ಈ ವಾರ, ನೆಟ್‌ಫ್ಲಿಕ್ಸ್ (Netflix), ಅಮೆಜಾನ್ ಪ್ರೈಮ್ ವಿಡಿಯೋ (Amazon Prime) ಮತ್ತು ಜಿಯೋಹಾಟ್‌ಸ್ಟಾರ್‌ನಂತಹ ಒಟಿಟಿ ಪ್ಲಾಟ್‌ಫಾರ್ಮ್‌ಗಳು ಪ್ರೇಕ್ಷಕರಿಗೆ ಹೊಚ್ಚ ಹೊಸ ಸಿನಿಮಾಗಳನ್ನು ನೀಡ್ತಾ ಇವೆ. ಪ್ರೇಕ್ಷಕರು ಆಕ್ಷನ್-ಪ್ಯಾಕ್ಡ್ ಚಲನಚಿತ್ರಗಳ ಅಭಿಮಾನಿಯಾಗಿರಲಿ, ಭಾವನಾತ್ಮಕ ಪ್ರಯಾಣಗಳಾಗಿರಲಿ ಅಥವಾ ಸಂಗೀತವಾಗಿರಲಿ, ಈ ವಾರ ಸಖತ್‌ ಚಾಯ್ಸ್‌ ಇವೆ.

OTT Release; ಈ ವಾರ ಒಟಿಟಿಯಲ್ಲಿ ಯಾವ ಸಿನಿಮಾ ನೋಡಬಹುದು? ಇಲ್ಲಿ ನೋಡಿ..

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

New OTT Releases: ಮುಂದೆ ಬರೋದು ಮಾರ್ಚ್ ತಿಂಗಳ ಕೊನೆಯ ವಾರ.. ಈ ವಾರ, ನೆಟ್‌ಫ್ಲಿಕ್ಸ್ , ಅಮೆಜಾನ್ ಪ್ರೈಮ್ ವಿಡಿಯೋ ಹಾಗೂ ಜಿಯೋಹಾಟ್‌ಸ್ಟಾರ್‌ನಂತಹ ಒಟಿಟಿ ಪ್ಲಾಟ್‌ಫಾರ್ಮ್‌ಗಳು ಪ್ರೇಕ್ಷಕರಿಗೆ ಹೊಸ ಹೊಸ ಸಿನಿಮಾಗಳನ್ನು ನೀಡಲಿವೆ. ನೀವು ಆಕ್ಷನ್-ಪ್ಯಾಕ್ಡ್ ಚಲನಚಿತ್ರಗಳ ಅಭಿಮಾನಿಯಾಗಿರಲಿ, ಭಾವನಾತ್ಮಕ ಪ್ರಯಾಣಗಳಾಗಿರಲಿ ಅಥವಾ ಸಂಗೀತವಾಗಿರಲಿ, ನಿಮಗೆ ಈ ವಾರ ಸಖತ್‌ ಚಾಯ್ಸ್‌ ಇವೆ. ರಾಣಿ ಮುಖರ್ಜಿಯವರ 'ಮರ್ದಾನಿ 3' ಕೂಡ ಒಟಿಟಿಗೆ ಬಂದಿದೆ. ಕಳೆದೆರಡು ತಿಂಗಳಲ್ಲಿ ಬಿಡುಗಡೆಯಾಗಿದ್ದ ಸಿನಿಮಾಗಳು ಒಟಿಟಿಗೆ ಬರಲಿವೆ. ಈ ವಾರ ಒಂದಷ್ಟು ಇಂಟ್ರೆಸ್ಟಿಂಗ್ ಸಿನಿಮಾ ಹಾಗೂ ವೆಬ್ ಸೀರಿಸ್ ಬಿಡುಗಡೆಗೆ ಆಗ್ತಿವೆ.

