ಮುಖ್ಯಮಂತ್ರಿಯ ಮಗನ ಜೊತೆ 16ನೇ ವಯಸ್ಸಿಲ್ಲಿಯೇ ಲವ್ಗೆ ಬಿದ್ದು ಸಿನಿಮಾದಿಂದ ದೂರವಾದ ಸತ್ಯ ಇನ್ ಲವ್ ನಟಿಯ ರೋಚಕ ಸ್ಟೋರಿ ಇಲ್ಲಿದೆ ನೋಡಿ..
ಮುಖ್ಯಮಂತ್ರಿಯ ಮಗನನ್ನೇ ಲವ್ ಮಾಡಿ, ಅದೂ 16ನೇ ವಯಸ್ಸಿನಲ್ಲಿಯೇ ಪ್ರೇಮಿಸಿ, ಧರ್ಮ ಬದಲಿಸಿ ಮದುವೆಯಾದ ಖ್ಯಾತ ನಟಿಯ ರೋಚಕ ಸ್ಟೋರಿ ಇದು. ಒಂದು ಕಾಲದಲ್ಲಿ ಬಾಲಿವುಡ್ ಆಳಿದ್ದ ನಟಿ, ಜೆನೆಲಿಯಾ ದೇಶಮುಖ್ ಇನ್ನು ಕೆಲವೇ ದಿನಗಳಲ್ಲಿ ತಮ್ಮ 36ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ. ಬಾಲಿವುಡ್ ಮಾತ್ರವಲ್ಲದೇ, ತೆಲುಗು, ತಮಿಳು ಮತ್ತು ಹಿಂದಿ ಚಲನಚಿತ್ರಗಳಲ್ಲಿನ ನಟಿಸಿ ಹೆಸರುವಾಸಿಯಾದ ಅವರು ವೃತ್ತಿಜೀವನದ ಉತ್ತುಂಗವನ್ನು ತಲುಪುತ್ತಿದ್ದಾಗಲೇ ಮದುವೆಯಾಗಿ ಸದ್ಯ ಬಣ್ಣದ ಲೋಕದಿಂದ ದೂರವೇ ಉಳಿದಿದ್ದಾರೆ. 2003ರ ತುಜೆ ಮೇರಿ ಕಸಮ್ ಚಿತ್ರದ ಮೂಲಕ ಸಿನಿಮಾಕ್ಕೆ ಎಂಟ್ರಿಕೊಟ್ಟಿದ್ದ ನಟಿ ಅದೇ ಗಮನ ಸೆಳೆದದ್ದು ಅದೇ ವರ್ಷ ರಿಲೀಸ್ ಆದ ತಮಿಳು ಚಿತ್ರ ಬಾಯ್ಸ್ ಮೂಲಕ. ಅದಾದ ಬಳಿಕ ಬೊಮ್ಮರಿಲ್ಲು (2006) ಚಿತ್ರದಲ್ಲಿನ ಪಾತ್ರಕ್ಕಾಗಿ ತೆಲುಗು ಫಿಲ್ಮ್‌ಫೇರ್ ಅತ್ಯುತ್ತಮ ನಟಿ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಗೆದ್ದರು. ಜೆನೆಲಿಯಾ ಸಂತೋಷ್ ಸುಬ್ರಮಣ್ಯಂ, ಜಾನೆ ತು... ಯಾ ಜಾನೆ ನಾ, ಮತ್ತು ರೆಡಿ (2008) ನಂತಹ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡರು.
ಚಿತ್ರರಂಗಕ್ಕೆ ಬರುವ ಮೊದಲು, ಅವರು ಅಡ್ವಟೈಸ್ನಲ್ಲಿಯೂ ಕಾಣಿಸಿಕೊಂಡಿದ್ದರು. ಮಾಡೆಲಿಂಗ್ನಿಂದ ಸಕತ್ ಫೇಮಸ್ ಆದರು. ಜೆನೆಲಿಯಾ ಅವರ ವೃತ್ತಿಜೀವನ 15ನೇ ವಯಸ್ಸಿನಲ್ಲಿ ಪ್ರಾರಂಭವಾಯಿತು, ಮೊದಲ ಜಾಹೀರಾತುವಿನಲ್ಲಿ ಮದುವೆಯಲ್ಲಿ ವಧುವಿನ ಗೆಳತಿಯಾಗಿ ಕಾಣಿಸಿಕೊಂಡರು ಮತ್ತು ನಂತರ ಅಮಿತಾಭ್ ಬಚ್ಚನ್ ಅವರೊಂದಿಗೆ ಪಾರ್ಕರ್ ಪೆನ್ ಜಾಹೀರಾತಿಗೆ ಆಯ್ಕೆಯಾದರು. ಆದರೆ 16ನೇ ವಯಸ್ಸಿನಲ್ಲಿ ಇವರು ಲವ್ಗೆ ಬಿದ್ದ ಸ್ಟೋರಿ ಕೂಡ ತುಂಬಾ ಇಂಟರೆಸ್ಟಿಂಗ್ ಆಗಿದೆ. ಇವರು 2003 ರಲ್ಲಿ, ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದ ವಿಲಾಸ್ ರಾವ್ ದೇಶಮುಖ್ ಪುತ್ರ ರಿತೇಶ್ ದೇಶ್ಮುಖ್ ಜೊತೆಗೆ ತುಜೆ ಮೇರಿ ಕಸಮ್ ಚಿತ್ರದಲ್ಲಿ ನಟಿಸಿದರು, ಅವರ ಕೆಮೆಸ್ಟ್ರಿಯನ್ನು ಜನ ಸಕತ್ ಇಷ್ಟಪಟ್ಟರು. ಆಗ ನಟಿಗೆ ಇನ್ನೂ 16 ವರ್ಷ ವಯಸ್ಸು. ಅಲ್ಲಿಯೇ ಇಬ್ಬರ ನಡುವೆ ಲವ್ ಆಯಿತು. 9 ವರ್ಷಗಳ ಕಾಲ ಇಬ್ಬರು ಡೇಟಿಂಗ್ ಮಾಡಿದರು. ನಟಿ ಕ್ರೈಸ್ತ ಸಮುದಾಯದವರು ಹಾಗೂ ರಿತೇಶ್ ಹಿಂದೂ. ಆದ ಕಾರಣ ಎರಡೂ ಸಂಪ್ರದಾಯದಂತೆ ಮದುವೆ ನಡೆದಿದೆ. ಮದುವೆಯಾದ ಮೇಲೆ ನಟಿ ಈಗ ಹಿಂದೂ ಧರ್ಮಿಯಳಂತೆಯೇ ಸಂಸಾರ ನಡೆಸುತ್ತಿದ್ದಾರೆ.
