Asianet Suvarna News Asianet Suvarna News

ನಂಬರ್ 1 ನಟ ಯಶ್; 'ಕೆಜಿಎಫ್' ಸ್ಟಾರ್ ಬಗ್ಗೆ ಬಾಲಿವುಡ್ ನಟ ಶಾಹಿದ್ ಕಪೂರ್ ಹೇಳಿದ್ದು ಹೀಗೆ

ಬಾಲಿವುಡ್ ಸ್ಟಾರ್ ಶಾಹಿದ್ ಕಪೂರ್ ರಾಕಿಂಗ್ ಸ್ಟಾರ್ ಯಶ್ ಬಗ್ಗೆ ಹೇಳಿರುವ ಹೇಳಿಕೆ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ರಾಕಿ ಭಾಯ್ ಭಾರತದ ಟಾಪ್ ನಟ ಎಂದು ಶಾಹಿದ್ ಕಪೂರ್ ಹೇಳಿದ್ದಾರೆ. 

Bollywood Actor Shahid Kapoor says KGF star Yash is the top actor in the film industry sgk
Author
Bengaluru, First Published Aug 26, 2022, 2:01 PM IST

ಕೆಜಿಎಫ್-2 ಸಿನಿಮಾದ ಸಕ್ಸಸ್ ರಾಕಿಂಗ್ ಸ್ಟಾರ್ ಯಶ್‌ಗೆ ದೊಡ್ಡ ಮಟ್ಟದ ಖ್ಯಾತಿ ತಂದುಕೊಟ್ಟಿದೆ. ಸ್ಯಾಂಡಲು ವುಡ್, ಸೌತ್ ಮಾತ್ರವಲ್ಲದೇ ಬಾಲಿವುಡ್ ಕೂಡ ಯಶ್ ಜಪ ಮಾಡುತ್ತಿದೆ. ಪ್ರೇಕ್ಷಕರು ಮಾತ್ರವಲ್ಲದೇ ಅನೇಕ ಸ್ಟಾರ್ ಕಲಾವಿದರು ಸಹ ರಾಕಿಂಗ್ ಸ್ಟಾರ್ ಯಶ್ ಅವರನ್ನು ಹಾಡಿಹೊಗಳುತ್ತಿದ್ದಾರೆ. ಅಲ್ಲದೆ ನೆಚ್ಚಿನ ಹೀರೋ ಯಾರೆಂದರೆ ಯಶ್ ಹೆಸರು ಹೇಳುತ್ತಿದ್ದಾರೆ. ಇತ್ತೀಚಿಗಷ್ಟೆ ಬಾಲಿವುಡ್ ಸ್ಟಾರ್ ಶಾಹಿದ್ ಕಪೂರ್ ರಾಕಿಂಗ್ ಸ್ಟಾರ್ ಯಶ್ ಬಗ್ಗೆ ಹೇಳಿರುವ ಹೇಳಿಕೆ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಹೌದು, ರಾಕಿ ಭಾಯ್ ಭಾರತದ ಟಾಪ್ ನಟ ಎಂದು ಶಾಹಿದ್ ಕಪೂರ್ ಹೇಳಿದ್ದಾರೆ. ಈ ಮಾತು ಈಗ ಯಶ್ ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ. 

ಜರ್ಸಿ ನಟ ಇತ್ತೀಚಿಗಷ್ಟೆ ಕಾಫಿ ವಿತ್ ಕರಣ್ ಶೋನಲ್ಲಿ ಕಾಣಿಸಿಕೊಂಡಿದ್ದರು. ಬಾಲಿವುಡ್ ಖ್ಯಾತ ನಿರ್ಮಾಪಕ ಮತ್ತು ನಿರ್ದೇಶಕ ಕರಣ್ ಜೋಹರ್ ನಡೆಸಿಕೊಡುವ ಕಫಿ ವಿತ್ ಕರಣ್ ಸೀಸನ್ 7 ಈಗ ಒಟಿಟಿಯಲ್ಲಿ ಪ್ರಸರವಾಗುತ್ತಿದೆ. ಈಗಾಗಲೇ ಅನೇಕ ಸೆಲೆಬ್ರಿಟಿಗಳು ಹಾಜರಾಗಿದ್ದರು.  ಕಳೆದ ಸೀಸನ್‌ನಲ್ಲಿ ಬಾಲಿವುಡ್ ನಟ ಶಾಹಿದ್ ಕಪೂರ್ ಮತ್ತು ನಟಿ ಕಿಯಾರಾ ಅಡ್ವಾನಿ ಕಾಣಿಸಿಕೊಂಡಿದ್ದರು. ಈ ವೇಳೆ ಅನೇಕ ವಿಚಾರಗಳನ್ನು ರಿವೀಲ್ ಮಾಡಿದ್ದಾರೆ. ಈ ಸಮಯದಲ್ಲಿ ರಾಕಿಂಗ್ ಸ್ಟಾರ್ ಯಶ್ ಹೆಸರು ಕೇಳಿಬಂದಿದೆ. ಕರಣ್ ಜೋಹರ್ ನಂಬರ್ ಒನ್ ನಟ ಮತ್ತು ನಟಿ ಯಾರು ಎಂದು ಪ್ರಶ್ನೆ ಕೇಳಿದರು. ಇದಕ್ಕೆ ಉತ್ತರಿಸಿದ ಶಾಹಿದ್ ಕುಪೂರ್ ನಟಿ ಕಿಯಾರಾ ಎಂದು ಹೇಳಿದ್ರೆ ನಟ ರಾಕಿ ಭಾಯ್ ಎಂದು ಹೇಳಿದ್ದಾರೆ. 

