Asianet Suvarna News Asianet Suvarna News

ಸುಖೇಶ್ ಚಂದ್ರಶೇಖರ್ ಲವ್ ಲೆಟರ್ ಪ್ರಕರಣ: ಜಾಕ್ವೆಲಿನ್ ಅಭಿಮಾನಿ ಸಲ್ಲಿಸಿದ PIL ವಜಾ

ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರಿಗೆ ಲವ್ ಲೆಟರ್ ಬರೆಯುತ್ತಿದ್ದ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೈಲು ಸೇರಿರುವ ಸುಖೇಶ್ ಚಂದ್ರಶೇಖರ್ ವಿರುದ್ಧ ಅಭಿಮಾನಿ ಸಲ್ಲಿಸಿದ್ದ ಪಿಐಎಲ್ ದೆಹಲಿ ಹೈ ಕೋರ್ಟ್ ವಜಾಗೊಳಿಸಿದೆ. 

Fans PIL Against Sukesh Chandrasekhar Over Letters To Jacqueline Fernandez Dismissed sgk
Author
First Published Jul 30, 2023, 11:23 AM IST | Last Updated Jul 30, 2023, 11:23 AM IST

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೈಲು ಸೇರಿರುವ ಕಾನ್ಮ್ಯಾನ್ ಸುಖೇಶ್ ಚಂದ್ರಶೇಖರ್ ಪತ್ರಗಳಿಂದ ನೊಂದ ಜಾಕ್ವೆಲ್ ಫರ್ನಾಂಡಿಸ್ ಅಭಿಮಾನಿಗಳು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದೆಹಲಿ ಹೈಕೋರ್ಟ್ ತಿರಸ್ಕರಿಸಿದೆ. ಜಾಕ್ವೆಲಿನ್ ಮತ್ತು ನೋಹಾ ಫತೇಹಿ ಅಭಿಮಾನಿಗಳು  ಸುಖೇಶ್ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದರು. 

ನಿಶಾಂತ್ ಸಿಂಗ್ ಎನ್ನುವವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸಂಜೀವ್ ನರುಲಾ ಅವರ ಪೀಠವು ಶುಕ್ರವಾರ ವಿಚಾರಣೆ ನಡೆಸಿತು. ಕೇವಲ ಪ್ರಚಾರಕ್ಕಾಗಿ ಸಲ್ಲಿಸಿರುವ ಅರ್ಜಿಯನ್ನು ವೆಚ್ಚದೊಂದಿಗೆ ವಜಾಗೊಳಿಸಲಾಗುವುದು ಎಂದು ಪೀಠ ಹೇಳಿದೆ. ನ್ಯಾಯಾಲಯವು ಅರ್ಜಿಯನ್ನು 'ಅಸ್ಪಷ್ಟ ಮತ್ತು ಆಧಾರರಹಿತ' ಎಂದು ಕರೆದಿದೆ. 

ನಿಶಾಂತ್ ಸಿಂಗ್ ತನ್ನ ಅರ್ಜಿಯಲ್ಲಿ ಸುಖೇಶ್ ಚಂದ್ರಶೇಖರ್ ಅವರ ಸುಳ್ಳು ಸಾರ್ಜನಿಕ ಕಥೆಗಳು ಹದಿಹರೆಯದವರ ಮನಸ್ಸಿನ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ. ಮತ್ತು ಅವರ ಸಾರ್ವಜನನಿಕ ವರ್ತನೆಗಳನ್ನು ತಕ್ಷಣವೇ ನಿಲ್ಲಿಸಬೇಕೆಂದು ತಮ್ಮ ಅರ್ಜಿಯಲ್ಲಿ ಹೇಳಿದ್ದಾರೆ. ಕೆಲವು ಮಹಿಳಾ ಕಲಾವಿದರೊಂದಿಗಿನ ಸಂಬಂಧದ ಬಗ್ಗೆ ಸಾರ್ವಜನಿಕವಾಗಿ ಮಾತನಾಡುವ ಮೂಲಕ ಸುಕೇಶ್ ಚಂದ್ರಶೇಖರ್ ಈ ದೇಶದ ಮಹಿಳೆಯರ ಮತ್ತು ವಿಶೇಷವಾಗಿ ಮಹಿಳಾ ಕಲಾವಿದೆ ಜಾಕ್ವೆಲಿನ್ ಫರ್ನಾಂಡಿಸ್ ಅವರ ಘನತೆಗೆ ಧಕ್ಕೆ ತರಲು ಪ್ರಯತ್ನಿಸುತ್ತಿದ್ದಾರೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. 

ರಿಲ್ಯಾಕ್ಸ್ ಮೂಡಲ್ಲಿ ಹಾಟ್ ಸುಂದರಿ: ಮಿರ ಮಿರ ಮಿಂಚಿದ ಜಾಕ್ವೆಲಿನ್ ಫೋಟೋ ವೈರಲ್

ಮಹಿಳೆಯರ ಘನತೆಗೆ ಧಕ್ಕೆ ತರುವಂತಹ ಚಂದ್ರಶೇಖರ್ ಹೇಳಿಕೆಗಳನ್ನು ಮಾಧ್ಯಮಗಳಲ್ಲಿ ಪ್ರಚಾರ ಮಾಡಲಾಗಿದೆ ಎಂದು ಉಲ್ಲೇಖಿಸಲಾಗಿದೆ. ಸದ್ಯ ದೆಹಲಿಯ ಜೈಲಿನಲ್ಲಿರುವ ಚಂದ್ರಶೇಖರ್ ಮಾಧ್ಯಮಗಳ ಮುಂದೆ ಹೇಳಿಕೆಗಳನ್ನು ನೀಡುತ್ತಿದ್ದು, ಇದರಿಂದ ನಟಿಯೊಬ್ಬರು ಗೌರವಯುತವಾಗಿ ಬದುಕಲು ಸಾಧ್ಯವಾಗುವುದಿಲ್ಲ ಎಂದು ಅರ್ಜಿದಾರರು ಹೇಳಿದ್ದಾರೆ.

ಬಂಗಲೆ ಖರೀದಿಸಿದ ರಾ ರಾ..ರಕ್ಕಮ್ಮ..ಸುಂದರಿ: ಜಾಕ್ವೆಲಿನ್ ದುಬಾರಿ ಮನೆ ಹೇಗಿದೆ?

ಚಂದ್ರಶೇಖರ್ ವಿರುದ್ಧ ದಾಖಲಾಗಿರುವ 200 ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾಕ್ವೆಲಿನ್ ಫರ್ನಾಂಡೀಸ್ ಆರೋಪಿಯಾಗಿದ್ದಾರೆ. ಚಂದ್ರಶೇಖರ್ ವಿರುದ್ಧದ ಸುಲಿಗೆ ಪ್ರಕರಣದಲ್ಲಿ ನೋರಾ ಫತೇಹಿ ಮತ್ತು ಚಾಹತ್ ಖನ್ನಾ ಸಾಕ್ಷಿಗಳಾಗಿದ್ದು, ಪ್ರಕರಣವನ್ನು ದೆಹಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
 

Latest Videos
Follow Us:
Download App:
  • android
  • ios