Asianet Suvarna News Asianet Suvarna News

ಪುನೀತ್ ರಾಜಕುಮಾರ ಸಿನಿಮಾ ನಿರ್ದೇಶಕನ ವಿರುದ್ಧ ದೂರು ದಾಖಲು! ಕಾರಣ ಇಲ್ಲಿದೆ

  ಸಾಕ್ಷ್ಯ ಚಿತ್ರದ ಕಾಪಿರೈಟ್ಸ್ ನೀಡದೆ ವಂಚನೆ ಮಾಡಿರುವ ಆರೋಪ ಹಿನ್ನೆಲೆ  ಸ್ಯಾಂಡಲ್‌ವುಡ್‌ ಪವರ್‌ಸ್ಟಾರ್ ಪುನೀತ್ ರಾಜಕುಮಾರ್ ಅವರ ಚಿತ್ರದ ಖ್ಯಾತ ನಿರ್ದೇಶಕ ಜಾಕೋಬ್ ವರ್ಗೀಸ್ ವಿರುದ್ಧ ದೂರು ದಾಖಲಾಗಿದೆ.

Documentary copyright issue; File a complaint against Jacob Varghese rav
Author
First Published Nov 10, 2023, 3:08 PM IST

ಬೆಂಗಳೂರು (ನ.10) :  ಸಾಕ್ಷ್ಯ ಚಿತ್ರದ ಕಾಪಿರೈಟ್ಸ್ ನೀಡದೆ ವಂಚನೆ ಮಾಡಿರುವ ಆರೋಪ ಹಿನ್ನೆಲೆ  ಸ್ಯಾಂಡಲ್‌ವುಡ್‌ ಪವರ್‌ಸ್ಟಾರ್ ಪುನೀತ್ ರಾಜಕುಮಾರ್ ಅವರ ಚಿತ್ರದ ಖ್ಯಾತ ನಿರ್ದೇಶಕ ಜಾಕೋಬ್ ವರ್ಗೀಸ್ ವಿರುದ್ಧ ದೂರು ದಾಖಲಾಗಿದೆ.

ಪೃಥ್ವಿ, ಸವಾರಿ, ಸವಾರಿ -2 ಚಂಬಲ್ ಚಿತ್ರಗಳನ್ನ ನಿರ್ದೇಶಿಸಿರುವ ಜಾಕೋಬ್ ವರ್ಗೀಸ್. ಬೆಂಗಳೂರಿನ ಸ್ಕೂಲ್ ಸ್ಫೋರ್ಟ್‌ ಫೌಂಡೇಶನ್ ಸಂಸ್ಥೆಯು ಎಚ್‌ಐವಿ  ಬಾಧಿತ ಮಕ್ಕಳ ಜೀವನ ಕ್ರಮದ ಕುರಿತು 'ರನ್ನಿಂಗ್ ಪಾಸಿಟಿವ್' ವಿಡಿಯೋ ಚಿತ್ರೀಕರಣ ಮಾಡಿಸಿತ್ತು. ಇಬ್ಬರು ವಿದ್ಯಾರ್ಥಿಗಳ 4 ವರ್ಷದ ಕ್ರೀಡೆಯನ್ನ ವಿಡಿಯೋ ಚಿತ್ರಿಕರಣ ಮಾಡಿದ್ದ ನಿರ್ದೇಶಕ ಜಾಕೋಬ್. 

ಗರಡಿಯಲ್ಲಿ 15 ವರ್ಷ ಹಿಂದಿನ ದರ್ಶನ್‌ ಸಿಕ್ತಾರೆ: ಬಿ.ಸಿ. ಪಾಟೀಲ್‌

ಇನ್ನು ಸಾಕ್ಷ್ಯ ಚಿತ್ರದ ವಿಡಿಯೋ ಚಿತ್ರೀಕರಣ ಮಾಡಲು ನಿರ್ದೇಶಕ ಜಾಕೋಬ್‌ಗೆ ಹಂತ ಹಂತವಾಗಿ ಹಣ ನೀಡಿರುವ ಫೌಂಡೇಶನ್. ಆದರೆ ಸಾಕ್ಷ್ಯ ಚಿತ್ರದ ಕಾಫಿರೈಟ್ಸ್ ಸಂಸ್ಥೆಗೆ ನೀಡದೆ ತಾನೇ ಸಾಕ್ಷ್ಯ ಚಿತ್ರವನ್ನ ಪ್ರಸಾರ ಮಾಡಿದ್ದಾರೆ. ಅಲ್ಲದೇ ಅಸ್ಕರ್ ಅಕಾಡೆಮಿ ಅವಾರ್ಡ್ ವಿಭಾಗದಲ್ಲೂ ತಾನೇ ಕಾಫಿರೈಟ್ಸ್ ನ ಮಾಲೀಕ ಎಂದು ಮಾಹಿತಿ ನೀಡಿದ್ದಾನೆ. 

ಆಯುಷ್ಮಾನ್ ಚಲನಚಿತ್ರ ಪ್ರಶಸ್ತಿಗೂ ಈ ಚಿತ್ರವನ್ನ ಆಯ್ಕೆ ಮಾಡಿಸಿ ಕಾಫಿರೈಟ್ಸ್ ಉಲ್ಲಂಘನೆ ಮಾಡಲಾಗಿದೆ ಎಂದು ಆರೋಪಿಸಿರುವ ಸಂಸ್ಥೆ.  ಹೀಗಾಗಿ ನಿರ್ದೇಶಕ ಜಾಕೋಬ್‌ರಿಂದ ಆರ್ಥಿಕ ನಷ್ಟ ಉಂಟಾಗಿದೆ ಎಂದು ಅಶೋಕನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ   ಬೆಂಗಳೂರು ಸ್ಕೂಲ್ ಸ್ಪೋರ್ಟ್ಸ್ ಫೌಂಡೇಶನ್. ಸದ್ಯ ದೂರು ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿರುವ ಪೊಲೀಸರು.

Follow Us:
Download App:
  • android
  • ios