Viral Video : ಸೋಶಿಯಲ್ ಮೀಡಿಯಾದಲ್ಲಿ ಶಾರುಖ್ ಖಾನ್ ಮಗ ಆರ್ಯನ್ ಖಾನ್ ವಿಡಿಯೋ ವೈರಲ್ ಆಗಿದೆ. ಪಾರ್ಟಿ ಗುಂಗಿನಲ್ಲಿರುವ ಆರ್ಯನ್, ಫ್ಯಾನ್ ಗೆ ಸಹಾಯ ಮಾಡಲು ಹೋಗಿ ಸುದ್ದಿಗೆ ಬಂದಿದ್ದಾರೆ.
ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಮಗ ಆರ್ಯನ್ ಖಾನ್ ವಿಡಿಯೋ ವೈರಲ್ ಆಗ್ತಿದೆ. ಆರ್ಯನ್ ಖಾನ್ ಪಾರ್ಟಿ ಮುಗಿಸಿ ಬರ್ತಿರುವಾಗ ಅಭಿಮಾನಿಗಳ ದಂಡು ಅವರನ್ನು ಮುತ್ತಿದೆ. ಈ ಟೈಂನಲ್ಲಿ ಅಭಿಮಾನಿಯೊಬ್ಬ ಕೆಳಗೆ ಬಿದ್ದಿದ್ದಾರೆ. ಅವರಿಗೆ ಆರ್ಯನ್ ಸಹಾಯ ಮಾಡಲು ಮುಂದಾಗಿದ್ದೇ ವಿಡಿಯೋ ವೈರಲ್ ಗೆ ಕಾರಣ.
ನಡೆದಿದ್ದೇನು?
ಗುರುವಾರ ರಾತ್ರಿ ಡಾನ್ಸರ್ ಹಾಗೂ ಆಕ್ಟರ್ ರಾಘವ್ ಜುಯಾಲ್ ಅವರ ಬರ್ತ್ ಡೇ ಪಾರ್ಟಿಗೆ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಹೋಗಿದ್ರು. ಆರ್ಯನ್ ವಾಪಸ್ ಬರುವ ವೇಳೆ ಸೆಲ್ಫಿ ತೆಗೆದುಕೊಳ್ಳಲು ಫ್ಯಾನ್ಸ್ ಪ್ರಯತ್ನ ಮಾಡಿದ್ದಾರೆ. ಈ ವೇಳೆ ನೂಕು ನುಗ್ಗಲುಂಟಾಗಿದೆ. ಈ ವೇಳೆ ಒಬ್ಬ ಫ್ಯಾನ್ ಕೆಳಗೆ ಬಿದ್ದಿದ್ದಾನೆ. ಆರ್ಯನ್ ಬಾಡಿಗಾರ್ಡ್ಸ್ ಹಾಗೂ ಆರ್ಯನ್ ಇಬ್ಬರೂ ಆತನನ್ನು ಎತ್ತಲು ಮುಂದಾಗಿದ್ದಾರೆ.
ಬಿಗ್ ಬಾಸ್ ಸೀಸನ್ 13 – ದೊಡ್ಮನೆಗೆ ಬರುವ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ವೈರಲ್
ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆರ್ಯನ್ ಸರಳತೆಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮತ್ತೆ ಕೆಲವರು ಇಂಥ ಹುಚ್ಚು ಅಭಿಮಾನದ ಅಗತ್ಯವಿಲ್ಲ ಅಂತ ಕಮೆಂಟ್ ಮಾಡಿದ್ದಾರೆ. ಆರ್ಯನ್ ಪಾರ್ಟಿ ಗುಂಗಿನಲ್ಲಿರೋದು ಸ್ಪಷ್ಟವಾಗಿ ಕಾಣ್ತಿದೆ. ಅವರು ಮೆಟ್ಟಿಲಿಳಿದು ಕಾರ್ ಬಳಿ ಬರೋಕೆ ಬಾಡಿ ಗಾರ್ಡ್ ಸಹಾಯ ಮಾಡಿದ್ದಾರೆ. ಇದನ್ನು ನೋಡಿದ ಅನೇಕ ಬಳಕೆದಾರರು, ಆರ್ಯನ್ ಗೆ ತನ್ನನ್ನು ಸಂಭಾಳಿಸಲು ಸಾಧ್ಯವಾಗ್ತಿಲ್ಲ. ಇನ್ನು ಅಭಿಮಾನಿ ಸಹಾಯಕ್ಕೆ ಹೋಗಿದ್ದಾರೆ ಅಂತ ತಮಾಷೆ ಮಾಡಿದ್ದಾರೆ.
ರಾಧಿಕಾಗೆ ನಾನು ಕೆಜಿಗಟ್ಟಲೆ ಚಿನ್ನ ಕೊಡಿಸಿದ್ದೇನೆ: ನಟ ಯಶ್ ಅಮ್ಮ ಪುಷ್ಪಾ ಅರುಣ್ಕುಮಾರ್ ಹೇಳಿದ್ದೇನು
ಆರ್ಯನ್ ನಿರ್ದೇಶನದ ವೆಬ್ ಸರಣಿ ದಿ ಬ್ಯಾಡ್ಸ್ ಆಫ್ ಬಾಲಿವುಡ್ ನಲ್ಲಿ ರಾಘವ್ ಕೆಲಸ ಮಾಡಿದ್ದಾರೆ. ಆರ್ಯನ್ ಜೊತೆಗೆ ಶೆಹನಾಜ್ ಗಿಲ್, ಮುನಾವರ್ ಫಾರೂಕಿ, ಬಾದ್ಶಾ, ಸನ್ಯಾ ಮಲ್ಹೋತ್ರಾ, ಮೋನಾ ಸಿಂಗ್, ಸಂಜಯ್ ಕಪೂರ್ ಮತ್ತು ಅಮೀಶಾ ಪಟೇಲ್ ಸೇರಿದಂತೆ ಹಲವಾರು ಸೆಲೆಬ್ರಿಟಿಗಳು ರಾಘವ್ ಬರ್ತ್ ಡೇ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು. ಪಾರ್ಟಿಗೆ ಸಂಬಂಧಿಸಿದ ಅನೇಕ ವಿಡಿಯೋಗಳು ವೈರಲ್ ಆಗ್ತಿವೆ.