ಈ ವಾರ, ನೆಟ್‌ಫ್ಲಿಕ್ಸ್ (Netflix), ಅಮೆಜಾನ್ ಪ್ರೈಮ್ ವಿಡಿಯೋ (Amazon Prime) ಮತ್ತು ಜಿಯೋಹಾಟ್‌ಸ್ಟಾರ್‌ನಂತಹ ಒಟಿಟಿ ಪ್ಲಾಟ್‌ಫಾರ್ಮ್‌ಗಳು ಪ್ರೇಕ್ಷಕರಿಗೆ ಹೊಚ್ಚ ಹೊಸ ಸಿನಿಮಾಗಳನ್ನು ನೀಡ್ತಾ ಇವೆ. ಪ್ರೇಕ್ಷಕರು ಆಕ್ಷನ್-ಪ್ಯಾಕ್ಡ್ ಚಲನಚಿತ್ರಗಳ ಅಭಿಮಾನಿಯಾಗಿರಲಿ, ಭಾವನಾತ್ಮಕ ಪ್ರಯಾಣಗಳಾಗಿರಲಿ ಅಥವಾ ಸಂಗೀತವಾಗಿರಲಿ, ಈ ವಾರ ಸಖತ್‌ ಚಾಯ್ಸ್‌ ಇವೆ. ರಾಣಿ ಮುಖರ್ಜಿಯವರ ಮರ್ದಾನಿ 3 (Mardani 3) ಕೂಡ ಒಟಿಟಿಗೆ ಬಂದಿದೆ. ಕಳೆದೆರಡು ತಿಂಗಳಲ್ಲಿ ಬಿಡುಗಡೆಯಾಗಿದ್ದ ಸಿನಿಮಾಗಳು ಒಟಿಟಿಗೆ ಬರಲಿವೆ. ಈ ವಾರ ಒಂದಷ್ಟು ಇಂಟ್ರೆಸ್ಟಿಂಗ್ ಸಿನಿಮಾಗಳು ಹಾಗೂ ವೆಬ್ ಸೀರಿಸ್ ಬಿಡುಗಡೆಗೆ ಆಗ್ತಿವೆ.

ಬಿಟಿಎಸ್: ದಿ ರಿಟರ್ನ್ (BTS: The Return)

ವೇದಿಕೆ: ನೆಟ್‌ಫ್ಲಿಕ್ಸ್

ಬಿಡುಗಡೆ ದಿನಾಂಕ: ಮಾರ್ಚ್ 27

'ದಿ ರಿಟರ್ನ್' ಎಂಬುದು ಬಿಟಿಎಸ್ ತಮ್ಮ ಮಿಲಿಟರಿ ಸೇವೆಯನ್ನು ಪೂರ್ಣಗೊಳಿಸಿದ ನಂತರ ಪುನರಾಗಮನದ ಹಿಂದಿನ ಅವ್ಯವಸ್ಥೆ ಸೆರೆಹಿಡಿಯುವ ಸಾಕ್ಷ್ಯಚಿತ್ರವಾಗಿದೆ.

ಕಾಟ್ಟಾನ್

ಹಳ್ಳಿಯ ಪೊಲೀಸ್ ಠಾಣೆ ಸುತ್ತ ಈ ಕಥೆ ಸಾಗಲಿದೆ. ಯಾವುದೇ ಕೇಸ್‌ಗಳು ಇಲ್ಲದೇ ಪೊಲೀಸ್ ಠಾಣೆ ಮುಚ್ಚಬೇಕು ಎಂದುಕೊಂಡಾಗ ಊರಿನಲ್ಲಿ ಮುಂಡವಿಲ್ಲದ ರುಂಡ ಸಿಗುತ್ತದೆ. ಆ ರುಂಡ ಯಾರದ್ದು? ಹತ್ಯೆ ನಡೆದಿದ್ದು ಹೇಗೆ? ಹೀಗೆ ವೆಬ್ ಸೀರಿಸ್ ಕಥೆ ಸಾಗಲಿದೆ. ಕನ್ನಡಕ್ಕೂ ಡಬ್ ಆಗಿ ವೀಕ್ಷಣೆಗೆ ಸಿಗಲಿದೆ.

