1. ಅದಿತಿ ರಾವ್ ಹೖದರಿ
ಒಂದಲ್ಲ, ಎರಡೆರಡು ರಾಜ ಮನೆತನಗಳ ಜೊತೆಗೆ ಬೆಸೆದುಕೊಂಡಿದ್ದಾರೆ ಅದಿತಿ ರಾವ್ ಹೖದರಿ. ಈಕೆಯ ಮುತ್ತಜ್ಜ ಅಕ್ಬರ್ ಹೖದರಿ ರಾಜ ವಂಶಸ್ಥರು. ಅದೇ ರೀತಿ ಈಕೆಯ ಸಂಬಂಧಿ ಮೊಹಮ್ಮದ್ ಅಕ್ಬರ್ ಹೖದರಿ ಅಸ್ಸಾಂನ ಗವರ್ನರ್ ಆಗಿದ್ದವರು. ಇನ್ನು ತಾಯಿಯ ಕಡೆಗೆ ಬಂದರೆ ಅದಿತಿಯ ಅಜ್ಜ ರಾಜಾ ರಾಮೇಶ್ವರ ರಾವ್ ಹೖದರಾಬಾದ್ ನ ವಾನಪರ್ತಿ ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿದಿದ್ದವರು. ಇವರು ಶಿಕ್ಷಣ ತಜ್ಞರಾಗಿ ಹೆಸರು ಮಾಡಿದವರು. ಹೖದರಾಬಾದ್ ನ ಪ್ರತಿಷ್ಠಿತ ಬ್ಲ್ಯಾಕ್ ಸ್ವಾನ್ ಪಬ್ಲಿಷಿಂಗ್ ಹೌಸ್ ನ ಸ್ಥಾಪಕರೂ ಹೌದು. ಇನ್ನು ಅದಿತಿ ರಾವ್ ವಿಚಾರಕ್ಕೆ ಬಂದರೆ 33 ವರ್ಷ ಪ್ರಾಯದ ಈ ನಟಿ ನಟನೆಯ ಜೊತೆಗೆ ಡ್ಯಾನ್ಸರ್, ಗಾಯಕಿಯಾಗಿಯೂ ಗುರುತಿಸಿಕೊಂಡಾಕೆ. ವೖಭವದ ಬದುಕಿನ ಜೊತೆಗೆ ಕಷ್ಟಪಟ್ಟು ಕೆಲಸ ಮಾಡೋದನ್ನೂ ರೂಢಿಸಿಕೊಂಡಿದ್ದಾರೆ. ನಾಯಿಗಳೆಂದರೆ ವಿಪರೀತ ಮುದ್ದು.

ಕರೀನಾ ಕಪೂರ್‌ಳ ಬೇಬಿ ಬಂಪ್‌ ಫೋಟೋ ವೈರಲ್‌! 

2. ಕಿರಣ್ ರಾವ್
ನಮಗೆ ಕಿರಣ್ ರಾವ್ ಅಮೀರ್ ಖಾನ್ ಪತ್ನಿಯಾಗಿ ಪರಿಚಯ. ಈಕೆ ಧೋಬಿಘಾಟ್ ನಂಥಾ ಸಿನಿಮಾ ನಿರ್ದೇಶಿಸಿದ ಪ್ರತಿಭಾವಂತೆ. ಅಂದಹಾಗೆ ಈಕೆಯೂ ರಾಜಮನೆತನದವರು. ಇವರ ಅಜ್ಜ ಹೖದರಾಬಾದ್ ವಾನಪರ್ತಿಯ ರಾಜ ರಾಮೇಶ್ವರ ರಾವ್ ಅವರು. ಈಕೆ ಅದಿತಿ ರಾವ್ ಹೖದರಿಯ ಕಸಿನ್ ಅನ್ನೋ ವಿಚಾರ ಹಲವರಿಗೆ ತಿಳಿದಿಲ್ಲ. ಬಹಳ ಸೆನ್ಸಿಟಿವ್ ಹೆಣ್ಣು ಮಗಳಾಗಿ ಗುರುತಿಸಿಕೊಂಡಿರುವ ಈಕೆ ಮಹಾರಾಷ್ಟ್ರದ ಬರಪೀಡಿತ ಪ್ರದೇಶಗಳ ಜನರಿಗಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ. ಇವರ ಎನ್ಜಿಓ ಹೆಸರು ಪಾನಿ ಫೌಂಡೇಶನ್. ಇನ್ನೊಂದು ವಿಶೇಷ ಅಂದರೆ ಇಷ್ಟೆಲ್ಲ ವೖಭವ ಇದ್ದರೂ ಕಿರಣ್ ಸರಳ ಬದುಕನ್ನು ಅಪ್ಪಿಕೊಂಡವರು. ಈಕೆ ವೇಗನ್, ಪತಿ ಅಮೀರ್ ಖಾನ್ ಅವರನ್ನೂ ವೇಗನ್ ಆಗಿ ಬದಲಾಯಿಸಿದ್ದಾರೆ. ಅನೇಕ ಸಿನಿಮಾಗಳಿಗೆ ಅಸಿಸ್ಟೆಂಟ್ ಡೖರೆಕ್ಟರ್ ಆಗಿ ದುಡಿದಿದ್ದಾರೆ. ಜಾನೇ ತು ನ ಜಾನೆ ನಾ, ದಂಗಲ್ ನಂಥಾ ಕೆಲವಷ್ಟು ಸಿನಿಮಾ ನಿರ್ಮಿಸಿದ್ದಾರೆ.

