ವಮಿಕಾ ಕೊಹ್ಲಿ
ವಮಿಕಾ ಅನ್ನೋದು ಸಂಸ್ಕೃತ ಹೆಸರು. ತಾಯಿ ದುರ್ಗೆಯ ಹಲವು ಹೆಸರುಗಳಲ್ಲಿ ಈ ಹೆಸರೂ ಒಂದು. ಈ ಹೆಸರಿಗೆ ಶಕ್ತಿ, ಬಲ, ಸಮೃದ್ಧಿ ಎಂಬ ಹೆಸರಿನ ಅರ್ಥಗಳೂ ಇವೆ.

ಮೆಹರ್ ದುಪಿಯಾ ಬೇಡಿ
ನೇಹಾ ದುಪಿಯಾ ಮಗಳ ಹೆಸರಿದು. ಇದಕ್ಕೆ ಅರಾಬಿಕ್, ಬೆಂಗಾಲಿ ಅರ್ಥಗಳಿವೆ. ಜೊತೆಗೆ ಹಿಂದೂ, ಮುಸ್ಲಿಂ ಧರ್ಮಗಳಲ್ಲಿ ಬೇರೆ ಬೇರೆ ಅರ್ಥಗಳೂ ಇವೆ. ಆದರೆ ಇದರ ಸಿಂಪಲ್ಲಾದ ಅರ್ಥ ಅಂದರೆ ಆಶೀವರ್ವದಿಸಲ್ಪಟ್ಟವಳು ಅಂತ.

ತೈಮೂರ್ ಅಲಿ ಖಾನ್

೧೪ನೇ ಶತಮಾನದ ಟರ್ಕೋ ಮೊಘಲ್ ರಾಜನ ಹೆಸರು ತೖಮೂರು. ತನ್ನ ಸಾಮ್ರಾಜ್ಯಕ್ಕೂ ಈತ ತೖಮೂರ್ ಸಾಮ್ರಾಜ್ಯ ಎಂದೇ ಕರೆದ. ಪರ್ಷಿಯನ್ ರಾಜರಲ್ಲಿ ಈ ಹೆಸರು ಕಾಮನ್ ಆಗಿ ಬಳಸಲ್ಪಟ್ಟಿದೆ. ಆದರೆ ತೖಮೂರ್ ಎಂಬ ಪದದ ಶಬ್ದಶಃ ಅರ್ಥ ಉಕ್ಕು ಎಂದು. ಕರೀನಾ-ಸೖಫ್ ತಮ್ಮ ಮಗನಿಗೆ ತೖಮೂರ್ ಅಂತ ಹೆಸರಿಟ್ಟಾಗ ವಿವಾದ ಸೃಷ್ಟಿಯಾಗಿತ್ತು. ಆದರೆ ಬದುಕಿರುವ ಅಥವಾ ಸತ್ತಿರುವ ಯಾವುದೇ ವ್ಯಕ್ತಿಯ ಹೆಸರಿನಿಂದ ಸ್ಫೂರ್ತಿಗೊಂಡು ಈ ಹೆಸರಿಟ್ಟಿಲ್ಲ ಅಂತ ಕರೀನಾ ಸ್ಪಷ್ಟನೆಯನ್ನೂ ನೀಡಿದರು.

ಆರಾಧ್ಯ ಬಚ್ಚನ್
ಆರಾಧ್ಯಾ ಅಂದರೆ ಆರಾಧಿಸಲ್ಪಡುವವಳು ಎಂಬ ಅರ್ಥ ಇದೆ. ಜೊತೆಗೆ ಮೊದಲನೆಯವಳು ಎಂಬ ಇನ್ನೊಂದು ಅರ್ಥವೂ ಇದೆ.

ಇನಾಯ ನೌಮಿ

ಸೋಹಾ ಆಲಿಖಾನ್ ಕುನಾಲ್ ಕೇಮು ಮಗಳು ಇನಾ ನೌಮಿ ಕೇಮು. ಇದಕ್ಕೆ ಅರಾಬಿಕ್ ನಲ್ಲಿ ಸುಂದರವಾದ ಅರ್ಥ ಇದೆ. ದೇವರಿಂದ ವರವಾಗಿ ದೊರೆತವಳು ಎಂಬ ಅರ್ಥ. ಜೊತೆಗೆ ಸಲಹುವವಳು ಅನ್ನುವ ಇನ್ನೊಂದು ಮೀನಿಂಗ್ ಸಹ ಇದೆ.

 

ಸಮೀಶಾ ಶೆಟ್ಟಿ ಕುಂದ್ರಾ

ಇತ್ತೀಚೆಗಷ್ಟೇ ಬಾಡಿಗೆ ಗರ್ಭದ ಮೂಲಕ ಶಿಲ್ಪಾ ಶೆಟ್ಟಿ ರಾಜ್ ಕುಂದ್ರಾ ಹೆಣ್ಣು ಮಗುವನ್ನು ಪಡೆದರು. ಅದಕ್ಕೆ ಸಮೀಶಾ ಶೆಟ್ಟಿ ಕುಂದ್ರಾ ಅಂತ ಮುದ್ದಾದ ಹೆಸರಿಟ್ಟಿದ್ದಾರೆ. ಸಮೀಶಾ ಅಂದರೆ ಸಂಸ್ಕೃತದಲ್ಲಿ ಹೊಂದು ಅನ್ನುವ ಅರ್ಥ. ಮಿಶಾ ಅನ್ನುವುದಕ್ಕೆ ರಷ್ಯನ್ ಭಾಷೆಯಲ್ಲಿ ವಿಶೇಷ ಅರ್ಥ ಇದೆ. ‘ದೇವರಂಥವಳು’ ಅಥವಾ ದೇವತೆ ಅನ್ನುವ ಚಂದದ ಅರ್ಥವದು.

