ಸೈಫ್ ಆಲಿ ಖಾನ್ ಮೇಲಿನ ದಾಳಿಯೇ ಅನುಮಾನ ಹುಟ್ಟಿಸಿದ್ದರೆ ಇದೀಗ ಪೊಲೀಸರ ತನಿಖೆ ಅನುಮಾನ ಹೆಚ್ಚಿಸಿದೆ. ಆರೋಪಿ ತಂದೆ ನೀಡಿದ ಸ್ಫೋಟಕ ಹೇಳಿಕೆ ಬೆನ್ನಲ್ಲೇ ಇದೀಗ ಆರೋಪಿಯ ಫಿಂಗರ್ ಫ್ರಿಂಟ್‌ಗೂ ಸೈಫ್ ಮನೆಯಿಂದ ಕಲೆ ಹಾಕಿರುವ ಫಿಂಗರ್ ಫ್ರಿಂಟ್‌ಗೂ ಮ್ಯಾಚ್ ಆಗುತ್ತಿಲ್ಲ. 

ಮುಂಬೈ(ಜ.26) ಬಾಲಿವುಡ್ ನಟ ಸೈಫ್ ಆಲಿ ಖಾನ್ ಮೇಲೆ ನಡೆದ ದಾಳಿ ಕುರಿತು ಅನುಮಾನಗಳು ಹೆಚ್ಚಾಗತೊಡಗಿದೆ. ಆರಂಭದಿಂದಲೂ ಈ ದಾಳಿ ಕುರಿತು ಎದ್ದಿರುವ ಹಲವು ಪ್ರಶ್ನೆಗಳಿಗೆ ಸಮರ್ಪಕ ಉತ್ತರ ಸಿಕ್ಕಿಲ್ಲ. ಇತ್ತ ಸೈಫ್ ಆಲಿ ಖಾನ್ ಹಾಗೂ ಕರೀನಾ ಕಪೂರ್ ಖಾನ್ ನೀಡಿದ ಹೇಳಿಕೆಯಲ್ಲೂ ಕೆಲ ಗೊಂದಲಗಳಿವೆ. ಈ ಬೆಳವಣಿಗೆ ನಡುವೆ ಅರೆಸ್ಟ್ ಆಗಿರುವ ಆರೋಪಿ ತಂದೆ ಸ್ಫೋಟಕ ಹೇಳಿಕೆ ನೀಡಿದ್ದರು. ಸಿಸಿಟಿವಿಯಲ್ಲಿ ತೋರಿಸಿದ ಚಿತ್ರದಲ್ಲಿರುವುದು ನನ್ನ ಮಗನಲ್ಲ ಎಂದಿದ್ದರು. ಆರೋಪಿ ಅರೆಸ್ಟ್ ಕುರಿತು ಪ್ರಶ್ನೆಗಳು ಎದುರಾಗುತ್ತಿದ್ದಂತೆ ಇದೀಗ ಫಿಂಗರ್ ಫ್ರಿಂಟ್ ಮ್ಯಾಚ್ ಆಗುತ್ತಿಲ್ಲ ಅನ್ನೋ ಮಾಹಿತಿ ಬಯಲಾಗಿದೆ.

ಸದ್ಯ ಸೈಫ್ ಆಲಿ ಖಾನ್ ಪ್ರಕರಣದಲ್ಲಿ ಮುಂಬೈ ಪೊಲೀಸರ ನಡೆ ಪ್ರಶ್ನಿಸುವಂತಾಗಿದೆ.ಪೊಲೀಸರು ಬಂಧಿಸಿದ ಆರೋಪಿಯ ಫಿಂಗರ್ ಪ್ರಿಂಟ್‌ಗೂ, ಸೈಫ್ ಆಲಿ ಖಾನ್ ಮನೆಯಿಂದ ಕಲೆ ಹಾಕಿದ ಫಿಂಗರ್ ಫ್ರಿಂಟ್‌ಗೂ ಹೋಲಿಕೆಯಾಗುತ್ತಿಲ್ಲ. ಸೈಫ್ ಮನೆಯಿಂದ ಆರೋಪಿಯ 19 ಫಿಂಗರ್ ಫ್ರಿಂಟ್ ಕಲೆ ಹಾಕಲಾಗಿದೆ. ಈ ಕುರಿತು ಬಂದಿರುವ ಲ್ಯಾಬ್ ರಿಪೋರ್ಟ್ ನೆಗಿಟೀವ್ ಎಂದು ಬಂದಿದೆ. ಇದೀಗ ಮುಂಬೈ ಪೊಲೀಸರು ಮತ್ತಷ್ಟು ಮದಾರಿಗಳನ್ನು ಲ್ಯಾಬ್‌ಗೆ ಕಳುಹಿಸಿದ್ದಾರೆ.

