ಆಸ್ಕರ್ ರೇಸ್‌ಗೆ 'ಕಾಂತಾರ' ಎಂಟ್ರಿ ಅಧಿಕೃತ; 2 ವಿಭಾಗದಲ್ಲಿ ಅರ್ಹತೆ ಪಡೆದ ರಿಷಬ್ ಶೆಟ್ಟಿ ಸಿನಿಮಾ
ಆಸ್ಕರ್ ಅಂಗಳಕ್ಕೆ ಕನ್ನಡದ ಕಾಂತಾರ ಸಿನಿಮಾ ಅಧಿಕೃತ ಎಂಟ್ರಿ ಕೊಟ್ಟಿದೆ. ಕೊನೆ ಕ್ಷಣದಲ್ಲಿ ಕಾಂತರ ತಂಡ ಆಸ್ಕರ್‌ಗೆ ಅರ್ಜಿ ಸಲ್ಲಿಸಿತ್ತು. ಇದೀಗ ಆಸ್ಕರ್ ರೇಸ್‌ನಲ್ಲಿ ಭಾಗಿಯಾಗಲು ಕಾಂತಾರ ಸಿನಿಮಾಗೆ ಅಧಿಕೃತ ಎಂಟ್ರಿ ಸಿಕ್ಕಿದ್ದು ಸಿನಿಮಾತಂಡ ಸಂತಸ ಹಂಚಿಕೊಂಡಿದೆ.
ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಸಿನಿಮಾ ಅನೇಕ ದಾಖಲೆಗಳನ್ನು ಬರೆದಿದೆ. ಇದೀಗ ಕಾಂತಾರ ಕಡೆಯಿಂದ ಮತ್ತೊಂದು ಭರ್ಜರಿ ಸುದ್ದಿ ಹೊರಬಿದ್ದಿದೆ. ಆಸ್ಕರ್ ಅಂಗಳಕ್ಕೆ ಕನ್ನಡದ ಕಾಂತಾರ ಸಿನಿಮಾ ಅಧಿಕೃತ ಎಂಟ್ರಿ ಕೊಟ್ಟಿದೆ. ಕೊನೆ ಕ್ಷಣದಲ್ಲಿ ಕಾಂತರ ತಂಡ ಆಸ್ಕರ್‌ಗೆ ಅರ್ಜಿ ಸಲ್ಲಿಸಿತ್ತು. ಇದೀಗ ಆಸ್ಕರ್ ರೇಸ್‌ನಲ್ಲಿ ಭಾಗಿಯಾಗಲು ಕಾಂತಾರ ಸಿನಿಮಾಗೆ ಅಧಿಕೃತ ಎಂಟ್ರಿ ಸಿಕ್ಕಿದೆ. ಈ ಬಗ್ಗೆ ಹೊಂಬಾಳೆ ತಂಡ ಮಾಹಿತಿ ಹಂಚಿಕೊಂಡಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಹೊಂಬಾಳೆ ಫಿಲ್ಮ್ಸ್, 'ಕಾಂತಾರ ಸಿನಿಮಾ 2 ವಿಭಾಗಳಲ್ಲಿ ಆಸ್ಕರ್ ಅರ್ಹತೆ ಸಿಕ್ಕಿದೆ ಎಂದು ಹಂಚಿಕೊಳ್ಳಲು ನಮಗೆ ತುಂಬಾ ಸಂತಸವಾಗುತ್ತಿದೆ. ನಮ್ಮನ್ನು ಬೆಂಬಲಿಸಿದ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು. ನಿಮ್ಮೆಲ್ಲರ ಬೆಂಬಲದೊಂದಿಗೆ ಈ ಪ್ರಯಾಣವನ್ನು ಹಂಚಿಕೊಳ್ಳಲು ನಾವು ಎದುರು ನೋಡುತ್ತಿದ್ದೇವೆ' ಎಂದು ಹೇಳಿದ್ದಾರೆ.
