ಭಾರತದಲ್ಲಿ ಮೊದಲ ರೋಲ್ಸ್‌ ರಾಯ್ಸ್ ಕಾರು ತಂದಿದ್ದು ಶಾರುಖ್ ಖಾನ್, ಅಂಬಾನಿ ಅಲ್ಲ; ಮೌಜ್ ಸಿನಿಮಾ ನಾಯಕಿ!

ರೋಲ್ಸ್‌ ರಾಯ್ಸ್ ಕಾರು ಎಂದರೆ ಅದು ಕೇವಲ ಆಗರ್ಭ ಶ್ರೀಮಂತರು ಮಾತ್ರ ಬಳಸುವ, ಹೊಂದಿರುವ ಕಾರು ಎಂಬುದು ಜನಜನಿತ. ಭಾರತದಲ್ಲಂತೂ ಈ ರೋಲ್ಸ್‌ ರಾಯ್ಸ್ ಕಾರನ್ನು ಬಳಸುವವರು ಅತ್ಯಂತ ಶ್ರೀಮಂತರು ಎನ್ನುವ ಮುಖೇಶ್ ಅಂಬಾನಿ ಹಾಗೂ ಶಾರುಖ್ ಖಾನ್ ಅವರಂತಹ ಸೂಪರ್ ಸ್ಟಾರ್‌ಗಳು ಮಾತ್ರ. ಆದರೆ, ಭಾರತದಲ್ಲಿ ಮೊಟ್ಟಮೊದಲ ರೋಲ್ಸ್‌ ರಾಯ್ಸ್ ಕಾರಿನ ಓನರ್ ಬೇರೊಬ್ಬ ನಟಿ!

First Indian actress to own Rolls Royce car nadira before shah rukh khan srb

ರೋಲ್ಸ್‌ ರಾಯ್ಸ್ ಕಾರು ಎಂದರೆ ಅದು ಕೇವಲ ಆಗರ್ಭ ಶ್ರೀಮಂತರು ಮಾತ್ರ ಬಳಸುವ, ಹೊಂದಿರುವ ಕಾರು ಎಂಬುದು ಜನಜನಿತ. ಭಾರತದಲ್ಲಂತೂ ಈ ರೋಲ್ಸ್‌ ರಾಯ್ಸ್ ಕಾರನ್ನು ಬಳಸುವವರು ಅತ್ಯಂತ ಶ್ರೀಮಂತರು ಎನ್ನುವ ಮುಖೇಶ್ ಅಂಬಾನಿ ಹಾಗೂ ಶಾರುಖ್ ಖಾನ್ ಅವರಂತಹ ಸೂಪರ್ ಸ್ಟಾರ್‌ಗಳು ಮಾತ್ರ. ಆದರೆ, ಭಾರತದಲ್ಲಿ ಮೊಟ್ಟಮೊದಲ ರೋಲ್ಸ್‌ ರಾಯ್ಸ್ ಕಾರಿನ ಒಡತಿ ಶ್ರೀದೇವಿ ಅಥವಾ ಐಶ್ವರ್ಯ ರೈ ಅವರಂತಹ ಸೂಪರ್ ಸ್ಟಾರ್‌ ಅಲ್ಲ, ಬದಲಿಗೆ ಸಾಮಾನ್ಯ ನಟಿ ಎಂಬಂತಿದ್ದ ವಿದೇಶಿ ಮೂಲದ ಮಹಿಳೆ. 

ಸ್ವಾತಂತ್ರ್ಯ ಪೂರ್ವದಲ್ಲಿ, ಅಂದರೆ 1943ರಲ್ಲಿ 'ಮೌಜ್' ಸಿನಿಮಾದಲ್ಲಿ ಚೈಲ್ಡ್‌ ಆರ್ಟಿಸ್ಟ್ ಆಗಿ ಕಾಣಿಸಿಕೊಂಡ ನಟಿ ಅವರು. ಆಗ ಅವರ ವಯಸ್ಸು ಕೇವಲ 10 ರಿಂದ 11 ವರ್ಷ ಮಾತ್ರ. ಭಾಗ್‌ದಾದ್ ದಿಂದ ಬಂದಿದ್ದ ಜ್ಯೂಯಿಶ್ ಹೆಣ್ಣುಮಗಳು ಅವಳು. ನದಿರಾ ಹೆಸರಿನ ಚಿಕ್ಕ ಹುಡುಗಿ ಆಕೆ ತನ್ನ ಫ್ಯಾಮಿಲಿ ಜತೆ ಭಾಗ್‌ದಾದ್‌ನಿಂದ ಬಂದವಳು. ಮೆಹಬೂಬ್ ಖಾನ್ ಅವರ 'ಆನ್' ಚಿತ್ರ ಮೂಲಕ ಆಕೆ ಹೀರೋಯಿನ್' ಆಗಿ ಬಾಲಿವುಡ್ ಸಿನಿಮಾದಲ್ಲಿ ಎಂಟ್ರಿ ಕೊಟ್ಟವರು. ಆ ಚಿತ್ರದಲ್ಲಿ ನದಿರಾ ರಜಪೂತ ಫ್ಯಾಮಿಲಿ ಹೆಣ್ಣಾಗಿ ಕಾಣಿಸಿಕೊಂಡಿದ್ದಳು. 