ಪೊಲೀಸ್ ಬಂಧಿಸಿದ ಆರೋಪಿ ಅಸಲಿಯಲ್ಲ, ಸೈಫ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಕೊಟ್ಟ ಶರೀಫುಲ್ ಫಕೀರ್

ಸೈಫ್ ಅಪಾರ್ಟ್‌ಮೆಂಟ್ ಸಿಸಿಟಿವಿಯಲ್ಲಿ ಪತ್ತೆಯಾದ ಆರೋಪಿ ಚಿತ್ರಕ್ಕೂ ಸದ್ಯ ಪೊಲೀಸರು ಬಂಧಿಸಿದ ಆರೋಪಿಗೆ ಕೆಲ ವ್ಯತ್ಯಾಸಗಳಿವೆ ಅನ್ನೋದು ಹಲವರ ವಾದ. ಇದಕ್ಕೆ ಪೂರಕವಾಗಿ ಇದೀಗ ಲ್ಯಾಬ್ ರಿಪೋರ್ಟ್ ತದ್ವಿರುದ್ದವಾಗಿ ಬಂದಿದೆ. ಇದಕ್ಕೂ ಮೊದಲು ಆರೋಪಿ ಮೊಹಮ್ಮದ್ ಶರೀಫುಲ್ ಇಸ್ಲಾಮ್ ತಂದೆ ನೀಡಿದ ಹೇಳಿಕೆ ಅನುಮಾನ ಮತ್ತಷ್ಟು ಹೆಚ್ಚಿಸಿತ್ತು. ಕಾರಣ ಆರೋಪಿ ತಂದೆ ಶರೀಫಲ್ ಫಕೀರ್, ಪೊಲೀಸರು ನನ್ನ ಮಗನ ಬಂಧಿಸಿದ್ದಾರೆ. ಆದರೆ ಸಿಸಿಟಿವಿಯಲ್ಲಿ ತೋರಿಸಿದ ಚಿತ್ರದಲ್ಲಿರವುದು ನನ್ನ ಮಗನಲ್ಲ ಎಂದಿದ್ದಾರೆ. ಈ ಪ್ರಕರಣದಲ್ಲಿ ಮಗಗನನ್ನು ಸಿಲುಕಿಸಲಾಗಿದೆ ಎಂದು ಆರೋಪಿ ತಂದೆ ಹೇಳಿದ್ದರು.

ಪೊಲೀಸರು ಬಂಧಿಸಿದ ಆರೋಪಿ ಶರೀಫುಲ್ ಇಸ್ಲಾಮ್ ಬಾಂಗ್ಲಾದೇಶದಿಂದ ಅಕ್ರಮವಾಗಿ ಭಾರತಕ್ಕೆ ನಸುಳಿರುವುದು ನಿಜ. ಆತ ಹಲವು ನಿಯಮ ಉಲ್ಲಂಘಿಸಿರುವುದು ತಪ್ಪು. ನಕಲಿ ದಾಖಲೆ ಸೃಷ್ಟಿಸಿ ಭಾರತದ ಕೆಲ ನಗರದಲ್ಲಿ ಕೆಲಸ ಮಾಡಿರವುದು ನಿಜ. ಆದರೆ ಆತ ಕ್ರಿಮಿನಲ್ ಅಲ್ಲ. ಬಾಂಗ್ಲಾದೇಶದ ಆರ್ಥಿಕ ಪರಿಸ್ಥಿತಿ ಕಾರಣದಿಂದ ಅಕ್ರಮವಾಗಿ ಭಾರತಕ್ಕೆ ನುಸುಳಿದ್ದಾನೆ. ಅಕ್ರಮ ನುಸುಳಿದ ಒಂದು ಕಾರಣ ಮುಂದಿಟ್ಟು ಪೊಲೀಸರು ಇತರ ಪ್ರಕರಣದಲ್ಲಿ ಸಿಲುಕಿಸುತ್ತಿದ್ದಾರೆ ಎಂದು ಶರೀಫುಲ್ ಫಕೀರ್ ಆರೋಪಿಸಿದ್ದರು. ಈ ವಿಚಾರವನ್ನು ರಾಜತಾಂತ್ರಿಕ ಅಧಿಕಾರಿಗಳ ಮುಂದಿಡುವುದಾಗಿ ಫಕೀರ್ ಹೇಳಿದ್ದರು.

6 ದಿನಗಳ ಚಿಕಿತ್ಸೆ ಬಳಿಕ ಆಸ್ಪತ್ರೆಯಿಂದ ಸೈಫ್ ಆಲಿ ಖಾನ್ ಬಿಡುಗಡೆ, ವೈದ್ಯರ ಖಡಕ್ ಸೂಚನೆ