ಅಪ್ಪ ನಮ್ಮನ್ನು ಸುಟ್ಟುಹಾಕಲು ನೋಡಿದ್ದ, ಈಗೇನಾದ್ರೂ ವಾಪಸ್ ಬಂದ್ರೆ... ತಂದೆ ಬಗ್ಗೆ ರಿತು ಸಿಂಗ್ ಕಿಡಿಯ ನುಡಿ
ತಮ್ಮನ್ನು ಬೀದಿಪಾಲು ಮಾಡಿರುವ ತಂದೆಯ ಬಗ್ಗೆ ಸೀತಾರಾಮ ಸೀರಿಯಲ್ ಸಿಹಿ ಅರ್ಥಾತ್ ರಿತು ಸಿಂಗ್ ಹೇಳಿದ್ದೇನು? ಅವಳ ಬಾಯಲ್ಲೇ ಕೇಳಿ...
ಆಗ ಸಿಹಿಯಾಗಿ, ಈಗ ಸುಬ್ಬಿಯಾಗಿ ಡಬಲ್ ರೋಲ್‌ನಲ್ಲಿ ಮಿಂಚಲು ರೆಡಿಯಾಗಿದ್ದಾಳೆ ಸೀತಾರಾಮ ಸೀರಿಯಲ್ ರಿತು ಸಿಂಗ್. ಧಾರಾವಾಹಿಯಲ್ಲಿ ಇಬ್ಬರು ಅಪ್ಪಂದಿರ ನಡುವೆ ನಲುಗಿ ಹೋಗಿದ್ದಳು ಸಿಹಿ. ರಿಯಲ್ ಅಪ್ಪ ಒಂದು ಕಡೆ, ಸಾಕು ಅಪ್ಪ ಇನ್ನೊಂದು ಕಡೆ , ರಾಮ್ ಮತ್ತು ಶ್ಯಾಮ್ ನಡುವೆ ಸಿಲುಕಿದ್ದ ಸಿಹಿಗೆ ಕೊನೆಗೂ ಸಾಕು ಅಪ್ಪನ ಮಡಿಲು ಸೇರುವ ಭಾಗ್ಯ ಸಿಕ್ಕಿತ್ತು. ಈ ಖುಷಿಯ ನಡುವೆಯೇ, ಅವಳಿಗೆ ಅಪಘಾತವಾಗಿ ಸಾಯುವ ರೀತಿ ತೋರಿಸಲಾಗಿದೆ. ಸೀರಿಯಲ್ ಕಥೆ ಏನೇ ಇರಲಿ, ಇಲ್ಲಿ ಇಬ್ಬರು ಅಪ್ಪಂದಿರು ಮಗುವಿಗಾಗಿ ಹಾತೊರೆದಿದ್ದರೆ, ರಿಯಲ್ ಲೈಫ್‌ನಲ್ಲಿ ಮಾತ್ರ ರಿತು ಸಿಂಗ್ ಕಥೆ ನೋವಿನಿಂದ ಕೂಡಿದ್ದು. ಹುಟ್ಟಿಸಿದ ಅಪ್ಪ ನಡುರಸ್ತೆಯಲ್ಲಿಯೇ ಬಿಟ್ಟು ಹೋದ. ರಿತುಗೆ ಕೇವಲ ಆರು ತಿಂಗಳು ಇರುವಾಗಲೇ ಬಿಟ್ಟು ಹೋಗಿದ್ದಾರೆ ಈಕೆಯ ಅಪ್ಪ. ರಿತು ಮತ್ತು ಹಿರಿಯ ಮಗನನ್ನು ತಾಯಿಯೇ ಒಂಟಿಯಾಗಿ ಸಾಕಿ, ಈ ಮಟ್ಟಿಗೆ ತಂದು ನಿಲ್ಲಿಸಿದ್ದಾರೆ. ಈ ಬಗ್ಗೆ ಕೆಲವು ರಿಯಾಲಿಟಿ ಷೋಗಳಲ್ಲಿ ತಾಯಿ ಹೇಳಿಕೊಂಡಿದ್ದು ಇದೆ.
ಆದರೆ ಇದೇ ಮೊದಲ ಬಾರಿಗೆ ರಿತು ಸಿಂಗ್ ತನ್ನ ತಂದೆಯ ಬಗ್ಗೆ ಮಾತನಾಡಿದ್ದಾಳೆ. ಹುಬ್ಳಿ ಮ್ಯಾಂಗೋ ಎನ್ನುವ ಯೂಟ್ಯೂಬ್ ಚಾನೆಲ್‌ನಲ್ಲಿ ರಿತು ಮತ್ತು ಆಕೆಯ ತಾಯಿ ಗೀತಾ ಕೆಲವು ವಿಷಯಗಳ ಬಗ್ಗೆ ಹೇಳಿದ್ದು, ಇದರಲ್ಲಿ ತಾಯಿಗಿಂತಲೂ ಹೆಚ್ಚಾಗಿ ಅಪ್ಪನ ಮೇಲೆ ಕಿಡಿ ಕಾರಿದ್ದಾಳೆ ರಿತು. ಅಪ್ಪ ಮಧ್ಯೆ ಆಗಾಗ ಬರುತ್ತಿದ್ದುದು ನೆನಪಿದೆ. ಅವನು ಕುಡುಕ, ನಮ್ಮ ಊಟವನ್ನೆಲ್ಲಾ ಕಸಿದುಕೊಳ್ತಿದ್ದ. ಲಾಕ್ ಮಾಡಿ ನಾನು ಮತ್ತು ಅಣ್ಣ ಊಟ ಮಾಡುತ್ತಿದ್ವಿ. ಬಹಳ ಸಲ ಅಣ್ಣನಿಗೆ ಹೊಡೆದಿದ್ದಾನೆ. ನಾನು ತುಂಬಾ ಚಿಕ್ಕವಳು ಇದ್ನಲ್ಲಾ, ಆದರೂ ಬಿಡುತ್ತಿರಲಿಲ್ಲ. ನನ್ನನ್ನು ಹೊಡೆಯಲು ಬಂದಾಗಲೆಲ್ಲಾ ಅಣ್ಣ ಬಂದು ತಡೀದಿದ್ದ ಎಂದು ರಿತು ಸಿಂಗ್ ಹೇಳಿದ್ದಾಳೆ.
