500 ಕೋಟಿ ರೂಪಾಯಿ ವೆಚ್ಚದ ಸಿನಿಮಾ ನೀಡಿದ ಮೊದಲ ದಕ್ಷಿಣ ಭಾರತೀಯ ಹೀರೋಯಿನ್. ಇಂಥವಳು ನಾನು ಯಾರನ್ನು ಮದುವೆ ಆಗೋಲ್ಲ, ಸನ್ಯಾಸಿ ಆಗ್ತೀನಿ ಎಂದರೆ ರಸಿಕರ ಎದೆ ಧಸಕ್‌ ಎನಿಸದೇ ಇದ್ದೀತೆ?


ವಯಸ್ಸು 43 ಆದರೂ ಆಕೆ ಈಗಲೂ ದಕ್ಷಿಣ ಭಾರತದ ಬಲು ಬೇಡಿಕೆಯ ಹೀರೋಯಿನ್.‌ ಈಗಲೂ ಕೈ ತೊಳೆದು ಮುಟ್ಟಬೇಕು, ಅಂಥ ಸೌಂದರ್ಯ. ಪ್ಯಾನ್‌ ಇಂಡಿಯಾ ಸಿನಿಮಾದ ನಾಯಕನ ಜೊತೆಗೆ ಡೇಟಿಂಗ್‌ ಮಾಡಿದಾಕೆ. 500 ಕೋಟಿ ರೂಪಾಯಿ ವೆಚ್ಚದ ಸಿನಿಮಾ ನೀಡಿದ ಮೊದಲ ದಕ್ಷಿಣ ಭಾರತೀಯ ಹೀರೋಯಿನ್ ಇಂಥವಳು ನಾನು ಯಾರನ್ನು ಮದುವೆ ಆಗೋಲ್ಲ, ಸನ್ಯಾಸಿ ಆಗ್ತೀನಿ ಎಂದರೆ ರಸಿಕರ ಎದೆ ಧಸಕ್‌ ಎನಿಸದೇ ಇದ್ದೀತೆ?

ಹೌದು, ನಾವು ಮಾತನಾಡುತ್ತಿರುವುದು ಬೇರೆ ಯಾರ ಬಗ್ಗೆಯೂ ಅಲ್ಲ, ಅನುಷ್ಕಾ ಶೆಟ್ಟಿ ಬಗ್ಗೆ. ಅನುಷ್ಕಾ 2005ರಲ್ಲಿ ʼಸೂಪರ್‌ʼನೊಂದಿಗೆ ವೃತ್ತಿಜೀವನ ಪ್ರಾರಂಭಿಸಿದಳು. ಇಷ್ಟು ವರ್ಷಗಳಲ್ಲಿ ಆಕೆ ನಟಿಸಿದ ಫಿಲಂ ಮಿನಿಮಂ ಗ್ಯಾರಂಟಿ. 15 ವರ್ಷಗಳಿಂದ ತೆಲುಗು ಚಿತ್ರರಂಗದ ಪ್ರಮುಖ ನಟಿಯರಲ್ಲಿ ಒಬ್ಬಳು. ಅರುಂಧತಿ ಮತ್ತು ರುದ್ರಮಾದೇವಿ ಎಂಬ ಎರಡು ಮಹಿಳಾ ಕೇಂದ್ರಿತ ಚಲನಚಿತ್ರಗಳಲ್ಲಿ ಹೀರೋಯಿನ್‌ ಆದ ಕೆಲವೇ ಕೆಲವು ಭಾರತೀಯ ನಟಿಯರಲ್ಲಿ ಇವಳು ಒಬ್ಬಾಕೆ. 

