ಕಿಸ್ಸಿಕ್ ಅಂತ ಕಮ್ಮಿ ರೇಟ್‌ಗೆ ಕುಣಿದ್ರಾ ಶ್ರೀಲೀಲಾ? ಬಾಲಿವುಡ್ ನಟಿ ಕೇಳಿದ್ದು ಎಂಟು ಪಟ್ಟು ಹೆಚ್ಚು!
ಓಡಾಡುತ್ತಿರುವ ಮತ್ತೊಂದು ಮಾಹಿತಿ ಪ್ರಕಾರ, ನಟಿ ಶ್ರೀಲೀಲಾ ಅವರು ಪುಷ್ಪಾ 2 ಸಿನಿಮಾದ ಕಿಸ್ಸಿಕ್ ಹಾಡಿಗೆ ಕೇಳಿದ್ದು 2 ಕೋಟಿ ಸಂಭಾವನೆ. ಆದರೆ, ನಿರ್ಮಾಪಕರು ಒಪ್ಪಿಸಿ ಕೊಟ್ಟಿದ್ದು ಕೇವಲ ಕೋಟಿ ಮಾತ್ರ!.. ಆದರೆ, ಇದೇ ಹಾಡಿಗೆ ಆ ನಟಿ ಕೇಳಿದ್ದು..
ಈಗ ಎಲ್ಲೆಲ್ಲೂ 'ಪುಷ್ಪಾ 2' ಸಿನಿಮಾ ಹಾಗು ಅದರಲ್ಲಿ ಐಟಂ ಹಾಡಿಗೆ ಸೊಂಟ ಬಳುಕಿಸಿ ಸಂಕತ್ ಸೌಂಡ್ ಮಾಡಿರೋ ಕನ್ನಡದ ಬೆಡಗಿ ಶ್ರೀಲೀಲಾ ಅವರದೇ ಸುದ್ದಿ! ಕನ್ನಡತಿ ಶ್ರೀಲೀಲಾ (Sreeleela) ಅವರು 'ಕಿಸ್ಸಿಕ್..' ಹಾಡಿಗೆ ಥಕಧಿಮಿತ ಎಂದು ಕುಣಿಯಲು ಬರೋಬ್ಬರಿ ಎರಡು ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಆದರೆ ಅದಕ್ಕಿಂತ ಈಗ ಹೆಚ್ಚಾಗಿ ಸುದ್ದಿಯಾಗುತ್ತಿದೆ ಮತ್ತೊಂದು ಸುದ್ದಿ. ಅದು. ಅದೇ (Pushpa 2) ಕಿಸ್ಸಿಕ್ ಹಾಡಿನ ಆಫರ್ ಬಾಲಿವುಡ್ ನಟಿ ಒಬ್ಬರಿಗೆ ಹೋಗಿತ್ತು. ಅವರು ಅದಕ್ಕೆ ಕೇಳಿದ್ದ ಸಂಭಾವನೆ ಬರೋಬ್ಬರಿ ಎಂಟು ಕೋಟಿ ಎನ್ನಲಾಗಿದೆ.
ಆ ಬಾಲಿವುಡ್ ನಟಿ ಬೇರೆ ಯಾರೂ ಅಲ್ಲ, ಶ್ರದ್ಧಾ ಕಪೂರ್ (Shraddha Kapoor). ಶ್ರದ್ಧಾಗೆ ಎಂಟು ಕೋಟಿ ಕೊಟ್ಟರೆ ಪ್ರಯೋಜನ ಇಲ್ಲ ಎಂದುಕೊಂಡು 'ಪುಷ್ಪಾ 2' ಟೀಮ್ ಆ ಬಳಿಕ ನಟಿ ಕಿಯಾರಾ ಅಡ್ವಾನಿ ಅವರನ್ನು ಕೂಡ ಸಂಪರ್ಕಿಸಿತ್ತು. ಆದರೆ, ಕಿಯಾರಾ ಮೀನಮೇಷ ಎಣಿಸಿ ಕೊನೆಗೆ ಸಂಭಾವನೆ ಸರಿಯಾಗಿ ಹೇಳದೇ ಇವರು ಆಫರ್ ಮಾಡಿದ 2 ಕೋಟಗೂ ಒಪ್ಪಿಕೊಳ್ಳದೇ ಜಾರಿಕೊಂಡರು ಎನ್ನಲಾಗಿದೆ. ಬಳಿಕ, ಆಫರ್ ಬಂದಿದ್ದು ಸದ್ಯ ತೆಲುಗುನಲ್ಲಿ ಮಿಂಚುತ್ತಿರುವ ಕನ್ನಡದ ಚೆಲುವೆ ನಟಿ ಶ್ರೀಲೀಲಾಗೆ! ಒಂದು ಮಾಹಿತಿ ಪ್ರಕಾರ, ನಟಿ ಶ್ರೀಲೀಲಾ ಅವರು ಈ ಹಾಡಿಗೆ ಎರಡು ಕೋಟಿ ಪಡೆದಿದ್ದಾರೆ.
