Asianet Suvarna News Asianet Suvarna News

ರಾಮ ಮಂದಿರ ನಿರ್ಮಾಣಕ್ಕೆ ಯಶ್ 50 ಕೋಟಿ ರೂ. ದೇಣಿಗೆ; ವೈರಲ್ ಸುದ್ದಿಯ ಅಸಲಿಯತ್ತೇನು?

ರಾಕಿಂಗ್ ಸ್ಟಾರ್ ಯಶ್ ರಾಮ ಮಂದಿರ ನಿರ್ಮಾಣಕ್ಕೆ ಅತಿ ದೊಡ್ಡ ಮೊತ್ತದ ಹಣವನ್ನೇ ದೇಣಿಗೆ ನೀಡಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಹೌದು ಪ್ಯಾನ್ ಇಂಡಿಯಾ ಸ್ಟಾರ್ ಬರೋಬ್ಬರಿ 50 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ ಎನ್ನುವ ಸುದ್ದಿ ಕಳೆದ ಎರಡು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. 

Fact Check: is KGF star Yash donate Rs 50 crore for the construction of Ram Mandir in Ayodhya sgk
Author
First Published Sep 1, 2022, 3:09 PM IST

ರಾಮ ಮಂದಿರ ನಿರ್ಮಾಣಕ್ಕೆ ದೇಶದ ಜನತೆ ತಮ್ಮ ಕೈಲಾದಷ್ಟು ದೇಣಿಗೆ ನೀಡಿದ್ದಾರೆ. ದೊಡ್ಡ ದೊಡ್ಡ ವ್ಯಕ್ತಿಗಳು ದೊಡ್ಡ ಮಟ್ಟದಲ್ಲಿಯೇ ದೇಣಿಗೆ ನೀಡಿದ್ದಾರೆ. ಅನೇಕ ಸಿನಿಮಾ ಸೆಲೆಬ್ರಿಟಿಗಳು ಸಹ ದೇಣಿಗೆ ನೀಡಿದ್ದಾರೆ. ಈ ನಡುವೆ ರಾಕಿಂಗ್ ಸ್ಟಾರ್ ಯಶ್ ರಾಮ ಮಂದಿರ ನಿರ್ಮಾಣಕ್ಕೆ ಅತಿ ದೊಡ್ಡ ಮೊತ್ತದ ಹಣವನ್ನೇ ದೇಣಿಗೆ ನೀಡಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಹೌದು ಪ್ಯಾನ್ ಇಂಡಿಯಾ ಸ್ಟಾರ್ ಬರೋಬ್ಬರಿ 50 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ ಎನ್ನುವ ಸುದ್ದಿ ಕಳೆದ ಎರಡು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಕೆಜಿಎಫ್-2 ಭರ್ಜರಿ ಸಕ್ಸಸ್ ಆದ ಬೆನ್ನಲ್ಲೇ ಈ ರೀತಿಯ ಸುದ್ದಿ ಹಬ್ಬಿರುವುದನ್ನು ನೋಡಿ ಬಹುತೇಕರು ನಿಜವೆಂದುಕೊಂಡಿದ್ದಾರೆ. ರಾಕಿಂಗ್ ಸ್ಟಾರ್ ಮುಂದಿನ ಸಿನಿಮಾ ಯಾವುದು ಎನ್ನುವ ಚರ್ಚೆ ಒಂಡೆದೆ ಜೋರಾಗಿದೆ. ಕೆಜಿಎಫ್2 ಬಳಿಕ ಯಶ್ ಇನ್ನು ಹೊಸ ಸಿನಿಮಾ ಅನೌನ್ಸ್ ಮಾಡಿಲ್ಲ. ಅಭಿಮಾನಿಗಳು ಯಶ್ ಮುಂದಿನ ಸಿನಿಮಾಗಾಗಿ ಕಾದುಕುಳಿತಿದ್ದಾರೆ. ಈ ನಡುವೆ ಹೀಗೊಂದು ಸುದ್ದಿ ಹಬ್ಬಿರುವುದು ಅವರ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ. 

