥೆಗಳಲ್ಲಿ ಕೆಲಸವನ್ನೂ ಕೊಡುತ್ತಿದ್ದಾರೆ, ಇನ್ನು ಅತ್ಯಂತ ಕಡಿಮೆ ಕಲಿತರವರು ಕೂಡ ಯಾರೂ ಮಾಡದ ಸಾಧನೆಯನ್ನು ಮಾಡಿದ್ದಾರೆ. ಇವೆಲ್ಲವುಗಳ ಹೊರತಾಗಿಯೂ ಅಂಕಗಳಿಗೇ ಇಂದಿನ ದಿನಗಳಲ್ಲಿ ಹೆಚ್ಚಿನ ಮಹತ್ವ. ಪಿಯುಸಿ ಫಲಿತಾಂಶ ಪ್ರಕಟಗೊಂಡಿರುವ ಈ ಹೊತ್ತಿನಲ್ಲಿ, ಬಾಲಿವುಡ್​ನ ಕೆಲವು ನಟ-ನಟಿಯರ ಪಿಯುಸಿ ಪರೀಕ್ಷೆಯಲ್ಲಿ ಪಡೆದ ಅಂಕಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಹಳ ಸುದ್ದಿಯಾಗುತ್ತಿದೆ. ಹಲವು ಸೆಲೆಬ್ರಿಟಿಗಳು ಉನ್ನತ ಶಿಕ್ಷಣ ಪಡೆದಿದ್ದರೆ, ಕಡಿಮೆ ಕಲಿತು ಸೂಪರ್​ಸ್ಟಾರ್​ ಪಟ್ಟ ಗಿಟ್ಟಿಸಿಕೊಂಡವರೂ ಇದ್ದಾರೆ. ಅವರ ಪೈಕಿ ಕೆಲವೇ ಕೆಲವು ಮಂದಿಯ ಪಿಯುಸಿ ಅಂಕಗಳ ಬಗ್ಗೆ ಇಲ್ಲಿ ವಿವರಣೆ ನೀಡಲಾಗಿದೆ.

ಶಾರುಖ್​ ಖಾನ್​ (Shah Rukh Khan)
ಪಠಾಣ್​ ಸಕ್ಸಸ್​ ಬಳಿಕ ಶಾರುಖ್​ ಖಾನ್​ ಕ್ರೇಜ್​ ಎಲ್ಲೆಡೆ ಹೆಚ್ಚಾಗಿದೆ. ಶಾರುಖ್​ ಅವರು ಹನ್ಸ್ ರಾಜ್ ಕಾಲೇಜಿನಲ್ಲಿ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.  ಜಾಮಿಯಾ ಮಿಲಿಯಾ ಇಸ್ಲಾಮಿಯಾದಿಂದ ಸಮೂಹ ಸಂವಹನದಲ್ಲಿ ಸ್ನಾತಕೋತ್ತರ ಪದವಿಗೂ ಹಾಜರಾಗಿದ್ದರೂ  ಪದವಿಯನ್ನು ಪೂರ್ಣಗೊಳಿಸಲಿಲ್ಲ. ಸಿನಿಮಾ ರಂಗಕ್ಕೆ ಧುಮುಕಿದ್ದರಿಂದ ಕಾಲೇಜಿನಿಂದ ಹೊರಗುಳಿದರು. ಅವರ ಕಾಲೇಜು ದಿನಗಳಲ್ಲಿಯೂ ಅವರು ತಮ್ಮ ಹೆಚ್ಚಿನ ಸಮಯವನ್ನು ಚಿತ್ರಮಂದಿರಗಳಲ್ಲಿ ಕಳೆಯುತ್ತಿದ್ದರು. ಇದರ ಹೊರತಾಗಿಯೂ ಶಾರುಖ್​ ಖಾನ್​ 12 ನೇ ತರಗತಿಯಲ್ಲಿ ಶೇಕಡಾ 80.5 ಅಂಕಗಳನ್ನು ಗಳಿಸಿದ್ದರು. ಅಂದಿನ ದಿನಗಳಲ್ಲಿ 80ರ ಮೇಲೆ ಅಂಕ ತೆಗೆಯುವುದು ಬಹುದೊಡ್ಡ ಸಾಧನೆಯೇ ಆಗಿತ್ತು.  ಸೆಂಟ್ರಲ್ ದೆಹಲಿಯಲ್ಲಿರುವ ಸೇಂಟ್ ಕೊಲಂಬಿಯಾ ಶಾಲೆಯಲ್ಲಿ ಓದಿರೋ ಅವರು, 12 ನೇ ತರಗತಿಯಲ್ಲಿ ಶೇಕಡಾ 80.5 ಅಂಕಗಳನ್ನು ಗಳಿಸಿದ್ದರು.  

