ರಾಜ್‌ಕುಂದ್ರಾ ಕೇಸ್: ಮಾಧ್ಯಮದ ವಿಚಾರಣೆ ಬೇಡ ಎಂದ ನಟಿ
- ಉದ್ಯಮಿ ರಾಜ್ ಕುಂದ್ರಾ ಕೇಸ್ ಬಗ್ಗೆ ಹೇಳಿಕೆ ನೀಡಿದ ಶಿಲ್ಪಾ ಶೆಟ್ಟಿ
- ಇಡೀ ಪ್ರಕರಣದ ಬಗ್ಗೆ ತನ್ನ ನಿಲುವು ತಿಳಿಸಿದ ಬಾಲಿವುಡ್ ನಟಿ
ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ಬಂಧನದಲ್ಲಿದ್ದಾರೆ. ಬಾಲಿವುಡ್ ಟಾಪ್ ನಟಿ ಪತಿ ಉದ್ಯಮಿ ರಾಜ್ ಕುಂದ್ರಾ ಪೋರ್ನ್ ವಿಡಿಯೋ ದಂಧೆಯಂತಹ ಆರೋಪದಲ್ಲಿ ಬಂಧಿತರಾಗಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಬಹಳಷ್ಟು ಜನರನ್ನು ಬಂಧಿಸಲಾಗಿದ್ದು, ರಾಜ್ ಜಾಮೀನು ಅರ್ಜಿಯೂ ತಿರಸ್ಕೃತವಾಗಿದೆ. ಈಗ ನಟಿ ಶಿಲ್ಪಾ ಶೆಟ್ಟಿ ಈ ಘಟನೆಗೆ ಸಂಬಂಧಿಸಿ ಹೇಳಿಕೆಯೊಂದನ್ನು ಕೊಟ್ಟಿದ್ದಾರೆ. ಈ ಎಲ್ಲ ಬೆಳವಣಿಗೆ ಮಧ್ಯೆ ನಟಿ ಕೊಟ್ಟಿರುವ ಸೋಷಿಯಲ್ ಮೀಡಿಯಾ ಹೇಳಿಕೆ ಪ್ರಾಮುಖ್ಯತೆ ಪಡೆದಿದೆ.
ಇನ್‌ಸ್ಟಾಗ್ರಾಂ ಮೂಲಕ ಪತಿ ರಾಜ್ ಕುಂದ್ರಾ ಪ್ರಕರಣದ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದ ನಟಿ ಶಿಲ್ಪಾ ಶೆಟ್ಟಿ ಆರೋಪಗಳು ಹಾಗೂ ಅನಗತ್ಯ ಗಾಳಿ ಸುದ್ದಿಗಳ ಬಗ್ಗೆ ಮಾತನಾಡುವುದಿಲ್ಲ ಎಂದಿದ್ದಾರೆ. ನಮ್ಮನ್ನು ಮಾಧ್ಯಮ ವಿಚಾರಣೆ ಮಾಡಬೇಕಾಗಿಲ್ಲ. ಕಾನೂನು ಪ್ರಕರಣವನ್ನು ವಿಚಾರಣೆ ಮಾಡಲು ಬಿಡಿ. ಸತ್ಯಮೇವ ಜತೆ ಎಂದು ನಟಿ ಹೇಳಿದ್ದಾರೆ. 46 ವರ್ಷದ ನಟಿ ಶಿಲ್ಪಾ ಶೆಟ್ಟಿ ಪತಿಯ ಬಂಧನದ ನಂತರ ಬಹಳಷ್ಟು ಸಾವಲುಗಳನ್ನು ಎದುರಿಸಿದ್ದಾರೆ. ಸ್ವತಃ ಅವರ ವಿಚಾರಣೆ, ಮನೆಯ ಮೇಲೆ ರೈಡ್, ಟ್ರೋಲ್ ಹೀಗೆ ಹತ್ತು ಹಲವು ವಿಧದಲ್ಲಿ ಸವಾಲುಗಳನ್ನು ಎದುರಿಸುತ್ತಿರುವ ನಟಿ ಈ ಬಗ್ಗೆ ಮಾತನಾಡಿದ್ದಾರೆ.
