ಸಂಸತ್ತಿನ ಹೊಸ ಕಟ್ಟಡಕ್ಕೂ ಕಾಲಿಟ್ಟ ಬ್ಲಾಕ್ಬಸ್ಟರ್ ಗದರ್-2: ಇತಿಹಾಸ ಸೃಷ್ಟಿ!
ಸನ್ನಿ ಡಿಯೋಲ್ ಅಭಿನಯದ ಗದರ್-2 ಚಿತ್ರವನ್ನು ಸಂಸತ್ತಿನ ಹೊಸ ಕಟ್ಟಡದಲ್ಲಿ ವಿಶೇಷ ಪ್ರದರ್ಶನ ಮಾಡಲಾಗುತ್ತಿದೆ. ಈ ಮೂಲಕ ಚಿತ್ರ ಹೊಸ ದಾಖಲೆ ಬರೆದಿದೆ.
ಸನ್ನಿ ಡಿಯೋಲ್ (Sunny Deol) ಮತ್ತು ಅಮೀಶಾ ಪಟೇಲ್ ಅಭಿನಯದ 'ಗದರ್: ಏಕ್ ಪ್ರೇಮ್ ಕಥಾ' (Gadar: Ek Prem Katha) ಸೀಕ್ವೆಲ್ ಇದೇ 11 ರಂದು ಬಿಡುಗಡೆಯಾಗಿದ್ದು, ಬಾಕ್ಸ್ ಆಫೀಸ್ ಚಿಂದಿ ಉಡಾಯಿಸಿದೆ. ಈ ಚಿತ್ರದ ಮೊದಲ ಭಾಗ 2001ರ ಜೂನ್ 15ರಂದು ಬಿಡುಗಡೆಯಾಗಿತ್ತು. ಆಗಲೂ ಇದೇ ರೀತಿಯ ನಾಗಾಲೋಟದಲ್ಲಿ ಓಡಿದ್ದ ಚಿತ್ರ ಈಗ ಪಾರ್ಟ್-1 ಬಿಡುಗಡೆಯಾದ ಬರೋಬ್ಬರಿ 21 ವರ್ಷಗಳ ನಂತರ ಪಾರ್ಟ್-2 ಬಿಡುಗಡೆಯಾದಾಗಲೂ ಭರ್ಜರಿ ಯಶಸ್ಸಿನತ್ತ ಸಾಗುತ್ತಿದೆ. ಈ ಚಿತ್ರ ಮತ್ತೊಮ್ಮೆ ಬಿಡುಗಡೆಯಾದರೆ ಇಷ್ಟೊಂದು ಹಂಗಾಮ ಸೃಷ್ಟಿಸಬಹುದು ಎಂದು ಖುದ್ದು ನಿರ್ದೇಶಕ ಅನಿಲ್ ಶರ್ಮಾ ಯೋಚಿಸಿರಲಿಲ್ಲ. ಜನಕ್ಕೆ ಈ ಸಿನಿಮಾ ಇಷ್ಟವಾಗಿದ್ದು ದೇಶದೆಲ್ಲೆಡೆ ಚರ್ಚೆ ಶುರುವಾಗಿದೆ. ಗಳಿಕೆಯಲ್ಲಿ ಚಿತ್ರ ದಾಖಲೆ ನಿರ್ಮಿಸಿದೆ. ಹೌದು. 19 ಕೋಟಿ ಬಜೆಟ್‌ನಲ್ಲಿ ತಯಾರಾದ ಈ ಚಿತ್ರ 2001ರಲ್ಲಿ ಬಿಡುಗಡೆಯಾದಾಗ ವಿಶ್ವದಾದ್ಯಂತ 133 ಕೋಟಿ ಗಳಿಸಿತ್ತು. ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಪಠಾಣ್ ದಾಖಲೆಯನ್ನೂ ಉಡೀಸ್ ಮಾಡಿ ಚಿತ್ರ ಮುನ್ನುಗ್ಗುತ್ತಿದೆ. ಜೊತೆಗೆ ಭರ್ಜರಿ ಯಶಸ್ಸು ಕಂಡಿದ್ದ ಬಾಹುಬಲಿಯ ದಾಖಲೆಯನ್ನೂ ಹಿಂದಿಕ್ಕಿದೆ.
ಗದರ್ 2 ಆಗಸ್ಟ್ 11 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಇಲ್ಲಿಯವರೆಗೆ ಗದರ್-2 (Gadar-2), 400 ಕೋಟಿಗೂ ಅಧಿಕ ಮೊತ್ತವನ್ನು ಕಲೆ ಹಾಕಿದೆ. ಆರಂಭದಲ್ಲಿಯೇ ಪಠಾಣ್ ಮತ್ತು ಬಾಹುಬಲಿ ದಾಖಲೆಯನ್ನು ಈ ಚಿತ್ರ ಮುರಿದಿತ್ತು. ಈ ಪರಿ ಓಪನಿಂಗ್ ಯಾರೂ ಊಹಿಸಿರಲಿಲ್ಲ ಎಂದೇ ವ್ಯಾಖ್ಯಾನಿಸಲಾಗುತ್ತಿದೆ. ಗಳಿಕೆಯ ದಾಖಲೆ ಮಾಡಿರುವ ಈ ಚಿತ್ರದ ಹೆಸರಿಗೆ ಮತ್ತೊಂದು ಯಶಸ್ಸು ಸೇರ್ಪಡೆಯಾಗಿದೆ. ದೇಶದ ಸಂಸತ್ತಿನ ಹೊಸ ಕಟ್ಟಡದಲ್ಲಿ ಚಿತ್ರದ ವಿಶೇಷ ಪ್ರದರ್ಶನವನ್ನು ಮಾಡಲಾಗುತ್ತಿದೆ. ಸಂಸತ್ ಭವನದಲ್ಲಿ 'ಗದರ್ 2' ವಿಶೇಷ ಪ್ರದರ್ಶನವು ಮೂರು ದಿನಗಳ ಕಾಲ ನಡೆಯಲಿದೆ, ಈ ಪ್ರದರ್ಶನವು ಆಗಸ್ಟ್ 25 ಶುಕ್ರವಾರದಿಂದ ಪ್ರಾರಂಭವಾಗಿದ್ದು ಮೂರು ದಿನ ನಡೆಯಲಿದೆ. ಸಂಸದರು ಮತ್ತು ಇತರ ಸಂಸತ್ ಸಿಬ್ಬಂದಿ ವಿಶೇಷ ಪ್ರದರ್ಶನದಲ್ಲಿ ಚಲನಚಿತ್ರವನ್ನು ವೀಕ್ಷಿಸಲಿದ್ದಾರೆ.
