ಪಾವ್ಲೋ ಕೊಯೆಲೋ ಜಗತ್ತಿನ ಖ್ಯಾತ ಕಾದಂಬರಿಕಾರ. ಇವನ ಇತರ ಕಾದಂಬರಿಗಳ ಬಗ್ಗೆ ಕೇಳಿಲ್ಲದಿದ್ದರೂ ʼದಿ ಆಲ್ಕೆಮಿಸ್ಟ್‌ʼ ಬಗ್ಗೆ ನೀವು ಕೇಳಿಯೇ ಇರುತ್ತೀರಿ. ಅವನು ನಮ್ಮ ಬಾಲಿವುಡ್‌ ಬಾದ್‌ಶಾ ಶಾರುಖ್‌ ಖಾನನ ಫ್ಯಾನು. ಈತ ಇತ್ತೀಚೆಗೆ ಟ್ವಿಟ್ಟರ್‌ನಲ್ಲಿ ನೀಡಿರುವ ಒಂದು ಪ್ರತಿಕ್ರಿಯೆಗೆ ಶಾರುಖ್‌ ಅಭಿಮಾನಿಗಳಿಂದ ಭಾರಿ ಶ್ಲಾಘನೆ ವ್ಯಕ್ತವಾಗಿದೆ.

ಶಾರುಖ್‌ ಖಾನ್‌ ತಮ್ಮ ಮನೆಯ ಮುಂದೆ ಕಿಕ್ಕಿರಿದು ಸೇರಿರುವ ಅಭಿಮಾನಿಗಳಿಗೆ ಬಾಲ್ಕನಿಯಿಂದ ಕೈ ಬೀಸುತ್ತಿರುವ, ಕೈ ಮುಗಿಯುತ್ತಿರುವ ಪುಟ್ಟ ವಿಡಿಯೋ ಒಂದನ್ನು ತಮ್ಮ ಟ್ವಿಟರ್‌ ಖಾತೆಯಲ್ಲಿ ಶೇರ್‌ ಮಾಡಿದ್ದರು. 'ಪಠಾಣ್‌ ಮನೆಯ ಮುಂದೆ ಅತಿಥಿಗಳು. ಎಲ್ಲರಿಗೂ ಪ್ರೀತಿ, ಕೃತಜ್ಞತೆ' ಎಂದು ಬರೆದಿದ್ದರು. ಇದನ್ನು ಶೇರ್‌ ಮಾಡಿಕೊಂಡಿರುವ ಪಾವ್ಲೋ ಕೊಯೆಲೋ, 'ಕಿಂಗ್‌, ಲೆಜೆಂಡ್‌, ಫ್ರೆಂಡ್.‌ ಅದರೆ ಎಲ್ಲಕ್ಕಿಂತ ಮಿಗಿಲಾಗಿ ಅತ್ಯದ್ಭುತ ನಟ. (ಪಶ್ಚಿಮದಲ್ಲಿ ಅವರನ್ನು ಗೊತ್ತಿಲ್ಲದವರಿಗೆ ನಾನು ಅವರ 'ಮೈ ನೇಮ್‌ ಈಸ್‌ ಖಾನ್‌' ಫಿಲಂ ನೋಡುವಂತೆ ಸಜೆಸ್ಟ್‌ ಮಾಡುತ್ತೇನೆ)' ಎಂದು ಬರೆದಿದ್ದರು. ಕೊಯೆಲೋ ಟ್ವೀಟ್‌ ಶಾರುಖ್‌ ಅಭಿಮಾನಿಗಳಲ್ಲಿ ಪುಳಕ ಮೂಡಿಸಿದೆ. ಸ್ವತಃ ಶಾರುಖ್‌ ಕೂಡ, 'ನೀವು ಯಾವಾಗಲೂ ತುಂಬ ಪ್ರೀತಿ ತುಂಬಿದವರು. ಆದಷ್ಟೂ ಬೇಗ ಭೇಟಿಯಾಗೋಣ' ಎಂದು ಮರಳಿ ಟ್ವೀಟ್‌ ಮಾಡಿದ್ದಾರೆ.

