ನೀಲಿ ಚಿತ್ರ ತಂದಿಟ್ಟ ಫಜೀತಿ! ಶಿಲ್ಪಾ ಶೆಟ್ಟಿ ದಂಪತಿಗೆ ಶಾಕ್ ಕೊಟ್ಟ ಇ.ಡಿ- ಮನೆ, ಕಚೇರಿ ಮೇಲೆ ದಾಳಿ!
ನೀಲಿ ಚಿತ್ರ ತಂದಿಟ್ಟ ಫಜೀತಿ! ಶಿಲ್ಪಾ ಪತಿಗೆ ಮತ್ತೊಮ್ಮೆ ಶಾಕ್ ಕೊಟ್ಟ ಇ.ಡಿ- ಮನೆ, ಕಚೇರಿ ಮೇಲೆ ದಾಳಿ ಮಾಡಲಾಗಿದೆ. ಏನಿದರ ಹಿನ್ನೆಲೆ?
ಅಶ್ಲೀಲ ಸಿನಿಮಾ ನಿರ್ಮಾಣ ಮತ್ತು ಹಂಚಿಕೆ ಪ್ರಕರಣ ಎದುರಿಸುತ್ತಿರುವ ನಟಿ ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್ ಕುಂದ್ರಾಗೆ ಮತ್ತೊಮ್ಮೆ ಶಾಕ್ ಉಂಟಾಗಿದೆ. ಅವರ ಮನೆ ಮತ್ತು ಕಚೇರಿ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ಮಾಡಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ ಕುಂದ್ರಾ ಹಾಗೂ ಇನ್ನೂ ಕೆಲವರ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದೆ. ಅಷ್ಟಕ್ಕೂ, 2021ರಲ್ಲಿ ಶಿಲ್ಪಾ ಬಾಳಲ್ಲಿ ಬಿರುಗಾಳಿ ಬಂದಿದ್ದು ಎಲ್ಲರಿಗೂ ತಿಳಿದಿರುವ ವಿಷಯವೇ. ಇವರ ಪತಿ, ರಾಜ್ ಕುಂದ್ರಾ ನೀಲಿ ಚಿತ್ರ ಕೇಸ್ನಲ್ಲಿ ಸಿಲುಕಿ ಬಿದ್ದಿದ್ದರು. ನಟಿಯರನ್ನು ಮತ್ತು ಮಾಡೆಲ್ಗಳನ್ನು ಬಳಸಿಕೊಂಡು ರಾಜ್ ಕುಂದ್ರಾ ಅವರು ನೀಲಿ ಚಿತ್ರಗಳನ್ನು ತಯಾರಿಸುತ್ತಿದ್ದರು ಎಂಬುದಕ್ಕೆ ಪೊಲೀಸರು ಹಲವು ಸಾಕ್ಷ್ಯಗಳನ್ನು ಒದಗಿಸಿದ್ದರು. ಬ್ಲೂ ಫಿಲ್ಮ್ ಆರೋಪದ ಮೇಲೆ ಅವರು 63 ದಿನಗಳವರೆಗೆ ಜೈಲಿನಲ್ಲಿ ಇದ್ದರು. ನೀಲಿ ಚಿತ್ರಗಳ ನಿರ್ಮಾಣ ದಂಧೆಯಲ್ಲಿ ತೊಡಗಿದ್ದ ಆರೋಪವನ್ನು ಇಂದಿಗೂ ರಾಜ್ ಕುಂದ್ರಾ ಇಂದಿಗೂ ಎದುರಿಸುತ್ತಿದ್ದಾರೆ. ‘ನಾನು ಮಾಡಿದ್ದು ನೀಲಿ ಚಿತ್ರ ಅಲ್ಲ, ಕಾಮೋದ್ರೇಕದ ಸಿನಿಮಾ ಮಾತ್ರ’ ಎಂದು ರಾಜ್ ಕುಂದ್ರಾ ಹೇಳಿಕೆ ನೀಡಿದ್ದರು. ತಾವು ಬ್ಲೂಫಿಲ್ಮ್ ಮಾಡುವುದನ್ನು ಅವರು ಒಪ್ಪಿಕೊಂಡಿರಲಿಲ್ಲ. ಆದರೆ ಈ ಪ್ರಕರಣದಲ್ಲಿ ಹಲವು ನಟಿಯರ ಜೊತೆ ಖುದ್ದು ಶಿಲ್ಪಾ ಶೆಟ್ಟಿಯವರ (Shilpa Shetty) ಹೆಸರೂ ಥಳಕು ಹಾಕಿಕೊಂಡಿತ್ತು.
ಆದರೆ ಕೊನೆಗೆ ರಾಜ್ ಅಶ್ಲೀಲ ದಂಧೆಯಲ್ಲಿ ತೊಡಗಿರುವ ಮೂಲಕ ಅಕ್ರಮ ಹಣ ವರ್ಗಾವಣೆ (ಮನಿ ಲಾಂಡರಿಂಗ್) ಕೇಸ್ನಲ್ಲಿ ಸಿಲುಕಿರುವ ರಾಜ್ ಕುಂದ್ರಾ ಹಾಗೂ ಅಶ್ಲೀಲ ದಂಧೆಗೆ ಯಾವುದೇ ನೇರ ಸಂಪರ್ಕ ಇರುವುದು ಇದುವರೆಗೆ ತಿಳಿದುಬಂದಿಲ್ಲ ಎಂದು ತನಿಖಾಧಿಕಾರಿಗಳು ಹೇಳಿದ್ದರು. ಬ್ರಿಟನ್ ಮೂಲದ ಕೆನ್ರಿನ್ ಕಂಪನಿಯ ವಿವಿಧ ಬ್ಯಾಂಕ್ ವಹಿವಾಟುಗಳಿಗೆ ಸಂಬಂಧಿಸಿದ ಹಣದ ಜಾಡುಗಳ ಮೇಲೆ ಇಡಿ ಗಮನಹರಿಸುತ್ತಿದ್ದು, ಸದ್ಯ ಯಾವುದೇ ನೇರ ವಹಿವಾಟು ನಡೆದಿರುವುದು ತಿಳಿದುಬಂದಿಲ್ಲ ಎಂದಿದ್ದರು. ಈ ಹಿನ್ನೆಲೆಯಲ್ಲಿ, ಪೋರ್ನ್ ವಿಡಿಯೋ ಕೇಸ್ನಲ್ಲಿ ರಾಜ್ ಕುಂದ್ರಾ ಅವರು ನೇರವಾಗಿ ಪಾಲ್ಗೊಂಡಿಲ್ಲ ಎನ್ನುವುದು ಸದ್ಯದ ಮಟ್ಟಿಗೆ ತಿಳಿದುಬಂದಿದ್ದು, ಇದರ ತನಿಖೆ ಮುಂದುವರೆಸಿದ್ದರು. ಇದೀಗ ಅದೇ ಪ್ರಕರಣಕ್ಕೆ ಸಂಬಂಧಿಸಿದಂತೆ, ರಾಜ್ ಕುಂದ್ರಾ ಅವರ ಮುಂಬೈನ ಮನೆ ಮತ್ತು ಕಚೇರಿ ಮೇಲೆ ಇಡಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಅಪ್ಪ ನಮ್ಮನ್ನು ಸುಟ್ಟುಹಾಕಲು ನೋಡಿದ್ದ, ಈಗೇನಾದ್ರೂ ವಾಪಸ್ ಬಂದ್ರೆ... ತಂದೆ ಬಗ್ಗೆ ರಿತು ಸಿಂಗ್ ಕಿಡಿಯ ನುಡಿ