ಬಾಲಿವುಡ್ ನಟಿ ಕಂಗನಾ ರಣಾವತ್ ಮುಂಬೈಗೆ ಹೊರಟು ನಿಂತ ಬೆನ್ನಲ್ಲೇ ಮುಂಬೈನ ಆಕೆಯ ಕಚೇರಿಯನ್ನು ಬಿಎಂಸಿ ಕೆಡವಿ ಹಾಕಿದೆ. ಬಾಲಿವುಡ್ ನಟಿ ಮುಂಬೈಯನ್ನು ಪಾಕಿಸ್ತಾನಕ್ಕೆ ಹೋಲಿಸಿದ್ದಾರೆ.

ಮಹಾರಾಷ್ಟ್ರದ ಆಡಳಿತ ಪಕ್ಷ ಶಿವಸೇನೆ ಜೊತೆಗಿನ ನಟಿಯ ವಾಕ್ಸಮರ ಮುಂದುವರಿದ ಬೆನ್ನಲೇ ಅಕ್ರಮ ಕಟ್ಟಡ ಎಂಬ ಆರೋಪದಡಿ ನಟಿಯ ಕಚೇರಿಯನ್ನು ನೆಲಸಮಗೊಳಿಸಲಾಗಿದೆ.

ನಟಿ ಕಂಗನಾಗೆ ‘ವೈ’ ಶ್ರೇಣಿ ಭದ್ರತೆ;ದಿನವಿಡೀ 10 ಸಿಆರ್‌ಪಿಎಫ್‌ ಯೋಧರ ಕಾವಲು!

ನಟಿ ಮುಂಬೈಗೆ ಹೊರಟ ಅದೇ ಹೊತ್ತಲ್ಲಿ ಆಕೆಯ ಕಚೇರಿ ನಾಶ ಮಾಡಲಾಗಿದೆ. ಶಿವಸೇನೆ ಜೊತೆಗಿನ ವಾಕ್ಸಮರಕ್ಕಾಗಿ ಬಿಎಂಸಿಯನ್ನು ನಿಯಂತ್ರಿಸುವ ಮಹಾರಾಷ್ಟ್ರ ಸರ್ಕಾರ ಆಕೆಯನ್ನು ಟಾರ್ಗೆಟ್ ಮಾಡುತ್ತಿರುವುದಾಗಿ ನಟಿ ಹೇಳಿದ್ದಾರೆ. 

ನನ್ನದು ತಪ್ಪಿಲ್ಲ. ನನ್ನ ಮುಂಬೈ ಪಾಕಿಸ್ತಾನ ಎಂಬುದನ್ನು ಶತ್ರುಗಳು ಪದೇ ಪದೇ ಸಾಬೀತು ಮಾಡುತ್ತಿದ್ದಾರೆ ಎಂದು ಕಂಗನಾ ಟ್ವೀಟ್ ಮಾಡಿದ್ದಾರೆ. ಪಾಕಿಸ್ತಾನ, ಬಾಬರ್ ಮತ್ತು ಆರ್ಮಿ ಎಂದು ಒಂದಷ್ಟು ಫೋಟೋಗಳನ್ನು ನಟಿ ಹಂಚಿಕೊಂಡಿದ್ದಾರೆ.

ಕಂಗನಾ ಪೋಸ್ಟರ್‌ಗೆ ಚಪ್ಪಲಿ ಎಸೆದ ಶಿವಸೇನೆ..! ಬಿಜೆಪಿ ವಕ್ತಾರ ಹೇಳಿದ್ದಿಷ್ಟು

ನಟಿಯ ವಕೀಲರು ಈಗಾಗಲೇ ಮುಂಬೈ ಹೈಕೋರ್ಟ್‌ಗೆ ತೆರಳಿ ತೆರವು ಕಾರ್ಯಾಚರಣೆ ತಡೆಯಲು ಪ್ರಯತ್ನಿಸಿದ್ದಾರೆ. ಕೊರೋನಾದಿಂದ ಸೆ.30ರ ತನಕ ಯಾವುದೇ ತೆರವು ಕಾರ್ಯಾಚರಣೆ ನಡೆಸಲು ತಡೆ ಇದೆ.

ನನ್ನ ಮನೆಯಲ್ಲಿ ಅಕ್ರಮ ಕಟ್ಟಡವಿಲ್ಲ. ಕೊರೋನಾದಿಂದ ಸೆ.30ರ ತನಕ ತೆರವು ಕಾರ್ಯಾಚರಣೆಯನ್ನು ಸರ್ಕಾರ ತಡೆದಿದೆ. ಬುಲ್ಲಿವುಡ್ ನೋಡಿ, ಫಾಸಿಸಂ ಎಂದರೆ ಹೀಗಿರುತ್ತದೆ ಎಂದು ಬರೆದಿದ್ದಾರೆ.

'ಮುಂಬೈಗೆ ಬಂದಿಳಿಯುತ್ತಿದ್ದೇನೆ, ಧಮ್ ಇದ್ರೆ ತಡೀರಿ'

ಮುಂಬೈನ ಪಾಲಿ ಹಿಲ್ಸ್‌ನ ಕಂಗನಾ ಆಫೀಸ್‌ನಲ್ಲಿ ಒಂದು ಟಾಯ್ಲೆಟ್ ಸೇರಿದಂತೆ 14 ಕಡೆ ನಿಯಮ ಉಲ್ಲಂಘಿಸಲಾಗಿದೆ ಎಂದು ಬಿಎಂಸಿ ಗುರುತು ಮಾಡಿದೆ. ನಾನು ಮುಂಬೈಗೆ ಹೊರಟಿರುವಾಗ ಮಹಾರಾಷ್ಟ್ರ ಸರ್ಕಾರ ನನ್ನ ಆಫೀಸಿಗೆ ಗೂಂಡಾಗಳನ್ನು ಕಳಿಸಿದೆ. ಮುಂದುವರಿಸಿ.. ಮಹಾರಾಷ್ಟ್ರ ಹೆಮ್ಮೆಗೆ ರಕ್ತ ಕೊಡುವುದಾಗಿ ನಾನು ಭರವಸೆ ನೀಡಿದ್ದೇನೆ, ಇದು ಎಲ್ಲವನ್ನೂ ತೆಗೆದುಕೊಳ್ಳುವುದಿಲ್ಲ ನಾನು ಎದೆಗುಂದುವುದಿಲ್ಲ ಎಂದು ಕಂಗನಾ ಇಂದು ಬೆಳಿಗ್ಗೆ ಟ್ವೀಟ್ ಮಾಡಿದ್ದಾರೆ.