ಅದಕ್ಕಿಂತ ಕೆಟ್ಟ ಪರಿಸ್ಥಿತಿ ನಾವು ಅನುಭವಿಸಿಲ್ಲ; ಮಗನ ಡ್ರಗ್ಸ ಪ್ರಕರಣದ ಬಗ್ಗೆ ಮೌನ ಮುರಿದ ಶಾರುಖ್ ಪತ್ನಿ
ಕರಣ್ ಜೋಹರ್ ಶೋನಲ್ಲಿ ಗೌರಿ ಖಾನ್ ಡ್ರಗ್ಸ್ ಪ್ರಕರಣದ ಬಗ್ಗೆ ಮೌನ ಮುರಿದಿದ್ದಾರೆ. ಮೊದಲ ಬಾರಿಗೆ ಗೌರಿ ಖಾನ್ ಈ ಬಗ್ಗೆ ಮಾತನಾಡಿದ್ದಾರೆ. ಅದು ತುಂಬಾ ಕೆಟ್ಟ ಪರಿಸ್ಥಿತಿಯಾಗಿತ್ತು ಎಂದು ಹೇಳಿದ್ದಾರೆ.
ಬಾಲಿವುಡ್ ಖ್ಯಾತ ನಿರ್ದೇಶಕ, ನಿರ್ಮಾಪಕ ಕರಣ್ ಜೋಹರ್ ನಡೆಸಿಕೊಡುವ ಕಾಫಿ ವಿತ್ ಕರಣ್ ರಿಯಾಲಿಟಿ ಶೋನ 7ನೇ ಸೀಸನ್ ಮುಂದುವರೆದಿದೆ. ಇದೇ ಮೊದಲ ಬಾರಿಗೆ ಕಾಫಿ ವಿತ್ ಕರಣ್ ಒಟಿಟಿಯಲ್ಲಿ ಪ್ರಸಾರವಾಗುತ್ತಿದೆ. ಅಂದಹಾಗೆ ಈಗಾಗಲೇ ಸಾಕಷ್ಟು ಸೆಲೆಬ್ರಿಟಿಗಳು ಭಾಗಿಯಾಗಿದ್ದರು. ಸಾರಾ ಅಲಿ ಖಾನ್ ಮತ್ತು ಜಾನ್ವಿ ಕಪೂರ್, ರಣವೀರ್ ಸಿಂಗ್ ಮತ್ತು ಅಲಿಯಾ ಹಾಗೂ ಸಮಂತಾ ಮತ್ತು ಅಕ್ಷಯ್ ಕುಮಾರ್, ವಿಜಯ್ ದೋವರಕೊಂಡ ಮತ್ತು ಅನನ್ಯಾ ಪಾಂಡೆ, ಕರೀನಾ ಕಪೂರ್ ಮತ್ತು ಆಮೀರ್ ಖಾನ್, ವಿಕ್ಕಿ ಕೌಶಲ್ ಮತ್ತು ಸಿದ್ಧಾರ್ಥ್ ಮಲ್ಹೋತ್ರ ಸೇರಿದಂತೆ, ಅನಿಲ್ ಕಪೂರ್ ಸೇರಿದಂತೆ ಅನೇಕ ಸ್ಟಾರ್ಸ್ ಭಾಗಿಯಾಗಿದ್ದರು. ಎಂದಿನಂತೆ ಈ ಬಾರಿಯೂ ಸೆಲೆಬ್ರಿಟಿಗಳು ಸಾಕಷ್ಟು ವಿಚಾರಗಳನ್ನು ಬಹಿರಂಗ ಪಡಿಸಿದರು. ಕರಣ್ ಜೋಹರ್ ಶೋ ಹೆಚ್ಚಾಗಿ ಗಾಸಿಪ್, ವಿವಾದಗಳ ಬಗ್ಗೆ ಸದ್ದು ಮಾಡುತ್ತದೆ. ಈ ಬಾರಿ ಕೂಡ ಲವ್, ಬ್ರೇಕಪ್, ಡೇಟಿಂಗ್ ಹಾಗೂ ಸೆಕ್ಸ್ ವಿಚಾರಗಳ ಬಗ್ಗೆ ಕರಣ್ ಸ್ಟಾರ್ಸ್ ಜೊತೆ ಮಾತನಾಡಿದ್ದಾರೆ.
