Asianet Suvarna News Asianet Suvarna News

RRR ಚಿತ್ರದ ನಾಟು ನಾಟು ಹಾಡಿಗೆ ಪ್ರತಿಷ್ಠಿತ ಗೋಲ್ಡನ್‌ ಗ್ಲೋಬ್‌ ಪ್ರಶಸ್ತಿ..

ಎರಡು ವಿಭಾಗಗಳಲ್ಲಿ ಆರ್‌ಆರ್‌ಆರ್‌ ಚಿತ್ರ ನಾಮನಿರ್ದೇಶನಗೊಂಡಿದ್ದು, ಈ ಪೈಕಿ ನಾಟು ನಾಟು ಹಾಡಿಗೆ ಜಾಗತಿಕ ಪ್ರಶಸ್ತಿ ದೊರೆತಿದೆ.

golden globe awards rrr wins best original song no win in best non english language film category ash
Author
First Published Jan 11, 2023, 9:44 AM IST

ಆಸ್ಕರ್‌ ರೇಸ್‌ನಲ್ಲಿರುವ ಪ್ಯಾನ್‌ ಇಂಡಿಯಾ ಚಿತ್ರ ಆರ್‌ಆರ್‌ಆರ್‌ಗೆ ಮತ್ತೊಂದು ಗರಿ ಸಿಕ್ಕಿದೆ. ಎಸ್‌. ಎಸ್‌. ರಾಜಮೌಳಿಯವರ ಬ್ಲಾಕ್‌ಬಸ್ಟರ್ ನಾಟು ನಾಟು ಹಾಡಿಗೆ ಜಾಗತಿಕ ಪ್ರಶಸ್ತಿಯಾದ ಗೋಲ್ಡನ್‌ ಗ್ಲೋಬ್‌ ಅವಾರ್ಡ್‌ ಸಿಕ್ಕಿದೆ. ಅತ್ಯುತ್ತಮ ಮೂಲ ಗೀತೆಗಾಗಿ ಈ ಜಾಗತಿಕ ಪ್ರಶಸ್ತಿ ದೊರೆತಿದೆ ಎಂದು ತಿಳಿದುಬಂದಿದೆ. ಎರಡು ವಿಭಾಗಗಳಲ್ಲಿ ಆರ್‌ಆರ್‌ಆರ್‌ ಚಿತ್ರ ನಾಮನಿರ್ದೇಶನಗೊಂಡಿದ್ದು, ಈ ಪೈಕಿ ನಾಟು ನಾಟು ಹಾಡಿಗೆ ಜಾಗತಿಕ ಪ್ರಶಸ್ತಿ ದೊರೆತಿದೆ. ಆದರೆ, ಅತ್ಯುತ್ತಮ ಇಂಗ್ಲಿಷ್ ಅಲ್ಲದ ಭಾಷಾ ಚಲನಚಿತ್ರ ಪ್ರಶಸ್ತಿ ಆರ್‌ಆರ್‌ಆರ್‌ ಕೈತಪ್ಪಿದೆ. ಅರ್ಜೆಂಟೀನಾ ದೇಶದ ಅರ್ಜೆಂಟೀನಾ, 1985 ಚಲನಚಿತ್ರಕ್ಕೆ ಈ ಪ್ರಶಸ್ತಿ ಸಿಕ್ಕಿದೆ ಎಂದು ವರದಿಯಾಗಿದೆ.  ಆಲ್ ಕ್ವೈಟ್ ಆನ್ ದಿ ವೆಸ್ಟರ್ನ್ ಫ್ರಂಟ್ (ಜರ್ಮನಿ), ಕ್ಲೋಸ್ (ಬೆಲ್ಜಿಯಂ), ಡಿಸಿಷನ್ ಟು ಲೀವ್, (ದಕ್ಷಿಣ ಕೊರಿಯಾ) ಚಲನಚಿತ್ರಗಳು ಸಹ ಈ ವಿಭಾಗದಲ್ಲಿ ನಾಮನಿರ್ದೇಶನಗೊಂಡಿದ್ದವು. 

