Gadar - 2 ಗೂ ಮುನ್ನ ಅಮೀಷಾ ಪಟೇಲ್ ನೀಡಿದ್ದ ಹಿಟ್ ಚಿತ್ರಗಳ ವಿವರ ಹೀಗಿದೆ..
ಬಾಲಿವುಡ್ ನಟಿ ಅಮೀಷಾ ಪಟೇಲ್ ಗದರ್ - 2 ಚಿತ್ರದ ಮೂಲಕ ಮತ್ತೆ ಚಿತ್ರರಂಗದಲ್ಲಿ ಕಾಣಿಸಿಕೊಂಡಿದ್ದಾರೆ. ಇಷ್ಟು ದಿನ ಸಾಮಾಜಿಕ ಜಾಲತಾಣದಲ್ಲಿ ಮಾತ್ರ ಸದ್ದು ಮಾಡ್ತಿದ್ದ ನಟಿ ಅಮೀಷಾ ಪಟೇಲ್ ಈಗ ಮತ್ತೆ ನಟಿಯಾಗಿ ಕಮ್‌ಬ್ಯಾಕ್ ಮಾಡಿದ್ದಾರೆ. ನಟಿಯ ಈ ಹಿಂದಿನ ಹಿಟ್ ಚಿತ್ರಗಳ ವಿವರ ಹೀಗಿದೆ..
ಗದರ್ - 2
ಸನ್ನಿ ಡಿಯೋಲ್ ಜತೆಗೆ ಮತ್ತೆ ನಟಿಸಿರುವ ಅಮೀಷಾ ಪಟೇಲ್ ಗದರ್ - 2 ಮೂಲಕ 2023 ರ ಬಾಲಿವುಡ್‌ನ ಅತಿದೊಡ್ಡ ಹಿಟ್‌ಗಳಲ್ಲಿಒಂದಾದ ಚಿತ್ರದಲ್ಲಿ ಮತ್ತೆ ಕಾಣಿಸಿಕೊಂಡಿದ್ದಾರೆ. 2001 ರ ಚಿತ್ರ ಗದರ್: ಏಕ್ ಪ್ರೇಮ್ ಕಥಾದ ಮುಂದುವರಿದ ಭಾಗವಾಗಿದೆ ಗದರ್ - 2 ಚಿತ್ರ.
ಬಾಕ್ಸಾಫೀಸ್ ದೋಚ್ತಿರೋ ಚಿತ್ರ
ಬಿಡುಗಡೆಯಾಗಿ 8 ದಿನಗಳಲ್ಲೇ 300 ಕ್ಕೂ ಹೆಚ್ಚು ಕೋಟಿ ರೂ. ಗಳಿಸೋ ಮೂಲಕ ಗದರ್ - 2 ಚಿತ್ರ ಸದ್ದು ಮಾಡ್ತಿದೆ.
ಅಮೀಷಾ ಪಟೇಲ್ ನಟನೆಯ ಇತರೆ ಚಿತ್ರಗಳು
ಈ ಹಿಂದೆಯೂ ನಟಿ ಅಮೀಷಾ ಪಟೇಲ್ ಬಾಲಿವುಡ್‌ನಲ್ಲಿ ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಒಂದು ನೋಟ ಇಲ್ಲಿದೆ..
ಕಹೋ ನಾ ಪ್ಯಾರ್ ಹೈ
2000 ನೇ ಇಸವಿಯಲ್ಲಿ ಬಿಡುಗಡೆಯಾದ ಈ ರೊಮ್ಯಾಂಟಿಕ್ ಕತೆಯೊಂದಿಗೆ ಬಾಲಿವುಡ್‌ನಲ್ಲಿ ತಮ್ಮ ವೃತ್ತಿಜೀವನವನ್ನು ಅಮೀಷಾ ಪಟೇಲ್ ಆರಂಭಿಸಿದ್ದರು. ಈ ಲವ್ ಸ್ಟೋರಿಯಲ್ಲಿ ಮೊದಲನೇ ಚಿತ್ರ ಮಾಡಿದ್ದ ಹೃತಿಕ್ ರೋಷನ್ ಜತೆಗೆ ನಟಿಸಿದ್ದರು.
ಗದರ್: ಏಕ್ ಪ್ರೇಮ್ ಕಥಾ
ಸಕೀನಾ ಹಾಗೂ ತಾರಾ ಸಿಂಗ್ ನಡುವಣ ಈ ಪ್ರೇಮ ಕತೆಯ ಚಿತ್ರ ಬಿಡುಗಡೆಯಾಗಿ 2 ದಶಕಗಳು ಕಳೆದರೂ ಇನ್ನೂ ಹಲವರ ನೆನಪಿನಲ್ಲಿ ಅಚ್ಚಾಗಿ ಉಳಿದಿದೆ.
ಹಮ್ರಾಜ್
2002 ರಲ್ಲಿ ಬಿಡುಗಡೆಯಾಗಿದ್ದ ಚಿತ್ರ ನಾನಾ ಟ್ವಿಸ್ಟ್‌ಗಳನ್ನು ಹೊಂದಿದ್ದು, ಚಿತ್ರ ರಸಿಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಬಾಬಿ ಡಿಯೋಲ್ ಹಾಗೂ ಅಕ್ಷಯ್ ಖನ್ನಾ ಈ ಚಿತ್ರದಲ್ಲಿ ಅಮೀಷಾ ಪಟೇಲ್ ಜತೆ ನಟಿಸಿದ್ದರು.
ಹನಿಮೂನ್ ಟ್ರಾವೆಲ್ಸ್ ಪ್ರೈವೇಟ್ ಲಿಮಿಟೆಡ್
ಈ ಚಿತ್ರದಲ್ಲಿ 6 ಜೋಡಿಗಳಿದ್ದು, ಈ ಪೈಕಿ ಒಂದು ಪಾತ್ರದಲ್ಲಿ ಅಮೀಷಾ ಪಟೇಲ್ ನಟಿಸಿದ್ದರು. ಇವರ ಈ ಅಭಿನಯವನ್ನು ಅಭಿಮಾನಿಗಳು ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದರು.
ಭೂಲ್ ಭುಲಯ್ಯಾ
ಸೈಕಾಲಜಿಕಲ್ ಹಾರರ್ ಚಲನಚಿತ್ರದಲ್ಲಿ ಹೆಚ್ಚು ಶಕ್ತಿಯುತವಾದ ಪೋಷಕ ನಟಿ ಪಾತ್ರ ಮಾಡಿದ್ದರು ಅಮೀಷಾ ಪಟೇಲ್.
ರೇಸ್ - 2
ಈ ಥ್ರಿಲ್ಲರ್ ಮೂವಿಯಲ್ಲೂ ಅಮೀಷಾ ಪಟೇಲ್ ಪೋಷಕ ನಟಿಯ ಪಾತ್ರ ಮಾಡಿದ್ದಾರೆ. ಚೆರ್ರಿ ಎಂಬ ಪಾತ್ರಕ್ಕೆ ಜೀವ ತುಂಬಿದ್ದರು.