Asianet Suvarna News Asianet Suvarna News

ಮೇರು ಕಲಾವಿದ ನರಸಿಂಹರಾಜು ಕೊರಗುತ್ತ ಕುಗ್ಗಿಹೋಗಿ ಇಹಲೋಕ ತ್ಯಜಿಸಿದ್ದು ಈ ಕಾರಣಕ್ಕೆ..!

ನಟ ನರಸಿಂಹರಾಜು ಅವರ ಕಾಮಿಡಿ ಟೈಮಿಂಗ್ ಹಾಗು ಪಂಚ್ ಡೈಲಾಗ್‌ ಹೇಳುವ ರೀತಿ ಸಿನಿಮಾ ಪ್ರೇಕ್ಷಕರನ್ನು ಅಕ್ಷರಶಃ ಮೋಡಿ ಮಾಡಿತ್ತು. ನಟ ನರಸಿಂಹರಾಜು ಅವರಿಗಾಗಿಯೇ ಸಿನಿಮಾ ನೋಡುವ, ಅವರ ಅಭಿಮಾನಿಯಾಗಿ ಅವರನ್ನು ಆರಾಧಿಸುವ ಬಹಳಷ್ಟು ಪ್ರೇಕ್ಷಕರು...

Kannada actor Narasimharaju died from his elder son shrikanth death sadness srb
Author
First Published Aug 19, 2024, 12:23 PM IST | Last Updated Aug 19, 2024, 12:24 PM IST

ಕನ್ನಡ ಚಿತ್ರರಂಗದಲ್ಲಿ ಅಚ್ಚಳಿಯದ ಛಾಪು ಮೂಡಿಸಿದವರು ನಟ ನರಸಿಂಹರಾಜು. ಹಾಸ್ಯ ನಟರು ಎಂದರೆ ನರಸಿಂಹರಾಜು ತರ ಇರಬೇಕು ಎಂಬಂತೆ ನಟಿಸಿ, ಬಾಳಿ ಬದುಕಿದವರು ನಟ ನರಸಿಂಹರಾಜು. ನರಸಿಂಹರಾಜು ಅವರ ಮುಖ, ಮೈಕಟ್ಟು ಯಾವುದೂ ಕೂಡ ನಟರಾಗಲು ಯೋಗ್ಯ ಎಂಬಂತೆ ಇರಲಿಲ್ಲ ಎಂಬುದು ಹಲವರ ನಂಬಿಕೆಯಾಗಿತ್ತು. ಸ್ವತಃ ನರಸಿಂಹರಾಜು ಅವರಿಗೂ ಕೂಡ ತಾವು ನೋಡಲು ಚೆನ್ನಾಗಿಲ್ಲ ಎಂಬ ಭಾವನೆ ಇತ್ತಂತೆ. 

ಆದರೆ, ಅವರ ನ್ಯೂನತೆಗಳನ್ನೇ ಪ್ಲಸ್ ಮಾಡಿಕೊಂಡು ಬಹಳಷ್ಟು ಎತ್ತರಕ್ಕೆ ಬೆಳೆದವರು ನಟ ನರಸಿಂಹರಾಜು. ಅವರ ಉಬ್ಬುಹಲ್ಲು, ಸಣಕಲು ಶರೀರ ಅವುಗಳನ್ನೇ ಬಂಡವಾಳ ಮಾಡಿಕೊಂಡು ಅವರು ಬೆಳೆದ ರೀತಿ ನಿಜವಾಗಿಯೂ ಅಚ್ಚರಿಯೇ ಸೈ. ಅಂದಿನ ಸ್ಟಾರ್ ಹೀರೋಗಳನ್ನೂ ಸಹ ಜನಪ್ರಿಯತೆಯಲ್ಲಿ ನಟ ನರಸಿಂಹರಾಜು ಮೀರಿಸಿದ್ದರು. ಕೇವಲ ಜನಪ್ರಿಯತೆಯಲ್ಲಿ ಮಾತ್ರವಲ್ಲ, ಸಂಭಾವನೆಯಲ್ಲಿ ಕೂಡ ನರಸಿಂಹರಾಜು ಅವರು ಅಂದಿನ ಎಲ್ಲಾ ನಟರನ್ನೂ ಮೀರಿಸಿದ್ದರು ಎನ್ನಲಾಗಿದೆ. 