ನಿತಾರಾ ಕುಮಾರ್
ನಿತಾರಾ ಅನ್ನುವುದು ಭಾರತೀಯ ಮೂಲದ ಹೆಸರು. ಈಕೆ ಅಕ್ಷಯ್ ಕುಮಾರ್ ಮಗಳು. ಇದರರ್ಥ ಆಳವಾದ ಬೇರೂರುವವಳು, ಯಾವುದೇ ವಿಚಾರವನ್ನು ಆಳವಾಗಿ ತಿಳಿದುಕೊಳ್ಳುವವಳು ಎಂಬರ್ಥ. ತಮ್ಮ ಮಾವ ರಾಜೇಶ್ ಖನ್ನಾ ನೆನಪಿಗೆ ಅಕ್ಷಯ್ ಮಗಳ ಹೆಸರಿನೊಂದಿಗೆ ಖನ್ನಾ ಸರ್ ನೇಮ್ ಸಹ ಸೇರಿಸಿದ್ದಾರೆ.

ಮಾಲ್ಡೀವ್ಸ್‌ನಲ್ಲಿ ಗೆಳತಿಯರೊಂದಿಗೆ ಆಲಿಯಾ ಸಿಕ್ಕಾಪಟ್ಟೆ ಹಾಟ್..  ಅದು ಕಾಣ್ತಿದೆ ಎಂದ್ರು! ...

ಸೖರಾ ಭೂಪತಿ

ಮಹೇಶ್ ಭೂಪತಿ-ಲಾರಾ ದತ್ತಾ ಮಗಳ ಹೆಸರು ಸಾರಾ ಅಥವಾ ಸೖರಾ ಭೂಪತಿ. ಇದು ಹೀಬ್ರೂ ಭಾಷೆಯ ಪದ. ಹೀಗಂದರೆ ರಾಜಕುಮಾರಿ ಅನ್ನೋ ಅರ್ಥ ಇದೆ.

ನಿಶಾ ಕೌರ್
ಸನ್ನಿಲಿಯೋನ್ ದತ್ತು ಪುತ್ರಿಯ ಹೆಸರು ನಿಶಾ ಕೌರ್ ವೆಬರ್. ನಿಶಾ ಅಂದರೆ ರಾತ್ರಿಯನ್ನಾಳುವ ದೇವತೆ ಅಂತರ್ಥ. ಮಗಳ ಹೆಸರಿನ ಜೊತೆ ಸನ್ನಿ ಫ್ಯಾಮಿಲಿ ನೇಮ್ ಹಾಗೂ ಆಕೆಯ ಗಂಡನ ಸರ್ ನೇಮ್ ಸಹ ಸೇರಿಕೊಂಡಿದೆ.

ಆಫ್‌ಲೈನ್ ಲಿಪ್ ಕಿಸ್: ಕೀರ್ತಿ ಮುದ್ದಾಡ್ತಿರೋದ್ಯಾರನ್ನು..? ...

ಹ್ರೆಹಾನ್, ಹೃದಾನ್ ರೋಶನ್
ಹೃತಿಕ್ ರೋಷನ್ ಅವರ ಇಬ್ಬರು ಮಕ್ಕಳ ಹೆಸರಿದು. ದೊಡ್ಡ ಮಗನ ಹೆಸರು ಹ್ರೆಹಾನ್. ಹೀಗಂದರೆ ದೇವರು ಆಯ್ಕೆ ಮಾಡಿದವನು ಅಥವಾ ದೇವರಿಂದಲೇ ಆಯ್ಕೆ ಮಾಡಲ್ಪಟ್ಟವನು ಎಂಬ ಅರ್ಥ ಇದೆ. ಹ್ರೆದಾನ್ ಅಂದರೆ ದೊಡ್ಡ ಹೃದಯ ಹೊಂದಿರುವವನು ಎಂಬ ಅರ್ಥವಿದೆ.

ಅಬ್ ರಾಮ್
ಅಬ್ ರಾಮ್ ಅನ್ನೋದು ಜ್ಯುಯಿಶ್ ಮೂಲದ ಹೆಸರು. ಹಝರತ್ ಇಬ್ರಾಹಿಂ ಅವರ ಹೆಸರೂ ಹೌದು. ಜೊತೆಗೆ ಹಿಂದೂ ದೇವರು ರಾಮನ ಹೆಸರೂ ಸೇರಿಕೊಂಡಿದೆ.

ಸಂಜಯ್ ದತ್ ಮಗಳು ತಂದೆಯ ಡ್ರಗ್ ಅಡಿಕ್ಷನ್ ಬಗ್ಗೆ ಹೇಳಿದ್ದೇನು ಗೊತ್ತೆ? ...

ಝೖನ್
ಶಾಹಿದ್ ಕಪೂರ್ ತಮ್ಮ ಮಗಳಿಗೆ ಮಿಶಾ ಅಂತ ಹೆಸರಿಟ್ಟಿದ್ದಾರೆ. ಅದು ಮೀರಾ ಹೆಸರಿನ ಮೊದಲಕ್ಷರ, ಶಾಹಿದ್ ಹೆಸರಿನ ಮೊದಲಕ್ಷರ. ಇದಕ್ಕೆ ವಿಶೇಷ ಅರ್ಥ ಸಿಗಲ್ಲ. ಆದರೆ ಮಗನಿಗೆ ಝೖನ್ ಅನ್ನೋ ಹೆಸರಿದೆ. ಹೀಗಂದರೆ ಚಂದ, ಗ್ರೇಸ್ ಅನ್ನೋ ಅರ್ಥ.