ಅತ್ಯುತ್ತಮ ಸಿನಿಮಾ ಹಾಗೂ ಅತ್ಯುತ್ತಮ ನಟ ವಿಭಾಗದಲ್ಲಿ ಕಾಂತಾರ ಆಸ್ಕರ್‌ಗೆ ಅರ್ಹತೆ ಪಡೆದಿದೆ ಎನ್ನುವ ಮಾಹಿತಿ ತಿಳಿದು ಬಂದಿದೆ. ಸದ್ಯ ಆಸ್ಕರ್‌ಗೆ ರೇಸ್‌ಗೆ ಸೇರಿರುವ ಕಾಂತಾರ ಸಿನಿಮಾ ಆಸ್ಕರ್ ಪ್ರಶಸ್ತಿ ಸುತ್ತಿಗೆ ಆಯ್ಕೆಯಾಗುತ್ತಾ ಎನ್ನುವ ಕುತೂಹಲ ಹೆಚ್ಚಾಗಿದೆ. ಒಟ್ಟು 301 ಚಿತ್ರಗಳ ಪೈಕಿ ಕಾಂತಾರ ಚಿತ್ರಕ್ಕೂ ಅರ್ಹತೆ ಸಿಕ್ಕಿದೆ. ಕಾಂತಾರ ತಂಡ ಕೊನೆ ಕ್ಷಣದಲ್ಲಿ ಆಸ್ಕರ್‌ಗೆ ಅರ್ಜಿ ಸಲ್ಲಿಸಿತ್ತು. ಜನವರಿ 24 ರಂದು ಆಸ್ಕರ್ ಅಂತಿಮ ನಾಮನಿರ್ದೇಶನದ ಪಟ್ಟಿ ಬಿಡುಗಡೆಯಾಗಲಿದೆ. ಆಸ್ಕರ್ ಅಂಗಳದಲ್ಲಿರುವ ಕಾಂತಾರ ಪ್ರಶಸ್ತಿ ಗೆದ್ದು ಬೀಗುತ್ತಾ ಎಂದು ಕಾದು ನೋಡಬೇಕಿದೆ. ಈ ವಿಚಾರ ಕೇಳಿ ಕನ್ನಡ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಕಾಂತಾರ ತಂಡಕ್ಕೆ ಎಲ್ಲರೂ ಶುಭಹಾರೈಸಿತ್ತಿದ್ದಾರೆ. ಆಸ್ಕರ್ ಗೆದ್ದು ಬರಲಿ ಎಂದು ಹಾರೈಸುತ್ತಿದ್ದಾರೆ.
ದೈವ, ದೆವ್ವ ನಮ್ಮ ನಂಬಿಕೆಯಷ್ಟೇ, ಅವಮಾನಿಸುವ ಅವಶ್ಯಕತೆ ಇಲ್ಲ; ಕಾಂತಾರ ವೈರಲ್ ವಿಡಿಯೋಗೆ ಕಿಶೋರ್ ರಿಯಾಕ್ಷನ್
ಕಾಂತಾರ ರಿಷಬ್ ಶೆಟ್ಟಿ ನಿರ್ದೇಶನ ಮಾಡಿ ನಾಯಕನಾಗಿ ಮಿಂಚಿರುವ ಸಿನಿಮಾ. ನಾಯಕಿಯಾಗಿ ಸಪ್ತಮಿ ಗೌಡ ಕಾಣಿಸಿಕೊಂಡಿದ್ದಾರೆ. ಇನ್ನೂ ಉಳಿದಂತೆ ಕಿಶೋರ್ ಕುಮಾರ್ ಪೊಲೀಸ್ ಆಧಿಕಾರಿ ಮಾಡಿದ್ದಾರೆ. ಅಚ್ಯುತ್ ಕುಮಾರ್ ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ. ಇನ್ನೂ ಅನೇಕ ರಂಗಭೂಮಿ ಕಲಾವಿದರು ಕಾಂತಾರ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಈಗಾಗಲೋ ಕೋಟಿ ಕೋಟಿ ಬಾಚಿಕೊಂಡು ಬಾಕ್ಸ್ ಆಫೀಸ್ ನಲ್ಲಿ ಗೆದ್ದು ಬೀಗಿರುವ ಕಾಂತಾರ ಆಸ್ಕರ್ ಪ್ರಶಸ್ತಿಗೆ ಮುತ್ತಿಡುತ್ತಾ ಕಾದು ನೋಡಬೇಕಿದೆ.