ಎರಡು ವರ್ಷ ಕದ್ದುಮುಚ್ಚಿ ಹಿಂದೂ ಯುವತಿ ಜೊತೆ ಸಂಸಾರ ಮಾಡಿದ್ದ ಆಮೀರ್​ ಖಾನ್​!

ಆಮೀರ್​ ಖಾನ್​ ತಮ್ಮ ಮೊದಲ ಚಿತ್ರ ಬಿಡುಗಡೆಗೂ ಮುನ್ನ ನಟಿ ರೀನಾ ದತ್ತಾ ಜೊತೆ ಗುಟ್ಟಾಗಿ ಎರಡು ವರ್ಷ ಸಂಸಾರ ಮಾಡಿರುವ ವಿಷಯ ಬಹಿರಂಗಗೊಂಡಿದೆ. ಅಸಲಿಗೆ ಆಗಿದ್ದೇನು? 
 

Aamir Khan got secretly married to girlfriend Reena Dutta before Qayamat se Qayamat tak release

ಮುಂಬೈ: ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಖಾನ್ (Aamir Khan) ಅವರು ತಮ್ಮ ವೃತ್ತಿಪರ ಜೀವನದ ಬಗ್ಗೆ ಚರ್ಚೆಯಲ್ಲಿರುವಂತೆಯೇ ತಮ್ಮ ವೈಯಕ್ತಿಕ ಜೀವನದ ಬಗ್ಗೆಯೂ ಸುದ್ದಿಯಲ್ಲಿದ್ದವರು. ಆಮೀರ್ ಖಾನ್ ತಮ್ಮ ವೃತ್ತಿಜೀವನವನ್ನು ಸಹಾಯಕ ನಿರ್ದೇಶಕರಾಗಿ ಪ್ರಾರಂಭಿಸಿದ್ದರು. ಅವರು ತಮ್ಮ ಚಿಕ್ಕಪ್ಪ ನಾಸಿರ್ ಹುಸೇನ್ ಅವರ ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದರು. ಇದಾದ ನಂತರ ನಟನೆಯತ್ತ ಮುಖಮಾಡಿ ಕ್ರಮೇಣ  ಇಂಡಸ್ಟ್ರಿಯಲ್ಲಿ  ಮಿಸ್ಟರ್ ಪರ್ಫೆಕ್ಷನಿಸ್ಟ್ ಆದರು. ಆದರೆ, ಆಮೀರ್ ಚಿತ್ರರಂಗಕ್ಕೆ ಬರುವ ಮೊದಲೇ ಹಿಂದೂ ಯುವತಿಯ ಜೊತೆ ಮದುವೆಯಾಗಿ ಎರಡು ವರ್ಷ ಕದ್ದುಮುಚ್ಚಿ ಸಂಸಾರ ಮಾಡಿದ್ದರು ಎನ್ನುವುದು ಅನೇಕ ಮಂದಿಗೆ ತಿಳಿದಿಲ್ಲ.  ಮದುವೆಯಾದ 2 ವರ್ಷಗಳ ನಂತರ ಅವರು ಇದನ್ನು ಬಹಿರಂಗಪಡಿಸಿದ್ದರು. ಹೌದು, ಆಮೀರ್ 21 ವರ್ಷದವನಿರುವಾಗಲೇ  ಗೆಳತಿ ರೀನಾ ದತ್ತಾ (Reena Dutta ) ಅವರನ್ನು ರಹಸ್ಯವಾಗಿ ಮದುವೆಯಾಗಿದ್ದರು. ಆಮೀರ್ ಈ ವಿಷಯವನ್ನು ಪ್ರಪಂಚದಿಂದ ಮುಚ್ಚಿಟ್ಟಿದ್ದಲ್ಲದೆ, ತನ್ನ ಕುಟುಂಬ ಸದಸ್ಯರಿಗೂ ಈ ವಿಷಯವನ್ನು ತಿಳಿಸಲಿಲ್ಲ. ಆಮೀರ್ ರೀನಾ ಅವರನ್ನು  ಮದುವೆಯಾದಾಗ ಆಕೆಗೆ 19 ವರ್ಷ ವಯಸ್ಸು. ಇದು ಬಯಲಾದದ್ದು ಎರಡು ವರ್ಷಗಳ ಬಳಿಕ. ಅದೂ ಆಮೀರ್​ ಖಾನ್​  ಸಂದರ್ಶನವೊಂದರಲ್ಲಿ ಇದನ್ನು ಬಹಿರಂಗಪಡಿಸಿದಾಗಲೇ. ತಮ್ಮ ಮದುವೆಗೆ ಸಂಬಂಧಿಸಿದಂತೆ ಯಾವುದೇ ವಿವಾದಗಳನ್ನು ನಾನು ಬಯಸುವುದಿಲ್ಲ. ಆದ್ದರಿಂದ ಮದುವೆಯ ಕುರಿತು ಸ್ಪಷ್ಟನೆ ನೀಡುತ್ತಿರುವುದಾಗಿ ಆಮೀರ್​ ಹೇಳಿದ್ದರು.  

