ಬಿಲಿಯನೇರ್ ಇಂಡಿಯನ್ ಬ್ಯುಸಿನೆಸ್ ಮ್ಯಾನ್ ಮುಖೇಶ್ ಅಂಬಾನಿ ಪತ್ನಿ ನೀತಾ ಅಂಬಾನಿಗೆ ಕೆಲವು ಡಿಫರೆಂಟ್ ಅಭ್ಯಾಸಗಳಿವೆ. ಹೀಗೂ ಇರ್ತಾರ ಅನ್ಸಿದ್ರೂ ಇದು ಸತ್ಯ.

ನಿತಾ ಅವರ ಕೆಲವು ಅಭ್ಯಾಸಗಳು ಫ್ಯಾನ್ಸ್‌ಗೆ ಗೊತ್ತಿಲ್ಲ. ನಿತಾ ತಮ್ಮ ಡಯೆಟ್ ಬಗ್ಗೆ ಭಾರೀ ಎಚ್ಚರಿಕೆಯಿಂದ ಇರ್ತಾರೆ. ಮೂವರು ಮಕ್ಕಳಾದ ಮೇಲೂ ಬ್ಯೂಟಿಫುಲ್ ಆಗಿರೋಕೆ ನೀತಾ ಡಯೆಟ್ ಫಾಲೋ ಮಾಡ್ತಾರೆ.

ವಿಶ್ವದ 9ನೇ ಸಿರಿವಂತ ಮುಕೇಶ್ ಪತ್ನಿ ನೀತಾ ತಿನ್ನೋದು ಇದನ್ನಂತೆ!

ಡ್ರೈ ಫ್ರುಟ್ಸ್‌ ತಿಂದು ತಮ್ಮ ದಿನವನ್ನು ಆರಂಭಿಸೋ ನೀತಾ ಅಂಬಾನಿ ಬೆಳಗಿನ ಉಪಹಾರಕ್ಕೆ ಎಗ್‌ ವೈಟ್ ಓಮ್ಲೆಟ್ ತಿಂತಾರೆ. ಮಧ್ಯಾಹ್ನದ ಊಟಕ್ಕೆ ಹಸಿರು ತರಕಾರಿ ಜೊತೆಗೆ ಸೂಪ್ ಕೂಡಾ ಇರುತ್ತೆ.

ರಾತ್ರಿ ಊಟಕ್ಕೆ ನೀತಾ ಅವರು ಇನ್ನಷ್ಟು ಹೆಚ್ಚು ಹಸಿರು ತರಕಾರಿ ಮತ್ತು ಸೂಪ್ ಕುಡಿಯುತ್ತಾರೆ. ಸ್ನ್ಯಾಕ್ಸ್ ಸಮಯದಲ್ಲಿಯೂ ಪ್ರುಟ್ಸ್, ವೆಜೆಟೇಬಲ್ಸ್ ತಿನ್ನೋದು ವಿಶೇಷ.

ಸಿರಿವಂತ ಮುಖೇಶ್‌ ಅಂಬಾನಿ- ಬಡವಿ ನೀತಾ ಅಂಬಾನಿ ಲವ್‌ ಸ್ಟೋರಿ

ಹಣ್ಣು, ತರಕಾರಿ ಫ್ಲೇವರ್ ಇರುವ ಡಿಟೋಕ್ಸ್ ವಾಟರ್‌ ಕುಡಿಯುತ್ತಾರೆ. ಇದರಲ್ಲೂ 5 ಬಗೆಯ ಡಿಟೋಕ್ಸ್ ವಾಟರ್‌ನ್ನು ಅವರು ಕುಡಿಯುತ್ತಾರೆ. ಹಾಗೆಯೇ ಬೀಟ್‌ರೋಟ್‌ ಜ್ಯೂಸ್‌ನ್ನು ಜಾಸ್ತಿ ಕುಡಿಯುತ್ತಾರೆ. 

ಬ್ಯುಸಿ ಇರುವ ನೀತಾ ಅಂಬಾನಿ ಯಾಮವನ್ನಂತೂ ತಪ್ಪಿಸುವುದೇ ಇಲ್ಲ. ವ್ಯಾಯಾಮಕ್ಕೆ ಅವರಿಗೆಲ್ಲಿದೆ ಸಮಯ ಎಂದು ಕೇಳಿದರೂ ತಪ್ಪದೆ ವ್ಯಾಯಾಮ ಮಾಡ್ತಾರೆ ನೀತಾ. ಯೋಗ, ಈಜುವುದು, ಕ್ಲಾಸಿಕಲ್ ಡ್ಯಾನ್ಸ್‌ ಕೂಡಾ ತಪ್ಪಿಸುವುದಿಲ್ಲ.