ದಾಳಿಯಿಂದ ಗಂಭೀರ ಗಾಯಗೊಂಡು ಆಸ್ಪತ್ರೆ ದಾಖಲಾಗಿದ್ದ ಬಾಲಿವುಡ್ ನಟ ಸೈಫ್ ಆಲಿ ಖಾನ್ ಡಿಸ್‌ಚಾರ್ಜ್ ಆಗಿದ್ದಾರೆ. ಇದೀಗ ಸೈಫ್ ಮನೆ ಸುತ್ತ ಭಾರಿ ಭದ್ರತೆ ಒದಗಿಸಲಾಗಿದೆ.

ಮುಂಬೈ(ಜ.21) ಬಾಲಿವುಡ್ ನಟ ಸೈಫ್ ಆಲಿ ಖಾನ್ ಕಳೆದ 6 ದಿನಗಳಿಂದ ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಇದೀಗ ಚೇತರಿಸಿಕೊಂಡಿದ್ದಾರೆ. ಅನಾಮಿಕನ ದಾಳಿಯಿಂದ ಗಂಭೀರವಾಗಿ ಗಾಯಗೊಂಡ ಸೈಫ್ ಆಲಿ ಖಾನ್‌ಗೆ 2 ಸರ್ಜರಿ ಮಾಡಲಾಗಿದೆ. ಕಳೆದ ಒಂದು ವಾರ ಸತತ ಚಿಕಿತ್ಸೆ ನೀಡಲಾಗಿದೆ. ಸತತ ಚಿಕಿತ್ಸೆಯಿಂದ ಚೇತರಿಸಿಕೊಂಡಿರುವ ಸೈಫ್ ಆಲಿ ಖಾನ್ ಇದೀಗ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸೈಫ್ ಪತ್ನಿ ಕರೀನಾ ಕಪೂರ್ ಖಾನ್, ತಾಯಿ ಶರ್ಮಿಳಾ ಠಾಗೂರ್ ಜೊತೆ ಬಾಂದ್ರಾ ಮನೆಗೆ ಮರಳಿದ್ದಾರೆ. ಸೈಫ್‌ಗೆ ಕೆಲ ತಿಂಗಳುಗಳ ಕಾಲ ವಿಶ್ರಾಂತಿಯ ಅಗತ್ಯವಿದೆ ಎಂದಿದ್ದಾರೆ. ಇಷ್ಟೇ ಅಲ್ಲ ಸೈಫ್ ಕುಟಂಬಕ್ಕೆ ಖಡಕ್ ಸೂಚನೆ ನೀಡಿದ್ದಾರೆ.

ಸೈಫ್ ಆಲಿ ಖಾನ್ ಕೊಂಚ ಚೇತರಿಸಿಕೊಂಡಿದ್ದಾರೆ. ಆದರೆ ಗಾಯ ಗುಣವಾಗಲು ಹಾಗೂ ಸೈಫ ಆಲಿ ಖಾನ್ ಸಂಪೂರ್ಣ ಚೇತರಿಸಿಕೊಳ್ಳಲು ಕೆಲ ತಿಂಗಳ ಅವಶ್ಯಕತೆ ಇದೆ. ಹೀಗಾಗಿ ಕಡ್ಡಾಯ ವಿಶ್ರಾಂತಿ ಅಗತ್ಯವಿದೆ. ಇಷ್ಟೇ ಅಲ್ಲ ಈ ವಿಶ್ರಾಂತಿ ವೇಳೆಯಲ್ಲಿ ಯಾರನ್ನೂ ಸೈಫ್ ಭೇಟಿಗೆ ಅವಕಾಶ ನೀಡಬಾರದು. ಹಲವರ ಭೇಟಿಯಿಂದ ಸೈಫ್ ಆಲಿ ಖಾನ್‌ಗೆ ಇನ್‌ಫೆಕ್ಷನ್ ಆಗುವ ಸಾಧ್ಯತೆ ಇದೆ. ಹೀಗಾಗಿ ಅತೀವ ಎಚ್ಚರಿಕೆ ವಹಿಸುವಂತೆ ಖಡಕ್ ಸೂಚನೆ ನೀಡಿದ್ದಾರೆ.