ಅಷ್ಟಕ್ಕೂ ಯಶ್ 50 ಕೋಟಿ ರೂಪಾಯಿ ದೇಣಿಗೆ ನೀಡಿರುವುದು ನಿಜನಾ? ಎಂದು ಕೇಳಿದ್ರೆ ಇದು ಸುಳ್ಳು ಎನ್ನುವುದು ಖಚಿತವಾಗಿದೆ. ಒಂದು ವೇಳೆ ಯಶ್ 50 ಕೋಟಿ ರೂ. ಕೊಟ್ಟಿದ್ರೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿರುತ್ತಿತ್ತು. ಅಂದ್ಮೇಲೆ ಇದು ಕೇವಲ ವದಂತಿ ಅಷ್ಟೆ. ಅಷ್ಟಕ್ಕೂ ಈ ರೀತಿಯ ಸುದ್ದಿ ವೈರಲ್ ಆಗಲು ಕಾರಣವಾಗಿದ್ದು ಯಶ್ ಅವರ ಒಂದು ಫೋಟೋ.  ಪಂಚೆ, ಶರ್ಟ್ ಮತ್ತು ಶಾಲು ಧರಿಸಿದ್ದ ಯಶ್  ಸಾಂಪ್ರದಾಯಿಕ ಉಡುಗೆಯಲ್ಲಿ ದೇವಸ್ಥಾನದಲ್ಲಿ ಕಾಣಿಸಿಕೊಂಡಿದ್ದರು. ಇದನ್ನು ನೋಡಿದ ಒಬ್ಬರು ಯಶ್ ಆಯೋಧ್ಯೆ ರಾಮಮಂದಿರಕ್ಕೆ ಭೇಟಿ ನೀಡಿದ್ದರು. ಆಗ ರಾಮ ಮಂದಿರ ನಿರ್ಮಾಣಕ್ಕೆ 50 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದು ವೈರಲ್ ಆಗಿದೆ. 

ಯಶ್ ಬಾಲ್ಯದ ಫೋಟೋ ವೈರಲ್; ರಾಕಿ ಖದರ್‌ಗೆ ಫ್ಯಾನ್ಸ್ ಫಿದಾ

ಅಸಲಿಗೆ ಆ ಫೋಟೋ ಯಶ್ ತಿರುಪತಿಗೆ ಭೇಟಿ ನೀಡಿದ್ದಾಗಿದೆ. ಹೌದು, ಕೆಜಿಎಫ್ -2 ಬಿಡುಗಡೆ ಸಮಯದಲ್ಲಿ ರಾಕಿಂಗ್ ಸ್ಟಾರ್ ತಿರುಪತಿಗೆ ಭೇಟಿ ನೀಡಿದ್ದರು. ಸಾಂಪ್ರದಾಯಿಕ ಉಡುಗೆಯಲ್ಲಿ ಯಶ್ ಕಾಣಿಸಿಕೊಂಡಿದ್ದರು. ಆ ಫೋಟೋವನ್ನು ಆಯೋಧ್ಯೆಗೆ ಭೇಟಿ ನೀಡಿದ್ದಾರೆ ಎಂದು ಲಿಂಕ್ ಮಾಡಿ 50 ಕೋಟಿ ದೇಣಿಗೆ ನೀಡಿದ್ದಾರೆ ಎಂದು ಸುದ್ದಿಯನ್ನು ಹಬ್ಬಿಸಲಾಗಿದೆ. 

Fact Check: is KGF star Yash donate Rs 50 crore for the construction of Ram Mandir in Ayodhya sgk

ನಂಬರ್ 1 ನಟ ಯಶ್; 'ಕೆಜಿಎಫ್' ಸ್ಟಾರ್ ಬಗ್ಗೆ ಬಾಲಿವುಡ್ ನಟ ಶಾಹಿದ್ ಕಪೂರ್ ಹೇಳಿದ್ದು ಹೀಗೆ

ಕೆಜಿಎಫ್-2 ಸೂಪರ್ ಸಕ್ಸಸ್ ಬಳಿಕ ರಾಕಿಂಗ್ ಸ್ಟಾರ್ ಯಶ್ ಖದರ್ ಬದಲಾಗಿದೆ. ಕೆಜಿಎಫ್-2 ಸಿನಿಮಾ ಭಾರತದ ಅತಿ ಹೆಚ್ಚು ಗಳಿಕೆ ಮಾಡಿರುವ ಸಿನಿಮಾಗಳ ಲಿಸ್ಟ್ ಗೆ ಸೇರಿದೆ. 1300 ಕೋಟಿ ರೂಪಾಯಿ ಬಾಚಿಕೊಂಡಿದೆ ಕೆಜಿಎಫ್-2. ಈ ಸಿನಿಮಾ ಯಶ್ ಅವರನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕರೆದೊಯ್ದಿದೆ. ಭಾರತದ ಟಾಪ್ ಸ್ಟಾರ್ ನಟರ ಸಾಲನಲ್ಲಿ ಯಶ್ ಕೂಡ ಇದ್ದಾರೆ. ಯಶ್ ಜೊತೆ ಸಿನಿಮಾ ಮಾಡಲು ದೊಡ್ಡ ದೊಡ್ಡ ನಿರ್ದೇಶಕರು ತುದಿಗಾಲಿನಲ್ಲಿ ನಿಂತಿದ್ದಾರೆ. ಸದ್ಯ ಮುಂದಿನ ಸಿನಿಮಾ ಯಾವಾಗ ಅನೌನ್ಸ್ ಮಾಡಲಿದ್ದಾರೆ ಎಂದು ಕಾತರದಿಂದ ಕಾಯುತ್ತಿದ್ದಾರೆ. 

Follow Us:
Download App:
  • android
  • ios