ಪತ್ನಿ ಜೊತೆ ರಾಜ್ ಕುಂದ್ರಾ ಸಂಬಂಧ ಚೆನ್ನಾಗಿರ್ಲಿಲ್ಲ ಮನೆಯಲ್ಲಿದ್ದಾಗೆಲ್ಲಾ ಸ್ಟ್ರೆಸ್‌ನಲ್ಲಿರುತ್ತಿದ್ದ ರಾಜ್ ಕುಂದ್ರಾ

ತನ್ನ ಮೇಲೆ ಉದ್ಯಮಿ ರಾಜ್‌ ಕುಂದ್ರಾ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಿದ ಶೆರ್ಲಿನ್ ಚೋಪ್ರಾ ಈಗ ಮತ್ತೊಂದು ಅಚ್ಚರಿಯ ಹೇಳಿಕೆ ಕೊಟ್ಟಿದ್ದಾರೆ.

ರಾಜ್ ಕುಂದ್ರಾ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಿರುವ ನಟಿ ಶೆರ್ಲಿನ್ ಚೋಪ್ರಾ, ರಾಜ್ ತನ್ನ ಪತ್ನಿ ಶಿಲ್ಪಾ ಶೆಟ್ಟಿಯೊಂದಿಗಿನ ತನ್ನ ಸಂಬಂಧವು ಕ್ಲಿಷ್ಟಕರವಾಗಿದೆ ಎಂದು ಹೇಳಿದ್ದ ಎಂದಿದ್ದಾರೆ.

ಮನೆಗೆ ನುಗ್ಗಿ ಕಿಸ್ ಮಾಡೋಕೆ ಶುರು ಮಾಡಿದ: ಶಿಲ್ಪಾ ಪತಿ ವಿರುದ್ಧ ಲೈಂಗಿಕ ಕಿರುಕುಳ ಆರೋಪ

ಮನೆಯಲ್ಲಿ ಹೆಚ್ಚಿನ ಸಮಯವನ್ನು ಒತ್ತಡದಲ್ಲೇ ಕಳೆಯುತ್ತಿದೆ ಎಂದು ರಾಜ್ ಹೇಳಿದ್ದಾಗಿ ಶೆರ್ಲಿನ್ ತಿಳಿಸಿದ್ದಾರೆ. ಅಶ್ಲೀಲ ವೀಡಿಯೊ ಪ್ರಕರಣದಲ್ಲಿ ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿರುವ ರಾಜ್ ತನ್ನ ಮನೆಗೆ ದಿಢೀರನೆ ಬಂದು ತನಗೆ ಬಲವಂತವಾಗಿ ಚುಂಬಿಸಿದ್ದಾಗಿ ಈಕೆ ಹೇಳಿದ್ದಾರೆ.

ಜು.27ರಂದು ಬಿಡುಗಡೆಯಾಗಬೇಕಿದ್ದ ಕುಂದ್ರಾಗೆ 14 ದಿನ ಕಸ್ಟಡಿ ವಿಸ್ತರಿಸಲಾಗಿದೆ. ಈ ನಡುವೆ ಶಿಲ್ಪಾ ಶೆಟ್ಟಿ ಅವರಿಗೂ ನೀಲಿ ಚಿತ್ರ ಮಾರಾಟ ದಂಧೆಯಲ್ಲಿ ಕೈವಾಡ ಇದೆ ಎಂಬುದರ ಬಗ್ಗೆ ಸ್ಪಷ್ಟನೆ ಸಿಕ್ಕಿಲ್ಲ.