ಫೋಟೋಗಳು :ರವೀನಾ ಟಂಡನ್‌ ಸೀ ಫೇಸಿಂಗ್‌ ಬಂಗ್ಲೆ ಹೇಗಿದೆ ನೋಡಿ! 

3. ರಿಯಾ ಸೆನ್ - ರೈಮಾ ಸೆನ್
ಸಿನಿಮಾ ನಟಿಯರಾಗಿ, ಮಾಡೆಲಿಂಗ್ ಮೂಲಕ ಗುರುತಿಸಿಕೊಂಡ ರಿಯಾ ಸೆನ್ - ರೖಮಾ ಸೆನ್ ಸಹೋದರಿಯರು ತ್ರಿಪುರಾ ರಾಜ ವಂಶಸ್ಥರು. ಇವರ ಅಜ್ಜಿ ಅಂದರೆ ತಂದೆಯ ತಾಯಿ ಸುಚಿತ್ರಾ ಸೆನ್ ಬರೋಡಾದ ಮಹಾರಾಜ ಸಯ್ಯಾಜಿ ರಾವ್ ಗಾಯಕ್ ವಾಡ್ ಅವರ ಏಕೖಕ ಪುತ್ರಿ. ಇವರ ತಾಯಿ ಮೂನ್ ಮೂನ್ ಸೆನ್ ಪ್ರಸಿದ್ಧ ಬಾಲಿವುಡ್ ನಟಿ. ಇವರ ಅಮ್ಮನ ತಾಯಿ ಅಜ್ಜಿ ಇಳಾ ದೇವಿ ಬೇಹರ್ ಪ್ರಾಂತ್ಯದ ರಾಜಕುಮಾರಿ. ಜೖಪುರದ ಮಹಾರಾಣಿ ಗಾಯತ್ರೀ ದೇವಿ ಇಳಾ ದೇವಿಯ ಅಕ್ಕ. ಹೀಗೆ ಸಂಪೂರ್ಣ ರಾಜ ವೖಭೋಗದಲ್ಲಿ ಹುಟ್ಟಿ ಬೆಳೆದ ಈ ಸಹೋದರಿಯರು ಸಿನಿಮಾ ರಂಗಕ್ಕೆ ಎಂಟ್ರಿ ಕೊಡೋದೇನೂ ಕಷ್ಟ ಆಗಲಿಲ್ಲ. ಆದರೆ ಅಂಥಾ ನೇಮ್ ಫೇಮ್ ಇವರಿಗೆ ದಕ್ಕಲಿಲ್ಲ. ರಿಯಾ ತನ್ನ ಮಾಡ್ ಲುಕ್, ಐಟಂ ನಂಬರ್ ಗಳ ಮೂಲಕವೂ ಗುರುತಿಸಿಕೊಂಡಿದ್ದಾರೆ.

ಮೇಘನಾ ರಾಜ್ - ಜೂನಿಯರ್ ಚಿರು ಭೇಟಿ ಮಾಡಲು ಬಂದ ಮಲಯಾಳಂ ಸಿನಿ ಜೋಡಿ! 

4 ಸೖಫ್ ಆಲಿಖಾನ್
ಸೖಫ್ ಸವಾಬ ವಂಶದ ರಾಜ. ಇವರ ತಂದೆ ಮನ್ಸೂರ್ ಆಲಿಖಾನ್ ಪಟೌಡಿ ನವಾಬರಾಗಿ ಗುರುತಿಸಿಕೊಂಡವರು. ಹಾಗೇ ಫೇಮಸ್ ಕ್ರಿಕೆಟರ್, ಟೀಮ್ ಇಂಡಿಯಾದ ಮಾಜಿ ಕ್ಯಾಪ್ಟನ್ ಸಹ ಹೌದು. ಈಗ ಸೖಫ್ ಪಟೌಡಿ ಪ್ಯಾಲೆಸ್ ನಲ್ಲೇ ಪತ್ನಿ ಕರೀನಾ ಕಪೂರ್ ಹಾಗೂ ಮಗ ತೖಮೂರ್ ಜೊತೆ ವಾಸವಿದ್ದಾರೆ. ಅವರ ಈ ಅರಮನೆ ಸುಮಾರು ೮೦೦ ಕೋಟಿ ರೂ. ಬೆಲೆಬಾಳುವಂಥಾದ್ದು. ನೂರಾರು ಕೊಠಡಿಗಳು, ಸುಂದರ ಈಜುಕೊಳ, ರಾಯಲ್ ಗಾರ್ಡನ್ ಇತ್ಯಾದಿಗಳಿಂದ ಕೂಡಿರುವ ಈ ಪ್ಯಾಲೆಸ್ಅನ್ನು ಈ ಹಿಂದೆ ಲೀಸ್ ಗೆ ನೀಡಲಾಗಿತ್ತು. ಸಿನಿಮಾ ರಂಗಕ್ಕೆ ಬರುವ ಮೊದಲು ಸೖಫ್ ಆಲಿ ಖಾನ್ ಜಾಹೀರಾತು ಕಂಪೆನಿಯೊಂದರಲ್ಲಿ ದುಡಿದಿದ್ದರು. ಸೀರಿಯಲ್ ನಲ್ಲಿ ಅವಕಾಶಗಳಿಗಾಗಿ ಸಾಕಷ್ಟು ಕಷ್ಟಪಟ್ಟಿದ್ದರು. ಬಾಲಿವುಡ್ ನಲ್ಲೂ ಬ್ರೇಕ್ ಗಾಗಿ ಸಾಕಷ್ಟು ವರ್ಷ ಕಾದಿದ್ದರು.

"