ಆಮೀರ್ ಖಾನ್​ 'ಖಯಾಮತ್ ಸೆ ಖಯಾಮತ್ ತಕ್' (Qayamat se Qayamat tak) ಚಿತ್ರೀಕರಣದಲ್ಲಿದ್ದಾಗ, ಅವರು ರೀನಾ ಅವರನ್ನು ಮದುವೆಯಾಗಿದ್ದರು. ಅದು ಕೂಡ ಅವರ ಕುಟುಂಬದ ಯಾರಿಗೂ ತಿಳಿಸದೆ. ಹೀಗಿರುವಾಗ ಆಮೀರ್ ತಂದೆ ತಾಹಿರ್ ಹುಸೇನ್ ಮತ್ತು ಚಿಕ್ಕಪ್ಪ ನಾಸಿರ್ ಹುಸೇನ್ ಅವರಿಗೆ ಈ ವಿಷಯ ತಿಳಿದಾಗ ಮೊದಲಿಗೆ ಆಶ್ಚರ್ಯಪಟ್ಟರು, ನಂತರ ಇಬ್ಬರ ಮದುವೆಯನ್ನು ಸ್ವಲ್ಪ ಸಮಯದವರೆಗೆ ಮರೆಮಾಡಲು ನಿರ್ಧರಿಸಿದ್ದರು. ಏಕೆಂದರೆ, ಆಗ ಆಮೀರ್ ಚಿತ್ರ ಬಿಡುಗಡೆಯಾಗಿರಲಿಲ್ಲ. ಈ ಮೊದಲೇ ಮದುವೆಯ ಗುಟ್ಟು ರಟ್ಟಾದರೆ ವಿಷಯ ಒಂದಕ್ಕೆ ಎರಡಾಗಿ, ಏನೇನೋ ಸುದ್ದಿಗಳು ಹರಡಿ ಅವರ  ವೃತ್ತಿಜೀವನದ ಮೇಲೆ ಪರಿಣಾಮ ಬೀರಬಹುದು ಎಂದು ಭಾವಿಸಿದ್ದರು.

ಆಮೀರ್​ ಖಾನ್​ ಚಿತ್ರ ಹಿಟ್​ ಆಗಿದ್ರೆ ಅಕ್ಷಯ್​ ಕುಮಾರ್​ ಮದ್ವೆನೇ ಆಗ್ತಿರಲಿಲ್ಲ, ಯಾಕೆ ಗೊತ್ತಾ?

ಅಷ್ಟಕ್ಕೂ ಆಮೀರ್​ ಗಡಿಬಿಡಿಯಿಂದ ಮದುವೆಯಾಗಲು ನಿರ್ಧರಿಸಿದ್ದ ಹಿಂದೆಯೂ ಇದೆ ಕಾರಣ. ಎರಡು ಕುಟುಂಬಗಳ ನಡುವಿನ ಹಗ್ಗಜಗ್ಗಾಟದಿಂದಾಗಿ ಈ ಮದುವೆ ಅಸಾಧ್ಯವಾಗಿತ್ತು. ಅಂತಹ ಪರಿಸ್ಥಿತಿಯಲ್ಲಿ, ನಟ ರಹಸ್ಯವಾಗಿ ಮದುವೆಯಾಗಲು ನಿರ್ಧರಿಸಿದ್ದರು. ಮತ್ತೊಂದೆಡೆ, ರೀನಾ ಅವರ ಸಹೋದರಿಗೆ ಆಮೀರ್​ ಮೇಲೆ ಅನುಮಾನ ಬಂದಿತ್ತು. ಈ ಬಗ್ಗೆ ಮನೆಯವರಿಗೆ ಹೇಳುತ್ತೇನೆ ಎಂದು  ಬೆದರಿಕೆ ಹಾಕಿದ್ದರು.  ಸಹೋದರಿಯ ಬೆದರಿಕೆಯ ನಂತರ, ರೀನಾ ಆಮೀರ್ ಮನೆಗೆ ತಲುಪಿ ತನ್ನ ಮದುವೆಯ ಬಗ್ಗೆ ನಟನ ತಂದೆಗೆ ತಿಳಿಸಿದಳು. ಆಮೀರ್ ತಂದೆ ಕೂಡ ರೀನಾ ಅವರನ್ನು ತನ್ನ ಸೊಸೆಯಾಗಿ ಸ್ವೀಕರಿಸಿ ಸ್ವಾಗತಿಸಿದರು.