ದೀಪಿಕಾ ಪಡುಕೋಣೆ (Deepika Padukone)
ಪಠಾಣ್​ ಬಿಡುಗಡೆಯ ನಂತರ ಮತ್ತೆ ಪ್ರಸಿದ್ಧಿಗೆ ಬಂದಿರುವ ಹೆಸರು ದೀಪಿಕಾ ಪಡುಕೋಣೆ. ಬ್ಯಾಂಡ್ಮಿಂಟನ್​ ತಾರೆ ಪ್ರಕಾಶ್​ ಪಡುಕೋಣೆಯವರ ಪುತ್ರಿಯಅಗಿರುವ ದೀಪಿಕಾ ಕೂಡ ಸಿನಿಮಾದ ಜೊತೆ ಕ್ರೀಡಾ ವ್ಯಕ್ತಿಯೂ ಆಗಿದ್ದಾರೆ. ಅವರು 12ನೇ ತರಗತಿ ಪಾಸ್ ಮಾಡಿದ್ದಾರೆ. ಅವರು ತಮ್ಮ ಬೋರ್ಡ್ ಫಲಿತಾಂಶ ಅಥವಾ ಮಾರ್ಕ್‌ಶೀಟ್ ಅನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿಲ್ಲ. ಕೆಲ ತಿಂಗಳುಗಳ ಹಿಂದೆ ಈ ಬಗ್ಗೆ ಖುದ್ದು ದೀಪಿಕಾ ಹೇಳಿಕೊಂಡಿದ್ದರು. ಯಶಸ್ಸಿಗೆ ಬೇಕಾಗಿರುವುದು ಕಠಿಣ ಪರಿಶ್ರಮ ಮತ್ತು ಶಿಸ್ತು ಎಂದಿರುವ ದೀಪಿಕಾ,  ತಾವು ಹೆಚ್ಚಿನ ಶಿಕ್ಷಣ ಕಲಿಯಲು ಏಕೆ ಸಾಧ್ಯವಾಗಲಿಲ್ಲ ಎಂದು ತಿಳಿಸಿದ್ದಾರೆ. 'ಯಶಸ್ಸನ್ನು ಅರಸಲು ನಾನು ನನ್ನ ಕುಟುಂಬದಿಂದ ದೂರವಿದ್ದೆ.  12ನೇ ಕ್ಲಾಸ್‌ ಪಾಸ್‌ ಆದ ತಕ್ಷಣವೇ ಕನಸಿನ ಬೆನ್ನಟ್ಟಿದೆ. ಹಾಗಾಗಿ ಔಪಚಾರಿಕ ಶಿಕ್ಷಣವನ್ನು ನನ್ನಿಂದ ಪೂರ್ಣಗೊಳಿಸಲು ಆಗಲಿಲ್ಲ ಎಂದಿದ್ದರು. ಆದ್ದರಿಂದ ಅಂಕಗಳ ಬಗ್ಗೆ ಅವರು ಮಾತನಾಡಲಿಲ್ಲ. 

Twinkle Khanna: ಹೊಟ್ಟೆಯೊಳಗೆ ಫುಲ್​ ಗ್ಯಾಸ್​ ಇದ್ದಾಗ್ಲೇ ಶಾರುಖ್​ ಎತ್ತಿಕೊಂಡು ಬಿಟ್ರಪ್ಪೋ...