ಸೈಫ್ ದಾಳಿ ಪ್ರಕರಣದಿಂದ ದೆಹಲಿ ಅಲರ್ಟ್, ಖಡಕ್ ಸೂಚನೆ ನೀಡಿದ ಲೆಫ್ಟಿನೆಂಟ್ ಗವರ್ನರ್

ಸೈಫ್ ಆಲಿ ಖಾನ್ ಬಿಡುಗಡೆಯಿಂದ ಮುಂಬೈನ ಲೀಲಾವತಿ ಆಸ್ಪತ್ರೆ ಬಳಿ ಭಾರಿ ಪೊಲೀಸ್ ಭದ್ರತೆ ನಿಯೋಜನೆ ಮಾಡಲಾಗಿತ್ತು. ಇದೀಗ ಸೈಫ್ ಆಲಿ ಖಾನ್ ಮನೆ ಬಳಿಯೂ ಪೊಲೀಸರ ನಿಯೋಜನೆ ಮಾಡಲಾಗಿದೆ. ಸೈಫ್ ಮನೆ ಮುಂದೆ ಅಭಿಮಾನಿಗಳು ಜಮಾಯಿಸಿದ್ದಾರೆ. ಹೀಗಾಗಿ ಹೆಚ್ಚುವರಿ ಪೊಲೀಸರ ನಿಯೋಜನೆ ಮಾಡಲಾಗಿದೆ. ಮತ್ತೊಂದು ಅಹಿತಕರ ಘಟನೆ ಆಗದಂತೆ ತಡೆಯಲು ಮುಂಬೈ ಪೊಲೀಸರು ಸೆಲೆಬ್ರೆಟಿಗಳ ಮನೆ, ಕಚೇರಿಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ.

ಸೈಫ್ ಆಲಿ ಖಾನ್ ದಾಳಿ ಪ್ರಕರಣ ಆರೋಪಿ ಅರೆಸ್ಟ್
ಸೈಫ್ ಆಲಿ ಖಾನ್ ಮನೆಗೆ ನುಗ್ಗಿ ದಾಳಿ ಮಾಡಿದ ಆರೋಪಿ ಶರೀಫುಲ್ ಇಸ್ಲಾಂನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಅಕ್ರಮವಾಗಿ ಬಾಂಗ್ಲಾದೇಶದಿಂದ ಭಾರತಕ್ಕೆ ನುಸುಳಿ ಕಳೆದ ಕೆಲ ವರ್ಷಗಳಿಂದ ಭಾರತದಲ್ಲಿ ನೆಲೆಸಿದ್ದ. ಭಾರತದ ಆಧಾರ್ ಕಾರ್ಡ್ ಸೇರಿದಂತೆ ಹಲವು ದಾಖಲೆಗಳನ್ನು ಮಾಡಿಸಿಕೊಂಡಿದ್ದ. ಹಲವು ಕೆಲಸಗಳಲ್ಲಿ ತೊಡಗಿದ್ದ ಆರೋಪಿ ಶರೀಫುಲ್, ಕಳ್ಳತನ ಸೇರಿದಂತೆ ಇತರ ಅಪರಾಧ ಕೃತ್ಯಗಳಲ್ಲೂ ಭಾಗಿಯಾಗಿದ್ದ. ಇದೀಗ ಪೊಲೀಸ್ ವಿಚಾರಣೆ ತೀವ್ರಗೊಳಿಸಿದ್ದಾರೆ.

ಶರೀಫುಲ್ ಇಸ್ಲಾಂ ಭಾರತದಲ್ಲಿ ಬಿಜೋಯ್ ದಾಸ್ ಎಂದು ಹೆಸರು ಬದಲಾಯಿಸಿಕೊಂಡಿದ್ದ. ಈ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿದ್ದಾರೆ. ವಿಚಾರಣೆ ವೇಳೆ ಹಲವು ಮಾಹಿತಿ ಕಲೆ ಹಾಕಿರವ ಮುಂಬೈ ಪೊಲೀಸರು, ಈಗಾಗಲೇ ಸ್ಥಳ ಮಹಜರು ಮಾಡಿದ್ದಾರೆ.

ಸೈಫ್ ಆಲಿ ಖಾನ್ ಚಿಕಿತ್ಸೆಗೆ ಕೊಟ್ಟ ಆರೋಗ್ಯ ವಿಮೆ ದಾಖಲೆ ಬಹಿರಂಗ, 35.95 ಲಕ್ಷ ರೂ ಕ್ಲೈಮ್!