ತಮಾಷೆ, ಆಟಗಳು ಮುಗಿದಿವೆ, ಈಗ ಬಿಸಿನೆಸ್ ಶುರು ಮಾಡೋಣ: ಕ್ಯಾ ಬಾತ್ ಹೈ ರಶ್ಮಿಕಾ ಅಂದ್ರಾ?
ಆದರೆ, ಓಡಾಡುತ್ತಿರುವ ಮತ್ತೊಂದು ಮಾಹಿತಿ ಪ್ರಕಾರ, ನಟಿ ಶ್ರೀಲೀಲಾ ಅವರು ಪುಷ್ಪಾ 2 ಸಿನಿಮಾದ ಕಿಸ್ಸಿಕ್ ಹಾಡಿಗೆ ಕೇಳಿದ್ದು 2 ಕೋಟಿ ಸಂಭಾವನೆ. ಆದರೆ, ನಿರ್ಮಾಪಕರು ಒಪ್ಪಿಸಿ ಕೊಟ್ಟಿದ್ದು ಒಂದು ಕೋಟಿ ಮಾತ್ರ!. ಆ ಮೂರು-ನಾಲ್ಕು ನಿಮಿಷದ ಹಾಡಿಗೆ ಒಂದು ಕೋಟಿ ರೂ. ಕಡಿಮೆಯೇನೂ ಅಲ್ಲ. ಏಕೆಂದರೆ, ಇಡೀ ಸಿನಿಮಾಗೇ ನಟಿಯರಿಗೆ ಸಿಗೋದು ಹೆಚ್ಚೆಂದರೆ 5-6 ಕೋಟಿ ಅಷ್ಟೇ. ಹೀಗಿರುವಾ ಮೊನ್ನೆ ಬಂದು ನಿನ್ನೆ ಹೆಸರು ಮಾಡಿರುವ ನಟಿ ಶ್ರೀಲೀಲಾಗೆ ಒಂದು ಹಾಡಿಗೆ ಒಂದು ಕೋಟಿ ಕೊಟ್ಟರೆ ಕಮ್ಮಿ ಹೇಗೆ?
ಅದಿರಲಿ, ಟಾಲಿವುಡ್ ಸಿನಿಉದ್ಯಮದಲ್ಲಿ ಈ ಮೊದಲು ಬಂದಿದ್ದ ಕನ್ನಡತಿ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಹಾಗೂ ಟಾಲಿವುಡ್ ಸ್ಟಾರ್ ಅಲ್ಲು ಅರ್ಜುನ್ (Allu Arjun) ಜೋಡಿಯ ಪುಷ್ಪಾ ಸಿನಿಮಾ ಸೂಪರ್ ಹಿಟ್ ಆಗಿ ಆ ವರ್ಷದಲ್ಲಿ ದಾಖಲೆ ಕಲೆಕ್ಷನ್ ಮಾಡಿತ್ತು. ಆ ಚಿತ್ರದಲ್ಲಿ ನಟಿ ಸಮಂತಾ ಅವರು 'ಹೂ ಉಂಟಾವಾ ಮಾವಾ.' ಹಾಡಿಗೆ ಕುಣಿದು ಭಾರೀ ಫೇಮಸ್ ಆಗಿದ್ದರು. ಈಗ ಶ್ರೀಲೀಲಾ ಸರದಿ!.
ಶಂಕರ್ ನಾಗ್ ಸಾವಿನ ಬಗ್ಗೆ ಇಂದಿಗೂ ಸಂಶಯ ಯಾಕೆ? ಅಲ್ಲಿ ಉತ್ತರ ಸಿಗದ ಪ್ರಶ್ನೆಗಳು ಇವೆಯಲ್ಲ!
ಅಂದಹಾಗೆ, ರಶ್ಮಿಕಾ-ಅಲ್ಲು ಅರ್ಜುನ್ ಜೋಡಿ 'ಪುಷ್ಪಾ 2' ಸಿನಿಮಾ ಬಗ್ಗೆ ಭಾರೀ ನಿರೀಕ್ಷೆ ಸೃಷ್ಟಿಯಾಗಿದೆ. ಇದು ಡಿಸೆಂಬರ್ 5ಕ್ಕೆ (05 December 2024) ಪ್ರಪಂಚದಾದ್ಯಂತ ಬಿಡುಗಡೆ ಆಗಲಿದೆ. ಈ ಚಿತ್ರದ ಬಜೆಟ್ 400 ರಿಂದ 500 ಕೋಟಿ!