ಶಾರುಖ್ ಖಾನ್, ಸಲ್ಮಾನ್ ಖಾನ್ ಹಾಗೂ ಅಮೀರ್ ಖಾನ್; ಅನುಪಮ್ ಖೇರ್ ನಿರ್ದೇಶನದ ಚಿತ್ರದಲ್ಲಿ ನಟಿಸಲೇ ಇಲ್ಲ ಯಾಕೆ?
ಅನುಪಮ್ ಖೇರ್ ಅವರು 2000 ಇಸವಿಯ ಪ್ರಾರಂಭದಲ್ಲಿ ನಿರ್ದೇಶನ ಮಾಡಲು ಸಿದ್ಧರಾದರು. ತಮ್ಮ ಚಿತ್ರಕ್ಕೆ 'ಓಂ ಜೈ ಜಗದೀಶ್' ಎಂದು ಹೆಸರಿಟ್ಟುಕೊಂಡಿದ್ದ ಅನುಪಮ್ ಖೇರ್ ಅವರು ಚಿತ್ರದ ನಾಯಕರನ್ನಾಗಿ ಸಲ್ಮಾನ್ ಖಾನ್, ಶಾರುಖ್ ಖಾನ್ ಹಾಗೂ ಅಮೀರ್ ಖಾನ್ ಅವರನ್ನು ಆಯ್ಕೆಮಾಡಿಕೊಂಡು ಕಾಲ್ ಶೀಟ್ ಕೇಳಿದ್ದರು.
ಬಾಲಿವುಡ್‌ನಲ್ಲಿ ಶಾರುಖ್ ಖಾನ್, ಸಲ್ಮಾನ್ ಖಾನ್ ಹಾಗೂ ಅಮೀರ್ ಖಾನ್ ಈ ಮೂವರೂ ಸುಪರ್ ಸ್ಟಾರ್‌ಗಳು. ಅವರೆಲ್ಲರ ಸಾಕಷ್ಟು ಸಿನಿಮಾಗಳು ಬಿಡುಗಡೆಯಾಗಿವೆ, ಅವುಗಳಲ್ಲಿ ಹಲವು ಸೂಪರ್ ಹಿಟ್ ಕೂಡ ದಾಖಲಿಸುತ್ತಿವೆ. ಆದರೆ, ಈ ಮೂವರೂ ಒಟ್ಟಿಗೇ ನಟಿಸಿರುವ ಸಿನಿಮಾ ಮಾತ್ರ ಇನ್ನೂ ಬಂದಿಲ್ಲ. ಆದರೆ, ಅಚ್ಚರಿ ಎಂಬಂತೆ , ಬಾಲಿವುಡ್ ಇನ್ನೊಬ್ಬರು ನಟ ಅನುಪಮ್ ಖೇರ್ ಅವರ ನಿರ್ದೇಶನದ ಚಿತ್ರವೊಂದಕ್ಕೆ ಈ ಮೂವರನ್ನು ಸೆಲೆಕ್ಟ್ ಮಾಡಿ ಕಾಲ್ ಶೀಟ್ ಕೇಳಲಾಗಿತ್ತು. ಆದರೆ ಅವರ ಕಾಲ್ ಶೀಟ್ ಸಿಗಲಿಲ್ಲ.
ಅನುಪಮ್ ಖೇರ್ ಅವರು 2000 ಇಸವಿಯ ಪ್ರಾರಂಭದಲ್ಲಿ ನಿರ್ದೇಶನ ಮಾಡಲು ಸಿದ್ಧರಾದರು. ತಮ್ಮ ಚಿತ್ರಕ್ಕೆ 'ಓಂ ಜೈ ಜಗದೀಶ್' ಎಂದು ಹೆಸರಿಟ್ಟುಕೊಂಡಿದ್ದ ಅನುಪಮ್ ಖೇರ್ ಅವರು ಚಿತ್ರದ ನಾಯಕರನ್ನಾಗಿ ಸಲ್ಮಾನ್ ಖಾನ್, ಶಾರುಖ್ ಖಾನ್ ಹಾಗೂ ಅಮೀರ್ ಖಾನ್ ಅವರನ್ನು ಆಯ್ಕೆಮಾಡಿಕೊಂಡು ಕಾಲ್ ಶೀಟ್ ಕೇಳಿದ್ದರು. ಆದರೆ, ಡೇಟ್ಸ್ ಹೊಂದಾಣಿಕೆ ಆಗದ ಕಾರಣ, ಅವರೆಲ್ಲರೂ ನಟಿಸಲು ಒಪ್ಪಲಿಲ್ಲ. ಈ ಚಿತ್ರವನ್ನು ನಿರ್ಮಾಣ ಮಾಡಲು ಅನುಪಮ್ ಖೇರ್ ಅವರು ಯಶ್ ರಾಜ್ ಫಿಲಂಸ್‌ಗೆ ಅಪ್ರೋಚ್ ಮಾಡಿದ್ದರು. ನಾಯಕಿಯರಾಗಿ ಪ್ರೀತಿ ಜಿಂಟಾ, ಕಾಜೋಲ್ ಹಾಗೂ ರಾಣಿ ಮುಖರ್ಜಿ ಅವರನ್ನು ಅಪ್ರೋಚ್ ಮಾಡಲಾಗಿತ್ತು.
