ಬಾಲಿವುಡ್‌ನ ಸ್ಟಾರ್‌ಗಳ ಮಕ್ಕಳಲ್ಲಿ ಹೆಚ್ಚಿನ ವಿದ್ಯಾಭ್ಯಾಸ ಪಡೆದ ಹಾಗೂ ಸುಸಂಸ್ಕೃತರಾದ ಕೆಲವೇ ಕೆಲವು ಮಂದಿಯಲ್ಲಿ ಸಂಜಯ್ ದತ್‌ನ ಮಗಳೂ ಒಬ್ಬಳು. ತ್ರಿಶಾಲಾ ದತ್ ಎಂಬ ಹೆಸರಿನ ಈಕೆ ಸೈಕಾಲಜಿಸ್ಟ್. ಬಾಲಿವುಡ್‌ನ ಲೈಮ್‌ಲೈಟಿನಿಂದ ಈಕೆ ದೂರ ಇದ್ದರೂ ಇನ್‌ಸ್ಟಗ್ರಾಮ್‌ನಲ್ಲಿ ಸಕತ್ ಫೇಮಸ್. ಈಕೆ ಹಾಕುವ ಪೋಸ್ಟ್‌ಗಳನ್ನು ಲಕ್ಷಗಟ್ಟಲೆ ಮಂದಿ ಲೈಕ್ ಮಾಡುತ್ತಾರೆ. ಈಕೆ ಸಂಜಯ್ ದತ್‌ನ ಮೊದಲ ಹೆಂಡತಿ ರಿಚಾ ಶರ್ಮಾಳಲ್ಲಿ ಜನಿಸಿದವಳು.  

ಇತ್ತೀಚೆಗೆ ಈಕೆ ಇನ್‌ಸ್ಟಗ್ರಾಮ್‌ನಲ್ಲಿ ಆಸ್ಕ್ ಮಿ ಎನಿತಿಂಗ್ ಎಂದು, ಕೇಳಿದ ಪ್ರಶ್ನೆಗೆ ಉತ್ತರ ನೀಡಿದಳು. ಅದರಲ್ಲಿ ಆಕೆ ತನ್ನ ತಂದೆಯ ಡ್ರಗ್ ಅಡಿಕ್ಷನ್ ಬಗ್ಗೆಯೂ ಬರೆದಳು. ತನ್ನ ತಂದೆ ಅಮಲುಕೋರನಾಗಿದ್ದ ಎಂಬುದನ್ನು ಯಾವುದೇ ಮುಜುಗರ ಇಲ್ಲದೆ ತಾನು ಒಪ್ಪಿಕೊಳ್ಳುತ್ತೇನೆ, ಸಂಜಯ್ ದತ್ ಕೂಡ ಅದನ್ನು ಒಪ್ಪಿಕೊಳ್ಳುತ್ತಾರೆ. ಅದರ ಬಗ್ಗೆ ಮುಜುಗರ ಪಟ್ಟುಕೊಳ್ಳಬೇಕಾದ್ದು ಏನಿಲ್ಲ. ಈ ಲೋಕದಲ್ಲಿ ಲಕ್ಷಾಂತರ ಮಂದಿ ಡ್ರಗ್ ಅಡಿಕ್ಟ್ ಆಗುತ್ತಾರೆ. ನಾನಾ ಕಾರಣಗಳಿಗಾಗಿ ಹಾಗಾಗುತ್ತದೆ. ಆದರೆ ಅದರಿಂದ ಹೊರ ಬರಲೇಬೇಕು ಎಂದು ನಿರ್ಧಾರ ಮಾಡುವುದು, ಹೊರಬರಲು ಪ್ರಯತ್ನ ಮಾಡುವುದು, ರಿಹ್ಯಾಬಿಲಿಟೇಶನ್‌ನಲ್ಲಿ ತೊಡಗಿಕೊಳ್ಳುವುದು ವಿರಳ. ಸಂಜಯ್ ಅದಕ್ಕಾಗಿ ಪ್ರತಿದಿನವೂ ಪ್ರತಿಕ್ಷಣವೂ ಪ್ರಯತ್ನ ಮಾಡುತ್ತಲೇ ಇದ್ದಾರೆ. ಈಗ ಸಂಪೂರ್ಣವಾಗಿ ಅಮಲುಪದಾರ್ಥ ಬಿಟ್ಟಿದ್ದಾರೆ. ಆದರೆ ಅಂದು ರೂಢಿಸಿಕೊಂಡ ದುರಭ್ಯಾಸದ ಪರಿಣಾಮ ದೇಹ ಹಾಗೂ ಮನಸ್ಸಿನ ಮೇಲಾಗಿದೆ. ಅದರಿಂದ ಹೊರಬರಲು ಸಾಕಷ್ಟು ಪ್ರಯತ್ನ ಈಗಲೂ ಪಡಬೇಕಾಗಿದೆ. ಪಡುತ್ತಲೇ ಇದ್ದಾರೆ ಎಂದು ತ್ರಿಶಾಲಾ ಹೇಳಿದ್ದಾಳೆ.

ತನ್ನ ಎಕ್ಸ್‌ ಪ್ರಿಯಕರನ ವರ್ತನೆ ಬಗ್ಗೆ ರಿವೀಲ್‌ ಮಾಡಿದ ಸಂಜಯ್ ದತ್ ಪುತ್ರಿ! ...