ಮದುವೆಯ ಬಳಿಕ ಸಿನಿಮಾಗಳ ಆಯ್ಕೆಯಲ್ಲಿ ತುಂಬ ಚ್ಯೂಸಿ ಆದರು ನಟಿ. ಇವರ ಸಿನಿಮಾ ಬಗ್ಗೆ ಎಲ್ಲಾ ನಿರ್ಧಾರವೂ ಪತಿ ರಿತೇಶ್ ದೇಶಮುಖ್ ಅವರೇ ತೆಗೆದುಕೊಳ್ಳುತ್ತಿದ್ದಾರೆ ಎನ್ನುವ ಮಾತೂ ಕೇಳಿಬಂದಿತ್ತು. ಆದರೆ ಕೊನೆಗೆ ನಟಿ ಇದು ತಮ್ಮ ಸ್ವಂತ ನಿರ್ಧಾರ ಎನ್ನುತ್ತಲೇ ಕ್ರಮೇಣ ಚಿತ್ರರಂಗದಿಂದಲೇ ದೂರವಾದರು. ಈ ಸಮಯದಲ್ಲಿ ಸತ್ಯ ಇನ್ ಲವ್ ಕನ್ನಡ ಚಿತ್ರದಲ್ಲಿಯೂ ನಟಿಸಿದರು. ಆದರೆ ತಾವು ಬಣ್ಣದ ಲೋಕದಿಂದ ದೂರವಾಗ್ತಿರೋದಾಗಿ ಹೇಳಿದ ನಟಿ ಇದಕ್ಕೆ ತಮ್ಮ ಪತಿ ಕಾರಣ ಅಲ್ಲ ಎಂದೂ ಸ್ಪಷ್ಟನೆ ಕೊಟ್ಟರು. ‘ಜನರು ಏನು ಬೇಕಾದರೂ ಮಾತನಾಡುತ್ತಾರೆ. ಆದರೆ ನಿಜ ಏನು ಎಂದರೆ ಅದು ನನ್ನ ನಿರ್ಧಾರವಾಗಿತ್ತು. ಯಾಕೆ ಹೆಚ್ಚು ಸಿನಿಮಾ ಮಾಡಲ್ಲ ಅಂತ ಜನ ಕೇಳ್ತಾರೆ. ಆ ರೀತಿ ಮಾಡಬೇಕು ಅಂತ ನನಗೆ ಅನಿಸಿಲ್ಲ. ಮಕ್ಕಳ ಜೊತೆ ಇರುವುದನ್ನು ನಾನು ಹೆಚ್ಚು ಇಷ್ಟಪಡುತ್ತೇನೆ’ ಎಂದು ಇಂಟರ್ವ್ಯೂನಲ್ಲಿ ನಟಿ ಹೇಳಿದರು.
ಬಹು ವರ್ಷಗಳ ಬಳಿಕ ಮತ್ತೆ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟಿದ್ದಾರೆ ನಟಿ. ಸಿನಿಮಾದಲ್ಲಿ ಅಷ್ಟಾಗಿ ಕಾಣಿಸಿಕೊಳ್ಳದಿದ್ದರೂ, ಜೆನಿಲಿಯಾ ಸೋಷಿಯಲ್ ಮೀಡಿಯಾದಲ್ಲಿ ಸಕತ್ ಆ್ಯಕ್ಟೀವ್. ಆಗಾಗ್ಗೆ ಫೋಟೋ ಮತ್ತು ರೀಲ್ಸ್ ಶೇರ್ ಮಾಡುತ್ತಲೇ ಇರುತ್ತಾರೆ. ಬಹು ವರ್ಷಗಳ ಬಳಿಕ ಅವರು, ಕಿರೀಟಿ ರೆಡ್ಡಿ ನಟನೆಯ ಕನ್ನಡ-ತೆಲುಗು ಸಿನಿಮಾ ‘ಜೂನಿಯರ್’ನಲ್ಲಿ ಜೆನಿಲಿಯಾ ಅಭಿನಯಿಸಿದ್ದಾರೆ.
