ಬ್ರೇಕಪ್ ಆಗ್ತಿದ್ದಾರಾ ಬಾಲಿವುಡ್ ಹಾಟ್ ನಟಿ ಮಲೈಕಾ ಅರೋರಾ - ಅರ್ಜುನ್ ಕಪೂರ್? 5 ವರ್ಷದ ಸಂಬಂಧಕ್ಕೆ ಫುಲ್‌ಸ್ಟಾಪ್?
ದೀರ್ಘಕಾಲದವರೆಗೆ ಪರಸ್ಪರ ಡೇಟಿಂಗ್ ಮಾಡುತ್ತಿರುವ ಅರ್ಜುನ್ ಕಪೂರ್ ಮತ್ತು ಮಲೈಕಾ ಅರೋರಾ ನಡುವೆ ಬ್ರೇಕಪ್ ಅನ್ನೋ ವದಂತಿಗಳು ಕೇಳಿಬರುತ್ತಿದೆ. ಇದಕ್ಕೆ ನಾನಾ ಕಾರಣಗಳೂ ಇದೆ..
5 ವರ್ಷಕ್ಕೂ ಹೆಚ್ಚು ಕಾಲದಿಂದ ಸಂಬಂಧದಲ್ಲಿರೋ ಅರ್ಜುನ್ ಕಪೂರ್ ಮತ್ತು ಮಲೈಕಾ ಅರೋರಾ ಬ್ರೇಕಪ್ ಆಗ್ತಿದ್ದಾರಾ ಅನ್ನೋ ವದಂತಿಗಳು ಕೇಳಿಬರುತ್ತಿವೆ. ನಟ ಅರ್ಜುನ್ ಕಪೂರ್ ಇತ್ತೀಚೆಗೆ ಏಕಾಂಗಿಯಾಗಿ ಪ್ರವಾಸ ಮಾಡಿದ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದರು. ಈ ಹಿನ್ನೆಲೆ ಈ ಅನುಮಾನ ಶುರುವಾಗಿದೆ. ಈ ವೇಳೆ, ಜನರು ಲೇಡಿ ಲವ್ ಎಲ್ಲಿ ಕಾಣೆಯಾಗಿದ್ದಾರೆ ಅಂತ ಪ್ರಶ್ನೆ ಮಾಡ್ತಿದ್ದಾರೆ.
ಇನ್ನು, ಮಲೈಕಾ ಕೂಡ ಎಪಿ ಧಿಲ್ಲೋನ್ ಅವರ ಪಾರ್ಟಿಗೆ ಅರ್ಜುನ್ ಕಪೂರ್ ಕೂಡ ಹೋಗಿರಲಿಲ್ಲ. ಇದು ಈ ಕಪಲ್ ನಡುವಿನ ವದಂತಿಗಳನ್ನು ಮತ್ತಷ್ಟು ಹೆಚ್ಚಿಸಿತು.
ಹಾಗಾದ್ರೆ, ಇವ್ರು ನಿಜಕ್ಕೂ ಬ್ರೇಕಪ್ ಆಗ್ತಿದ್ದಾರಾ.. ಈ ನಿರಂತರ ವದಂತಿಗಳನ್ನು ನೋಡಿ ಅರ್ಜುನ್ ಮತ್ತು ಮಲೈಕಾ ಬಿದ್ದೂ ಬಿದ್ದೂ ನಗ್ತಿದ್ದಾರೆ ಎಂದೂ ತಿಳಿದುಬಂದಿದೆ. ಹಾಗೂ, ಈ ಊಹಾಪೋಹಗಳಿಗೆ ಹೇಗೆ ಪ್ರತಿಕ್ರಿಯಿಸಬೇಕು ಎಂದು ಅವರಿಗೆ ತಿಳಿದಿಲ್ಲ ಎಂದೂ ವರದಿಗಳು ಹೇಳಿದೆ.
ಹಾಗೆ, ಜನರು ಬೇಗ ತೀರ್ಮಾನಕ್ಕೆ ಬರ್ತಾರೆ ಮತ್ತು ತಮ್ಮ ತೀರ್ಪುಗಳನ್ನು ನೀಡ್ತಾರೆ. ಅದಕ್ಕಾಗಿಯೇ ಅವರು ತಮ್ಮ ಸಂಬಂಧದ ಸುತ್ತ ಅನಗತ್ಯವಾದ ಮಾತುಗಳನ್ನಾಡಲು ಹಾಗೂ ಗಮನ ಕೊಡದಿರಲು ನಿರ್ಧರಿಸಿದ್ದಾರೆ. ಒಟ್ಟಾರೆ, ಲವ್ ಬರ್ಡ್ಸ್ ಇನ್ನೂ ಒಟ್ಟಿಗೆ ಇದ್ದಾರೆ ಅನ್ನೋದನ್ನು ಅಭಿಮಾನಿಗಳು ತಿಳ್ಕೋಬೇಕು.
ಅರ್ಜುನ್ ಕಪೂರ್ ಮತ್ತು ಮಲೈಕಾ ಅರೋರಾ 5 ವರ್ಷಗಳಿಗೂ ಹೆಚ್ಚು ಕಾಲ ಸಂಬಂಧದಲ್ಲಿದ್ದಾರೆ ಮತ್ತು ಅವರು ಅದನ್ನು 2019 ರಲ್ಲಿ ಸಾಮಾಜಿಕ ಮಾಧ್ಯಮ ಪೋಸ್ಟ್‌ನೊಂದಿಗೆ ಅಧಿಕೃತಗೊಳಿಸಿದರು. ಇಬ್ಬರೂ ಆಗಾಗ್ಗೆ ಒಟ್ಟಿಗೆ ವಿಹಾರಕ್ಕೆ ಹೋಗುತ್ತಾರೆ ಮತ್ತು ತಮ್ಮ ರೊಮ್ಯಾಂಟಿಕ್ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ.
ಜೂನ್‌ನಲ್ಲಿ, ಮಲೈಕಾ ಅರೋರಾ ತನ್ನ ಬಾಯ್‌ಫ್ರೆಂಡ್ ಅರ್ಜುನ್ ಕಪೂರ್ ಹುಟ್ಟುಹಬ್ಬದಂದು ವಿಶೇಷ ಪೋಸ್ಟ್‌ನೊಂದಿಗೆ ಶುಭ ಹಾರೈಸಿದ್ದರು. 'ಹುಟ್ಟುಹಬ್ಬದ ಶುಭಾಶಯಗಳು ಮೈ ಸನ್‌ಶೈನ್, ಮೈ ಥಿಂಕರ್, ಮೈ ಗೂಫಿ, ಮೈ ಶಾಪಹೋಲಿಕ್, ಮೈ ಹ್ಯಾಂಡ್ಸಮ್.... @ಅರ್ಜುನ್ ಕಪೂರ್'. ಮತ್ತು ಅರ್ಜುನ್ ಕಪೂರ್ ಕಾಮೆಂಟ್ ಮೂಲಕ ಹೃದಯದ ಎಮೋಜಿಗಳನ್ನು ಬರೆದು ಪ್ರತಿಕ್ರಿಯಿಸಿದ್ದರು.