ಆರ್‌ಆರ್‌ಆರ್‌ (RRR) ಚಿತ್ರದ ಸಂಗೀತ ನಿರ್ದೇಶಕ ಎಂ. ಎಂ. ಕೀರವಾಣಿ (M.M. Keeravani) ಗೋಲ್ಡನ್ ಗ್ಲೋಬ್‌ ಪ್ರಶಸ್ತಿ (Golden Globe Awards) ಸ್ವೀಕರಿಸಿದ್ದು, ಪ್ರಶಸ್ತಿ ಸಮಾರಂಭದಲ್ಲಿ ಚಿತ್ರದ ನಿರ್ದೇಶಕ (Director) ರಾಜಮೌಳಿ (S.S. Rajamouli) , ಜೂನಿಯರ್ ಎನ್‌ಟಿಆರ್ (Junior NTR) ಮತ್ತು ರಾಮ್ ಚರಣ್ (Ram Charan) ಹಾಗೂ ಅವರ ಪತ್ನಿ ಉಪಾಸನಾ ಕಾಮಿನೇನಿ (Upasana Kamineni) ಸಹ ಭಾಗಿಯಾಗಿದ್ದರು. ಬ್ಲಾಕ್‌ಬಸ್ಟರ್‌ ಆರ್‌ಆರ್‌ಆರ್‌ ಚಿತ್ರದಲ್ಲಿ ಜೂನಿಯರ್ NTR ಮತ್ತು ರಾಮ್ ಚರಣ್ ಸ್ವಾತಂತ್ರ್ಯ ಹೋರಾಟಗಾರರಾದ ಕೊಮರಂ ಭೀಮ್ ಮತ್ತು ಅಲ್ಲೂರಿ ಸೀತಾರಾಮರಾಜು ಅವರ ಪಾತ್ರವನ್ನು ಅಭಿನಯಿಸಿದ್ದಾರೆ. 1920 ರ ಬ್ರಿಟಿಷ್ ಆಕ್ರಮಿತ ಭಾರತದ ಕತೆಯನ್ನು ಚಿತ್ರ ಆಧರಿಸಿದೆ.

ಇದನ್ನು ಓದಿ: ಕಾಂತಾರ, ವಿಕ್ರಾಂತ್ ರೋಣ, ಕಾಶ್ಮೀರ್ ಫೈಲ್ಸ್; ಆಸ್ಕರ್ ರೇಸ್‌ನಲ್ಲಿ ಭಾರತದ ಸಿನಿಮಾಗಳೆಷ್ಟು? ಇಲ್ಲಿದೆ ಸಂಪೂರ್ಣ ವಿವರ

ಭಾರಿ ಯಶಸ್ಸು ಕಂಡ ಈ ಚಿತ್ರದ ಪಾತ್ರವರ್ಗದಲ್ಲಿ ಆಲಿಯಾ ಭಟ್ (Alia Bhatt) ಮತ್ತು ಅಜಯ್ ದೇವಗನ್ (Ajay Devgn) ಜೊತೆಗೆ ಬ್ರಿಟಿಷ್ ನಟರಾದ ರೇ ಸ್ಟೀವನ್ಸನ್, ಅಲಿಸನ್ ಡೂಡಿ ಮತ್ತು ಒಲಿವಿಯಾ ಮೋರಿಸ್ ಇದ್ದಾರೆ. ಜಾಗತಿಕವಾಗಿ ₹ 1,200 ಕೋಟಿ ಗಳಿಸಿದ RRR ಈಗಾಗಲೇ ನ್ಯೂಯಾರ್ಕ್ ಫಿಲ್ಮ್ ಕ್ರಿಟಿಕ್ಸ್ ಸರ್ಕಲ್ ಪ್ರಶಸ್ತಿ ವಿಭಾಗದಲ್ಲಿ ರಾಜಮೌಳಿ ಅತ್ಯುತ್ತಮ ನಿರ್ದೇಶಕ ಸೇರಿ ಕೆಲ ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ. ಇನ್ನು, ಆರ್‌ಆರ್‌ಆರ್‌ ಚಿತ್ರ ಆಸ್ಕರ್‌ ಪ್ರಶಸ್ತಿ ರೇಸ್‌ನಲ್ಲೂ ಇದ್ದು, ಕನಿಷ್ಠ ಒಂದು ವಿಭಾಗದಲ್ಲಿ ನಾಮನಿರ್ದೇಶನಗೊಳ್ಳುವ ನಿರೀಕ್ಷೆಯಿದೆ.