ಈ ಬಾರಿಯ ಸೆಂಚಿಕೆಯಲ್ಲಿ ಶಾರುಖ್ ಖಾನ್ ಪತ್ನಿ ಗೌರಿ ಖಾನ್, ಸಂಜಯ್ ಕಪೂರ್ ಪತ್ನಿ ಮಹೀಪ್ ಕಪೂರ್ ಹಾಗೂ ಚಂಕಿ ಪಾಂಡೆ ಪತ್ನಿ ಭಾವನಾ ಪಾಂಡೆ ಈ ಮೂವರು ಭಾಗಿಯಾಗಿದ್ದರು. ಮೂವರು ಸಾಕಷ್ಟು ವಿಚಾರಗಳನ್ನು ರಿವೀಲ್ ಮಾಡಿದ್ದಾರೆ. ತಮ್ಮ ಕುಟುಂಬದ ಸೀಕ್ರೆಟ್ ಬಿಚ್ಚಿಟ್ಟಿದ್ದಾರೆ. ಈ ವೇಳೆ ಗೌರಿ ಖಾನ್ ಮಗಳು ಹಾಗೂ ಮಗನ ಬಗ್ಗೆ ಮಾತನಾಡಿದ್ದಾರೆ. ಕರಣ್ ಜೋಹರ್ ಶೋನಲ್ಲಿ ಗೌರಿ ಖಾನ್ ಡ್ರಗ್ಸ್ ಪ್ರಕರಣದ ಬಗ್ಗೆ ಮೌನ ಮುರಿದಿದ್ದಾರೆ. ಮೊದಲ ಬಾರಿಗೆ ಗೌರಿ ಖಾನ್ ಈ ಬಗ್ಗೆ ಮಾತನಾಡಿದ್ದಾರೆ. ಕರಣ್ ಜೋಹರ್ ಕೇಳಿದ ಪ್ರಶ್ನೆಗೆ ಶಾರುಖ್ ಖಾನ್ ಪತ್ನಿ ಉತ್ತರ ನೀಡಿದ್ದಾರೆ.
ವೃತ್ತಿಪರವಾಗಿ ಮಾತ್ರವಲ್ಲದೆ ಇತ್ತೀಚೆಗೆ ನಿಮ್ಮ ಕುಟುಂಬಕ್ಕೆ ವೈಯಕ್ತಿಕವಾಗಿ ತುಂಬಾ ಕಠಿಣ ಸಮಯವಾಗಿತ್ತು. ಆದರೆ ನೀವು ನೀವು ತುಂಬಾ ಸ್ಟ್ರಾಂಗ್ ಆಗಿ ಹೊರಹೊಮ್ಮಿದ್ದೀರಿ. ಒಂದು ಕುಟುಂಬವಾಗಿ. ಇದು ಸುಲಭವಲ್ಲ ಎಂದು ನನಗೆ ತಿಳಿದಿದೆ. ನಾನು ನಿನ್ನನ್ನು ತಾಯಿಯಾಗಿ ಮತ್ತು ಅವನು ತಂದೆಯಾಗಿ ತಿಳಿದಿದ್ದೇನೆ ಮತ್ತು ನಾವೆಲ್ಲರೂ ಒಂದೇ ಕುಟುಂಬದ ಸದಸ್ಯರಂತೆ. ಕುಟುಂಬಗಳು ಅಂತಹ ಪರಿಸ್ಥಿತಿಯನ್ನು ಎದುರಿಸುತ್ತಿರುವಾಗ, ಆ ಕಠಿಣ ಸಮಯವನ್ನು ನಿಭಾಯಿಸಿದ ಬಗ್ಗೆ ಹೇಳಿ ಎಂದು ಪ್ರಶ್ನಿಸಿದರು.