ಆದರೆ, ರೀನಾಳ ತಂದೆಗೆ ಈ ಮದುವೆಯ ವಿಷಯ ತಿಳಿಯಿತು, ಅವರು ತುಂಬಾ ಆಘಾತಕ್ಕೊಳಗಾದರು ಮತ್ತು ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಇದಾದ ಬಳಿಕ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಶ್ರೀ ದತ್ತಾ ಅವರನ್ನು ಆಮೀರ್​ ಸಾಕಷ್ಟು ಉಪಚರಿಸಿದ ಬಳಿಕ  ಆಮೀರ್ ಮೇಲೆ ಅವರಿಗೆ ಪ್ರೀತಿ ಉಕ್ಕಿ,  ಆಶೀರ್ವಾದ ಕೊಟ್ಟರು. ಅಂದಹಾಗೆ ರೀನಾ ಅವರ ತಂದೆ ಏರ್ ಇಂಡಿಯಾದಲ್ಲಿ ಹಿರಿಯ ಅಧಿಕಾರಿಯಾಗಿದ್ದರು. ಅನ್ಯ ಧರ್ಮಿಯ ಯುವಕನ ಜೊತೆ ಮಗಳು ಮದುವೆಯಾಗಿದ್ದು ಅವರಿಗೆ ಸಹಿಸಲು ಆಗದೇ ಹೃದಯಾಘಾತಕ್ಕೆ (Heart Attack) ಒಳಗಾದರು ಎಂದು ತಿಳಿದುಬಂದಿದೆ.

ನಿರ್ಮಾಪಕರು ಸಿಗದೇ ಗೋಳಾಡ್ತಿದ್ದಾರಾ ಆಮೀರ್​ ಖಾನ್​? KRK ಹೇಳಿದ್ದೇನು?

ಮತ್ತೊಂದೆಡೆ, ಖಯಾಮತ್ ಸೆ ಖಯಾಮತ್ ತಕ್ ಚಿತ್ರೀಕರಣದ ಸಮಯದಲ್ಲಿ, ಆಮೀರ್​ ರೀನಾಗೆ ಸಾಕಷ್ಟು ಸಂದೇಶಗಳನ್ನು ಕಳುಹಿಸುತ್ತಿದ್ದರು ಎಂದು ಜೂಹಿ ಚಾವ್ಲಾ (Juhi Chawla) ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.ಆಮೀರ್ ಮತ್ತು ರೀನಾ ಅವರ ಮದುವೆ ಸುಮಾರು 16 ವರ್ಷಗಳ ಕಾಲ ನಡೆಯಿತು, ಇಬ್ಬರಿಗೂ ಇಬ್ಬರು ಮಕ್ಕಳಿದ್ದಾರೆ.  ಆದರೆ 2002 ರಲ್ಲಿ ಇಬ್ಬರೂ ಬೇರೆಯಾಗಿದ್ದಾರೆ.  ಆದರೂ ಇಬ್ಬರ ನಡುವಿನ ಸ್ನೇಹ ಇನ್ನೂ ಮುಂದುವರಿದಿದೆ ಎನ್ನಲಾಗಿದೆ. ಅಂದಹಾಗೆ ಕಿರಣ್​ ರಾವ್​ ಅವರನ್ನು 2005ರಲ್ಲಿ ಆಮೀರ್ ಖಾನ್ ಮದುವೆಯಾಗಿ ಅವರಿಗೂ ಈಗ ವಿಚ್ಛೇದನ ಕೊಟ್ಟಿದ್ದಾರೆ. 

Latest Videos
Follow Us:
Download App:
  • android
  • ios