ಶ್ರದ್ಧಾ ಕಪೂರ್ (Shraddha Kapoor)
ಇತ್ತೀಚೆಗೆ ಶ್ರದ್ಧಾ ತಮ್ಮ ಶಿಕ್ಷಣದ ಬಗ್ಗೆ ಹೇಳಿಕೊಂಡಿದ್ದರು. 'ಆರಂಭದಲ್ಲಿ ಶಿಕ್ಷಣ ಮುಗಿಸಿ ನಟನೆ ಆರಂಭಿಸಬೇಕು ಎಂದು ಭಾವಿಸಿದೆ. ಆದರೆ ಅಚಾನಕ್ ಆಗಿ ನಾನು ಸಿನಿಮಾಗಳಿಗೆ ಅಡಿಯಿಡಬೇಕಾಯಿತು. ಬೋಸ್ಟನ್ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದಾಗ ಒಮ್ಮೆ ಭಾರತಕ್ಕೆ ಬಂದೆ. ತುಂಬಾ ಆಫರ್ಸ್ ಬಂದವು. ಸಿನಿಮಾಗಳಲ್ಲಿ ನಟಿಸಲು ಅಲ್ಲ. ಆಡಿಷನ್ಸ್ ನೀಡಲು. ಆಗ ನಾನು ಆದಷ್ಟು ಬೇಗ ಯಾವುದಾದರೂ ಒಂದನ್ನು ಸೆಲೆಕ್ಟ್ ಮಾಡಬೇಕಾಗಿತ್ತು. ಹಾಗಾಗಿ ಶಿಕ್ಷಣಕ್ಕೆ ಗುಡ್ ಬೈ ಹೇಳಿ ನಟಿಯಾದೆ. ಜೀವನದಲ್ಲಿ ನಮ್ಮ ಮನಸ್ಸಿಗೆ ಇಷ್ಟವಾದದ್ದನ್ನು ಮಾಡಿದರೆ ಸಂತೋಷವಾಗಿ ಇರುತ್ತೇವೆ ಅಲ್ಲವೇ'  ಎಂದಿದ್ದರು. ಇಂಥ ನಟಿ,   ಮುಂಬೈನ ಜಮ್ನಾಬಾಯಿ ನರ್ಸೀ ಶಾಲೆ ಮತ್ತು ಅಮೇರಿಕನ್ ಸ್ಕೂಲ್ ಆಫ್ ಬಾಂಬೆಯಲ್ಲಿ ಅಧ್ಯಯನ ಮಾಡಿದ್ದರು.  ಅವರು ಅಂತರರಾಷ್ಟ್ರೀಯ ಮಂಡಳಿಯಿಂದ 12 ನೇ ತರಗತಿ ಉತ್ತೀರ್ಣರಾಗಿದ್ದಾರೆ. ಇದರಲ್ಲಿ ಅವರು 40 ರಲ್ಲಿ 32 ಅಂಕಗಳನ್ನು ಪಡೆದರು. ಇದು CBSE ಪ್ರಕಾರ 85-90 ಶೇಕಡಾಗೆ ಸಮಾನ ಎನ್ನಲಾಗಿದೆ.

ಪರಿಣಿತಿ ಚೋಪ್ರಾ ( Parineeti Chopra)
ಪರಿಣಿತಿ ಚೋಪ್ರಾ ಹರಿಯಾಣದ ಕಾನ್ವೆಂಟ್ ಆಫ್ ಜೀಸಸ್ ಮತ್ತು ಮೇರಿಯಿಂದ ತಮ್ಮ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು, ಅವರು ವಿದೇಶದಲ್ಲಿ ಉನ್ನತ ಶಿಕ್ಷಣವನ್ನು ಪಡೆದರು ಮತ್ತು ಇಂಗ್ಲೆಂಡ್‌ನಲ್ಲಿ ಪದವಿ ಪಡೆದರು. ಅವರು ಮ್ಯಾಂಚೆಸ್ಟರ್ ಬಿಸಿನೆಸ್ ಸ್ಕೂಲ್‌ನಲ್ಲಿ ವ್ಯಾಪಾರ, ಹಣಕಾಸು ಮತ್ತು ಅರ್ಥಶಾಸ್ತ್ರವನ್ನು ಅಧ್ಯಯನ ಮಾಡಿದರು ಮತ್ತು ಟ್ರಿಪಲ್ ಆನರ್ಸ್ ಪದವಿಯೊಂದಿಗೆ ಪದವಿ ಪಡೆದರು. ಅವರು  ದ್ವಿತೀಯ ಪಿಯುಸಿಯಲ್ಲಿ  ಆಲ್ ಇಂಡಿಯಾ ಟಾಪರ್ಸ್ ಆಫ್ ಎಕನಾಮಿಕ್ಸ್‌ನಲ್ಲಿ ಸೇರ್ಪಡೆಗೊಂಡಿದ್ದರು. ಅದರಲ್ಲಿ 97 ರಷ್ಟು ಅಂಕಗಳನ್ನು ಪಡೆದಿದ್ದರು.

