Prabhas; ಸಲಾರ್ ವಿಡಿಯೋ ಲೀಕ್, ಅಪ್‌ಸೆಟ್ ಆದ ಪ್ರಶಾಂತ್ ನೀಲ್ ಕಟ್ಟುನಿಟ್ಟಿನ ಕ್ರಮ ಜಾರಿ

ಸಲಾರ್ ಸಿನಿಮಾತಂಡಕ್ಕೆ ಹೊಸ ಸಮಸ್ಯೆ ಎದುರಾಗಿದೆ. ಚಿತ್ರದ ವಿಡಿಯೋಗಳು ಮತ್ತು ಫೋಟೋಗಳು ಲೀಕ್ ಆಗುತ್ತಿದ್ದು ಪ್ರಶಾಂತ್ ನೀಲ್‌ಗೆ ಹೊಸ ತಲೆನೋವಾಗಿದೆ. ಹಾಗಾಗಿ ನೀಲ್ ಚಿತ್ರೀಕರಣ ಸೆಟ್‌ನಲ್ಲಿ ಹೊಸ ನಿಯಮ ಜಾರಿ ಮಾಡಿದ್ದಾರೆ ಎನ್ನಲಾಗಿದೆ. 

Director prashanth neel upset on salar leaks and he Introduces New Rules sgk

ಸ್ಯಾಂಡಲ್‌ವುಡ್ ನಿರ್ದೇಶಕ, ಕೆಜಿಎಫ್ ಸಾರಥಿ ಪ್ರಶಾಂತ್ ನೀಲ್  ಮತ್ತು ಟಾಲಿವುಡ್ ಸ್ಟಾರ್ ಪ್ರಭಾಸ್ ಕಾಂಬಿನೇಷನ್‌ನಲ್ಲಿ ಬರ್ತಿರುವ ಸಲಾರ್ ಸಿನಿಮಾ ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟುಹಾಕಿದೆ. ಸಲಾರ್ ಸಿನಿಮಾದಿಂದ ಕೇವಲ ಪ್ರಭಾಸ್ ಲುಕ್ ಮಾತ್ರ ರಿವೀಲ್ ಆಗಿದೆ. ಆದರೂ ಸಿನಿಮಾದ ಮೇಲೆ ನಿರೀಕ್ಷೆ ದುಪ್ಪಟ್ಟಾಗಿದೆ. ಸಲಾರ್ ಸಿನಿಮಾದಲ್ಲಿ ಪ್ರಭಾಸ್ ಮಾಸ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಶೂಟಿಂಗ್ ಪ್ರಾರಂಭವಾಗಿದ್ದು ಅರ್ಧಭಾಗ ಮುಕ್ತಾಯವಾಗಿದೆ. ಸದ್ಯ ಸಲಾರ್ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಆದರೆ ಈ ನಡುವೆ ಸಿನಿಮಾತಂಡಕ್ಕೆ ಹೊಸ ಸಮಸ್ಯೆ ಎದುರಾಗಿದೆ. ಚಿತ್ರದ ವಿಡಿಯೋಗಳು ಮತ್ತು ಫೋಟೋಗಳು ಲೀಕ್ ಆಗುತ್ತಿದ್ದು ಪ್ರಶಾಂತ್ ನೀಲ್‌ಗೆ ಹೊಸ ತಲೆನೋವಾಗಿದೆ. ಹಾಗಾಗಿ ನೀಲ್ ಚಿತ್ರೀಕರಣ ಸೆಟ್‌ನಲ್ಲಿ ಹೊಸ ನಿಯಮ ಜಾರಿ ಮಾಡಿದ್ದಾರೆ ಎನ್ನಲಾಗಿದೆ. 

ಅಂದಹಾಗೆ ಸಲಾರ್ ಫೋಟೋ ಮತ್ತು ವಿಡಿಯೋಗಳು ಲೀಕ್ ಆಗುತ್ತಿರುವುದು ಇದೇ ಮೊದಲಲ್ಲ. ಈಗಾಗಲೇ ಚಿತ್ರೀಕರಣ ಸೆಟ್ ನಿಂದ ಅನೇಕ ಫೋಟೋ ಮತ್ತು ವಿಡಿಯೋ ಲೀಕ್ ಆಗಿವೆ. ಎಷ್ಟೇ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡರು ಲೀಕ್ ಆಗುತ್ತಿರುವುದನ್ನು ತಡೆಯಲು ಸಾಧ್ಯವಾಗುತ್ತಿಲ್ಲ. ಕಟ್ಟುನಿಟ್ಟು ಮಾಡಿದ್ದರೂ ಸಹ ವಿಡಿಯೋ ಲೀಕ್ ಆಗುತ್ತಿರುವುದರಿಂದ ತಾಂತ್ರಿಕ ವರ್ಗದ ಮೇಲೆ ಅನುಮಾನ ಬಂದಿದೆ.ಇದು ಪ್ರಶಾಂತ್ ನೀಲ್ ಕೋಪಕ್ಕೆ ಕಾರಣವಾಗಿದೆ. ಹೀಗೆ ಫೋಟೋ ಮತ್ತು ವಿಡಿಯೋಗಳು ಲೀಕ್ ಆಗುತ್ತಿದ್ದರೆ ಟೀಸರ್ ಮತ್ತು ಫಸ್ಟ್ ಲುಕ್ ಮೇಲಿನ ಕುತೂಹಲ ಕಡಿಮೆಯಾಗುತ್ತದೆ. ಹಾಗಾಗಿ ಪ್ರಶಾಂತ್ ನೀಲ್ ಹೊಸ ನಿಯಮ ಜಾರಿ ಮಾಡಿದ್ದಾರೆ. 

