ವಿಚಿತ್ರ ಮಾದರಿಯ ಪೇರೆಂಟಿಂಗ್ನ ಸ್ಯಾಂಪಲ್ಗಳು ನಮಗೆ ಬಾಲಿವುಡ್ನಲ್ಲಿ ಸಿಗುತ್ತವೆ. ಗೇ ಆದವರು, ಸಿಂಗಲ್ ಪೇರೆಂಟ್ಗಳು, ನಟ ನಟಿಯರು ಮಕ್ಕಳನ್ನು ಹೇಗೆಲ್ಲ ನೋಡ್ಕೊಳ್ಳಬಹುದು ಅನ್ನೋದಕ್ಕೆ ಎಕ್ಸಾಂಪಲ್ ಗಳು ಬಾಲಿವುಡ್ ನಲ್ಲಿವೆ. ಸದ್ಯಕ್ಕೆ ಎಕ್ಸಾಂಪಲ್ ಆಗಿರೋದು ಕರಣ್ ಜೋಹರ್.

ಕರಣ್ ಜೋಹರ್ಗೆ ಇಬ್ಬರು ಮಕ್ಕಳಿರೋದು ನಮಗೆಲ್ಲ ಗೊತ್ತೇ ಇದೆ. ರೂಹಿ ಮತ್ತು ಯಶ್ ಅನ್ನೋ ಅವಳಿ ಮಕ್ಕಳಿಗೆ ಸಿಂಗಲ್ ಪೇರೆಂಟ್ ನಲವತ್ತೇಳು ವರ್ಷದ ಕರಣ್ ಜೋಹರ್. ತಾನು ಗೇ ಅಂತ ಸಾರ್ವಜನಿಕವಾಗಿ ಒಪ್ಪಿಕೊಂಡಿದ್ದಾರೆ ಕರಣ್. ಬಾಲಿವುಡ್ನ ಅನೇಕ ದೊಡ್ಡ ನಟರ ಜೊತೆಗೆ ಅವರಿಗೆ ಸಂಬಂಧ ಇವೆ ಅನ್ನುವ ಗಾಳಿ ಸುದ್ದಿ ಕೆಲವು ವರ್ಷಗಳ ಹಿಂದೆ ಜೋರಾಗಿತ್ತು. ಕರಣ್ ಗೇ ಅನ್ನೋದನ್ನು ಅವರೆದುರೂ ಬಹಳ ಮಂದಿ ಆಡಿಕೊಂಡು ನಕ್ಕಿದ್ದರು. ಇಂಥ ನೋವು, ಅಪಮಾನಗಳನ್ನೆಲ್ಲ ಕರಣ್ ಬರೆದುಕೊಂಡಿದ್ದಾರೆ. ಆದರೂ ಎಲ್ಲರ ಜೊತೆಗೆ ತಮಾಷೆ ಮಾಡಿಕೊಂಡು ಕಾಲೆಳೆದುಕೊಂಡು ಇರುವ ಕರಣ್ ಕೆಲವು ವರ್ಷಗಳ ಹಿಂದೆ ಒಂದು ಗಂಭೀರ ವಿಷಯ ಹೇಳಿದ್ದರು. ಗೇ ಆಗಿರುವ ತನಗೆ ಉಳಿದವರ ಹಾಗೆ ವೈವಾಹಿಕ ಜೀವನ ನಡೆಸೋದು ಸಾಧ್ಯ ಇಲ್ಲ. ಆದರೆ ಒಂದು ಮಗು ಬೇಕು ಅನ್ನುವ ಆಸೆ ಇದೆ. ಅದು ಈಡೇರುತ್ತೋ ಇಲ್ಲವೋ ಗೊತ್ತಿಲ್ಲ ಅಂದಿದ್ದರು. ಆಮೇಲೆ ಅವರು ಸಿಂಗಲ್ ಪೇರೆಂಟ್ ಆಗಿ ಅವಳಿ ಮಕ್ಕಳಿಗೆ ತಂದೆಯಾದರು.

 

ಅಷ್ಟಕ್ಕೂ ಈ ಲವ್, ಲವ್ ಅಂತಾರಲ್ಲ, ಹಂಗಂದ್ರೆ ಏನು?...

 

ಈ ಮಕ್ಕಳ ಬಾಲ್ಯವನ್ನು ಕಂಡು ಬಹಳ ಭಾವುಕರಾಗಿದ್ದರು ಕರಣ್. ತಾಯಿಯಿಲ್ಲದ ಮಕ್ಕಳಿಗೆ ಕರಣ್ ಅವರ ತಾಯಿ ಹೀರೂ ಜೋಹರ್ ಅವರೇ ತಾಯಿಯೂ ಅಜ್ಜಿಯೂ ಆಗಿದ್ದಾರೆ. ಮಕ್ಕಳ ಬರ್ತ್ ಡೇ ದಿನ ತನ್ನಮ್ಮ ಮಕ್ಕಳನ್ನು ನೋಡಿಕೊಳ್ಳುವ ಬಗೆಯನ್ನು ಬಹಳ ಎಮೋಶನಲ್ ಆಗಿ ಕರಣ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ 

 

