Asianet Suvarna News Asianet Suvarna News

ಐಶ್ವರ್ಯ ರೈ ಕಣ್ಣುಗಳನ್ನು ಹೊಗಳಿದ ಸಚಿವರಿಗೆ ಸಂಕಷ್ಟ: ಮಹಿಳಾ ಆಯೋಗದಿಂದ ನೋಟಿಸ್‌

ಮಹಾರಾಷ್ಟ್ರ ಮಹಿಳಾ ಆಯೋಗದ ಮುಖ್ಯಸ್ಥೆ ರೂಪಾಲಿ ಚಕಂಕರ್ ಅವರು ರಾಜ್ಯ ಬುಡಕಟ್ಟು ಸಚಿವ ವಿಜಯ್‌ಕುಮಾರ್ ಗವಿತ್ ಅವರಿಗೆ ನೋಟಿಸ್‌ ನೀಡಿದೆ.

eating fish will make eyes as beautiful as those of aishwarya rai says maharashtra minister women s panel seeks explanation ash
Author
First Published Aug 22, 2023, 2:50 PM IST

ಮುಂಬೈ (ಆಗಸ್ಟ್‌ 22, 2023): ನಟಿ ಐಶ್ವರ್ಯಾ ರೈ ಅವರ ಕಣ್ಣುಗಳಂತೆ ಕಣ್ಣುಗಳನ್ನು ಪಡೆಯಲು ಪ್ರತಿದಿನ ಮೀನು ತಿನ್ನಿ ಎಂದು ಮಹಾರಾಷ್ಟ್ರದ ಬಿಜೆಪಿ ಸಚಿವರೊಬ್ಬರುಹೇಳಿಕೆ ನೀಡುವ ಮೂಲಕ ವಿವಾದ ಹುಟ್ಟು ಹಾಕಿದ್ದಾರೆ. ಅರ ಹೇಳಿಕೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ಈಗ ಸಚಿವರಿಗೆ ಅವರ ಹೇಳಿಕೆ ಸಂಕಷ್ಟ ತಂದೊಡ್ಡಿದೆ. ಈ ಹೇಳಿಕೆ ಬಗ್ಗೆ ವಿವರಣೆ ನೀಡಲು ಮಹಿಳಾ ಆಯೋಗ ನೋಟಿಸ್‌ ನೀಡಿದೆ.

ಮಹಾರಾಷ್ಟ್ರ ಮಹಿಳಾ ಆಯೋಗದ ಮುಖ್ಯಸ್ಥೆ ರೂಪಾಲಿ ಚಕಂಕರ್ ಅವರು ರಾಜ್ಯ ಬುಡಕಟ್ಟು ಸಚಿವ ವಿಜಯ್‌ಕುಮಾರ್ ಗವಿತ್ ಅವರಿಗೆ ನೋಟಿಸ್‌ ನೀಡಿದೆ. ಅಲ್ಲದೆ, ಗವಿತ್ ಅವರ ಹೇಳಿಕೆ ಬಗ್ಗೆ ಮೂರು ದಿನಗಳಲ್ಲಿ ವಿವರಣೆಯನ್ನು ಸಲ್ಲಿಸುವಂತೆಯೂ ಸೂಚಿಸಲಾಗಿದೆ. 

ಇದನ್ನು ಓದಿ: ಐಶ್ವರ್ಯಾ ರೈನಂತೆ ಕಣ್ಣುಗಳನ್ನ ಪಡೆಯಲು ನೀವು ಹೀಗೆ ಮಾಡಿ: ಸಚಿವರ ಐಡಿಯಾ ಸಿಕ್ಕಾಪಟ್ಟೆ ವೈರಲ್..!

"ನೀವು ಮಹಿಳೆಯರ ವಿರುದ್ಧ ಅವಹೇಳನಕಾರಿ ಕಾಮೆಂಟ್‌ಗಳನ್ನು ಮಾಡಿದ ವಿಡಿಯೋಗಳು ವೈರಲ್ ಆಗಿವೆ. ನಿಮ್ಮ ಹೇಳಿಕೆಗಳಿಗೆ ಸಾರ್ವಜನಿಕವಾಗಿ ಹಲವು ಪ್ರತಿಕ್ರಿಯೆಗಳು ಬಂದಿವೆ. ಜನಪ್ರತಿನಿಧಿಗಳು ತಮ್ಮ ಹೇಳಿಕೆಗಳ ಬಗ್ಗೆ ಜಾಗರೂಕರಾಗಿರಬೇಕು, ಏಕೆಂದರೆ ಇದು ಸಮಾಜದ ಮೇಲೆ ದೀರ್ಘಕಾಲೀನ ಪ್ರಭಾವವನ್ನು ಉಂಟುಮಾಡುತ್ತದೆ" ಎಂದು ರೂಪಾಲಿ ಚಕಂಕರ್ ತಮ್ಮ ಪತ್ರದಲ್ಲಿ ಬರೆದಿದ್ದು, ಅವರು ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪ್ಲೋಡ್ ಮಾಡಿದ್ದಾರೆ.