ಚಿತ್ರೀಕರಣ ಸೆಟ್ ನಲ್ಲಿ ಯಾರು ಮೊಬೈಲ್ ಫೋನ್ ಬಳಸದಂತೆ ಕಟ್ಟುನಿಟ್ಟಿನ ಎಚ್ಚರಿಕೆ ಪ್ರಶಾಂತ್ ನೀಲ್ ನೀಡಿದ್ದಾರೆ ಎನ್ನಲಾಗಿದೆ. ಎಲ್ಲಾ ಕಲಾವಿದರು, ಸಿಬ್ಬಂದಿ, ಸಹಾಯಕರು ಮತ್ತು ತಂತ್ರಜ್ಞರು ಸೇರಿದಂತೆ ಯಾರು ಸಹ ಮೊಬೈಲ್ ಫೋನ್ ಬಳಸದಂತೆ ಸೂಚಿಸಲಾಗಿದೆ. ಇಡೀ ಸಿನಿಮಾತಂಡ ಮೊಬೈಲ್‌ಗಳನ್ನು ಕ್ಯಾರವಾನ್ ಲಾಕರ್ ನಲ್ಲಿ ಇಟ್ಟು ಹೋಗಬೇಕೆಂದು ಸೂಚನೆ ನೀಡಲಾಗಿದೆ. ಚಿತ್ರೀಕರಣ ಪ್ರಾರಂಭವಾಗುವ ಮೊದಲು ಪ್ರತಿದಿನ ಯಾರಾದರೂ ಮೊಬೈಲ್ ಬಳಸುತ್ತಾರಾ ಎಂದು  ತಪಾಸಣೆ ಮಾಡಿ ಶೂಟಿಂಗ್ ಪ್ರಾರಂಭ ಮಾಡಲಾಗುತ್ತಿದೆಯಂತೆ.  

ಚಿಕ್ಕಪ್ಪನ ಪಾರ್ಥಿವ ಶರೀರ ನೋಡಿ ಬಿಕ್ಕಿ ಬಿಕ್ಕಿ ಅತ್ತ ಪ್ರಭಾಸ್; ಸಾಂತ್ವನ ಹೇಳಿದ ತೆಲುಗು ಸ್ಟಾರ್ಸ್

ಅಂದಹಾಗೆ ಈ ರೀತಿಯ ಕ್ರಮ ಕೈಗೊಂಡಿರುವುದು ಸಲಾರ್ ಸಿನಿಮಾತಂಡ ಮಾತ್ರವಲ್ಲ,ಈ ವೊದಲು ಕೆಜಿಎಫ್ ಮತ್ತು ಆರ್ ಆರ್ ಆರ್ ಸಿನಿಮಾತಂಡ ಕೂಡ ಇದೇ ರೀತಿ ಮಾಡಿತ್ತು. ಯಾವುದೇ ಫೋಟೋ ಅಥವಾ ವಿಡಿಯೋ ಲೀಕ್ ಆಗದಂತೆ ತಡೆಯಲು ರಾಜಮೌಳಿ ಇದೇ ಕ್ರಮ ಕೈಗೊಂಡಿದ್ದರು. ಇದೀಗ ಸಲಾರ್ ತಂಡ ಕೂಡ ಸೆಟ್‌ನಲ್ಲಿ ಮೊಬೈಲ್ ಬ್ಯಾನ್ ಮಾಡಿದೆ.

ಆಂಧ್ರಪ್ರದೇಶದ ಆಸ್ಪತ್ರೆಗೆ 50 ಲಕ್ಷ ರೂ. ದೇಣಿಗೆ ನೀಡಿದ ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್

ನಟ ಪ್ರಭಾಸ್ ಅನೇಕ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಆದಿಪುರುಷ್ ಸಿನಿಮಾ ಕೆಲಸದ ಜೊತೆಗೆ ಸಲಾರ್ ಸಿನಿಮಾದಲ್ಲೂ ತೊಡಗಿಕೊಂಡಿದ್ದಾರೆ. ಇತ್ತೀಚಿಗಷ್ಟೆ ಪ್ರಭಾಸ್ ತನ್ನ ಚಿಕ್ಕಪ್ಪನನ್ನು ಕಳೆದುಕೊಂಡರು. ತಂದೆಸ್ಥಾನದಲ್ಲಿದ್ದ ಚಕ್ಕಪ್ಪನ ಅಗಲಿಗೆ ಪ್ರಭಾಸ್‌ಗೆ ದೊಡ್ಡ ಆಘಾತವಾಗಿತ್ತು. ಚಿಕ್ಕಪ್ಪನ ಕಾರ್ಯ ಮುಗಿಸಿ ಪ್ರಭಾಸ್ ಮತ್ತೆ ಶೂಟಿಂಗ್ ಹಾಜರಾಗಿದ್ದಾರೆ. ಸದ್ಯ ಚಿತ್ರೀಕರಣ ನಡೆಯುತ್ತಿದ್ದಾರೆ. ಈ ಸಿನಿಮಾದಲ್ಲಿ ನಾಯಕಿಯಾಗಿ ಶ್ರುತಿ ಹಾಸನ್ ಕಾಣಿಸಿಕೊಂಡಿದ್ದಾರೆ. ಇನ್ನು ಮಲಯಾಳಂ ನಟ ಪೃಥ್ವಿರಾಜ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಭಾರಿ ಕುತೂಹಲ ಮೂಡಿಸಿರುವ ಸಿನಿಮಾ ಮುಂದಿನ ವರ್ಷ ತೆರೆಗೆ ಬರುತ್ತಿದೆ.    
 

Latest Videos
Follow Us:
Download App:
  • android
  • ios