ದರ್ಶನ್ ನನ್ನ ಪಾಲಿಗೆ ದೇವರು: ಭಾರೀ ವೈರಲ್ ಆಯ್ತು ನಟ 'ಸೂರ್ಯ' ಮಾತು!
ಇಷ್ಟೊಂದು ಚಿತ್ರಗಳಲ್ಲಿ ಕೆಲಸ ಮಾಡಿದ್ದರೂ ನನ್ನ ಗುರುತು ತುಂಬಾ ಜನರಿಗೆ ಇಲ್ಲ. ಈ 'ಗರಡಿ' ಚಿತ್ರದ ಮೂಲಕವಾದರೂ ನನಗೆ ಸ್ಯಾಂಡಲ್‌ವುಡ್ ಪ್ರೇಕ್ಷಕರ ಬೆಂಬಲ ಸಿಗಲಿ. ನನ್ನ ಪರಿಶ್ರಮ ಸಫಲವಾಗಲಿ. ಯೋಗರಾಜ್ ಭಟ್ಟರ ಚಿತ್ರದಲ್ಲಿ ನಟಿಸಬೇಕೆಂದು ಕಳೆದ 10 ವರ್ಷಗಳ ಹಿಂದೆಯೇ ಅವಕಾಶ ಕೇಳಿಕೊಂಡು ಹೋಗಿದ್ದೆ. ಆದರೆ, ಭಟ್ಟರು ಆಗ ಬ್ಯುಸಿ ಇದ್ದ ಕಾರಣಕ್ಕೆ ಈಗ ಅದು 'ಗರಡಿ' ಮೂಲಕ ಈಡೇರಿದೆ.

ನವೆಂಬರ್ 10ಕ್ಕೆ (10 ನವೆಂಬರ್ 2023) ಸೂರ್ಯ (Surya) ನಾಯಕರಾಗಿ ನಟಿಸಿರುವ 'ಗರಡಿ' ಚಿತ್ರವು ಕರ್ನಾಟಕದಾದ್ಯಂತ ಬಿಡುಗಡೆ ಆಗುತ್ತಿದೆ. ಯೋಗರಾಜ್ ಭಟ್ ನಿರ್ದೇಶನದ 'ಗರಡಿ' ಚಿತ್ರದಲ್ಲಿ ಕನ್ನಡದ ಚಾಲೆಂಜಿಂಗ್ ಸ್ಟಾರ್ ದರ್ಶನ್ 'ಅತಿಥಿ' ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಚಿತ್ರದ ಕ್ರೇಜ್ ಇನ್ನೂ ಹೆಚ್ಚಾಗುವಂತೆ ಮಾಡಿದ್ದಾರೆ. ಈಗಾಗಲೇ ಚಿತ್ರದ ಪ್ರಮೋಶನ್ ಕೆಲಸಗಳು ಜೋರಾಗಿ ನಡೆಯುತ್ತಿದ್ದು, ನವೆಂಬರ್ 10ರಂದು ಕರ್ನಾಟಕದಲ್ಲಿ ಗರಡಿ ಹಬ್ಬ ಜೋರಾಗಿಯೇ ನಡೆಯುವ ಲಕ್ಷಣಗಳಿವೆ.
ಇದೇ ವೇಳೆ 'ಗರಡಿ' ಚಿತ್ರದ ಪ್ರೆಸ್ ಮೀಟ್‌ನಲ್ಲಿ ನಟ ಸೂರ್ಯ (ಯಶಸ್ ಸೂರ್ಯ) ಭಾವನಾತ್ಮಕವಾಗಿ ಮಾತನಾಡಿದ್ದು ಎಲ್ಲೆಡೆ ವೈರಲ್ ಆಗುತ್ತಿದೆ. "ನಾನು ಕನ್ನಡ ಚಿತ್ರರಂಗಕ್ಕೆ ಬಂದು ಬರೋಬ್ಬರಿ 15 ವರ್ಷಗಳಾಯ್ತು. ಇಲ್ಲಿಯವರೆಗೆ ಒಂದು ಹಿಟ್ ಚಿತ್ರವನ್ನು ನೀಡಿಲ್ಲ. ನಾಯಕನಾಗಿಯೇ 10 ಚಿತ್ರಗಳನ್ನು ಮಾಡಿದ್ದೇನೆ. ಒಟ್ಟೂ 23 ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದೇನೆ. ಆದರೆ, ಇಲ್ಲಿಯವರೆಗೂ ನನ್ನನ್ನು ಹೆಸರು ಹಿಡಿದು ಗುರುತಿಸುವ ಮಟ್ಟಿಗೆ ನಾನು ಬೆಳೆದಿಲ್ಲ. ನನಗೆ ಈ ಬಗ್ಗೆ ಭಾರೀ ಬೇಸರವಿದೆ.