ಎರಡು ವರ್ಷ ಕದ್ದುಮುಚ್ಚಿ ಹಿಂದೂ ಯುವತಿ ಜೊತೆ ಸಂಸಾರ ಮಾಡಿದ್ದ ಆಮೀರ್​ ಖಾನ್​!
 
ಊರ್ವಶಿ ರೌಟೇಲಾ (Urvashi Rautela)
ಊರ್ವಶಿ ರೌಟೇಲಾ ಅವರು ಕೋಟ್‌ದ್ವಾರದ ಸೇಂಟ್ ಜೋಸೆಫ್ ಕಾನ್ವೆಂಟ್ ಶಾಲೆಯಲ್ಲಿ ಶಿಕ್ಷಣ ಪಡೆದರು. ಅವರು ದೆಹಲಿ ವಿಶ್ವವಿದ್ಯಾಲಯದ ಗಾರ್ಗಿ ಕಾಲೇಜಿನ ಹಳೆಯ ವಿದ್ಯಾರ್ಥಿನಿ. 2015 ರಲ್ಲಿ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಇವರು ಕೂಡ ಕಾಲೇಜಿನ ದಿನಗಳಲ್ಲಿ ಹೆಚ್ಚು ಅಂಕ ಗಳಿಸಿದ ನಟಿ.  12 ನೇ ತರಗತಿ ಬೋರ್ಡ್ ಪರೀಕ್ಷೆಯಲ್ಲಿ ಶೇಕಡಾ 97 ಅಂಕಗಳನ್ನು ಗಳಿಸಿದರು. ಅವರು ತನ್ನ ಶಾಲೆಯ ಟಾಪರ್ ಆಗಿದ್ದರು. ಪರೀಕ್ಷೆಗಳಲ್ಲಿ 100 ಪ್ರತಿಶತ ಅಂಕಗಳನ್ನು ಗಳಿಸಲು ಬಯಸಿದ್ದರು ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.


ಫ್ಲೋರಾ ಸೈನಿ, ವೀರ್ ದಾಸ್ (Vir Das)
ಉಧಂಪುರ ಕಾರ್ಮೆಲ್ ಕಾನ್ವೆಂಟ್ ಶಾಲೆಯಿಂದ ಪ್ರಾಥಮಿಕ ಶಿಕ್ಷಣ ಪಡೆದರು. ನಂತರ ದೆಹಲಿಯ ಆರ್ಮಿ ಪಬ್ಲಿಕ್ ಸ್ಕೂಲ್‌ನಿಂದ 10 ಮತ್ತು 12 ನೇ ಪರೀಕ್ಷೆಗಳನ್ನು ಬರೆದರು. ಫ್ಲೋರಾ ಸೈನಿ ತನ್ನ 10ನೇ ಬೋರ್ಡ್ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದಿದ್ದಾರೆ. ಗಣಿತದಲ್ಲಿ 92 ಅಂಕ ಪಡೆದಿದ್ದರು. ಇನ್ನು ನಟ-ಹಾಸ್ಯಗಾರ ವೀರ್ ದಾಸ್ 12 ನೇ ತರಗತಿಯಲ್ಲಿ 66.8 ಶೇಕಡಾ ಅಂಕಗಳನ್ನು ಪಡೆದರು. ಅವರು ಒಮ್ಮೆ ತಮ್ಮ ಮಾರ್ಕ್‌ಶೀಟ್ ಅನ್ನು ಸಾಮಾಜಿಕ ಮಾಧ್ಯಮ ಸೈಟ್ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಬೋರ್ಡ್ ಫಲಿತಾಂಶಕ್ಕಾಗಿ ಕಾಯುತ್ತಿರುವ ವಿದ್ಯಾರ್ಥಿಗಳು ಇದರಿಂದ ಹೆಚ್ಚು ಪ್ರೇರಿತರಾದರು. ಇಂಗ್ಲಿಷ್‌ನಲ್ಲಿ 58, ಅರ್ಥಶಾಸ್ತ್ರದಲ್ಲಿ 79, ಗಣಿತದಲ್ಲಿ 45, ಭೌತಶಾಸ್ತ್ರದಲ್ಲಿ 73 ಮತ್ತು ರಸಾಯನಶಾಸ್ತ್ರದಲ್ಲಿ 79 ಅಂಕಗಳನ್ನು ಪಡೆದಿದ್ದಾರೆ.