ಶಾರುಖ್‌ ಹಾಗೂ ಪಾವ್ಲೋ ಕೊಯೆಲೋ ಟ್ವಿಟರ್‌ನಲ್ಲಿ ಮಿತ್ರರು. ಇಬ್ಬರೂ ಆಗಾಗ ಟ್ವಿಟರ್‌ನಲ್ಲಿ ಪುಟ್ಟ ಸಂಭಾಷಣೆಗಳನ್ನೂ ನಡೆಸುವುದು ಇದೆ. ಶಾರುಖ್‌ ಕೂಡ ಕೊಯೆಲೋ ಕಾದಂಬರಿಗಳನ್ನು ಹೆಚ್ಚಾಗಿ ಓದುತ್ತಾರೆ. ಅವರ 'ಓಂ ಶಾಂತಿ ಓಂ' ಚಲನಚಿತ್ರದಲ್ಲಿ ಪೌಲೋ ಅವರ 'ದಿ ಆಲ್ಕೆಮಿಸ್ಟ್' ಕಾದಂಬರಿಯ ಒಂದು ಜನಪ್ರಿಯ ಡಯಲಾಗ್‌ ಅನ್ನು ಬಳಸಲಾಗಿದೆ. ಅದು ಹೀಗಿದೆ- 'ನೀನು ಒಂದು ಗುರಿಯನ್ನು ಸಾಧಿಸಲು ತೀವ್ರವಾಗಿ ಬಯಸಿದ್ದರೆ, ನೀನು ಅದನ್ನು ಹೊಂದುವಂತೆ ಇಡೀ ಜಗತ್ತೇ ಒಳಸಂಚು ಹೂಡುತ್ತದೆ'.

2008ರಲ್ಲಿ ಬಿಡುಗಡೆಯಾದ ಶಾರುಖ್‌ ಅವರ 'ಮೈ ನೇಮ್‌ ಈಸ್‌ ಖಾನ್‌' ಚಿತ್ರವನ್ನು 2017ರಲ್ಲಿ ಪಾವ್ಲೋ ವೀಕ್ಷಿಸಿದ್ದರು. ವೀಕ್ಷಿಸಿದ ಬಳಿಕ ಥ್ರಿಲ್‌ ಆಗಿದ್ದ ಅವರು 'ಈ ಸಿನಿಮಾ ಅತ್ಯದ್ಭುತವಾಗಿದೆ ಮಾತ್ರವಲ್ಲ. ಈ ಸಿನಿಮಾ ನಟನೆಗಾಗಿ ಶಾರುಖ್‌ಗೆ ಆಸ್ಕರ್‌ ಪ್ರಶಸ್ತಿ ಸಲ್ಲಬೇಕು (ಹಾಲಿವುಡ್‌ ಹುನ್ನಾರ ಮಾಡದೇ ಹೋದರೆ). ಅಕಾಡೆಮಿ ಕೇಳಿದರೆ ಅವರು ಇತರ ಚಿತ್ರಗಳನ್ನೂ ಕಳಿಸಿಕೊಡಬಹುದು. ಯಾಕೆಂದರೆ ಸ್ವಿಜರ್‌ಲ್ಯಾಂಡ್‌ನಲ್ಲಿ ಅವು ಸಿಗೋದಿಲ್ವಲ್ಲ' ಎಂದು ಬರೆದುಕೊಂಡಿದ್ದರು.

Shamita Shetty ಇನ್ನೂ ಯಾಕೆ ಸಿಂಗಲ್​? 44ನೇ ಬರ್ತ್​ಡೆಗೆ ಸೀಕ್ರೇಟ್​ ಬಯಲು!