ಬಳಿಕ ನದಿರಾ 'ಶ್ರೀ 420, ದಿಲ್ ಅಪ್ನಾ ಔರ್ ಪ್ರೀತ್ ಪರಾಯಿ' ಮುಂತಾದ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿ 1960ರಲ್ಲಿ ಸೂಪರ್ ಸ್ಟಾರ್ ಆಗಿದ್ದರು. 1950 ರಿಂದ 1960ರ ಮಧ್ಯದಲ್ಲಿ ಆಕೆ ಆ ಕಾಲದಲ್ಲಿ ಚಿತ್ರವೊಂದಕ್ಕೆ ಲಕ್ಷಾಂತರ ರೂಪಾಯಿ ಸಂಬಳ ಪಡೆಯುತ್ತಿದ್ದರು, ಲಕ್ಷುರಿ ಕಾರುಗಳನ್ನು ಹೊಂದಿದ್ದರು. ಅದರಲ್ಲಿ ಒಂದು ಈ ರೋಲ್ಸ್‌ ರಾಯ್ಸ್ ಕಾರು. ಆಗ ಭಾರತದಲ್ಲಿ ರೋಲ್ಸ್‌ ರಾಯ್ಸ್ ಕಾರು ಇದ್ದಿದ್ದು ನದಿರಾ ಬಳಿ ಮಾತ್ರ ಎಂದರೆ, ಅಂದು ಆಕೆ ಅದೆಷ್ಟು ಶ್ರೀಮಂತೆಯಾಗಿದ್ದಳು ಎಂಬುದನ್ನು ಯಾರಾದರೂ ಊಹಿಸಬಹುದು.

ಶಾರುಖ್ ಖಾನ್, ಸಲ್ಮಾನ್ ಖಾನ್ ಹಾಗೂ ಅಮೀರ್ ಖಾನ್; ಅನುಪಮ್ ಖೇರ್ ನಿರ್ದೇಶನದ ಚಿತ್ರದಲ್ಲಿ ನಟಿಸಲೇ ಇಲ್ಲ ಯಾಕೆ? 

1960ರ ಬಳಿಕ ನದಿರಾ ಸ್ಟಾರ್ ಡಮ್ ನಿಧಾನವಾಗಿ ಕುಸಿಯತೊಡಗಿತು. ಆಕೆ ನಾಯಕಿ ಸ್ಥಾನದಿಂದ ಸಹನಟಿ ಜಾಗಕ್ಕೆ ಇಳಿಯಬೇಕಾಯಿತು. ಆಮೇಲೆ ಆಕೆ ಸಪೋರ್ಟಿಂಗ್ ಕ್ಯಾರಾಕ್ಟರ್ ಆರ್ಟಿಸ್ಟ್ ಆಗಿ ಬದಲಾದರು. ಪಕೇಜಾ ಮತ್ತು ಜೂಲಿ ಚಿತ್ರಗಳಲ್ಲಿ ಆಕೆ ಸಹನಟಿಯಾಗಿ ನಟಿಸಿದರು. ಬಳಿಕ ಅವರು ತುಂಬಾ ಚೂಸಿಯಾಗಿದ್ದು, ಕೆಲವೇ ಕೆಲವು ಸಿನಿಮಾಗಳಲ್ಲಿ ಚಿಕ್ಕಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡರು. ಅವರು ಕೊನೆಯದಾಗಿ ನಟಿಸಿದ ಬಗ್ ಬಜೆಟ್ ಹಾಗೂ ಸ್ಟಾರ್ ನಟರ ಚಿತ್ರ ಎಂದರೆ ಅದು ಶಾರುಖ್ ಖಾನ್ ನಟನೆಯ ಜೋಷ್. 

ಫ್ಯಾಮಿಲಿ ಲೆಟರ್ ಪಡೆಯೋಕೂ ಸ್ಪರ್ಧಿಗಳಿಗೆ ಟಾಸ್ಕ್, ಭಾರೀ ಕಷ್ಟ ಕೊಡುತ್ತಿದ್ದಾರಾ ಬಿಗ್ ಬಾಸ್?

ನದಿರಾ ಕೊನೆಕೊನೆಗೆ ಸಿನಿಮಾದಲ್ಲಿ ನಟಿಸುವುದನ್ನೇ ಬಿಟ್ಟುಬಿಟ್ಟರು. ಮುಂಬೈನಲ್ಲಿ ಮನೆಮಾಡಿಕಂಡು ಒಂಟಿ ಜೀವನ ನಡೆಸುತ್ತಿದ್ದ ಆಕೆಯ ಸಂಪೂರ್ಣ ಕುಟುಂಬ ಅದಾಗಲೇ ಇಸ್ರೇಲ್‌ಗೆ ಸ್ಥಳಾಂತರವಾಗಿತ್ತು. ಮುಂಬೈ ಮನೆಯಲ್ಲಿ ಹಲವು ಅನಾರೋಗ್ಯ ಸಮಸ್ಯೆಗಳಲ್ಲಿ ಸಿಲುಕಿಕೊಂಡ ನದಿರಾ 2006ರಲ್ಲಿ ಮುಂಬೈನ ಆಸ್ಪತ್ರೆಯೊಂದರಲ್ಲಿ ಕಾರ್ಡಿಯಾಕ್‌ ಅರೆಸ್ಟ್‌ ನಿಂದ ತೀರಿಕೊಂಡರು. ಅಲ್ಲಿಗೆ, ಭಾರತದ ಮೊಟ್ಟಮೊದಲ ರೋಲ್ಸ್‌ ರಾಯ್ಸ್ ಕಾರಿನ ಒಡತಿ ಈ ಜಗತ್ತಿನಿಂದಲೆ ಮರೆಯಾದರು. 

Latest Videos
Follow Us:
Download App:
  • android
  • ios