ಪ್ಲಾಟ್‌ಫಾರ್ಮ್: ಜಿಯೋ ಹಾಟ್‌ಸ್ಟಾರ್

ಬಿಡುಗಡೆ ದಿನಾಂಕ: ಮಾರ್ಚ್ 27, 2026

ಮರ್ದಾನಿ 3

ವೇದಿಕೆ: ನೆಟ್‌ಫ್ಲಿಕ್ಸ್

ಬಿಡುಗಡೆ ದಿನಾಂಕ: ಮಾರ್ಚ್ 27, 2026

ಭಾಷೆ: ಹಿಂದಿ

ಮರ್ದಾನಿ 3ರಲ್ಲಿ ರಾಣಿ ಮುಖರ್ಜಿ ಪೊಲೀಸ್ ಶಿವಾನಿ ಶಿವಾಜಿ ರಾಯ್ ಪಾತ್ರದಲ್ಲಿ ನಟಿಸಿದ್ದಾರೆ. ಜನವರಿ 30ರಂದು ತೆರೆಗಪ್ಪಳಿಸಿದ್ದ 'ಮರ್ದಾನಿ- 3' ಸಿನಿಮಾ ಮಾರ್ಚ್ 27ಕ್ಕೆ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆರಂಭಿಸಲಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿದೆ. ಅಭಿರಾಜ್ ಮಿನವಾಲ ನಿರ್ದೇಶನದ ಈ ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ರಾಣಿ ಮುಖರ್ಜಿ ಅಬ್ಬರಿಸಿದ್ದಾರೆ.

ಓ'ರೋಮಿಯೋ

ವೇದಿಕೆ: ಪ್ರೈಮ್ ವಿಡಿಯೋ

ಬಿಡುಗಡೆ ದಿನಾಂಕ: ಮಾರ್ಚ್ 27, 2026

ಭಾಷೆ: ಹಿಂದಿ

ಬಾಲಿವುಡ್ ರೊಮ್ಯಾಂಟಿಕ್ ಆಕ್ಷನ್ ಥ್ರಿಲ್ಲರ್ ಸಿನಿಮಾ ಓ-ರೊಮಿಯೊ ಮಾರ್ಚ್ 27ಕ್ಕೆ ಓಟಿಟಿಗೆ ಬರ್ತಿದೆ. ಪ್ರೈಂ ವಿಡಿಯೋದಲ್ಲಿ ಸ್ಟ್ರೀಮಿಂಗ್ ಆಗಲಿದೆ. ವಿಶಾಲ್ ಭಾರಧ್ವಜ್ ನಿರ್ದೇಶನದ ರೊಮ್ಯಾಂಟಿಕ್ ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ಶಾಹಿದ್ ಕಪೂರ್, ತ್ರಿಪ್ತಿ ದಿಮ್ರಿ, ತಮನ್ನಾ ಭಾಟಿಯಾ ನಟಿಸಿದ್ದಾರೆ.

ಮಸ್ತಿಷ್ಕ ಮರಣಂ

ವೇದಿಕೆ: ನೆಟ್‌ಫ್ಲಿಕ್ಸ್

ಬಿಡುಗಡೆ ದಿನಾಂಕ: ಮಾರ್ಚ್ 27, 2026

ಭಾಷೆ: ಹಿಂದಿ

ದುಃಖಿತ ತಂದೆಯ ಕಥೆಯನ್ನು ಹೇಳುತ್ತದೆ. ಚಿತ್ರದಲ್ಲಿ ಫ್ರಿದಾ ಸೋಮನ್ ಆಗಿ ರಜಿಶಾ ವಿಜಯನ್, ಬಿಮಲ್ ಆಗಿ ನಿರಂಜ್ ಮಣಿಯನ್ಪಿಳ್ಳ ರಾಜು, ಜಗದೀಶ್, ಸುರೇಶ್ ಕೃಷ್ಣ, ವಿಷ್ಣು ಅಗಸ್ತ್ಯ, ರಾಹುಲ್ ರಾಜಗೋಪಾಲ್, ದಿವ್ಯ ಪ್ರಭಾ ಮತ್ತು ಸಂತಿ ಬಾಲಚಂದ್ರನ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ವರ್ಕಿ ಸಂಗೀತ ಸಂಯೋಜಿಸಿದರೆ, ಪ್ರಯಾಗ್ ಮುಕುಂದನ್ ಅವರ ಛಾಯಾಗ್ರಹಣ ಮತ್ತು ವಿನಾಯಕ ಅಜಿತ್ ನಿರ್ಮಾಣ ಇದೆ.