ಆಸ್ಕರ್ ರೇಸ್‌ನಲ್ಲಿ ಕನ್ನಡದ ಮತ್ತೊಂದು ಸಿನಿಮಾ; ಅತ್ಯುತ್ತಮ ಸಿನಿಮಾ ವಿಭಾಗಕ್ಕೆ ಅರ್ಹತೆ ಪಡೆದ ವಿಕ್ರಾಂತ್ ರೋಣ
ಆಸ್ಕರ್ ರೇಸ್‌ನಲ್ಲಿ ಕನ್ನಡದ ಮತ್ತೊಂದು ಸಿನಿಮಾವಿದೆ. ಅತ್ಯುತ್ತಮ ಸಿನಿಮಾ ವಿಭಾಗಕ್ಕೆ ಸುದೀಪ್ ಅವರ ವಿಕ್ರಾಂತ್ ರೋಣ ಅರ್ಹತೆ ಪಡೆದುಕೊಂಡಿದೆ.
ಈ ಬಾರಿಯ ಆಸ್ಕರ್ ಅಂಗಳದಲ್ಲಿ ಕನ್ನಡ ಎರಡು ಸಿನಿಮಾಗಳು ಇರುವುದು ಹೆಮ್ಮೆಯ ವಿಚಾರವಾಗಿದೆ. ಈಗಾಗಲೇ ಕಾಂತಾರ ಸಿನಿಮಾ ಎರಡು ವಿಭಾಗಗಳಲ್ಲಿ ಆಸ್ಕರ್‌ಗೆ ಅರ್ಹತೆ ಪಡೆದುಕೊಂಡಿದೆ ಎನ್ನುವ ಸುದ್ದಿ ವೈರಲ್ ಆಗಿದೆ. ಕಾಂತಾರ ಜೊತೆಗೆ ಕನ್ನಡದ ಮತ್ತೊಂದು ಸಿನಿಮಾ ವಿಕ್ರಾಂತ್ ರೋಣ ಕೂಡ ಒಂದು ವಿಭಾಗದಲ್ಲಿ ಆಸ್ಕರ್ ಸ್ಪರ್ಧೆಯಲ್ಲಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾ ಆಸ್ಕರ್ ರೇಸ್ ನಲ್ಲಿರುವ ಬಗ್ಗೆ ನಿರ್ದೇಶಕ ಅನೂಪ್ ಭಂಡಾರಿ ಬಹಿರಂಗ ಪಡಿಸಿದ್ದಾರೆ.
ವಿಕ್ರಾಂತ್ ರೋಣ ಸಿನಿಮಾ ಅತ್ಯುತ್ತಮ ಸಿನಿಮಾ ವಿಭಾಗಕ್ಕೆ ಅರ್ಹತೆ ಪಡೆದುಕೊಂಡಿದೆ. ಈ ಬಗ್ಗೆ ನಿರ್ದೇಶಕ ಅನೂಪ್ ಭಂಡಾರಿ ಸುವರ್ಣನ್ಯೂಸ್ ಡಿಜಿಟಲ್ ಜೊತೆ ಮಾತನಾಡಿ ಸಂತಸ ಹಂಚಿಕೊಂಡರು. 'ಸದ್ಯ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಆದರೆ ಅತ್ತ್ಯುತ್ತಮ ಸಿನಿಮಾ ವಿಭಾಗಕ್ಕೆ ವಿಕ್ರಾಂತ್ ರೋಣ ಅರ್ಹತೆ ಪಡೆದುಕೊಂಡಿದೆ. ಈಗಷ್ಟೆ ಮಾಹಿತಿ ತಿಳಿಯಿತು. ಇನ್ನೂ ಯಾವೆಲ್ಲ ವಿಭಾಗಗಳಿಗೆ ಅರ್ಹತೆ ಪಡೆದುಕೊಂಡಿದೆ ಎನ್ನುವುದು ಗೊತ್ತಾಗಬೇಕಿದೆ. ರಂಗಿತರಂಗ ಬಳಿಕ ಆಸ್ಕರ್ ಅಂಗಳಕ್ಕೆ ವಿಕ್ರಾಂತ್ ರೋಣ ಎಂಟ್ರಿ ಕೊಟ್ಟಿದೆ' ಎಂದು ಹೇಳಿದ್ದಾರೆ.