2017ರಲ್ಲಿ, ಎಸ್‌ಎಸ್ ರಾಜಮೌಳಿ ಅವರ ʼಬಾಹುಬಲಿʼಯೊಂದಿಗೆ ಅನುಷ್ಕಾ 500 ಕೋಟಿ ಕ್ಲಬ್‌ಗೆ ಪ್ರವೇಶಿಸಿದಳು. ಈ ಚಿತ್ರ ವಿಶ್ವಾದ್ಯಂತ 1700 ಕೋಟಿ ರೂಪಾಯಿ ಗಳಿಸಿತು ಮತ್ತು ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರವಾಯಿತು. ಬಾಹುಬಲಿ ಸೀಕ್ವೆಲ್‌ನಲ್ಲಿಯೂ ಈಕೆ ಇದ್ದಳು. ಅವಳಿಗೀಗ 43 ವರ್ಷ. ಆದರೂ ಈ ನಟಿ ಒಂಟಿ. ಆಕೆಯ ಮದುವೆಗೆ ಸಂಬಂಧಿಸಿದ ಕೆಲವು ಸುದ್ದಿಗಳೇನೋ ಇವೆ. ಆದರೆ ಯಾವುದೂ ಖಚಿತವಿಲ್ಲ. ಪ್ರಭಾಸ್ ಜೊತೆ ಡೇಟಿಂಗ್ ಮಾಡುತ್ತಿದ್ದಾಳೆ ಎಂಬ ವದಂತಿಗಳಿವೆ. ಆದರೆ ಅದು ಕೂಡ ಖಚಿತಪಡಿಸಿಲ್ಲ.

ಇದಲ್ಲದೆ ʼಕಿಂಗ್ʼ ಚಿತ್ರದಲ್ಲಿ ನಾಗಾರ್ಜುನನಿಗಾಗಿ ವಿಶೇಷ ಹಾಡನ್ನು ಹಾಡಿದ ನಂತರ ಆಕೆಯ ಮತ್ತು ನಾಗಾರ್ಜುನ ಸಂಬಂಧದ ಬಗ್ಗೆ ಊಹಾಪೋಹಗಳು ಹರಡಿದ್ದವು. ಆದರೆ ಅದೂ ದೃಢಪಟ್ಟಿಲ್ಲ. ಗೋಪಿಚಂದ್ ಜೊತೆಗೂ ಅನುಷಾ ನಿಕಟ ಸಂಪರ್ಕ ಹೊಂದಿದ್ದಳು. ಇವರನ್ನು ತೆಲುಗು ಇಂಡಸ್ಟ್ರಿಯಲ್ಲಿ ಮುಂದಿನ ದೊಡ್ಡ ಜೋಡಿ ಎಂದು ಕರೆಯಲಾಗುತ್ತಿತ್ತು. ಆದರೆ ಗೋಪಿಚಂದ್ 2013ರಲ್ಲಿ ತೆಲುಗು ನಟ ಶ್ರೀಕಾಂತ್ ಅವರ ಸೋದರ ಸೊಸೆ ರೇಷ್ಮಾಳನ್ನು ವಿವಾಹವಾದ.

ಅನುಷ್ಕಾ ಶೆಟ್ಟಿಯ ಆಸ್ತಿ ಮೌಲ್ಯ ಈಗ ಸುಮಾರು 133 ಕೋಟಿ ರೂಪಾಯಿ. ಆಕೆಯ ಮಾಸಿಕ ಆದಾಯ 1 ಕೋಟಿ. ಅನುಷ್ಕಾ ಈಗ ಒಂದು ಚಲನಚಿತ್ರಕ್ಕೆ ಪಡೆಯುವ ಸಂಭಾವನೆ 6 ಕೋಟಿ. ಇದಲ್ಲದೆ ಜಾಹೀರಾತುಗಳಿಂದ ವಾರ್ಷಿಕ 12 ಕೋಟಿ.

ಈ ನಡುವೆ ಅನುಷ್ಕಾ ಶೆಟ್ಟಿ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಇದರಿಂದ ಸಿನಿಮಾ ಮಾಡಲು ಕಷ್ಟವಾಗುತ್ತಿದೆ ಎಂದು ಹೇಳಲಾಗಿದೆ. ತೂಕವನ್ನು ನಿಯಂತ್ರಣದಲ್ಲಿಟ್ಟುಕೊಂಡು ಸಿನಿಮಾ ಮಾಡುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಹಾಗಾಗಿಯೇ ಅನುಷ್ಕಾ ಸಿನಿಮಾಗಳ ಬಗ್ಗೆ ಸೆಲೆಕ್ಟಿವ್ ಆಗಿದ್ದಾಳೆ. ವಯಸ್ಸು 43 ಆದರೂ ಇನ್ನೂ ಮದುವೆ ಆಗಿಲ್ಲ ಅಂತ ಆಕೆಯ ಪೋಷಕರಲ್ಲಿ ಆತಂಕವಿದೆ. 

