Extramarital Affair: ಮದುವೆ ಆದ್ಮೇಲೆ ಪರಪುರುಷನ ಜೊತೆ ಸಂಬಂಧ ತಪ್ಪಲ್ಲವಂತೆ!
ಮಲಯಾಳಂ ನಟಿ ಶೀಲು ಅಬ್ರಹಾಂ ವಿವಾಹೇತರ ಸಂಬಂಧಗಳ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಕೆಲವು ಸಂದರ್ಭಗಳಲ್ಲಿ ವಿವಾಹದಾಚೆಗಿನ ಸಂಬಂಧವನ್ನು ಸಮರ್ಥಿಸಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಈ ಹೇಳಿಕೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ವಿವಾಹದ ನಂತರ ಅಕ್ರಮ ಸಂಬಂಧ ಇಟ್ಟುಕೊಳ್ಳುವುದು ತಪ್ಪಲ್ಲ. ಯಾರು ಹಾಗೆ ಮಾಡ್ತಾರೋ ಅವರ ದೃಷ್ಟಿಯಿಂದ ನಿಂತು ನೋಡಿದಾಗ ಅದು ಸರಿಯೋ ತಪ್ಪೋ ಅಂತ ಅರ್ಥವಾಗುತ್ತೆ ಎಂದಾಕೆಯ ಹೆಸರು ಶೀಲು ಅಬ್ರಹಾಂ (Sheelu Abraham). ಈಕೆ ಮಲಯಾಳಂ ನಟಿ. ಕೆಲವು ಸಂದರ್ಭಗಳಲ್ಲಿ ವ್ಯಕ್ತಿಗಳು ವಿವಾಹದಾಚೆಯ ಸಂಬಂಧಕ್ಕೆ ಕೈ ಚಾಚಬಹುದು. ಅಂಥ ಸಂಬಂಧಗಳನ್ನು ದೂಷಿಸಬಾರದು ಎಂದಿದ್ದಾಳೆ ಆಕೆ. ಸದ್ಯ ಆಕೆಯ ಮಾತು ಭಾರೀ ಚರ್ಚೆಗೆ ಕಾರಣವಾಗ್ತಿದೆ. ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಆಕೆ ಈ ಮಾತನಾಡಿದ್ದಾಳೆ.
ʼವೈವಾಹಿಕ ಜೀವನದಲ್ಲಿನ ದೋಷಗಳು ವಿವಾಹೇತರ ಸಂಬಂಧಗಳಿಗೆ (Extramarital affairs) ಕಾರಣ ಆಗಬಹುದು. ನೀವು ಅದನ್ನು ದೂಷಿಸಲು ಸಾಧ್ಯವಿಲ್ಲ. ಇದು ವೈಯಕ್ತಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದೆ. ಅತ್ಯಾಚಾರ ತಪ್ಪು. ಆದರೆ ಲೈಂಗಿಕ ಸಂಬಂಧ ಇಬ್ಬರ ಒಪ್ಪಿಗೆಯಿಂದ ನಡೆದಿದ್ದರೆ ಏನೂ ತಪ್ಪಿಲ್ಲ. ಆದರೆ, ಇಷ್ಟಪಟ್ಟು ಹಲವಾರು ಬಾರಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಂಡ ನಂತರ ಅತ್ಯಾಚಾರದ ದೂರು ನೀಡುವುದು ಸರಿಯಲ್ಲʼ ಎನ್ನುವುದೂ ಆಕೆಯ ಮಾತು. ಇಂಥ ಪ್ರಕರಣಗಳಲ್ಲಿ ನ್ಯಾಯಾಲಯಗಳು ಸರಿಯಾಗಿ ವಿವೇಚನೆಯಿಂದ ವರ್ತಿಸಿ ತೀರ್ಪು ನೀಡಬೇಕಾಗುತ್ತದೆ ಅನ್ನುತ್ತಾಳೆ ಶೀಲು.
ಫಿಲಂ ಇಂಡಸ್ಟಿಯ ಒಳಗಿನ ಸಂಬಂಧಗಳ ಬಗ್ಗೆ ಸಾರ್ವಜನಿಕರಿಗೆ ನೇರವಾಗಿ ತಿಳಿದಿರೋಲ್ಲ. ಅವರಿಗೆ ಆಗಾಗ ಗಾಸಿಪ್‌ಗಳ ಮೂಲಕ ತಿಳಿಯಬಹುದು. ಹಲವು ವರ್ಷಗಳಿಂದ ಒಬ್ಬರಿಗೊಬ್ಬರು ಆತ್ಮೀಯ ಸಂಬಂಧ ಹೊಂದಿರುವ ಜನರೇ ಇದ್ದಕ್ಕಿದ್ದಂತೆ ಅವರ ವಿರುದ್ಧ ಕೇಸ್ ಹಾಕುವುದು ನೋಡಬಹುದು. ಅದನ್ನು ನೋಡಿದಾಗ ಆಶ್ಚರ್ಯ ಆಗಬಹುದು. ಆದರೆ ಇದು ಸಂಬಂಧದ ದುರ್ಬಳಕೆ. ಸಿನಿಮಾ ಇಂಡಸ್ಟ್ರಿಯಲ್ಲಿ ಇಂಥ ಹಲವು ಸಂಬಂಧಗಳು ನಡೆಯುತ್ತವೆ. ಹಲವು ನಟಿಯರು ತಮಗೆ ಅವಕಾಶಗಳಿಗಾಗಿ ನಿರ್ದೇಶಕರು, ನಿರ್ಮಾಪಕರ ಜೊತೆಗೆ ಮಲಗುವುದೂ ಇದೆ. ಹಾಗೇ ನಿರ್ದೇಶಕರು, ನಿರ್ಮಾಪಕರು ನಟಿಯರನ್ನು ಬಳಸಿಕೊಳ್ಳುವುದೂ ಇವೆ. ಆದರೆ ಇದೆಲ್ಲ ಸಾಮಾನ್ಯ ಸಂಗತಿ ಎಂದು ತಿಳಿಯಬಾರದು. ಇಂಥ ಘಟನೆಗಳು ವಿರಳ ಎನ್ನುತ್ತಾಳೆ ಆಕೆ.