ಶಿಲ್ಪಾ ಜೊತೆ ಸಂಬಂಧ ಚೆನ್ನಾಗಿರ್ಲಿಲ್ಲ..! ಮನೆಲಿದ್ದಾಗೆಲ್ಲಾ ಸ್ಟ್ರೆಸ್ ಆಗಿದ್ದ ರಾಜ್ ಕುಂದ್ರಾ
ನನ್ನ ನಿಲುವು.. ನಾನು ಇದುವರೆಗೂ ಯಾವುದೇ ಕಮೆಂಟ್ ಮಾಡಿಲ್ಲ. ಹಾಗಾಗಿ ಈ ಬಗ್ಗೆ ನಾನು ಹೇಳಿದ್ದಾಗಿ ಹೇಳಿ ನನ್ನ ಹೇಳಿಕೆ ಪ್ರಕಟಿಸುವುದನ್ನು ನಿಲ್ಲಿಸಿ ಎಂದಿದ್ದಾರೆ. ಸೆಲೆಬ್ರಿಟಿಯಾಗಿ ನನ್ನ ಫಿಲಾಸಫಿ ಏನದೆಂದರೆ, ಆರೋಪ ಮಾಡದಿರುವುದು, ವಿವರಣೆ ನೀಡದಿರುವುದಾಗಿದೆ ಎಂದಿದ್ದಾರೆ. ಸದ್ಯ ತನಿಖೆ ನಡೆಯುತ್ತಿದೆ. ನನಗೆ ಮುಂಬೈ ಪೊಲೀಸರು ಹಾಗೂ ಭಾರತದ ನ್ಯಾಯಾಂಗ ವ್ಯವಸ್ಥೆ ಮೇಲೆ ಸಂಪೂರ್ಣ ನಂಬಿಕೆ ಇದೆ. ಕುಟುಂಬವಾಗಿ ನಾವು ನಮಗೆ ಲಭ್ಯವಿರುವ ಎಲ್ಲ ಕಾನೂನು ಸೌಲಭ್ಯವನ್ನು ಆಶ್ರಯಿಸುತ್ತೇವೆ ಎಂದಿದ್ದಾರೆ.
ಹೀಗಿದ್ದರೂ ನಿಮ್ಮಲ್ಲಿ ನನ್ನದೊಂದು ವಿನಂತಿ ಇದೆ, ಮುಖ್ಯವಾಗಿ ಒಬ್ಬ ತಾಯಿಯಾಗಿದೆ. ನನ್ನ ಮಕ್ಕಳ ಖಾಸಗಿತನದ ದೃಷ್ಟಿಯಿಂದ ಪ್ರಕರಣಕ್ಕೆ ಸಂಬಂಧಿಸಿ ಅರೆಬಂದ ಮಾಹಿತಿ ಹಂಚುವುದು, ಪ್ರತಿಕ್ರಿಯಿಸುವುದನ್ನು ನಿಲ್ಲಿಸಿ ಎಂದಿದ್ದಾರೆ. ನಾನು ಕಾನೂನನ್ನು ಪಾಲಿಸುವ ಭಾರತದ ಹೆಮ್ಮೆಯ ಪ್ರಜೆ. 29 ವರ್ಷದಿಂದ ಕಠಿಣ ಶ್ರಮದಿಂದ ದುಡಿಯುತ್ತಿರುವವಳೂ ಹೌದು. ಜನರು ನನ್ನ ಮೇಲೆ ನಂಬಿಕೆ ಇಟ್ಟಿದ್ದಾರೆ. ನಾನ್ಯಾರ ನಂಬಿಕೆಯನ್ನೂ ಹಾಳು ಮಾಡಿಲ್ಲ, ಹಾಗಾಗಿ ನನ್ನ ಕುಟುಂಬವನ್ನು ಗೌರವಿಸಿ ಈ ಸಮಯದಲ್ಲಿ ನಮ್ಮ ಖಾಸಗಿತನವನ್ನು ಗೌರವಿಸಬೇಕಾಗಿ ಕೇಳಿಕೊಳ್ಳುತ್ತೇನೆ ಎಂದಿದ್ದಾರೆ.
ರಾಜ್ ಕುಂದ್ರಾ ಜು.19ರಂದು ಬಂಧಿತರಾಗಿದ್ದಾರೆ. ಜು.27ರಂದು ಅವರು ಬಿಡುಗಡೆಯಾಗಬೇಕಾಗಿದ್ದರೂ ಅವರ ನ್ಯಾಯಾಂಗ ಬಂಧನವನ್ನು ಮತ್ತೆ 14 ದಿನಕ್ಕೆ ಮುಂದುವರಿಸಲಾಯಿತು. ಹಾಗೆಯೇ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಲಾಗಿದೆ. ಪೋರ್ನ್ ವಿಡಿಯೋ ತಯಾರಿಸಿ ಮೊಬೈಲ್ ಎಪ್ಲಿಕೇಷನ್‌ಗಳಲ್ಲಿಹರಿದುಬಿಟ್ಟ ಆರೋಪ ಇವರ ಮೇಲಿದೆ. ಮುಂಬೈ ಪೊಲೀಸರ ಪ್ರಕಾರ ರಾಜ್ ಕುಂದ್ರಾ ಪೋರ್ನ್ ವಿಡಿಯೋ ದಂಧೆಯ ಮುಖ್ಯ ಆರೋಪಿ ಎನ್ನಲಾಗಿದೆ.
"