Asianet Suvarna News Asianet Suvarna News

ಕಂಗನಾಗೆ ಹೊಸ ಸ್ಟುಡಿಯೋ ಕಟ್ಟೋಕೆ 200 ಕೋಟಿ ಕೊಟ್ರಾ ಅಂಬಾನಿ ದಂಪತಿ..?

ಸೆಪ್ಟೆಂಬರ್ 30ರ ತನಕ ಯಾವುದೇ ತೆರವು ಕಾರ್ಯ ಮಾಡಬಾರದು ಎಂದು ಕೊರೋನಾ ಪ್ರೊಟೋಕಾಲ್ ಮಧ್ಯೆಯೇ ಕಂಗನಾಳ ಬಂಗಲೆ ಕೆಡವಿದ ಬಿಎಂಸಿ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಇದೀಗ ನಟಿಗೆ ಅಂಬಾನಿ ದಂಪತಿ ಸ್ಟುಡಿಯೋ ಕಟ್ಟಿಸ್ಕೊಡ್ತಾರೆ ಎನ್ನೋ ಸುದ್ದಿ ಓಡಾಡ್ತಿದೆ.

Fact Check: Ambanis to help Kangana with Rs 200 crore for new studio
Author
Bangalore, First Published Sep 11, 2020, 6:05 PM IST

ಬಾಲಿವುಡ್ ನಟಿ ಕಂಗನಾ ರಣಾವತ್ ಅವರ ಮುಂಬೈನಲ್ಲಿರುವ ಬಂಗಲೆಯಲ್ಲಿ ಸುಮಾರು 14 ಪ್ರದೇಶಗಳನ್ನು ಗುರುತಿಸಿದ ಬಿಎಂಸಿ ಅವುಗಳನ್ನು ಬುಲ್ಡೋಝರ್ ಮೂಲಕ ಕೆಡವಿತ್ತು. ಶಿವಸೇನೆ ಮತ್ತು ನಡುವಿನ ನಡುವಿನ ತೀವ್ರ ವಾಕ್ಸಮರದ ಮಧ್ಯೆಯೇ ಇಂತಹದೊಂದು ಘಟನೆ ನಡೆದಿದೆ.

ಸೆಪ್ಟೆಂಬರ್ 30ರ ತನಕ ಯಾವುದೇ ತೆರವು ಕಾರ್ಯ ಮಾಡಬಾರದು ಎಂದು ಕೊರೋನಾ ಪ್ರೊಟೋಕಾಲ್ ಮಧ್ಯೆಯೇ ಕಂಗನಾಳ ಬಂಗಲೆ ಕೆಡವಿದ ಬಿಎಂಸಿ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಇದೀಗ ನಟಿಗೆ ಅಂಬಾನಿ ದಂಪತಿ ಸ್ಟುಡಿಯೋ ಕಟ್ಟಿಸ್ಕೊಡ್ತಾರೆ ಎನ್ನೋ ಸುದ್ದಿ ಓಡಾಡ್ತಿದೆ.

ಈ ಸುದ್ದಿ ಫೇಸ್‌ಬುಕ್‌ನಲ್ಲಿ ನೋಡಲು ಇಲ್ಲಿ ಕ್ಲಿಕ್ಕಿಸಿ

ಉದ್ಧವ್ ಸರ್ಕಾರಕ್ಕೆ ದೊಡ್ಡ ಮುಜುಗರ, ದೋಸ್ತಿಗಳ ವಿರುದ್ಧವೇ ಪವಾರ್ ಗುಟುರು!

ಕಂಗನಾ ಬಂಗಲೆ ಕೆಡವಿದ ಬಿಎಂಸಿ ನಡೆಯನ್ನು ಬಹಳಷ್ಟು ಜನ ಖಂಡಿಸಿದ್ದಾರೆ. ಕಟ್ಟಡ ಧ್ವಂಸ ಮಾಡಿದ್ದು ಖಂಡನಾರ್ಹ ಎಂದು ಬಹಳಷ್ಟು ಜನ ಕಂಗನಾ ಬೆಂಬಲಕ್ಕೆ ನಿಂತಿದ್ದಾರೆ.