ಇದನ್ನೂ ಓದಿ: ಆಸ್ಕರ್‌ ರೇಸ್‌ಗೆ 'ಕಾಂತಾರ' ಎಂಟ್ರಿ ಅಧಿಕೃತ; 2 ವಿಭಾಗದಲ್ಲಿ ಅರ್ಹತೆ ಪಡೆದ ರಿಷಬ್ ಶೆಟ್ಟಿ ಸಿನಿಮಾ

ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ಹಾಸ್ಯನಟ ಜೆರೋಡ್ ಕಾರ್ಮೈಕಲ್ ಗೋಲ್ಡನ್ ಗ್ಲೋಬ್ಸ್ ಅವಾರ್ಡ್‌ನ  ಹೋಸ್ಟ್ ಆಗಿದ್ದಾರೆ. ಜನಾಂಗೀಯ ಮತ್ತು ಲೈಂಗಿಕ ಮತ ಪದ್ಧತಿಗಳ ಟೀಕೆಗಳ ನಂತರ ಈ ಪ್ರಶಸ್ತಿಗಳು ಮತ್ತೆ ಆಂತರಿಕ ಸುಧಾರಣೆಗಳನ್ನು ಕಂಡ ನಂತರ ಹಾಲಿವುಡ್ ಮುಖ್ಯವಾಹಿನಿಗೆ ಮರಳಿದೆ. ಈ ಪ್ರಶಸ್ತಿ ಕಾರ್ಯಕ್ರಮವನ್ನು ಪ್ರಸಾರ ಮಾಡುವ ಎನ್‌ಬಿಸಿ ಚಾನೆಲ್‌ ಕಳೆದ ವರ್ಷದ ಗೋಲ್ಡನ್ ಗ್ಲೋಬ್‌ ಅವಾರ್ಡ್ಸ್‌ ಸಮಾರಂಭವನ್ನು ಬಹಿಷ್ಕರಿಸಿತ್ತು. ಅಲ್ಲದೆ, ಟಾಮ್ ಕ್ರೂಸ್ ನೇತೃತ್ವದ ಹಾಲಿವುಡ್‌ನ ಅನೇಕ ದೊಡ್ಡ ತಾರೆಗಳು ತಮಗೆ ದೊರೆತಿದ್ದ 3 ಗೋಲ್ಡನ್‌ ಗ್ಲೋಬ್‌ ಪ್ರಶಸ್ತಿಗಳನ್ನು ಹಿಂದಿರುಗಿಸಿದ್ದರು. 

ಇದನ್ನೂ ಓದಿ: ಆಸ್ಕರ್ ರೇಸ್‌ನಲ್ಲಿ ಕನ್ನಡದ ಮತ್ತೊಂದು ಸಿನಿಮಾ; ಅತ್ಯುತ್ತಮ ಸಿನಿಮಾ ವಿಭಾಗಕ್ಕೆ ಅರ್ಹತೆ ಪಡೆದ ವಿಕ್ರಾಂತ್ ರೋಣ

 

Follow Us:
Download App:
  • android
  • ios