ಭಾರಿ ವಿರೋಧದ ನಡುವೆಯೂ 11 ವರ್ಷಗಳ ಬಳಿಕ ಪಾಕಿಸ್ತಾನದ ಸಿನಿಮಾ ಭಾರತದಲ್ಲಿ ರಿಲೀಸ್ ಆಗುತ್ತಿದೆ.
ಭಾರಿ ವಿರೋಧದ ನಡುವೆಯೂ 11 ವರ್ಷಗಳ ಬಳಿಕ ಪಾಕಿಸ್ತಾನದ ಸಿನಿಮಾ ಭಾರತದಲ್ಲಿ ರಿಲೀಸ್ ಆಗುತ್ತಿದೆ. ಪಾಕ್ ಸಿನಿಮಾ ರಿಲೀಸ್ ಆಗಬಾರದು ಎಂದು ಭಾರತದಲ್ಲಿ ಭಾರಿ ವಿರೋಧ ವ್ಯಕ್ತವಾಗಿತ್ತು. ಆದರೂ ಬಿಡುಗಡೆಯಾಗಿದೆ. 2022ರ ಪಾಕಿಸ್ತಾನದ ಹಿಟ್ ಸಿನಿಮಾ ದಿ ಲೆಜೆಂಡ್ ಆಫ್ ಮೌಲಾ ಜಟ್ ಸಿನಿಮಾ ಭಾರತದಲ್ಲಿ ರಿಲೀಸ್ ಆಗಿದೆ. ವಿಶ್ವದಾದ್ಯಂತ ಭಾರಿ ಸದ್ದು ಮಾಡಿದ್ದ ಈ ಸಿನಿಮಾ ಇದೀಗ ಭಾರತದಲ್ಲಿ ರಿಲೀಸ್ ಆಗಿರುವುದು ಭಾರತೀಯ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ.
ಈ ಸಿನಿಮಾ 1979ರ ಕಲ್ಟ್ ಕ್ಲಾಸಿಕ್ ಮೌಲಾ ಜಟ್ ಸಿನಿಮಾ ಅಡಾಪ್ಷನ್ ಆಗಿದೆ. 38 ವರ್ಷದ ನಿರ್ದೇಶಕ ಬಿಲಾಲ್ ಲಶಾರಿ ಸಾರಥ್ಯದಲ್ಲಿ ಮೂಡಿ ಬಂದಿತೆ. ಈ ಸಿನಿಮಾ ಭಾರತದಲ್ಲಿ ಪಂಜಾಬ್, ದೆಹಲಿಯ ಕೆಲವು ಚಿತ್ರಮಂದಿರಗಳಲ್ಲಿ ಮಾತ್ರ ಬಿಡುಗಡೆ ಮಾಡಲಾಗಿದೆ. ಈ ಬಗ್ಗೆ ಭಾರತದ ಮಲ್ಟಿ ಫ್ಲೆಕ್ಸ್ ಐನೋಕ್ಸ್‌ನ ಪ್ರೊಗ್ರಾಮಿಂಗ್ ಅಧಿಕಾರಿ ರಾಜೇಂದರ್ ಸಿಂಗ್ ಖಚಿತಪಡಿಸಿದ್ದಾರೆ. ಇನ್ನು ಈ ಮೊದಲು ಪಿವಿಆರ್ ಸಿನಿಮಾಸ್ ಪಾಕ್ ಸಿನಿಮಾ ರಿಲೀಸ್ ಮಾಡುವುದಾಗಿ ಹೇಳಿತ್ತು. ಆದರೆ ಬಳಿಕ ಈ ಬಗ್ಗೆ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ.
ಅಂದಹಾಗೆ ದಿ ಲೆಜೆಂಡ್ ಆಫ್ ಮೌಲಾ ಜಟ್ ಸಿನಿಮಾ ಅಕ್ಟೋಬರ್ ತಿಂಗಳಲ್ಲೇ ರಿಲೀಸ್ ಆಗಿತ್ತು. ವಿಶ್ವದಾದ್ಯಂತ ತೆರೆಗೆ ಬಂದ ಈ ಸಿನಿಮಾ ಪಾಕಿಸ್ತಾನದ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಇದಾಗಿದೆ. ಇದುವರೆಗೂ ವಿಶ್ವ ಬಾಕ್ಸ್ ಆಫೀಸ್ ನಲ್ಲಿ ಈ ಸಿನಿಮಾ 10 ಮಿಲಿಯನ್ ಅಧಿಕ ಡಾಲರ್ ಕಲೆಕ್ಷನ್ ಮಾಡಿದೆ.