ಮೈ ನೇಮ್‌ ಈಸ ಖಾನ್‌ನಲ್ಲಿ ಶಾರುಖ್‌ ಅಲ್ಪ ಬುದ್ಧಿಮತ್ತೆಯ ವ್ಯಕ್ತಿಯಾಗಿ, ಅಮೆರಿಕದ ಅಧ್ಯಕ್ಷರನ್ನು ಭೇಟಿಯಾಗಲು ಬಯಸುವ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದರು. ಪೌಲೋ ಕೊಯೆಲೋಗೆ ಈಗ 75 ವರ್ಷ. ಅವರ ನೂರಾರು ಕಾದಂಬರಿಗಳು(Novel) ಜಗತ್ತಿನಾದ್ಯಂತ ಕೋಟ್ಯಂತರ ಸಂಖ್ಯೆಯಲ್ಲಿ ಬಿಕರಿಯಾಗಿವೆ. ಆಲ್ಕೆಮಿಸ್ಟ್‌ ಹತ್ತಾರು ಮುದ್ರಣಗಳನ್ನು ಕಂಡಿರುವುದು ಮಾತ್ರವಲ್ಲದೆ, ಆಧುನಿಕ ಜಾನಪದವೇ ಆಗಿಹೋಗಿದೆ.

ಪೌಲೋ ಅವರ ಟ್ವೀಟ್‌ಗಳು (Tweet) ಶಾರುಖ್‌ ಅಭಿಮಾನಿಗಳಿಂದ ಹೆಮ್ಮೆಯಿಂದ ಸ್ವೀಕಾರಗೊಂಡಿವೆ. 'ಶಾರುಖ್‌ ನಮ್ಮ ದೇಶದ ಹೆಮ್ಮೆ' ಎಂದು ಅವರು ಟ್ವೀಟ್‌ ಮಾಡಿದ್ದಾರೆ.ಇನ್ನೊಂದೆಡೆ ಶಾರುಖ್ ಖಾನ್ ನಟನೆಯ ಪಠಾಣ್ ಸಿನಿಮಾ ರಿಲೀಸ್‌ಗೂ ಮೊದಲೇ ಸಖತ್ ಸದ್ದು ಮಾಡಿತ್ತು. ಅದರಲ್ಲಿರುವ ಒಂದು ಹಾಡು ವಿವಾದ ಸೃಷ್ಟಿಸಿತ್ತು. ಅಮೀರ್ ಆನ್ ಸಿನಿಮಾಕ್ಕಾದ ಸ್ಥಿತಿಯೇ ಈ ಸಿನಿಮಾಕ್ಕೂ ಆಗುತ್ತೆ ಅನ್ನೋ ಮಾತುಗಳು ಕೇಳಿಬಂದಿದ್ದವು. ಆದರೆ ಅದಕ್ಕೆ ಸರಿ ಉಲ್ಟಾ ಸ್ಥಿತಿ ಪಠಾಣ್ ಸಿನಿಮಾಕ್ಕೆ ಬಂತು. ದಕ್ಷಿಣ ಭಾರತೀಯ ಚಿತ್ರರಂಗದ ಅಬ್ಬರದಲ್ಲಿ ಮುಳುಗಿದ ಹಡಗಿನಂತಿದ್ದ ಬಾಲಿವುಡ್‌ಗೆ ಮರುಜೀವ ತಂದುಕೊಟ್ಟ ಸಿನಿಮಾ(Cinema) ಇದು ಎಂದು ಈ ಚಿತ್ರವನ್ನು ವಿಶ್ಲೇಷಿಸಲಾಯ್ತು. ಶಾರುಖ್ ಸಲ ಬಹುಕಾಲದ ನಂತರ ಸಿಕ್ಕಿದ ಗೆಲುವಿನಿಂದ ಹ್ಯಾಪಿಯಾಗಿದ್ದಾರೆ. ಇನ್ನೊಂದೆಡೆ ಜಗದ್ವಿಖ್ಯಾತ ಕಾದಂಬರಿಕಾರನೇ ಇವರಿಗೆ ಫ್ಯಾನ್ ಆಗಿ ಅಭಿನಂದಿಸಿರೋದು ಬಾದ್ ಶಾ ಖುಷಿಯನ್ನು ಹೆಚ್ಚಿಸಿದೆ.

ಮಗಳೇ ಎಂದು ಬಾಯ್ತುಂಬ ಕರೆದವಳನ್ನೇ ಮದ್ವೆಯಾದ ಈ ಬಾಲಿವುಡ್​ ಸ್ಟಾರ್​!