ಎಲ್ಲ ಗಂಡಸರ ಕಥೆ ಏನು ಅಂತ ರವೀನಾಗೆ ಹೇಳಿದ್ರು ಶ್ರೀದೇವಿ; ಜಗತ್ತೇ ಗಪ್‌ಚುಪ್‌ ಆಗಿತ್ತು!

ಅನುಷ್ಕಾ ಶೆಟ್ಟಿ ನಟಿಯಾಗಬೇಕೆಂಬ ಕನಸು ಕಂಡವರಲ್ಲ. ಯೋಗ ಮಾಡುತ್ತಿದ್ದ ಅನುಷ್ಕಾರನ್ನು ಕಂಡು ನಾಗಾರ್ಜುನ್ ಆಕೆಯನ್ನು ಸಿನಿಮಾಗೆ ಕರೆತಂದರು. ನಟನೆ ಬರುವುದಿಲ್ಲ ಎಂದು ಹೇಳಿದರೂ ಕಲಿಸುತ್ತೇವೆ ಎಂದರು. ಆದರೆ ಅನುಷ್ಕಾ ಚಿತ್ರರಂಗಕ್ಕೆ ಬರಲು ಬಯಸಿರಲಿಲ್ಲ. ಅವರ ಯೋಗ ಶಿಕ್ಷಕರು ನೀವು ಚಿತ್ರರಂಗಕ್ಕೆ ಹೋಗಿ ನಟಿಯಾಗುತ್ತೀರಿ ಎಂದು ಮೊದಲೇ ಹೇಳಿದ್ದರಂತೆ. ಅವರು ಹೇಳಿದ್ದೇ ಆಯಿತು ಎನ್ನುತ್ತಾರೆ ಅನುಷ್ಕಾ.

ಮೊದಲು ಅನುಷ್ಕಾ ಶೆಟ್ಟಿಗೆ ಡಾಕ್ಟರ್ ಆಗಬೇಕೆಂಬ ಆಸೆ ಇತ್ತು. ಆದರೆ ಆಕಸ್ಮಿಕವಾಗಿ ಜಿಯೋಗ್ರಾಫಿ ಓದಬೇಕಾಯಿತಂತೆ. ಡಿಗ್ರಿ ಮಾಡುವಾಗ ಯೋಗ ಶಿಕ್ಷಕ ಭರತ್ ಠಾಕೂರ್ ಅವರನ್ನು ಭೇಟಿಯಾದರು. ಅವರೊಂದಿಗಿನ ಸಂಪರ್ಕವೇ ತನ್ನನ್ನು ಯೋಗದೆಡೆಗೆ ಕರೆದೊಯ್ಯಿತು ಎನ್ನುತ್ತಾರೆ ಅನುಷ್ಕಾ. ಯೋಗ ಮಾಡುವಾಗ ತುಂಬಾ ಸಂತೋಷವಾಗುತ್ತದೆ ಮತ್ತು ಇದು ತನ್ನ ಜೀವನ ಎಂದು ನಿರ್ಧರಿಸಿದರಂತೆ. ಆದರೆ ಇದನ್ನು ಮನೆಯಲ್ಲಿ ಹೇಳಿದಾಗ ಪಾಲಕರು ಶಾಕ್‌ ಆದರಂತೆ. ಮಗಳು ಸನ್ಯಾಸ ದೀಕ್ಷೆ ಪಡೆದುಬಿಡುತ್ತಾಳಾ ಎಂದು ಗಾಬರಿಯಾಗಿದ್ದರಂತೆ. ವಯಸ್ಸು ಮೀರುತ್ತಿರುವುದು ಕಂಡರೆ ಹಾಗೇ ಆಗುತ್ತದೇನೋ ಎಂದು ಇದೀಗ ಮತ್ತೆ ಆತಂಕವಾಗಿದೆಯಂತೆ. 

ಕಿಸ್ಸಿಕ್ ಅಂತ ಕಮ್ಮಿ ರೇಟ್‌ಗೆ ಕುಣಿದ್ರಾ ಶ್ರೀಲೀಲಾ? ಬಾಲಿವುಡ್‌ ನಟಿ ಕೇಳಿದ್ದು ಎಂಟು ಪಟ್ಟು ಹೆಚ್ಚು!