ಅಲ್ಲದೆ, ಈ ಸಂಬಂಧ "ನೀವು ರಾಜ್ಯ ಮಹಿಳಾ ಆಯೋಗದ ಮುಂದೆ ನಿಮ್ಮ ಸ್ಪಷ್ಟೀಕರಣವನ್ನು ಮೂರು ದಿನಗಳಲ್ಲಿ ಸಲ್ಲಿಸಬೇಕು. ಒಂದು ರಾಜ್ಯದ ಪ್ರಗತಿಯನ್ನು ಮಹಿಳೆಯರು ಮತ್ತು ಅವರ ಸುರಕ್ಷತೆಯ ಮೇಲೆ ವ್ಯಾಖ್ಯಾನಿಸಲಾಗಿದೆ" ಎಂದೂ ಅವರು ಪತ್ರದಲ್ಲಿ ಬರೆದಿದ್ದಾರೆ.

ಇದನ್ನೂ ಓದಿ: Gadar - 2 ಗೂ ಮುನ್ನ ಅಮೀಷಾ ಪಟೇಲ್‌ ನೀಡಿದ್ದ ಹಿಟ್‌ ಚಿತ್ರಗಳ ವಿವರ ಹೀಗಿದೆ..

ಉತ್ತರ ಮಹಾರಾಷ್ಟ್ರದ ನಂದೂರ್‌ಬಾರ್ ಜಿಲ್ಲೆಯಲ್ಲಿ ಸಾರ್ವಜನಿಕ ಸಮಾರಂಭವೊಂದರಲ್ಲಿ ಮಾತನಾಡಿದ್ದ ರಾಜ್ಯ ಬುಡಕಟ್ಟು ಸಚಿವ ವಿಜಯ್‌ಕುಮಾರ್ ಗವಿತ್ ಅವರು ಮಾಡಿದ ಹೇಳಿಕೆಗಳ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. "ಪ್ರತಿನಿತ್ಯ ಮೀನು ಸೇವಿಸುವ ಜನರು ನಯವಾದ ಚರ್ಮವನ್ನು ಅಭಿವೃದ್ಧಿಪಡಿಸುತ್ತಾರೆ ಮತ್ತು ಅವರ ಕಣ್ಣುಗಳು ಹೊಳೆಯುತ್ತವೆ, ಯಾರಾದರೂ ನಿಮ್ಮನ್ನು ನೋಡಿದರೆ, ವ್ಯಕ್ತಿಯು (ನಿಮ್ಮ ಕಡೆಗೆ) ಆಕರ್ಷಿತರಾಗುತ್ತಾರೆ ಎಂದಿದ್ದರು. 

ಅಲ್ಲದೆ, ಐಶ್ವರ್ಯಾ ರೈ ಮಂಗಳೂರಿನ ಸಮುದ್ರ ತೀರದಲ್ಲಿ ವಾಸಿಸುತ್ತಿದ್ರು.. ಅವರು ಪ್ರತಿದಿನ ಮೀನು ಸೇವಿಸುತ್ತಿದ್ದರು. ಅವರ ಕಣ್ಣುಗಳನ್ನು ನೀವು ನೋಡಿದ್ದೀರಾ? ಅವರಂತೆಯೇ ನಿಮಗೂ ಕಣ್ಣುಗಳು ಇರುತ್ತವೆ" ಎಂದು ಮಹಾರಾಷ್ಟ್ರ ಸಚಿವರು ಹೇಳಿಕೆ ನೀಡಿದ್ದು, ಅದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. 

ಇದನ್ನೂ ಓದಿ: ಬ್ರೇಕಪ್‌ ಆಗ್ತಿದ್ದಾರಾ ಬಾಲಿವುಡ್‌ ಹಾಟ್‌ ನಟಿ ಮಲೈಕಾ ಅರೋರಾ - ಅರ್ಜುನ್ ಕಪೂರ್? 5 ವರ್ಷದ ಸಂಬಂಧಕ್ಕೆ ಫುಲ್‌ಸ್ಟಾಪ್?

Follow Us:
Download App:
  • android
  • ios