Fact Check: Ambanis to help Kangana with Rs 200 crore for new studio

ಸೋಷಿಯಲ್ ಮೀಡಿಯಾದಲ್ಲಿಯೂ ನಟಿಗೆ ಭಾರೀ ಬೆಂಬಲ ಸಿಕ್ಕಿದ್ದು, ಈ ನಡುವೆ ಉದ್ಯಮಿ ಅಂಬಾನಿ ದಂಪತಿ ಕಂಗನಾಗೆ ಹೊಸ ಸ್ಟುಡಿಯೋ ಕಟ್ಟೋದಕ್ಕೆ 200 ಕೋಟಿ ರೂಪಾಯಿ ಕೊಡಲಿದ್ದಾರೆ ಎಂಬ ಸುದ್ದಿ ಕೇಳಿ ಬಂದಿದೆ.

ನಟಿ ಕಂಗನಾಳ ಮುಂಬೈ ಆಫೀಸ್ ಮೇಲೆ ಬುಲ್ಡೋಝರ್ ಹತ್ತಿಸಿದ ಮಹಾರಾಷ್ಟ್ರ ಸರ್ಕಾರ

ಕಂಗನಾ ಬಂಗಲೆಯಲ್ಲಿ ಮನೆ, ಕಚೇರಿ ಎರಡೂ ಇತ್ತು ಎನ್ನಲಾಗಿದೆ. ಕಂಗನಾಳ ಸ್ಟುಡಿಯೋ ನಿರ್ಮಿಸಲು ಅಂಬಾನಿ ಸಂಪತಿ 200 ಕೋಟಿ ಕೊಡಲಿದ್ದಾರೆ ಅನ್ನೋ ಸುದ್ದಿ ಭಾರೀ ವೈರಲ್ ಆಗಿದೆ.

Fact Check: Ambanis to help Kangana with Rs 200 crore for new studio

ಆದರೆ ಅಸಲಿಯಲ್ಲಿ ಇಂತಹ ಯಾವ ಭರವಸೆಯನ್ನೂ ಅಂಬಾನಿ ಕುಟುಂಬ ನೀಡಿಲ್ಲ. ಇದು ಸುಳ್ಳು ಸುದ್ದಿ ಎಂಬುದು ಬಯಲಾಗಿದೆ. ಈ ಸುದ್ದಿ ಈಗಾಗಲೇ ಫೇಸ್‌ಬುಕ್‌ನಲ್ಲಿ ವೈರಲ್ ಆಗಿದೆ.

Fact Check: Ambanis to help Kangana with Rs 200 crore for new studio

ಒಮ್ಮೆ ಹಾಕಿದ ಚಪ್ಪಲ್ ಮತ್ತೊಮ್ಮೆ ಹಾಕಲ್ಲ, ಬೀಟ್‌ರೋಟ್‌ ಜ್ಯೂಸ್ ಮಿಸ್ ಮಾಡಲ್ಲ: ಇವು ನೀತಾ ಅಂಬಾನಿ ವಿಚಿತ್ರ ಅಭ್ಯಾಸಗಳು..!

ಈ ಬಗ್ಗೆ ಅಧಿಕೃತ ಯಾವುದೇ ವರದಿಯೂ ಬಂದಿಲ್ಲ. ನೀತಾ ಅಂಬಾನಿ ಕಂಗನಾಗೆ ಸ್ಟುಡಿಯೋ ಕಟ್ಟುತ್ತಾರೆಂಬ ಬಗ್ಗೆ ಸಣ್ಣ ಸೂಚನೆಯೂ ಸಿಕ್ಕಿಲ್ಲ. ಈ ಸುದ್ದಿಯನ್ನು ಅಂಬಾನಿ ಕಂಪನಿಯ ರಿಲಯನ್ಸ್ ಕಚೇರಿ ನಿರಾಕರಿಸಿದೆ. ಹಾಗೆಯೇ ಇದು ಸುಳ್ಳು ಸುದ್ದಿ ಎಂಬುದನ್ನೂ ದೃಢಪಡಿಸಿದೆ. ಈ ಬಗ್ಗೆ ಯಾವ ಪ್ರಮುಖ ಸುದ್ದಿ ವಾಹಿನಿಗಳೂ ವರದಿ ಮಾಡಿಲ್ಲ. ಹಾಗಾಗಿ ಇದು ಸುಳ್ಳು ಸುದ್ದಿ ಎಂದು ತಿಳಿದು ಬಂದಿದೆ.

-ವೈರಲ್ ಚೆಕ್

Follow Us:
Download App:
  • android
  • ios