ಇಷ್ಟೊಂದು ಚಿತ್ರಗಳಲ್ಲಿ ಕೆಲಸ ಮಾಡಿದ್ದರೂ ನನ್ನ ಗುರುತು ತುಂಬಾ ಜನರಿಗೆ ಇಲ್ಲ. ಈ ಚಿತ್ರದ ಮೂಲಕವಾದರೂ ನನಗೆ ಸ್ಯಾಂಡಲ್‌ವುಡ್ ಪ್ರೇಕ್ಷಕರ ಬೆಂಬಲ ಸಿಗಲಿ. ನನ್ನ ಪರಿಶ್ರಮ ಸಫಲವಾಗಲಿ. ಯೋಗರಾಜ್ ಭಟ್ಟರ ಚಿತ್ರದಲ್ಲಿ ನಟಿಸಬೇಕೆಂದು ಕಳೆದ 10 ವರ್ಷಗಳ ಹಿಂದೆಯೇ ಅವಕಾಶ ಕೇಳಿಕೊಂಡು ಹೋಗಿದ್ದೆ. ಆದರೆ, ಭಟ್ಟರು ಆಗ ಬ್ಯುಸಿ ಇದ್ದ ಕಾರಣಕ್ಕೆ ಈಗ ಅದು ಈಡೇರಿದೆ. ಹಾಗೇ, ಕನ್ನಡ ಪ್ರೇಕ್ಷಕರು ನನ್ನಪರಿಶ್ರಮ ಗುರುತಿಸಿ ಕಲಾವಿದನಾಗುವ ನನ್ನ ಕನಸನ್ನು ಗರಡಿ ಚಿತ್ರದ ಮೂಲಕ ನೆರವೇರಿಸಲಿದ್ದಾರೆ ಎಂದು ನಂಬಿದ್ದೇನೆ.
ದರ್ಶನ್ ಅವರನ್ನು ನಾನು 'ದೇವರು ಎಂದುಕೊಂಡಿದ್ದೇನೆ; ಈ ಗರಡಿ ಚಿತ್ರವು ನನ್ನದಾಗಲು ದರ್ಶನ್ ಸರ್ ಕಾರಣ
"ನನ್ನನ್ನು ಗರಡಿ ಚಿತ್ರದ ಹೀರೋ ಮಾಡಿಕೊಳ್ಳಲು ಬಿಸಿ ಪಾಟೀಲ್ ಸರ್‌ಗೆ ಹೇಳಿದ್ದೇ ದರ್ಶನ್ ಸರ್. ಅವರು ಹೇಳದಿದ್ದರೆ ನನಗೆ ಗರಡಿ ಚಿತ್ರದಲ್ಲಿ ನಾಯಕನಾಗಿ ನಟಿಸಲು ಚಾನ್ಸ್ ಸಿಗುತ್ತಿರಲಿಲ್ಲ. ಈ ಕಾರಣಕ್ಕೆ ನಾನು ಯಾವತ್ತಿಗೂ ದರ್ಶನ್ ಸರ್ ಅವರಿಗೆ ಆಭಾರಿ ಆಗಿರುತ್ತೇನೆ. ಜತೆಗೆ, ನನಗೆ ದರ್ಶನ್ ಸರ್ ಯಾವತ್ತಿಗೂ ಬೆಂಬಲವಾಗಿ ನಿಂತಿದ್ದಾರೆ. ದರ್ಶನ್ ಸರ್ ಎಲ್ಲರನ್ನೂ ಪ್ರೀತಿಸುತ್ತಾರೆ, ಗೌರವ ಕೊಡುತ್ತಾರೆ. ನನ್ನನ್ನೂ ಹಾಗೇ ಪ್ರೀತಿಸುತ್ತಾರೆ, ಸೂಚ್ಯವಾಗಿ ಬುದ್ಧಿ ಹೇಳುತ್ತಾರೆ. ಅವರು ಯಾವತ್ತೂ ಏನನ್ನೂ ಉಪದೇಶ ಮಾಡಿಲ್ಲ. ಆದರೆ ಸೂಕ್ಷ್ಮವಾಗಿ ಅವರ ಮಾತು ಕೃತಿಗಳ ಮೂಲಕ ನಾನು ಹೇಗಿರಬೇಕೆಂದು ತಿಳಸುವ ಮೂಲಕ ನನಗೆ ಸಹಾಯ ಮಾಡುತ್ತಿದ್ದಾರೆ.
