ಆರಂಭದಲ್ಲಿ ನೆಲೆ ಕಾಣಲು ಹೆಣಗಿದ್ದ ಲತಾ, ಸ್ವರ ಸಾಮ್ರಾಜ್ಞೆಯಾಗಿ ಮಿಂಚಿದ್ದು ಹೇಗೆ?

ಹಾಡು ನಿಲ್ಲಿಸಿದ ಗಾನ ಕೋಗಿಲೆ
ಲತಾ ಧ್ವನಿಯನ್ನು ತಿರಸ್ಕರಿಸಿದ ನಿರ್ಮಾಪಕ
ಸಂಗೀತಾ ಲೋಕದ ದಂತಕತೆ ಲತಾ ಮಂಗೇಶ್ಕರ್
 

Here is Nightingale Of India lata Mangeshkar life struggles akb

ಮುಂಬೈ: ಭಾರತದ ಗಾನ ಕೋಗಿಲೆ, ಮಾಧುರ್ಯದ ರಾಣಿ( Qeen of Melody) ಎಂದೆಲ್ಲಾ ಕರೆಯಲ್ಪಡುವ ಲತಾ ಮಂಗೇಶ್ಕರ್‌ ಅನಾರೋಗ್ಯದಿಂದ ಮುಂಬೈನ ಬ್ರೀಚ್‌ ಕ್ಯಾಂಡಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಇವರ ನಿಧನದಿಂದ ಇಡೀ ಸಂಗೀತಾ ಲೋಕ ಬಡವಾಗಿದ್ದು, ಶೋಕ ಸಾಗರದಲ್ಲಿ ಮುಳುಗಿದೆ. ಮಧ್ಯಪ್ರದೇಶದ ಇಂದೋರ್‌ನಲ್ಲಿ 1929ರ ಸೆಪ್ಟಂಬರ್‌ 28 ರಂದು  ಸಂಗೀತಾ ಹಿನ್ನೆಲೆಯ ಕುಟುಂಬವೊಂದರಲ್ಲಿ ಲತಾ ಮಂಗೇಶ್ಕರ್‌ ಜನಿಸಿದರು. ಇವರ ತಂದೆ ದೀನನಾಥ್‌ ಮಂಗೇಶ್ಕರ್‌(Deenanath Mangeshkar)ತಾಯಿ ಸೇವಂತಿ ಮಂಗೇಶ್ಕರ್‌ (Shevanti Mangeshkar). 

ಲತಾ ಮಂಗೇಶ್ಕರ್ ತಂದೆ ದೀನಾನಾಥ ಮಂಗೇಶ್ಕರ್ ಕೂಡ ಕಲಾ ಹಿನ್ನೆಲೆಯವರು ಮರಾಠಿ ರಂಗಭೂಮಿ ಕಲಾವಿದರಾಗಿದ್ದ ಅವರು ನಾಟ್ಯ ಹಾಗೂ ಸಂಗೀತ ಎರಡರಲ್ಲೂ ಪ್ರಾವೀಣ್ಯತೆ ಗಳಿಸಿದರು. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಹಾಡುಗಾರರಾಗಿದ್ದರು. ಹೀಗಾಗಿ ಮಕ್ಕಳಾದ ಲತಾ ಮಂಗೇಶ್ಕರ್, ಮೀನಾ ಖದಿಕರ್‌, ಆಶಾ ಬೋಂಸ್ಲೆ, ಉಷಾ ಮಂಗೇಶ್ಕರ್, ಪುತ್ರ ಹೃದಯಂತ್‌ ಮಂಗೇಶ್ಕರ್‌ ಇವರಿಗೆ ಸಂಗೀತಾ ತಂದೆಯಿಂದಲೇ ಬಳುವಳಿಯಾಗಿ ಬಂದಿತ್ತು.

