Asianet Suvarna News Asianet Suvarna News

ನಾನಿನ್ನು ಫೆಸ್ಟಿವಲ್‌ ಟೈಪ್ ಸಿನಿಮಾ ಮಾಡಲ್ಲ: ನಟ ರಿಷಬ್ ಶೆಟ್ಟಿ

ರಿಷಬ್ ನಿರ್ಮಿಸಿದ ನಾಲ್ಕು ಚಿತ್ರಗಳ ಪೈಕಿ ಲಾಫಿಂಗ್ ಬುದ್ಧ ಮಾತ್ರ ಮನರಂಜನಾ ಚಿತ್ರವಾಗಿದ್ದು, ಮಿಕ್ಕ ಮೂರನ್ನು ಫೆಸ್ಟಿವಲ್ ಸಿನಿಮಾ ಎಂದು ಅವರೇ ಕರೆದಿದ್ದರು.
 

I will not make a festival type movie Says Actor Rishab Shetty gvd
Author
First Published Aug 19, 2024, 10:54 AM IST | Last Updated Aug 19, 2024, 10:54 AM IST

ಚಿತ್ರರಂಗಕ್ಕೆ ಕಾಲಿಡುತ್ತಿರುವ ಹೊಸಬರ ಬೆನ್ನಿಗೆ ನಿಂತಿದ್ದ ರಿಷಬ್ ಶೆಟ್ಟಿ, ಅವರಿಗೆ ಚಿತ್ರ ನಿರ್ದೇಶನಕ್ಕೆ ತಮ್ಮದೇ ಸಂಸ್ಥೆಯಲ್ಲಿ ಅವಕಾಶ ಕೊಟ್ಟಿದ್ದರು. ಈ ಯೋಜನೆಯಲ್ಲಿ ಕಳೆದ ತಿಂಗಳು ಜೈಶಂಕರ್ ಆರ್ಯರ್ ನಿರ್ದೇಶನದ ಶಿವಮ್ಮ ಬಿಡುಗಡೆಯಾಗಿತ್ತು. ಆ ಸಂದರ್ಭದಲ್ಲೇ ರಿಷಬ್‌, ಓಟಿಟಿಗಳು ಕನ್ನಡ ಚಿತ್ರಗಳನ್ನು ಕಡೆಗಣಿಸುವ ಬಗ್ಗೆ ಸಿಟ್ಟಾಗಿದ್ದರು.

ಈಗ ರಿಷಬ್ ನಿರ್ಮಾಣದ ಮೂರು ಚಿತ್ರಗಳು ಬಿಡುಗಡೆಗೆ ಕಾದಿವೆ. ಪೆದ್ರೋ, ಲಾಫಿಂಗ್ ಬುದ್ಧ ಮತ್ತು ವಾಘಾಚಿಪಾಣಿ ಚಿತ್ರಗಳು ಒಂದರ ಹಿಂದೊಂದರಂತೆ ತೆರೆಕಾಣಲಿವೆ ಎಂದು ರಿಷಬ್ ಹೇಳಿದ್ದರು. ರಿಷಬ್ ನಿರ್ಮಿಸಿದ ನಾಲ್ಕು ಚಿತ್ರಗಳ ಪೈಕಿ ಲಾಫಿಂಗ್ ಬುದ್ಧ ಮಾತ್ರ ಮನರಂಜನಾ ಚಿತ್ರವಾಗಿದ್ದು, ಮಿಕ್ಕ ಮೂರನ್ನು ಫೆಸ್ಟಿವಲ್ ಸಿನಿಮಾ ಎಂದು ಅವರೇ ಕರೆದಿದ್ದರು.

ಕನ್ನಡ ಚಿತ್ರರಂಗದ ಉಳಿವು, ಬೆಳವಣಿಗೆಯಲ್ಲಿ ಮಾಧ್ಯಮಗಳ ಪಾತ್ರ ದೊಡ್ಡದು: ನಟ ರಿಷಬ್ ಶೆಟ್ಟಿ

ಫೆಸ್ಚಿವಲ್ ಸಿನಿಮಾಗಳು ಯಾವ್ಯಾವುದೋ ದೇಶದಲ್ಲಿ ಪ್ರದರ್ಶನ ಕಂಡು, ಪ್ರಶಸ್ತಿ ಪಡೆಯುತ್ತವೆ. ಆದರೆ ಅವುಗಳಿಗೆ ನಮ್ಮಲ್ಲೇ ಗೌರವ ಇಲ್ಲ, ಪ್ರೇಕ್ಷಕರೂ ನೋಡುವುದಿಲ್ಲ, ಓಟಿಟಿಯಲ್ಲೂ ಜಾಗ ಸಿಗುವುದಿಲ್ಲ. ಹೀಗಾಗಿ ಸ್ವಲ್ಪ ದಿನಗಳ ಮಟ್ಟಿಗೆ ಅಂಥ ಚಿತ್ರಗಳ ನಿರ್ಮಾಣ ನಿಧಾನ ಮಾಡುವುದಾಗಿ ರಿಷಬ್ ಹೇಳಿದ್ದಾರೆ.

Latest Videos
Follow Us:
Download App:
  • android
  • ios