2023 Box Office: 2023ಕ್ಕೆ 'ಭಾರತೀಯ ಚಿತ್ರರಂಗ'ದ ಬಾಕ್ಸಾಫೀಸ್ ಸುಲ್ತಾನ ಯಾರು?
ಅಂದಹಾಗೆ ಈ ಸಿನಿಮಾ ಕೌಟುಂಬಿಕ ಕಲಹ, ಸೇಡಿನ ಸುತ್ತ ಸುತ್ತುವ ಸಿನಿಮಾವಾಗಿದೆ. ಈ ಸಿನಿಮಾದಲ್ಲಿ ಫವಾದ್ ಖಾನ್ ಮತ್ತು ಮಹಿರಾ ಖಾನ್ ಪ್ರಮುಖ ಪಾತ್ರದಲ್ಲಿ ನಟಿದ್ದಾರೆ. ಅಂದಹಾಗೆ ಫವಾದ್ ಖಾನ್ ಮತ್ತು ಮಹಿರಾ ಖಾನ್ ಅನೇಕ ಭಾರತೀಯ ಸಿನಿಮಾಗಳಲ್ಲಿ ನಟಿಸಿದ್ದಾರೆ. ಮಹಿರಾ ಖಾನ್ ನಟನೆಯ ಪಾಕ್ ಸಿನಿಮಾ ಕೊನೆಯದಾಗಿ 2011ರಲ್ಲಿ ರಿಲೀಸ್ ಆಗಿತ್ತು. ಮಹಿರಾ ಖಾನ್ ಹಿಂದಿಯಲ್ಲಿ ಶಾರುಖ್ ಖಾನ್ ನಟನೆಯ ರಯೀಸ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. 2016 ಉರಿ ಅಟ್ಯಾಕ್ ಬಳಿಕ ಭಾರತದಲ್ಲಿ ಪಾಕ್ ಕಲಾವಿದರಿಗೆ ನಿಶೇಧ ಹೇರಲಾಗಿದೆ.
ಭಾರತದಲ್ಲಿ ಪಾಕ್ ಸಿನಿಮಾ ರಿಲೀಸ್ ಆಗುತ್ತಿರುವ ವಿರೋಧ ವ್ಯಕ್ತಪಡಿಸಿರುವ ಮಹಾರಾಷ್ಟ್ರ ನವನಿರ್ಮಾಣ ಸೇನೆ ಸಿನಿಮಾ ರಿಲೀಸ್‌ಗೆ ಅವಕಾಶ ಕೊಡಲ್ಲ ಎಂದು ಹೇಳಿದ್ದಾರೆ. ನಟ ಫವಾದ್ ಖಾನ್ ಅವರ ಅಭಿಮಾನಿಗಳು ದೇಶದ್ರೋಹಿಗಳು. ಪಾಕ್‌ಗೆ ಸಿನಿಮಾಗಳನ್ನು ನೋಡಬಹುದು. ಇಲ್ಲಿ ಯಾಕೆ ರಿಲೀಸ್ ಮಾಡಬೇಕು' ಎಂದು ಹೇಳಿದ್ದಾರೆ. ನಮ್ಮ ಪಕ್ಷ ಈ ಸಿನಿಮಾವನ್ನು ರಿಲೀಸ್ ಮಾಡಲು ಬಿಡಲ್ಲ ಎಂದು ಕಿಡಿ ಕಾರಿದ್ದಾರೆ.
ಮಹಿಳಾ ಅಭಿಮಾನಿ ಎದೆಯಲ್ಲಿ ಸಲ್ಮಾನ್ ಖಾನ್ ಟ್ಯಾಟೂ; ನೆಟ್ಟಿಗರಿಂದ ಸಖತ್ ಟ್ರೋಲ್
ಮತ್ತೋರ್ವ ವ್ಯಕ್ತಿ ಕಾಮೆಂಟ್ ಮಾಡಿ 'ಹಿಂದೂ ವಿರೋಧಿ, ಭಾರತ ವಿರೋಧಿ, ಭಯೋತ್ಪಾದಕ ಸಹಾನುಭೂತಿ ಜಿಹಾದಿಗೆ ಭಾರತ ಏಕೆ ವೇದಿಕೆಯನ್ನು ಒದಗಿಸಬೇಕು?' ಪ್ರಶ್ನೆ ಮಾಡಿದ್ದಾರೆ. ವಿರೋಧದ ನಡುವೆಯೂ ಪಾಕ್ ಸಿನಿಮಾ ಭಾರತದಲ್ಲಿ ತೆರೆ ಕಂಡಿದೆ.