Lata Mangeshkar Faced Rejection: ತೆಳು ಧ್ವನಿ ಎಂದು ಲತಾರನ್ನು ರಿಜೆಕ್ಟ್‌ ಮಾಡಿದ್ದರು ಈ ವ್ಯಕ್ತಿ

ಲತಾ ಮಂಗೇಶ್ಕರ್‌ ಎಲ್ಲರಿಗಿಂತಲೂ ಹಿರಿಯರು. ಇವರ ಮೂಲ ಹೆಸರು ಹೇಮಾ ಮಂಗೇಶ್ಕರ್‌ ತಂದೆಯ ಲತಾ ಅವರ ಮೊದಲ ಸಂಗೀತಾ ಗುರುಗಳಾಗಿದ್ದರು. ಐದು ವರ್ಷದವರಿರುವಾಗಲೇ ಲತಾ ಮಂಗೇಶ್ಕರ್‌ ಅವರು ತಮ್ಮ ತಂದೆಯ ಸಂಗೀತಾ ನಾಟಕಗಳಲ್ಲಿ ನಟಿಸುತ್ತಿದ್ದರು. 1942ರಲ್ಲಿ ಲತಾ ಅವರ ತಂದೆ ನಿಧನರಾದ ನವಯುಗ ಚಿತ್ರಪಟ ಸಿನಿಮಾ ಸಂಸ್ಥೆಯ ಮಾಲೀಕರಾದ ಮಾಸ್ಟರ್ ವಿನಾಯಕ್ ಅವರು ಆಶಾ  ಹಾಗೂ ಕುಟುಂಬದ  ಕಾಳಜಿ ವಹಿಸಿದ್ದರು. ಇವರೇ ಲತಾ ಮಂಗೇಶ್ಕರ್‌ ಸಂಗೀತಾ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಹಾಯ ಮಾಡಿದರು. 

Here is Nightingale Of India lata Mangeshkar life struggles akb

ವಸಂತ ಜೋಗ್ಲೇಕರ್ ಅವರ ಮರಾಠಿ ಚಲನಚಿತ್ರ ಕಿತಿ ಹಸಾಲ್ (1942) ಗಾಗಿ ಸದಾಶಿವರಾವ್ ನೆವ್ರೇಕರ್ ಅವರು ಸಂಯೋಜಿಸಿದ "ನಾಚು ಯಾ ಗದೆ, ಖೇಲು ಸಾರಿ ಮಣಿ ಹೌಸ್ ಭಾರಿ" ಹಾಡನ್ನು ಲತಾ ಹಾಡಿದರು.  ಆದರೆ ಆ ಹಾಡನ್ನು ಅಂತಿಮವಾಗಿ ಸಿನಿಮಾದಿಂದ ಕೈ ಬಿಡಲಾಗಿತ್ತು. ನಂತರ ವಿನಾಯಕ್ ಲತಾ ಅವರಿಗೆ ಒಂದು ಸಣ್ಣ ಪಾತ್ರವನ್ನು ನೀಡಿದರು. ಇದರಲ್ಲಿ ಅವರು ದಾದಾ ಚಂಡೇಕರ್ ಅವರು ಸಂಯೋಜಿಸಿದ 'ನತಾಲಿ ಚೈತ್ರಾಚಿ ನವಲಾಯಿ' ಹಾಡು ಹಾಡಿದರು. ಅವರ ಮೊದಲ ಹಿಂದಿ ಹಾಡು 'ಮಾತಾ ಏಕ್ ಸಪೂತ್ ಕಿ ದುನಿಯಾ ಬದಲ್ ದೇ ತು' ಆಗಿತ್ತು.