ಎಲ್ಲರ ಮನೆ ದೋಸೆನೂ ತೂತೇ; ಕತ್ರಿನಾ - ವಿಕ್ಕಿ ಕೌಶಲ್‌ ಇಬ್ರೂ ಕಿತ್ತಾಡ್ತಾರಂತೆ ಪ್ರತಿದಿನ

ಬಾಲಿವುಡ್ ಸ್ಟಾರ್ ನಟನ ಬಾಯಲ್ಲಿ ಕನ್ನಡದ ನಟ ನಂಬರ್ ಒನ್ ಎಂದು ಹೇಳಿರುವುದು ಅಚ್ಚರಿಯ ಜೊತೆಗೆ ಸಂಭ್ರಮ ತಂದಿದೆ. ಕೆಜಿಎಫ್2 ಸಿನಿಮಾ ಬಳಿಕ ರಾಕಿಂಗ್ ಸ್ಟಾರ್ ಯಶ್ ಹವಾ ಮತ್ತಷ್ಟು ಜೋರಾಗಿದೆ. ಅತೀ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾಗಳ ಲಿಸ್ಟ್‌ಗೆ ಕೆಜಿಎಫ್-2 ಸೇರಿದೆ. ಕನ್ನಡದ ಸಿನಿಮಾವೊಂದು ಈ ಪರಿ ಸದ್ದು ಮಾಡಿರುವುದು ಇಡೀ ಭಾರತೀಯ ಸಿನಿಮಾರಂಗವೇ ಅಚ್ಚರಿ ಪಡುವಂತೆ ಆಗಿದೆ. ಈ ಕೆಜಿಎಫ್-2ನಲ್ಲಿ ಯಶ್ ಜೊತೆಗೆ ಬಾಲಿವುಡ್ ನಟಿ ರವೀನಾ ಟಂಡನ್ ಮತ್ತು ಸಂಜಯ್ ದತ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. 

ಆಲಿಯಾ, ನಾನು ಕುಡಿದು ವಿಕ್ಕಿ ಕೌಶಲ್‌ಗೆ ಫೋನ್ ಮಾಡಿದ್ವಿ; ಇಂಟ್ರಸ್ಟಿಂಗ್ ಸ್ಟೋರಿ ರಿವೀಲ್ ಮಾಡಿದ ಕರಣ್ ಜೋಹರ್

ಯಶ್ ಬಗ್ಗೆ ಸಮಂತಾ - ನಾಗಚೈತನ್ಯ ಹೇಳಿದ್ದೇನು?

ಈ ಮೊದಲು ಕಾಫಿ ವಿತ್ ಕರಣ್ ಶೋನಲ್ಲಿ ಭಾಗಿಯಾಗಿದ್ದ ನಟಿ ಸಮಂತಾ ಕೂಡ ಯಶ್ ಹೆಸರು ಹೇಳಿದ್ದರು. ಜಿಪಿಎಸ್ ‌ಗೆ ಯಾರ ಧ್ವನಿ ಇರಬೇಕು ಎಂದು ಕೇಳಿದ್ದಕ್ಕೆ ಸಮಂತಾ ರಾಕಿಂಗ್ ಸ್ಟಾರ್ ಯಶ್ ಹೆಸರು ಹೇಳಿದ್ದರು. ಇನ್ನು ನಟ ನಾಗ ಚೈತನ್ಯ ಕೂಡ ರಾಕಿಂಗ್ ಸ್ಟಾರ್ ಬಗ್ಗೆ ಮಾತನಾಡಿದ್ದರು. ಹಿಂದಿಯ ಸಂದರ್ಶನವೊಂದರಲ್ಲಿ ನಾಗ ಚೈತನ್ಯಗೆ ಇಷ್ಟದ ಪ್ಯಾನ್ ಇಂಡಿಯಾ ಸ್ಟಾರ್ ಯಾರು ಎನ್ನುವ ಪ್ರಶ್ನೆ ಎದುರಾಗಿತ್ತು. ಇದಕ್ಕೆ ಉತ್ತರ ನೀಡಿದ ನಾಗ ಚೈತನ್ಯ ಕೆಜಿಎಫ್ ಸ್ಟಾರ್ ಯಶ್ ಎಂದು ಹೇಳಿದ್ದರು. ಅನೇಕ ಸ್ಟಾರ್ ಕಲಾವಿದರು ಯಶ್ ಅವರನ್ನು ಹಾಡಿಹೊಗಳುತ್ತಿರುವುದು ಕನ್ನಡಿಗರಿಗೆ ಹಾಗೂ ರಾಕಿಂಗ್ ಅಭಿಮಾನಿಗಳಿಗೆ ಹೆಮ್ಮೆಯ ವಿಚಾರವಾಗಿದೆ.  

Follow Us:
Download App:
  • android
  • ios