'ನನ್ನ ಸೋಷಲ್ ಸ್ಟೇಟಸ್ ಪ್ರಕಾರ ನಾನು ಸಿಂಗಲ್ ಪೇರೆಂಟ್. ಆದರೆ ವಾಸ್ತವದಲ್ಲಿ ನನ್ನ ಮಕ್ಕಳಿಗೆ ನಾನೊಬ್ಬನೇ ಪೋಷಕ ಅಲ್ಲ. ನನ್ನ ಅಮ್ಮ ಬಹಳ ಸುಂದರವಾಗಿ, ಅಕ್ಕರೆಯಿಂದ ಈ ಮಕ್ಕಳನ್ನು ನೋಡಿಕೊಳ್ಳುತ್ತಿದ್ದಾಳೆ. ಹಾಗಾಗಿ ನನ್ನ ಮಕ್ಕಳಿಗೆ ಉಳಿದೆಲ್ಲ ಮಕ್ಕಳ ಹಾಗೆ ಇಬ್ಬರು ಪೋಷಕರಿದ್ದಾರೆ. ಅಮ್ಮ ಅಷ್ಟು ಸ್ಟ್ರಾಂಗ್ ಆಗಿ ಬೆಂಬಲವಾಗಿ ನಿಲ್ಲದೇ ಹೋಗುತ್ತಿದ್ದರೆ, ಮಕ್ಕಳನ್ನು ಪಡೆಯುವಂಥಾ ಇಷ್ಟು ದೊಡ್ಡ ನಿರ್ಧಾರ ಖಂಡಿತಾ ತೆಗೆದುಕೊಳ್ಳುತ್ತಿರಲಿಲ್ಲ. ಅವಳಿಂದಾಗಿ ನನ್ನಂಥವರಿಗೂ ಮಗುವಿನ ಸೌಭಾಗ್ಯ ಸಿಗುವಂತಾಗಿದೆ. ನನ್ನಿಬ್ಬರು ಮಕ್ಕಳಿಗೆ ಮೂರು ವರ್ಷವಾಗುತ್ತಿದೆ. ಇಂಥಾ ಸಂಪೂರ್ಣತೆಯ ಫೀಲಿಂಗ್ ನನಗೆ ಸಿಗುವಂತೆ ಮಾಡಿದ ವಿಶ್ವಕ್ಕೆ ಧನ್ಯವಾದ ಹೇಳ್ತೀನಿ..' ಅನ್ನೋದು ಕರಣ್ ಭಾವುಕ ನುಡಿ.

ಈ ಪೋಸ್ಟ್‌ನಲ್ಲಿ ಕರಣ್ ತನ್ನಿಬ್ಬರು ಮಕ್ಕಳ ಜೊತೆಗಿರುವ ಫೋಟೋಗಳೂ ಇವೆ.

 


ಒಂದೇ ಸಮನೆ ನಿಟ್ಟುಸಿರು;ಪಿಚ್ಚರ್‌ ಅಭೀ ಬಾಕಿ ಹೈ!.

 

ಈ ಮಕ್ಕಳ ಬರ್ತ್ ಡೇ ಸೆಲೆಬ್ರೇಶನ್ ಬಾಲಿವುಡ್ ಟೌನ್ ನಲ್ಲಿ ಜೋರಾಗಿ ನಡೆಯಿತು. ತನ್ನ ಮಗ ಅಬ್ ರಾಮ್ ಜೊತೆಗೆ ಶಾರೂಕ್ ಖಾನ್ ಫ್ಯಾಮಿಲಿಯಿಂದ ಗೌರಿ ಬಂದಿದ್ರು. ಪುಟಾಣಿ ತೈಮೂರ್ ಜೊತೆಗೆ ಕರೀನಾ ಇದ್ರು. ಅಕ್ಷಯ್ ಕುಮಾರ್ ಮಗಳು ನಿತಾರಾ ಹಾಗೂ ಪತ್ನಿ ಟ್ವಿಂಕಲ್ ಖನ್ನಾ ಇದ್ರು. ರಾಣಿ ಮುಖರ್ಜಿ ಮಗಳು ಅಧಿರಾ ಜೊತೆಗೆ ಪಾರ್ಟಿಯಲ್ಲಿ ಸೇರಿದ್ರು.

ಇವರೆಲ್ಲರ ನಡುವೆ ತುಷಾರ್ ಕಪೂರ್ ಕೂಡ ಇದ್ರು. ಇವ್ರದ್ದು ಇನ್ನೊಂದು ಕತೆ, ತುಷಾರ್ ಕೂಡಾ ಸಿಂಗಲ್ ಪೇರೆಂಟ್. ಅವರ ಮಗು ಲಕ್ಷ್ಯ ಜೊತೆಗೆ ಆ ಖುಷಿಯಲ್ಲಿ ಪಾಲ್ಗೊಂಡರು. ತುಷಾರ್ ಕಪೂರ್ ಸೋಷಲ್ ಮೀಡಿಯಾದಲ್ಲಿ ಈ ಇವೆಂಟ್ ನ ಫೋಟೋ ಹಾಕಿ ಸಿಂಗಲ್ ಪೇರೆಂಟ್ ಹುಡ್ ಅನ್ನು ಸಂಭ್ರಮಿಸಿದ ರೀತಿ ಅದ್ಭುತವಾಗಿತ್ತು. ಸಿಂಗಲ್ ಪೇರೆಟಿಂಗ್ ಬಗೆಗಿದ್ದ ತಡೆಗೋಡೆಯನ್ನು ನಾವು ಕೆಡವಿ ಹಾಕಿದ್ದೀವಿ ಅನ್ನೋ ಅರ್ಥದಲ್ಲಿ ಸ್ಟೇಟಸ್ ಹಾಕ್ಕೊಂಡು ಅವರು ಗಮನ ಸೆಳೆದರು.