Latha Mangeshkar: ಶಾರದೆಯ ಪಾದ ಸೇರಿದ ಲತಾ ಮಗೇಶ್ಕರ್, ಹಾಡು ನಿಲ್ಲಿಸಿದ ಗಾನ ಕೋಗಿಲೆ

ನಂತರ 1945 ರಲ್ಲಿ ಮಾಸ್ಟರ್ ವಿನಾಯಕ್ ಅವರ ಕಂಪನಿಯು ತನ್ನ ಕೇಂದ್ರ ಕಚೇರಿಯನ್ನು ಮುಂಬೈಗೆ  ಸ್ಥಳಾಂತರಿಸಿದಾಗ ಲತಾ ಅಲ್ಲಿಗೆ ತೆರಳಿದರು. ನಂತರ ಉಸ್ತಾದ್ ಅಮನ್ ಅಲಿ ಖಾನ್ ಅವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಪಾಠಗಳನ್ನು ಕಲಿತರು. ವಸಂತ್ ಜೋಗ್ಲೇಕರ್ ಅವರ ಹಿಂದಿ  ಚಲನಚಿತ್ರ ಆಪ್ ಕಿ ಸೇವಾ ಮೇ (1946) ಗಾಗಿ ಅವರು 'ಪಾ ಲಗೂನ್ ಕರ್ ಜೋರಿ' ಹಾಡಿದರು. 

1948 ರಲ್ಲಿ ವಿನಾಯಕ್ ಅವರ ಮರಣದ ನಂತರ, ಸಂಗೀತ ನಿರ್ದೇಶಕ ಗುಲಾಮ್ ಹೈದರ್ ಅವರು ಲತಾಗೆ ಮಾರ್ಗದರ್ಶನ ನೀಡಿದರು. ಅವರು ಶಹೀದ್ (1948) ಚಲನಚಿತ್ರದಲ್ಲಿ ಕೆಲಸ ಮಾಡುತ್ತಿದ್ದ ನಿರ್ಮಾಪಕ ಶಶಾಧರ್ ಮುಖರ್ಜಿ ಅವರಿಗೆ ಲತಾ ಅವರನ್ನು ಪರಿಚಯಿಸಿದರು, ಆದರೆ ಮುಖರ್ಜಿ ಲತಾ ಅವರ ಧ್ವನಿಯನ್ನು ತುಂಬಾ ತೆಳು ಎಂದು ತಿರಸ್ಕರಿಸಿದರಂತೆ. ಇದರಿಂದ ಸಿಟ್ಟಾದ ಹೈದರ್, ಮುಂಬರುವ ವರ್ಷಗಳಲ್ಲಿ ನಿರ್ಮಾಪಕರು ಮತ್ತು ನಿರ್ದೇಶಕರು ಲತಾ ಅವರ ಕಾಲಿಗೆ ಬಿದ್ದು ತಮ್ಮ ಚಲನಚಿತ್ರಗಳಲ್ಲಿ ಹಾಡಲು ಅವಳನ್ನು ಬೇಡಿಕೊಳ್ಳುತ್ತಾರೆ ಎಂದು ಪ್ರತಿಕ್ರಿಯಿಸಿದರು ಮುಂದೆ ಅವರ ಮಾತಿನಂತೆ ಲತಾ ಸಂಗೀತಾ ಲೋಕದಲ್ಲಿ ಯಾರೂ ಊಹಿಸದ ಮಟ್ಟಕ್ಕೆ ಬೆಳೆದು ನಿಂತಿದ್ದು,. ಭಾರತ ರತ್, ಪದ್ಮ ಭೂಷಣ, ಪದ್ಮ ವಿಭೂಷಣ ಸೇರಿದಂತೆ ಸಾವಿರಾರು ಪ್ರಶಸ್ತಿಗಳು ಇವರನ್ನು ಅರಸಿ ಬಂದಿವೆ. ಇಂದು ಸಂಗೀತಾ ಲೋಕದ ದಂತಕತೆಯಾಗಿರುವ ಲತಾ ಮಂಗೇಶ್ಕರ್‌ ಬಾರದ ಲೋಕಕ್ಕೆ ತೆರಳಿದ್ದು, ತಮ್ಮ ಹಾಡುಗಳ ಮೂಲಕ ಸದಾ ಜೀವಂತವಾಗಿರಲಿದ್ದಾರೆ.

Latest Videos
Follow Us:
Download App:
  • android
  • ios