ಯುವ ರಾಜ್‌ಕುಮಾರ್ ಚಿತ್ರಕ್ಕೆ ಪ್ರಭಾಸ್ ಸಲಾರ್ ಪೈಪೋಟಿ; ಯಾರಿಗೆ ಒಲಿಯುವಳು ವಿಜಯಲಕ್ಷ್ಮೀ?
ಹಾಗೇ, ಯೋಗರಾಜ್ ಭಟ್ ಸರ್‌ಗೂ ಈ ಸಂದರ್ಭದಲ್ಲಿ ನಾನು ಕೃತಜ್ಞತೆ ಹೇಳಲು ಬಯಸುತ್ತೇನೆ. ಈ ಚಿತ್ರದಲ್ಲಿ ನಾನು ಅವರಿಂದ ತುಂಬಾ ಆಕ್ಟಿಂಗ್ ಟ್ಯಾಲೆಂಟ್ ಕಲಿತಿದ್ದೇನೆ. ಸಹ-ನಿರ್ದೇಶಕ ಯೋಗಿ ಸರ್, ಡಾನ್ಸ್ ಮಾಸ್ಟರ್ ಧನು ಸರ್ ಸೇರಿದಂತೆ ಇಡೀ ಟೀಮ್‌ಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ" ಎಂದು ಯಶಸ್ ಭಾವನಾತ್ಮಕವಾಗಿ ಮಾತನಾಡಿದ್ದು, ಈ ಸಂಗತಿಯೀಗ ಬಹಳಷ್ಟು ವೈರಲ್ ಆಗುತ್ತಿದೆ.
ಹಾಟ್ ವೀಡಿಯೋ ಹರಿಬಿಟ್ಟ ಮಾನ್ವಿತಾ ಕಾಮತ್: ಟೀನೇಜ್ ಹುಡುಗರ ನಿದ್ದೆ ಗೋವಿಂದಾ!
ಒಟ್ಟಿನಲ್ಲಿ ಹೇಳಬೇಕೆಂದರೆ, ನಟ ಯಶಸ್ ಸೂರ್ಯ (Yashas Surya) ಗರಡಿ ಚಿತ್ರದ ಮೂಲಕ ಕರ್ನಾಟಕದ ಚಿತ್ರಪ್ರೇಮಿಗಳ ಮನಸ್ಸು ಗೆಲ್ಲುವ ವಿಶ್ವಾಸ ಹೊಂದಿದ್ದಾರೆ. ದರ್ಶನ್ ಆಶೀರ್ವಾದ ಕೂಡ ಸೂರ್ಯ ಮೇಲೆ ಇದೆ ಎಂಬುದೀಗ ಜಗಜ್ಜಾಹೀರಾಗಿದೆ. ನಿರ್ದೇಶಕರಾದ ಯೋಗರಾಜ್ ಭಟ್ಟರು ಹಾಗೂ ಬಿಸಿ ಪಾಟೀಲ್ ಸಹ ಚಿತ್ರದ ಯಶಸ್ಸಿನ ಬಗ್ಗೆ 'ಗ್ಯಾರಂಟಿ' ಎಂಬ ವಿಶ್ವಾಸ ಹೊಂದಿದ್ದಾರೆ. ಫಲಿತಾಂಶಕ್ಕಾಗಿ ಕೆಲವೇ ದಿನ ಕಾಯಬೇಕು ಅಷ್ಟೇ!