Asianet Suvarna News Asianet Suvarna News

ಹಾಟ್ ವೀಡಿಯೋ ಹರಿಬಿಟ್ಟ ಮಾನ್ವಿತಾ ಕಾಮತ್: ಟೀನೇಜ್ ಹುಡುಗರ ನಿದ್ದೆ ಗೋವಿಂದಾ!

ದುನಿಯಾ ಸೂರಿ ನಿರ್ದೇಶನದ 'ಕೆಂಡ ಸಂಪಿಗೆ' ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟಿ ಮಾನ್ವಿತಾ ಬಳಿಕ ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡರು. ಟಗರು, ಶಿವ 143, ಕನಕ, ರಿಲ್ಯಾಕ್ಸ್ ಸತ್ಯ ಹಾಗೂ ಚೌಕ ಚಿತ್ರಗಳಲ್ಲಿ ನಟಿಸಿದ್ದು, ಮಾನ್ವಿತಾ ಹಲವು ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ.

Manvita Kamath Hot video shines at Social Media
Author
First Published Sep 28, 2023, 3:47 PM IST

ಕೆಂಡ ಸಂಪಿಗೆ ನಟಿ ಮಾನ್ವಿತಾ ಹರೀಶ್ ಕಾಮತ್ ಹೊಸ ಫೋಟೋ ಶೂಟ್ ಮತ್ತು ವೀಡಿಯೋ ಭಾರೀ ವೈರಲ್ ಆಗಿದೆ. ಇತ್ತೀಚೆಗೆ ಮಾನ್ವಿತಾ ಬ್ಲಾಕ್ ಡ್ರೆಸ್‌ನಲ್ಲಿ ಸಖತ್ ಮಿಂಚುತ್ತಿರುವ ವೀಡಿಯೋ ಸೋಷಿಯಲ್ ಮೀಡಿಯಾ ಮೂಲಕ ಸದ್ದು ಮಾಡುತ್ತಿದೆ. ಫುಲ್ ಸೆಕ್ಸಿ ಲುಕ್ ಹಾಗೂ ಜೋಶ್‌ನಲ್ಲಿ ಬೋಲ್ಡ್ ಮತ್ತು ಬ್ಯೂಟಿಫುಲ್ ಆಗಿ ಕಾಣಿಸುತ್ತಿದ್ದಾರೆ ಮಾನ್ವಿತಾ ಕಾಮತ್. ಪಡ್ಡೆ ಹುಡುಗರು ನಿದ್ದೆ ಮಾಡುವುದೇ ಕಷ್ಟ ಎಂಬಂತಾಗಿದ್ದು, ಹರೆಯದ ಹುಡುಗರ ಪೋಷಕರು ಮಾನ್ವಿತಾ ಬಗ್ಗೆ ಕೋಪಗೊಂಡಿದ್ದಾರೆ. 

ಏನಾದರಾಗಲಿ, ಹುಡುಗರ ನಿದ್ದೆ ಕೆಡಿಸಿಯೇ ಸಿದ್ಧ ಎಂಬ ಜಿದ್ದಿಗೆ ಬಿದ್ದವರಂತೆ ನಟಿ ಮಾನ್ವಿತಾ ಸ್ಟುಡಿಯೋ ಒಂದರಲ್ಲಿ ಹಾಟ್ ವಿಡಿಯೋ ಶೂಟ್ ಮಾಡಿದ್ದಾರೆ. ಬಳಿಕ ಅದನ್ನು ತಮ್ಮ ಸೋಷಿಯಲ್ ಮೀಡಿಯಾಗಳಲ್ಲಿ ಹರಿಯಬಿಟ್ಟಿದ್ದಾರೆ. ಅವರು ಮಾಡಿದ್ದು ಇಷ್ಟೇ... ಆದರೆ, ಮಾನ್ವಿತಾ ಹಾಟ್ ವೀಡಿಯೋ ಆ ಬಳಿಕ ಅದೆಲ್ಲೆಲ್ಲಿ ಸುತ್ತಿ ಸುಳಿದಾಡತೊಡಗಿದೆ ಎಂದರೆ, ಸ್ವತಃ ಮಾನ್ವಿತಾ ಶಾಕ್ ಆಗಿದ್ದಾರೆ. ಆಲ್ಮೋಸ್ಟ್‌ ಆಲ್ ಟೀನೇಜ್ ಹುಡುಗರ ಮೊಬೈಲ್‌ ಒಳಗೆ ತಮ್ಮ ವೀಡಿಯೋ  ಸ್ಥಾನ ಪಡೆದಿರುವುದು ಮಾನ್ವಿತಾ ನಿದ್ದೆಗೆಡಿಸಿದೆ ಎಂದರೆ ತಪ್ಪೇನೂ ಇಲ್ಲ! 

ಅದಿತಿ ಪ್ರಭುದೇವ 'ಅಲೆಕ್ಸಾ' ಚಿತ್ರದ ಬಿಡುಗಡೆ ನವೆಂಬರ್ 3ಕ್ಕೆ!

ದುನಿಯಾ ಸೂರಿ ನಿರ್ದೇಶನದ 'ಕೆಂಡ ಸಂಪಿಗೆ' ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟಿ ಮಾನ್ವಿತಾ ಬಳಿಕ ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡರು. ಟಗರು, ಶಿವ 143, ಕನಕ, ರಿಲ್ಯಾಕ್ಸ್ ಸತ್ಯ ಹಾಗೂ ಚೌಕ ಚಿತ್ರಗಳಲ್ಲಿ ನಟಿಸಿದ್ದು, ಮಾನ್ವಿತಾ ಹಲವು ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ. ರಾಜಸ್ಥಾನ ಡೈರೀಸ್ ಹಾಗೂ ಹ್ಯಾಪಿ ಮ್ಯಾರಿಡ್ ಚಿತ್ರಗಳು ಮಾನ್ವಿತಾರ ಮುಂಬರುವ ಚಿತ್ರಗಳಾಗಿವೆ. 

ಯುವ ರಾಜ್‌ಕುಮಾರ್ ಚಿತ್ರಕ್ಕೆ ಪ್ರಭಾಸ್ ಸಲಾರ್ ಪೈಪೋಟಿ; ಯಾರಿಗೆ ಒಲಿಯುವಳು ವಿಜಯಲಕ್ಷ್ಮೀ?

ಅಂದಹಾಗೆ, ನಟಿ ಮಾನ್ವಿತಾ ಹಲವಾರು ಬಾರಿ ತಮ್ಮ ಹಾಟ್ ಫೋಟೋಸ್ ಹಾಗೂ ವೀಡಿಯೋಗಳ ಮೂಲಕ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ್ದಾರೆ. ಇದೀಗ ಮತ್ತೆ ಹೊರಬಂದಿರುವ ವೀಡಿಯೋ ಭಾರೀ ವೈರಲ್ ಆಗುತ್ತಿವೆ. ಅದೇನೇ ಇರಲಿ, ನಟಿ ತಾವು ಸೊಂಪಾಗಿ ನಿದ್ದೆ ಮಡಲು ಹರೆಯದ ಹುಡುಗರ ನಿದ್ದೆ ಕದ್ದಿರುವುದು ಮಾತ್ರ ಅಪರಾಧ ಎಂಬುದು ಹಲವರ ಹೇಳಿಕೆ! ವೀಡಿಯೋ ನೋಡಿ, ಎಂಜಾಯ್ ಮಾಡಿ!

 

 

Follow Us:
Download App:
  • android
  • ios