Soundarya Death Anniversary: ಬಾಡಿ ಇತ್ತು, ರುಂಡವೇ ಇರಲಿಲ್ಲ... ಆ ದಿನ ನೆನೆದು ನಟಿ ಪ್ರೇಮಾ ಕಣ್ಣೀರು

ಆರ್ ಮಾಧವನ್, ಸುಶಾಂತ್ ಸಿಂಗ್ (Sushanth Singh)
ನಟ ಆರ್ ಮಾಧವನ್ 12 ನೇ ತರಗತಿ ಬೋರ್ಡ್ ಪರೀಕ್ಷೆಗಳಲ್ಲಿ 58 ಪ್ರತಿಶತ ಅಂಕಗಳನ್ನು ಗಳಿಸಿದ್ದಾರೆ. ಮಾಧವನ್ ಅವರು 2020 ರಲ್ಲಿ ಟ್ವಿಟರ್‌ನಲ್ಲಿ ತಮ್ಮ ಶೇಕಡಾವಾರು ಬಗ್ಗೆ ಟ್ವೀಟ್ ಮಾಡಿದ್ದಾರೆ, ಆಗ ಫಲಿತಾಂಶದ ನಂತರ ನಿರಾಶೆಗೊಂಡ ವಿದ್ಯಾರ್ಥಿಗಳಿಗೆ ವಿಶೇಷ ಟಿಪ್ಪಣಿ ಬರೆಯುತ್ತಿದ್ದರು. ಲೆಜೆಂಡ್ ಆಫ್ ಭಗತ್ ಸಿಂಗ್ ನಟ ಸುಶಾಂತ್ ಸಿಂಗ್ 12 ನೇ ತರಗತಿಯ ಬೋರ್ಡ್ ಪರೀಕ್ಷೆಗಳಲ್ಲಿ 74.5 ಶೇಕಡಾವನ್ನು ಗಳಿಸಿದ್ದರು. ಸುಶಾಂತ್ ಅವರು  ದೆಹಲಿ ವಿಶ್ವವಿದ್ಯಾಲಯದ ಕಿರೋರಿಮಲ್ ಕಾಲೇಜಿನಲ್ಲಿ ಇಂಗ್ಲಿಷ್ ಸಾಹಿತ್ಯ ಕೋರ್ಸ್‌ನ ಪ್ರವೇಶ ಪರೀಕ್ಷೆಯನ್ನು ಉತ್ತೀರ್ಣರಾಗಿದ್ದರು. ಕೆಎಂಸಿಯಿಂದ ಎರಡನೇ ವಿಭಾಗದಲ್ಲಿ ಪದವಿ ಪಡೆದರು.

ಆಲಿಯಾ ಭಟ್​ ಹಾಗೂ ಇತರರು
ಆಲಿಯಾ ಭಟ್ ಸ್ಟೂಡೆಂಟ್ ಆಫ್ ದಿ ಇಯರ್ (2012) ನಲ್ಲಿ ನಟನೆಯ ಪ್ರಸ್ತಾಪವನ್ನು ಪಡೆದ ಕಾರಣ 12 ನೇ ತರಗತಿಯನ್ನು ಮುಂದುವರಿಸಲಿಲ್ಲ. “ನಾನು ನನ್ನ 12 ನೇ ತರಗತಿಯನ್ನು ಮುಗಿಸಬೇಕು ಎಂದುಕೊಂಡಿದ್ದೆ.ಆದರೆ ಮುಗಿಸಲು ಆಗಲೇ ಇಲ್ಲ ಎಂದಿದ್ದರು.  ಅದರಂತೆ, ಕರಿಷ್ಮಾ ಕಪೂರ್, ಅರ್ಜುನ್ ಕಪೂರ್, ಕಂಗನಾ ರಣಾವತ್ ಮುಂತಾದ ಅನೇಕ ತಾರೆಯರು ಶಾಲೆಗಳನ್ನು ತೊರೆದು ನಟನೆಗೆ ಪ್ರವೇಶಿಸಿದರು. ಕತ್ರಿನಾ ಕೈಫ್ ಯಾವತ್ತೂ ಶಾಲೆಗೆ ಹೋಗಿರಲಿಲ್ಲ ಮತ್ತು ಮನೆಯಲ್ಲಿ ಟ್ಯೂಷನ್ ಮಾಡುತ್ತಿದ್ದರು ಎಂದು ಇಂಡಿಯಾ ಟಿವಿ ವರದಿ ಮಾಡಿದೆ.
 

Follow Us:
Download App:
  • android
  • ios