ಶಂಕರ್‌ ನಾಗ್-ಅರುಂಧತಿ ನಾಗ್ ಒಮ್ಮೆ ಮದುವೆ ಆಗದಿರಲು ನಿರ್ಧರಿಸಿದ್ದು ಯಾಕೆ? ಕಾರಣ ಏನಾಗಿತ್ತು..?

ನಟ ನರಸಿಂಹರಾಜು ಅವರು ತಮ್ಮ ತಂದೆಯಂತೆಯೇ ತುಂಬಾ ಕೋಪಿಷ್ಠರಾಗಿದ್ದರು ಎನ್ನಲಾಗಿದೆ. ಅಂದಿನ ಕಾಲದ ಹೆಚ್ಚಿನ ನಟರಂತೆ ನರಸಿಂಹರಾಜು ಅವರೂ ಸಹ ನಾಟಕದ ಹಿನ್ನೆಲೆಯಂದಲೇ ಬಂದವರು. ಐತಿಹಾಸಿಕ, ಪೌರಾಣಿಕ ಹಾಗೂ ಭಕ್ತಿ ಪ್ರಧಾನ ವಸ್ತುವಿಷಯಗಳ ನಾಟಕಗಳೇ ಅಂದು ಮೂಡಿ ಬರುತ್ತಿದ್ದವು ಎಂಬುದು ಗೊತ್ತೇ ಇದೆ. ನಟ ನರಸಿಂಹರಾಜು ಅವರು ಕೂಡ ಅದೇ ರೀತಿಯ ಅಭಿನಯದಲ್ಲಿ ಪಳಗಿದ್ದವರು. 

ಅವರು ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟ ಶುರುವಿನಲ್ಲಿ ಪೌರಾಣಿಕ, ಐತಿಹಾಸಿಕ ಪಾತ್ರಗಳಲ್ಲೇ ಹೆಚ್ಚು ಕಾಣಿಸಿಕೊಂಡರು. ಆದರೆ, ಸಿನಿಮಾ ಯಾವಾಗ ಸಾಮಾಜಿಕ ವಸ್ತುವಿಷಯಗಳಿಗೆ ತೆರೆದುಕೊಂಡಿತೋ ಆಗ, ನಟ ನರಸಿಂಹರಾಜು ಅವರು ಕೂಡ ಅಂಥ ಸಿನಿಮಾಗಳಲ್ಲಿ ಹೆಚ್ಚು ಹೆಚ್ಚು ಕಾಣಿಸಿಕೊಳ್ಳತೊಡಗಿದರು. ಅವರು ತಮ್ಮ ನಟನೆ, ಹಾವಭಾವಗಳನ್ನು ವೃತ್ತಿಗೆ ತಕ್ಕಂತೆ ಸುಲಭ ಹಾಗೂ ವೇಗವಾಗಿ ಬದಲಾಯಿಸಿಕೊಂಡು ಬೆಳೆದ ರೀತಿಯೇ ಅಚ್ಚರಿ ಎನ್ನಬಹುದು.

ನಟ ನರಸಿಂಹರಾಜು ಅವರ ಕಾಮಿಡಿ ಟೈಮಿಂಗ್ ಹಾಗು ಪಂಚ್ ಡೈಲಾಗ್‌ ಹೇಳುವ ರೀತಿ ಸಿನಿಮಾ ಪ್ರೇಕ್ಷಕರನ್ನು ಅಕ್ಷರಶಃ ಮೋಡಿ ಮಾಡಿತ್ತು. ನಟ ನರಸಿಂಹರಾಜು ಅವರಿಗಾಗಿಯೇ ಸಿನಿಮಾ ನೋಡುವ, ಅವರ ಅಭಿಮಾನಿಯಾಗಿ ಅವರನ್ನು ಆರಾಧಿಸುವ ಬಹಳಷ್ಟು ಪ್ರೇಕ್ಷಕರು ಅಂದು ಇದ್ದರು ಎಂಬುದು ದೊಡ್ಡ ರಹಸ್ಯವೇನಲ್ಲ. ಅಂದಿನ ಕಾಲದಲ್ಲೇ ನಟ ನರಸಿಂಹರಾಜು ಅವರು ಟ್ಯಾಕ್ಸ್ ಕಟ್ಟುವ ಕಲಾವಿದರು ಎಂಬ ಹೆಗ್ಗಳಿಕೆ ಪಡೆದಿದ್ದರು ಎಂಬುದು ಸಣ್ಣ ಸಂಗತಿಯೇನೂ ಅಲ್ಲ. 