ಸಲ್ಮಾನ್, ಅಮೀರ್ ಮತ್ತು ಶಾರುಖ್ ಈ ಮೂವರ ಕಾಲ್‌ಶೀಟ್ ಸಿಕ್ಕರೆ ಮಾತ್ರ ತಾವು ಈ ಸಿನಿಮಾ ನಿರ್ಮಾಣ ಮಾಡುವುದಾಗಿ ಯಶ್ ರಾಜ್ ಸಂಸ್ಥೆ ಹೇಳಿತ್ತು. ಆದರೆ, ಈ ತ್ರಿಮೂರ್ತಿಗಳ ಡೇಟ್ಸ್ ಸಿಗದ ಕಾರಣ ಅನುಪಮ್ ಖೇರ್ ತಮ್ಮ ನಿರ್ದೇಶನದಲ್ಲಿ ಆಗ ಆ ಸಿನಿಮಾ ಮಾಡಲು ಅಸಾಧ್ಯವಾಯಿತು. ಆ ಮೂವರು ನಾಯಕಿಯರ ಡೇಟ್ಸ್ ಕೂಡ ಆಗ ಸಿಗುವುದು ಸಾಧ್ಯವೇ ಇರಲಿಲ್ಲ. ಆದರೆ, ಸ್ವಲ್ಪ ಕಾಲದ ಬಳಿಕ ವಶು ಭಗ್ನಾನಿ ಅವರು ಯಾವುದೇ ಕಂಡೀಷನ್ ಹಾಕದೇ ಅನುಪಮ್ ಖೇರ್ ನಿರ್ದೇಶನದ ಈ ಸಿನಿಮಾ ನಿರ್ಮಾಣ ಮಾಡಲು ಮುಂದಾದರು.
ಹೀಗೆ ಅಂತ ಗೊತ್ತಿದ್ದ್ರೆ ನಾನುಬಿಗ್ ಬಾಸ್‌ಗೆ ಹೋಗ್ತಾನೆ ಇರ್ಲಿಲ್ಲ; ರಕ್ಷಕ್ ಬುಲೆಟ್ ಹೇಳಿದ್ದು ಯಾರಿಗೆ, ಯಾಕೆ?
ಯಾವಾಗ ವಶು ಭಗ್ನಾನಿ ಸಿನಿಮಾ ನಿರ್ಮಾಣಕ್ಕೆ ಮುಂದಾದರೋ ಆಗ ಅನುಪಮ್ ಖೇರ್ ಅವರು ಅನಿಲ್ ಕಪೂರ್, ಅಭಿಷೇಕ್ ಬಚ್ಚನ್ ಹಾಗೂ ಫರ್ದೀನ್ ಖಾನ್ ಅವರನ್ನು ನಾಯಕರನ್ನಾಗಿಸಿಕೊಂಡು ಸಿನಿಮಾ ನಿರ್ದೇಶನಕ್ಕೆ ಇಳಿದರು. ನಾಯಕಿಯರಾಗಿ ಮಹಿಮಾ ಚೌಧರಿ, ಊರ್ಮಿಳಾ ಮಾತೊಂಡ್ಕರ್ ಹಾಗೂ ತಾರಾ ಶರ್ಮಾ ಅವರುಗಳು ಆಯ್ಕೆಯಾದರು. ಬೇಕಾಗಿದ್ದ ಎಲ್ಲವೂ ಫೈನಲ್ ಆಗಿ ಸಿನಿಮಾ ಶುರುವಾಯ್ತು. ಅನುಪಮ್ ಖೇರ್ ಅವರು ನಿರ್ದೇಶಕ ಪಟ್ಟವನ್ನೂ ಪಡೆದರು. ಆದರೆ, ಸಿನಿಮಾ ಬಿಗ್ ಫ್ಲಾಪ್ ಆಯಿತು.
ಗುಂಡಣ್ಣನ ಕನಸು ನಿಜ ಆಗುವುದೇ, ನಿಜ ಆಗೋದಕ್ಕೆ ಶ್ರೇಷ್ಠ ಬಿಡುವಳೇ; ಭಾಗ್ಯಲಕ್ಷ್ಮೀಗೆ ಪಾನಿಪುರಿ ಯೋಗ ಇದ್ಯಾ?
ಬಿಡುಗಡೆಯಾಗಿ 'ಓಂ ಜೈ ಜಗದೀಶ್' ಗಳಿಸಿದದ್ದು ಕೇವಲ 12.30 ಕೋಟಿ ಮಾತ್ರ. ಇಂಡಿಯಾದಲ್ಲಿ ರೂ. 8.56 ಕೋಟಿ ಗಳಿಸಿದರೆ ವಿದೇಶಗಳ ಕಲೆಕ್ಷನ್ ಮೂಲಕ ರೂ. 3.74 ಕೋಟಿ ಗಳಿಸಲು ಮಾತ್ರ ಶಕ್ತವಾಯಿತು. ಅಲ್ಲಿಗೆ 'ಓಂ ಜೈ ಜಗದೀಶ್' ಸಿನಿಮಾ ದೊಡ್ಡ ಫ್ಲಾಪ್ ಎಂಬುದು ಸಾಬೀತಾಗಿದ್ದು ಅಷ್ಟೇ ಅಲ್ಲ, ಮತ್ತೆ ಅನುಪಮ್ ಖೇರ್ ಅವರು ನಿರ್ದೇಶನವನ್ನು ಮಾಡಲೇ ಇಲ್ಲ. ಇದರಿಂದ ಹಲವರಿಗೆ ನಿರಾಸೆಯಾಯಿತು. ಕಾರಣ, ಈ ಚಿತ್ರದ ಮೂಲಕ ಮೂವರು ಖಾನ್‌ಗಳನ್ನು ಒಟ್ಟಿಗೆ ತೆರೆಯ ಮೇಲೆ ನೋಡುವ ಚಾನ್ಸ್ ಮಿಸ್ ಆಯ್ತಲ್ಲ!