ತ್ರಿಶಾಲಾ ತಂದೆಯಂಥಾ ಮಗಳಲ್ಲ. ಅಂದರೆ ತಂದೆ ಹಾಗೂ ತಾಯಿಯ ಗ್ಲಾಮರ್ ಜಗತ್ತಿನ ಹಾದಿ ಆಕೆಗೆ ಆಗಿ ಬರೋಲ್ಲ. ಇದನ್ನು ಆಕೆ ಹಲವು ಸಲ ತನ್ನ ಸೋಶಿಯಲ್ ಪೋಸ್ಟ್‌ಗಳ ಮೂಲ ಸಾರಿ ಹೇಳಿದ್ದಾಳೆ. ಹೀಗಾಗಿ ಆಕೆ ಬಾಲಿವುಡ್ ಪಾರ್ಟಿಗಳಿಗೂ ಹೋಗಲ್ಲ. ಆದರೆ ತಂದೆಯನ್ನು ಮಾತ್ರ ಆಗಾಗ ಹೋಗಿ ನೋಡಿ ಆತನನ್ನು ಖುಷಿಯಾಗಿಡುವ ಮಗಳು. 

ಸಂಜಯ್ ದತ್ ಹಲವು ವಿಷಯಗಳಲ್ಲಿ ದುರದೃಷ್ಟವಂತ. ಅಕ್ರಮ ಬಂದೂಕು ಹೊಂದಿದ ಪ್ರಕರಣದಲ್ಲಿ ಕೋರ್ಟ್‌ಗೆ ಹೋದ. ಮುಂಬಯಿ ಸ್ಫೋಟದ ರೂವಾರಿಗಳ ಜೊತೆ ಲಿಂಕ್ ಹೊಂದಿದ್ದ ಎಂದು ರಗಳೆಯಾಯಿತು. ಮೊದಲ ಮದುವೆ ಮುರಿಯಿತು. ಎರಡನೇ ಮದುವೆಯಾದ. ಡ್ರಗ್ ಅಡಿಕ್ಟ್ ಆದ. ಕೆರಿಯರ್‌ನಲ್ಲಿ ವೈಫಲ್ಯ ಕಂಡ. ಡ್ರಗ್‌ನಿಂದ ಬಿಡಿಸಿಕೊಂಡ. ಜೈಲಿಗೆ ಹೋಗಿ ಬಂದ. ಎಲ್ಲ ಆಯಿತು ಎನ್ನುವಷ್ಟರಲ್ಲಿ ಶ್ವಾಸಕೋಶದ ಕ್ಯಾನ್ಸರ್ ಅಮರಿಕೊಂಡಿತು. ಅದರ ಜೊತೆಗೆ ಸಾವು ಬದುಕಿನ ಹೋರಾಟ ನಡೆಸಿದ. ಕೊನೆಗೂ ಈ ಹೋರಾಟದಲ್ಲಿ ಗೆದ್ದಿದ್ದೇನ ಎಂದು ಹೇಳಿಕೊಂಡಿದ್ದಾನೆ. ಮಗಳು ತ್ರಿಶಾಲಾ ಕೂಡ ಕ್ಯಾನ್ಸರ್ ಅನ್ನು ತಂದೆ ಜಯಿಸಿದ್ದಾರೆ ಎಂದೇ ಹೇಳಿದ್ದಾಳೆ. ಆದರೆ ಇದು ಎಷ್ಟರ ಮಟ್ಟಿಗೆ ನಿಜವೋ ಗೊತ್ತಿಲ್ಲ. 

ಪತ್ನಿಗೆ 100 ಕೋಟಿಯ ಗಿಫ್ಟ್ ಕೊಟ್ಟ KGF ನಟ: ಏನಪ್ಪಾ ಆ ಉಡುಗೊರೆ ...

ಕನ್ನಡದ ಕೆಜಿಎಫ್ ಚಾಪ್ಟರ್‌ ಟೂನಲ್ಲಿ ನಟಿಸಿರುವುದೇ ಸಂಜಯ್ ದತ್‌ನ ಲೇಟೆಸ್ಟ್ ಅಭಿನಯ. ಅದನ್ನು ನೋಡಲು ಚಿತ್ರರಸಿಕರೆಲ್ಲ ಕಾತರದಿಂದ ಕಾಯುತ್ತಿದ್ದಾರೆ. ಇದು ಯಶ್‌ನ ಅಭೂತಪೂರ್ವ ಯಶಸ್ಸಿನ ಕತೆ ಆಗಿರುವಂತೆ ಸಂಜಯ್ ದತ್ತನ ಅಭೂತಪೂರ್ವ ಕಂಬ್ಯಾಕ್ ಕೂಡ ಹೌದು. ಏನೇ ಇದ್ದರೂ ಸಂಜಯ್ ದತ್ ಮಹಾ ಪ್ರತಿಭಾವಂತ. ಬದುಕು ಆತನಿಗೆ ಇನ್ನಷ್ಟು ಚಾನ್ಸ್ ಕೊಡದಿರಲಾರದು. ಆಗ ಆತ ಒಳ್ಳೆಯ ಹಾದಿಯಲ್ಲೇ ನಡೆಯಲಿ ಎಂದು ಮಾತ್ರ ಹಾರೈಸಬಹುದು ನಾವು. 

ಕ್ಯಾನ್ಸರ್ ಗೆದ್ದ 'ಅಧೀರ' ಅಭಿಮಾನಿಗಳಿಗೆ ಹೇಳಿದ್ದು ಒಂದೇ ಮಾತು! ...