ಬಾಕ್ಸ್ ಆಫೀಸ್ ಧೂಳೆಬ್ಬಿಸ್ತಿದೆ 'ಗದರ್-2': ಶಾರುಖ್ ಖಾನ್ ಚಿತ್ರ ಪಠಾಣ್ ದಾಖಲೆ ಉಡೀಸ್
ಆಗಸ್ಟ್ 25 ರಂದು ಬೆಳಿಗ್ಗೆ 11 ಗಂಟೆಯಿಂದ ಚಿತ್ರ ಪ್ರದರ್ಶನ ಆರಂಭವಾಗಿದೆ ಎಂದು ಚಿತ್ರದ ನಾಯಕಿ ಅಮೀಶಾ ಪಟೇಲ್ (Ameesha Patel) ತಿಳಿಸಿದ್ದಾರೆ. ಹೊಸ ಸಂಸತ್ ಭವನದಲ್ಲಿ ಸಂಸದರಿಗೆ ಪ್ರತಿದಿನ ಐದು ಶೋಗಳು ಇರುತ್ತವೆ. ಇದೇ ಮೊದಲ ಬಾರಿಗೆ ಸಂಸದರಿಗಾಗಿ ಚಿತ್ರ ಪ್ರದರ್ಶನವಾಗುತ್ತಿರುವುದು ಖಂಡಿತಾ ಗದರ್ 2 ಚಿತ್ರತಂಡದ ದೊಡ್ಡ ಸಾಧನೆಯೇ ಸರಿ. ಉಪರಾಷ್ಟ್ರಪತಿ ಕೂಡ ಚಿತ್ರವನ್ನು ವೀಕ್ಷಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಕುರಿತು ಚಿತ್ರದ ನಿರ್ದೇಶಕ ಅನಿಲ್ ಶರ್ಮಾ ಮಾಹಿತಿ ನೀಡಿದ್ದಾರೆ. ಒಂದು ವೇಳೆ ಇದು ಸಂಭವಿಸಿದಲ್ಲಿ ಅದು ಖಂಡಿತವಾಗಿಯೂ ದೊಡ್ಡ ದಾಖಲೆಯೇ. ಪ್ರಧಾನಿ ಚಿತ್ರ ನೋಡುತ್ತಾರೋ ಇಲ್ಲವೋ ಗೊತ್ತಿಲ್ಲ. ಚಿತ್ರದ ನಾಯಕ ನಟ ಸನ್ನಿ ಡಿಯೋಲ್ ಕೂಡ ಆಡಳಿತಾರೂಢ ಬಿಜೆಪಿಯಿಂದ ಸಂಸತ್ ಸದಸ್ಯರಾಗಿದ್ದಾರೆ. ಆದ್ದರಿಂದ ಇದು ಇನ್ನಷ್ಟು ಕುತೂಹಲದ ವಿಷಯವಾಗಿದೆ ಎನ್ನಲಾಗುತ್ತಿದೆ.
ಅಂದಹಾಗೆ ಗದರ್-2, 1971 ರ ಇಂಡೋ-ಪಾಕಿಸ್ತಾನ (Indo-Pak) ಯುದ್ಧದ ಸಮಯದಲ್ಲಿ, ಪಾಕಿಸ್ತಾನದಲ್ಲಿ ಸಿಲುಕಿರುವ ತಮ್ಮ ಮಗನನ್ನು ತಾರಾ ಸಿಂಗ್ ವಾಪಸ್ ಕರೆತರಲು ಪಾಕಿಸ್ತಾನಕ್ಕೆ ಹಿಂದಿರುಗುವ ಕಥಾವಸ್ತುವನ್ನು ಈ ಚಿತ್ರ ಹೊಂದಿದೆ. ತಾರಾಸಿಂಗ್ ತನ್ನ ಮಗ ಚರಣಜೀತ್‌ನನ್ನು ಮನೆಗೆ ಕರೆತರಲು ಸಾಧ್ಯವಾಗತ್ತಾ ಎನ್ನುವುದು ಚಿತ್ರದ ಕುತೂಹಲ.
ಸಿನಿಮಾ ಸೇರಲು ಅಪ್ಪ-ಅಮ್ಮನನ್ನು ಕೋರ್ಟ್ ಕಟಕಟೆಗೆ ಎಳೆತಂದಿದ್ದ ನಟಿ ಅಮಿಷಾ ಪಟೇಲ್!