ವಿವಾಹದಾಚೆಗಿನ ಸಂಬಂಧಗಳಲ್ಲಿ, ಪುರುಷರು ಎಷ್ಟೇ ಸಂಬಂಧಗಳನ್ನು ಹೊಂದಿದ್ದರೂ ಹೇಗೋ ತಪ್ಪಿಸಿಕೊಳ್ಳುತ್ತಾರೆ. ಆದರೆ ಮಹಿಳೆಯರು ಯಾವಾಗಲೂ ಇಂಥ ವಿಷಯಗಳಲ್ಲಿ ಜಾಗರೂಕರಾಗಿರಬೇಕು. ವಿವಾಹೇತರ ಸಂಬಂಧಗಳಿಗೆ ಹೋಗುವವರನ್ನು ನಾನು ದೂಷಿಸುವುದಿಲ್ಲ. ಏಕೆಂದರೆ ಅವರ ಕಡೆಯಿಂದ ಯಾವುದೋ ಒಂದು ಕಾರಣ, ಒತ್ತಡ ಇರುತ್ತದೆ. ನಾವು ಹೊರಗೆ ನಿಂತು ಅವರ ಸ್ಥಿತಿಯನ್ನು ನೋಡಿದರೆ ಅವರದು ನಮಗೆ ತಪ್ಪೆಂದು ಕಾಣುತ್ತದೆ. ಆದರೆ ನಮಗೆ ಕಾಣುವುದು ನಿಜವಲ್ಲ. ಸತ್ಯ ಇನ್ನೇನೋ ಇರುತ್ತದೆ ಎಂದಿದ್ದಾಳೆ ಆಕೆ.
ನಾನಿನ್ನು ಫೆಸ್ಟಿವಲ್ ಟೈಪ್ ಸಿನಿಮಾ ಮಾಡಲ್ಲ: ನಟ ರಿಷಬ್ ಶೆಟ್ಟಿ
ಮಲಯಾಳಂ ನಿರ್ದೇಶಕ ಒಮರ್ ಲುಲು ಎಂಬಾತನ ಮೇಲಿರುವ ರೇಪ್ ಕೇಸ್ ಬಗ್ಗೆ ನಟಿ ಪ್ರತಿಕ್ರಿಯಿಸುತ್ತಾ ಈ ಮಾತೆಲ್ಲಾ ಹೇಳಿದ್ದಾಳೆ. ʼಒಮರ್ ಲುಲು ಒಳ್ಳೆಯವನೋ ಅಲ್ಲವೋ ಎಂದು ಯಾರೂ ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಪುರುಷರು ಮತ್ತು ಮಹಿಳೆಯರ ನಡುವಿನ ಸಂಬಂಧಗಳು ಇಂದು ಸಾಮಾನ್ಯವಾಗಿವೆ. ಒಂದು ಕಾಲದಲ್ಲಿ ಪ್ರೀತಿಯಲ್ಲಿದ್ದವರು ಸಂಬಂಧ ಹಾಳಾದಾಗ ದ್ವೇಷದಿಂದ ಇಂಥಾ ಆರೋಪ ಮಾಡುತ್ತಾರೆʼ ಎಂದಿದ್ದಾಳೆ. ಒಮರ್ ಲುಲು ನಿರ್ದೇಶನದ ʼಬ್ಯಾಡ್ ಬಾಯ್ಸ್' ಚಿತ್ರವನ್ನು ಶೀಲು ನಿರ್ಮಿಸಿದ್ದು, ಓಣಂ ವೇಳೆಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ.
ಶೀಲು ಅಬ್ರಹಾಂ ಮಲಯಾಳಂ ನಟಿ. ʼವೀಪಿಂಗ್ ಬಾಯ್ʼನಲ್ಲಿ ನಟನೆ ಆರಂಭಿಸಿದವಳು. ʼಶೀ ಟ್ಯಾಕ್ಸಿʼ ಚಲನಚಿತ್ರ ಆಕೆಗೆ ಹೆಚ್ಚಿನ ಖ್ಯಾತಿ ತಂದುಕೊಟ್ಟಿತು. ಅಬ್ರಾಮ್ ಮೂವೀಸ್ ಬ್ಯಾನರ್ ಅಡಿಯಲ್ಲಿ ಆಕೆಯ ಪತಿ ಅಬ್ರಹಾಂ ಮ್ಯಾಥ್ಯೂ ನಿರ್ಮಿಸಿದ ಸ್ಟಾರ್ ಮತ್ತು ವಿಧಿ ಮುಂತಾದ ಚಲನಚಿತ್ರಗಳಲ್ಲಿ ಆಕೆ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದಳು.
ಮೇರು ಕಲಾವಿದ ನರಸಿಂಹರಾಜು ಕೊರಗುತ್ತ ಕುಗ್ಗಿಹೋಗಿ ಇಹಲೋಕ ತ್ಯಜಿಸಿದ್ದು ಈ ಕಾರಣಕ್ಕೆ..!