ಒಟ್ಟಿಗೆ ಇಬ್ಬರು ಹುಡುಗರ ಜೊತೆ ಡೇಟಿಂಗ್ ಮಾಡ್ಬೇಡ; ಪುತ್ರಿ ಸುಹಾನಾಗೆ ಶಾರುಖ್ ಪತ್ನಿ ಸಲಹೆ
ಇದಕ್ಕೆ ಉತ್ತರಿಸಿದ ಗೌರಿ ಖಾನ್, ತಾಯಿಯಾಗಿ, ಪೋಷಕರಾಗಿ ನಾವು ಆಗ ಅನುಭವಿಸಿದ್ದಕ್ಕಿಂತ ಕೆಟ್ಟದ್ದು ಮತ್ತೊಂದಿಲ್ಲ ನಾನು ಭಾವಿಸುತ್ತೇನೆ. ಆದರೆ ಇಂದು ನಾವು ಕುಟುಂಬವಾಗಿ ನಿಂತಿರುವಾಗ, ನಾವು ಎಲ್ಲರ ಪ್ರೀತಿಯನ್ನು ಅನುಭವಿಸುವ ದೊಡ್ಡ ಜಾಗದಲ್ಲಿದ್ದೇವೆ ಎಂದು ನಾನು ಹೇಳಬಲ್ಲೆ. ನಮ್ಮ ಎಲ್ಲಾ ಸ್ನೇಹಿತರು ಮತ್ತು ನಮಗೆ ಗೊತ್ತಿಲ್ಲದ ಅನೇಕ ಜನರು ಹಲವಾರು ಸಂದೇಶಗಳ ಮೂಲಕ ತುಂಬಾ ಪ್ರೀತಿ ನೀಡಿದ್ದಾರೆ. ಈ ಮೂಲಕ ನಮಗೆ ಸಹಾಯ ಮಾಡಿದ ಎಲ್ಲ ಜನರಿಗೆ ನಾನು ಕೃತಜ್ಞನಾಗಿದ್ದೇನೆ' ಎಂದು ಹೇಳಿದರು.
ಕರಣ್ ಜೋಹರ್ ನಾನು ಸಿಂಗಲ್ ಅಂತಾರೆ, ಆದ್ರೆ ಮಕ್ಕಳಿಗೆ ಅಮ್ಮ ಇದ್ದಾರೆ; ಏನೋ ಇದೆ ನಿಗೂಢ
ಮಗಳಿಗೆ ಗೌರಿ ಖಾನ್ ಡೇಟಿಂಗ್ ಸಲಹೆ
ಆರ್ಯನ್ ಖಾನ್, ಶಾರುಖ್ ಖಾನ್ ಮತ್ತು ಗೌರಿ ಖಾನ್ ಅವರ ಮೊದಲ ಪುತ್ರ. ಸುಹಾನಾ ಖಾನ್ ಮತ್ತು ಅಬ್ ರಾಮ್ ಎನ್ನುವ ಮೂವರು ಮಕ್ಕಳಿದ್ದಾರೆ. ಇದೇ ಶೋನಲ್ಲಿ ಗೌರಿ ಖಾನ್ ಮಗಳ ಡೇಟಿಂಗ್‌ಗೆ ಸಲಹೆಯನ್ನು ನೀಡಿದ್ದಾರೆ.
ಕರಣ್ ಜೋಹರ್, ಗೌರಿ ಖಾನ್‌ಗೆ ಪ್ರಶ್ನೆ ಮಾಡಿ ಮಗಳು ಸುಹಾನಾ ಖಾನ್‌ಗೆ ಡೇಟಿಂಗ್ ಸಲಹೆ ಏನು ಕೊಡುತ್ತೀರಾ ಎಂದು ಕೇಳಿದರು. ಇದಕ್ಕೆ ಉತ್ತರಿಸಿದ ಗೌರಿ ಖಾನ್, 'ಒಟ್ಟಿಗೆ ಇಬ್ಬರು ಹುಡುಗರ ಜೊತೆ ಡೇಟ್ ಮಾಡಬೇಡ' ಎಂದು ಹೇಳಿದ್ದರು. ಗೌರಿ ಖಾನ್ ಮಾತು ನೋಡುಗರಿಗೆ ಅಚ್ಚರಿ ಮೂಡಿಸಿದೆ.