ಆದರೆ, ವಿಧಿಯಾಟ ಅವರ ಜೀವನವನ್ನೂ ಕೂಡ ಬಿಡಲಿಲ್ಲ ಎನ್ನಬಹುದು. ನಟ ನರಸಿಂಹರಾಜು ಅವರಿಗೆ ತಮ್ಮ ಹಿರಿಯ ಮಗ ಶ್ರೀಕಾಂತ್ ಅವರೆಂದರೆ ತುಂಬಾ ಇಷ್ಟವಾಗಿತ್ತು. ಆದರೆ, ಅಪಘಾತವೊಂದರಲ್ಲಿ ಅವರು ತಮ್ಮ ಹಿರಿಯ ಮಗ ಶ್ರೀಕಾಂತ್ ಅವರನ್ನು ಕಳೆದುಕೊಂಡರು. ಅಂದಿನಿಂದ ನಟ ನರಸಿಂಹರಾಜು ಅವರು ಬಹಳಷ್ಟು ಡಲ್ ಆಗಿದ್ದರು ಎನ್ನಲಾಗಿದೆ. ಮಗನ ಕೊರಗಿನಲ್ಲೇ ದಿನಗಳನ್ನು ಕಳೆಯುತ್ತಿದ್ದ ನರಸಿಂಹರಾಜು ಅವರು ಮಗ ತೀರಿಕೊಂಡ 8 ವರ್ಷಗಳ ಬಳಿಕ ಹಾರ್ಟ್‌ ಅಟ್ಯಾಕ್‌ನಿಂದ ಇಹಲೋಕ ತ್ಯಜಿಸಿದರು. 

ಹೃದಯಗೀತೆ ಚಿತ್ರ ಶುರುವಾಗಿದ್ದು ಯಾಕೆ, ನಟ ವಿಷ್ಣುವರ್ಧನ್ ಸ್ವೀಕರಿಸಿದ್ದ ಚಾಲೆಂಜ್ ಎಂಥದ್ದು?

ನಟ ನರಸಿಂಹರಾಜು ಅವರು ತೀರಕೊಂಡಾಗ ಅವರ ವಯಸ್ಸು ಕೇವಲ 55. ಆದರೆ, ಅಷ್ಟರಲ್ಲಾಗಲೇ ಅವರು ಬಹಳಷ್ಟು ನಾಟಕಗಳು ಹಾಗು ಸಿನಿಮಾಗಳಲ್ಲಿ ನಟಿಸಿ ಲೆಕ್ಕವಿಲ್ಲದಷ್ಟು ಪ್ರಶಸ್ತಿ-ಪುರಸ್ಕಾರಗಳನ್ನು ಪಡೆದಿದ್ದರು. ಅವರು ಗಳಿಸಿರುವ ಜನಪ್ರಿಯತೆಯಂತೂ ಜಗತ್ತು ಇರುವವರೆಗೂ ಅಳಿಸಲಾಗದ ದಾಖಲೆ ಎಂದೇ ಹೇಳಬಹುದು. ಒಟ್ಟಿನಲ್ಲಿ, ಪ್ರೀತಿಯ ಮಗನನ್ನು ಕಳೆದುಕೊಂಡು ಭಾರೀ ನೋವು ಅನುಭವಿಸುತ್ತ ಅದೇ ಕೊರಗಿನಲ್ಲಿ ಅವರು ಪ್ರಾಣ ತ್ಯಜಿಸಿದರು ಎನ್ನವುದು ತುಂಬಾ ದುಃಖದ ಸಂಗತಿ!

Latest Videos
Follow Us:
Download App:
  • android
  • ios