ಸೀರಿಯಲ್ ಸೆಟ್‌ನಲ್ಲಿ ಎಲ್ಲರನ್ನೂ ಸುಸ್ತು ಮಾಡೋ ಸಿಹಿಯ ತುಂಟಾಟ ನೋಡೋದೇ ಚೆಂದ!
ನನಗೆ ಅಪ್ಪ ಅಂದ್ರೆ ಆಗಲ್ಲ, ಈಗ ನಾನು ಫೇಮಸ್ ಆಗಿರೋದನ್ನು ನೋಡಿ ಏನಾದ್ರೂ ಬಂದ್ರೆ ನಾನುಸುಮ್ಮನೇ ಬಿಡಲ್ಲ. ಆಗ ನನಗಿನ್ನೂ ನೆನಪಿದೆ. ಅಣ್ಣನ ಪುಸ್ತಕ ಎಲ್ಲಾ ರಸ್ತೆ ಮೇಲೆ ಹಾಕಿ ಸುಟ್ಟುಹಾಕಲು ನೋಡಿದ್ದ. ನನ್ನ ಮತ್ತು ಅಣ್ಣನನ್ನು ಸಾಯಿಸಲು ನೋಡಿದ್ದ. ಪಕ್ಕದ ಮನೆ ಆಂಟಿ ಬಂದು ತಳ್ಳಿದ್ರು. ಅವನೇನಾದ್ರೂ ಈಗ ಬಂದ್ರೆ ಗೆಟ್‌ಔಟ್ ಅಂತೇನೆ. ನನಗೆ ನನ್ನ ಅಪ್ಪ ಬೇಡ. ಅಮ್ಮನೇ ಎಲ್ಲಾ. ಅಂಥ ಅಪ್ಪ ಯಾರಿಗೂ ಬೇಡ ಎಂದು ರಿತು ಸಿಂಗ್ ಈ ವಿಡಿಯೋದಲ್ಲಿ ಹೇಳಿದ್ದಾಳೆ.
ಇನ್ನು ರಿತು ಸಿಂಗ್ ಕುರಿತು ಹೇಳುವುದಾದರೆ, ಈಕೆ ನೇಪಾಳ ಮೂಲದವಳು. ತಾಯಿ ಜೊತೆಗೆ ಬೆಂಗಳೂರಿನಲ್ಲಿ ನೆಲೆಸಿದ್ದಾಳೆ. ಈ ಹಿಂದೆ ರಿಯಾಲಿಟಿ ಷೋನಲ್ಲಿ ಇವರ ಅಮ್ಮ ಗೀತಾ, ನಾನು ಇವಳಿಗೆ ಅಮ್ಮ ಅಲ್ಲ, ಇವಳೇ ನನ್ನ ಅಮ್ಮ ಎಂದುಹೇಳಿದ್ದು. ನಾನು ಊಟ ಮಾಡಿಲ್ಲ ಅಂದ್ರೆ ರಿತು ಯಾಕೆ ಊಟ ಮಾಡಿಲ್ಲ ಅಂತ ಕೇಳ್ತಾಳೆ. ಮಕ್ಕಳನ್ನು ತಾಯಿ ಕೇರ್ ಮಾಡಬೇಕು, ಆದರೆ ನನ್ನ ಮಗಳು ನನ್ನನ್ನು ಕೇರ್ ಮಾಡ್ತಾಳೆ, ನನಗೆ ಕನ್ನಡ ಬರೋದಿಲ್ಲ. ನೇಪಾಳದಲ್ಲಿ ಕೂಡ ಜೀ ಕನ್ನಡ ವಾಹಿನಿ ನೋಡ್ತಾರೆ. ಅವರು ರಿತು ನೋಡಿ ಹೊಗಳ್ತಾರೆ. ರಿತು ತಂದೆಗೂ ಕೂಡ ಮಗಳು ಏನು ಅಂತ ಗೊತ್ತಾಗಬೇಕು ಅಂತ ಜನರು ಹೇಳ್ತಾರೆ ಗೀತಾ ಹೇಳಿದ್ದರು.
ಸಿಹಿ ಸ್ಕೂಲ್‌ಗೆ ಎಷ್ಟು ದಿನ ಹೋಗ್ತಾಳೆ? ರಜೆ ಇದ್ದಾಗ ಹೋಗೋದೆಲ್ಲಿ? ಅವಳದ್ದೇ ಕ್ಯೂಟ್ ಮಾತಲ್ಲಿ ಕೇಳಿ