ರಕ್ಕಮ್ಮ ಹಾಡಿಗೆ ಭರ್ಜರಿಯಾಗಿ ಕುಣಿದ ಬಿಎಂಟಿಸಿ ಮಹಿಳಾ ಸಿಬ್ಬಂದಿ; ವಿಡಿಯೋ ವೈರಲ್
ಅನೂಪ್ ಭಂಡಾರಿ ನಿರ್ದೇಶನದ 2ನೇ ಸಿನಿಮಾ ಆಸ್ಕರ್ ರೇಸ್‌ಗೆ ಎಂಟ್ರಿ ಕೊಡುತ್ತಿರುವುದು ಹೆಮ್ಮೆಯ ವಿಚಾರವಾಗಿದೆ. 2016ರಲ್ಲಿ ರಿಲೀಸ್ ಆಗಿದ್ದ ರಂಗಿತರಂಗ ಸಿನಿಮಾ ಕೂಡ ಆಸ್ಕರ್ ರೇಸ್‌ನಲ್ಲಿತ್ತು. ಇದೀಗ ಕಳೆದ ವರ್ಷ ರಿಲೀಸ್ ಆಗಿರುವ ವಿಕ್ರಾಂತ್ ರೋಣ ಕೂಡ ಅರ್ಹತೆ ಪಡೆದುಕೊಂಡಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದ ಮೂಲಕವೂ ಸಂತಸ ಹಂಚಿಕೊಂಡಿದ್ದಾರೆ. 'ರಂಗಿತರಂಗ ಬಳಿಕ ಆಸ್ಕರ್ ಲಿಸ್ಟ್‌ನಲ್ಲಿ ವಿಕ್ರಾಂತ್ ರೋಣ ಸಿನಿಮಾವಿದೆ. ಕಾಂತಾರ ಸಿನಿಮಾ ಕೂಡ ಆಸ್ಕರ್ ರೇಸ್ ನಲ್ಲಿರುವುದು ಖುಷಿಯ ವಿಚಾರವಾಗಿದೆ. ಕನ್ನಡದ ಎರಡು ಸಿನಿಮಾಗಳಿವೆ. ಸಿನಿಮಾತಂಡಕ್ಕೆ ಅಭಿನಂದನೆ' ಎಂದು ಹೇಳಿದ್ದಾರೆ.
ಒಟ್ಟು 301 ಚಿತ್ರಗಳ ಪೈಕಿ ವಿಕ್ರಾಂತ್ ರೋಣ ಚಿತ್ರಕ್ಕೂ ಅರ್ಹತೆ ಸಿಕ್ಕಿದೆ. ಜನವರಿ 24 ರಂದು ಆಸ್ಕರ್ ಅಂತಿಮ ನಾಮನಿರ್ದೇಶನದ ಪಟ್ಟಿ ಬಿಡುಗಡೆಯಾಗಲಿದೆ. ಆಸ್ಕರ್ ಅಂಗಳದಲ್ಲಿರುವ ಕಾಂತಾರ ಮತ್ತು ವಿಕ್ರಾಂತ್ ರೋಣ ಪ್ರಶಸ್ತಿ ಗೆದ್ದು ಬೀಗುತ್ತಾ ಎಂದು ಕಾದು ನೋಡಬೇಕಿದೆ. ಆಸ್ಕರ್ ಅಂಗಳದಲ್ಲಿ ಎರಡು ಸಿನಿಮಾಗಳಿರುವುದ ಕನ್ನಡ ಅಭಿಮಾನಿಗಳಿಗೆ ಸಂತಸ ತಂದಿದ್ದು ಆಸ್ಕರ್ ಗೆದ್ದು ಬರಲಿ ಎಂದು ಹಾರೈಸುತ್ತಿದ್ದಾರೆ.
ಮಾದಕ ಕಪ್ಪುಡುಗೆಯಲ್ಲಿ ವಿಕ್ರಾಂತ್ ರೋಣಾ ನಟಿಯ ಹಾಟ್ ಲುಕ್!
ವಿಕ್ರಾಂತ್ ರೋಣ ಸಿನಿಮಾದಲ್ಲಿ ಕಿಚ್ಚ ಸುದೀಪ್ ನಾಯಕನಾಗಿ ಕಾಣಿಸಿಕೊಂಡಿದ್ದರು. ನಾಯಕಿಯಾಗಿ ನಿತಾ ಅಶೋಕ್ ಮಿಂಚಿದ್ದಾರೆ. ನಿರೂಪ್ ಭಂಡಾರಿ, ಮಿಲನಾ ನಾಗರಾಜ್ ಸೇರಿದಂತೆ ಅನೇಕರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಸದ್ಯ ಆಸ್ಕರ‌್ ಗೆ ಎಂಟ್ರಿ ಕೊಟ್ಟಿರುವ ಈ ಎರಡು ಸಿನಿಮಾಗಳು ಗೆದ್ದು ಬರಲಿ ಎನ್ನುವುದು ಅಭಿಮಾನಿಗಳ ಆಶಯ.