ಸೌತ್‌ನ ಸುಂದರಿ ಕೀರ್ತಿ ಸುರೇಶ್ ರಿಯಲ್ ಲೈಫ್‌ನಲ್ಲಿ ಫನ್ ಗರ್ಲ್. ತುಂಬಾ ತಲೆ ಕೆಡಿಸಿಕೊಳ್ಳದ, ಸಿಕ್ಕಾಪಟ್ಟೆ ಸೀರಿಯಸ್ ಅಲ್ಲದ, ಸಿಂಪಲ್ & ಸ್ಟ್ರೇಟ್ ನೇಚರ್‌ನ ನಟಿ. ಸೆಟ್‌ಗಳಲ್ಲಿಯೂ ತುಂಬಾ ಎಂಜಾಯ್ ಮಾಡ್ತಾ ಕೆಲಸ ಮಾಡ್ತಾರೆ ಈಕೆ.

ಇದೀಗ ಸಿನಿಮಾ ಅಲ್ಲ, ರಿಯಲ್ ಲೈಫ್‌ನಲ್ಲಿ ಕಿಸ್ಸಿಂಗ್‌ ಪೋಸ್ ಕೊಟ್ಟು ಫೋಟೋ ಶೇರ್ ಮಾಡಿದ್ದಾರೆ ನಟಿ. ಮುದ್ದಾಗಿರೋ ಈ ಫೋಟೋದಲ್ಲಿ ನಟಿ ವೈಟ್ ಬ್ಲಾಕ್ ಪೋಲ್ಕಾ ಡಾಟ್ ಡ್ರೆಸ್ ಧರಿಸಿದ್ದಾರೆ.

ಸಲಾರ್‌ನಲ್ಲಿ ಪ್ರಭಾಸ್ ಜೊತೆ ಪ್ರಿಯಾಂಕ ಚೋಪ್ರಾ..?

ಪೆಟ್ಸ್ ಅಂದ್ರೆ ನಟಿಗೆ ತುಂಬಾ ಇಷ್ಟ. ಅದು ನಿಮಗೂ ಗೊತ್ತು. ಎಷ್ಟು ಅಂದ್ರೆ ಅವರ ಸೋಷಿಯಲ್ ಮೀಡಿಯಾ ಖಾತೆ ತುಂಬಾ ಅವುಗಳದ್ದೇ ಮುದ್ದಾದ ಫೋಟೋಗಳಿವೆ. ತಮ್ಮ ಮುದ್ದು ನಾಯಿಯನ್ನು ಕೂರಿಸಿ ಕಿಸ್ಸಿಂಗ್ ಸೀನ ಪೋಸ್ ಕೊಟ್ಟಿದ್ದಾರೆ ನಟಿ.

ಪುಟ್ಟ ನಾಯಿಮರಿ ಪಿಳಿಕ್ ಪಿಳಿಕ್ ಅಂತ ಕಣ್ಣು ಬಿಡ್ತಾ ನಟಿಯನ್ನೆ ದಿಟ್ಟಿಸಿ ನೋಡಿದೆ. ಸದ್ಯ ಸರ್ಕಾರು ವಾರಿ ಪಾಠಶಾಲಾ ಸಿನಿಮಾದ ಬ್ಯುಸಿ ಇದ್ದಾರೆ ಕೀರ್ತಿ. ಶೂಟಿಂಗ್ ಕೂಡಾ ಭರದಲ್ಲಿ ಸಾಗಿದೆ.