Asianet Suvarna News Asianet Suvarna News

ಬಾಲಿವುಡ್ ರಾಮಾಯಣಕ್ಕೆ ಯಶ್ ಸಂಭಾವನೆ ಎಷ್ಟು?: ರಾವಣನ ಪಾತ್ರಕ್ಕೆ ಭರ್ಜರಿ ತಯಾರಿ!

ಯಶ್ ಅಂದ್ರೆ ನಮ್ಗೆಲ್ಲಾ ನೆನಪಾಗೋದೆ ಕೆಜಿಎಫ್ ಸಿನಿಮಾದ ರಾಕಿಭಾಯ್. ದೊಡ್ಡಮ್ಮನ ಕೈಲಿಡ್ಕೊಂಡು ಉದ್ದದ್ದ ಡೈಲಾಗ್ ಹೊಡೀತಾ  ನಾನ್ ಹೊಡ್ದಿದ್ದು ಪ್ರತಿಯೊಬ್ಬಾನೂ ಡಾನೆ ಅಂತ ಗುಂಡ್ ಹೊಡಿಯೋ ರೆಬೆಲ್ ಯಶ್ ನಮ್ ಕಣ್ಮುಂದೆ ಬರ್ತಾರೆ. 

buzz is that rocking star yash charged 150 crore for ravana character in ramayana epic gvd
Author
First Published Oct 23, 2023, 9:03 PM IST

ಯಶ್ ಅಂದ್ರೆ ನಮ್ಗೆಲ್ಲಾ ನೆನಪಾಗೋದೆ ಕೆಜಿಎಫ್ ಸಿನಿಮಾದ ರಾಕಿಭಾಯ್. ದೊಡ್ಡಮ್ಮನ ಕೈಲಿಡ್ಕೊಂಡು ಉದ್ದದ್ದ ಡೈಲಾಗ್ ಹೊಡೀತಾ  ನಾನ್ ಹೊಡ್ದಿದ್ದು ಪ್ರತಿಯೊಬ್ಬಾನೂ ಡಾನೆ ಅಂತ ಗುಂಡ್ ಹೊಡಿಯೋ ರೆಬೆಲ್ ಯಶ್ ನಮ್ ಕಣ್ಮುಂದೆ ಬರ್ತಾರೆ. ಇದೀಗ ಯಶ್ 19 , ಕೆಜಿಎಫ್ 3 ಸಿನಿಮಾಗಳು ಯಶ್ ಖಾತೆಯಲ್ಲಿದ್ದು ಅದಕ್ಕೂ ಮುನ್ನ ಯಶ್ ರಾವಣನಾಗ್ತಾರೆ ಅನ್ನೋ ಸುದ್ದಿ ದಟ್ಟವಾಗಿ ಹಬ್ಬಿದೆ.ಬಾಲಿವುಡ್ನಲ್ಲಿ ರಾಮಾಯಣ ಮಾಡೋದು ಖಚಿತವಾಗಿದೆ. ರಣ್ಬೀರ್ಕಪೂರ್ ರಾಮನಾಗಿ ಹಾಗೂ ಸಾಯಿಪಲ್ಲವಿ ಸೀತೆಯಾಗಿ ನಟಿಸುವುದು ಖಚಿತವಾಗಿದೆ, ಇ್ತತ ರಾಕಿಭಾಯ್ ಯಶ್ ರಾವಣನ ಪಾತ್ರ ಮಾಡಬೇಕೆಂದು ಅವರಿಗಾಗಿ ಈಗಾಗಲೆ ಲುಕ್ ಟೆಸ್ಟ್ ಕೂಡ ಮಾಡಲಾಗಿದೆಯೆಂದು ಚರ್ಚೆಗಳಾಗುತ್ತಿವೆ. 

ಈ ನಡುವೆ ಯಶ್ ಮಾಡುತ್ತಿರೋ ರಾವಣನ ಪಾತ್ರಕ್ಕೆ ಯಶ್ ಪಡೆಯುತ್ತಿರೋ ಸಂಭಾವನೆ ಎಷ್ಟು ಗೊತ್ತಾ ಎಂಬ ಚರ್ಚೆ ದೊಡ್ಡಾಗುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತವೆ ಯಶ್ ರಾವಣನ ಲುಕ್ ನ ಫೋಟೋಗಳು. ಮತ್ತೊಂದು ಕಡೆ ಯಾವಾಗ ಯಶ್ ಬಾಲಿವುಡ್ ರಾಮಾಯಣದಲ್ಲಿ ರಾವಣನಾಗ್ತಾರೆ ಅನ್ನೋ ಸುದ್ದಿ ವೈರಲ್ ಆಗುತ್ತಿದ್ದಂತೆ. ಯಶ್ ಲುಕ್ ಟೆಸ್ಟ್ನ ಗ್ರ್ಯಾಫಿಕ್ಸ್ ಫೋಟೋಗಳು ಸಹ ವೈರಲ್ ಆಗುತ್ತಿವೆ.ಆದರೆ ಬಾಲಿವುಡ್ನ ಖ್ಯಾತ ನಿರ್ದೇಶಕ ನಿತೀಶ್ ತಿವಾರಿ ಮಾಡುತ್ತಿರೋ ಬಾಲಿವುಡ್ ಸಿನಿಮಾ ರಾಮಾಯಣದ ರಾವಣನ ಪಾಥ್ರಕ್ಕೆ ಯಶ್ ಕೇಳಿರೋ ಸಂಭಾವನೆ ದೊಡ್ಡ ಮೊತ್ತದ್ದು ಎನ್ನಲಾಗಿದೆ. 

ರಾಮನ ಪಾಥ್ರಧಾರಿ ರಣ್ಬೀರ್ ಕಪೂರ್ಗಿಂತ ಯಶ್ ಹೆಚ್ಚು ಸಂಭಾವನೆ ಪಡೆಯು್ತತಾಋಎಂಬ ಸುದ್ದಿ ವೈರಲ್ ಆಗುತ್ತಿದೆ. ಯಶ್ 100 ರಿಂದ 150 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆಂಬ ಸುದ್ದಿ ಇದೀಗ ಬಾಲಿವುಡ್ ಅಂಗಳಲ್ಲಿದೆ.  ಇದೆಲ್ಲ ಚರ್ಚೆಗಳ ನಡುವೆ ಯಶ್ ಮೂಲಗಳು ಹೇಳುವಂತೆ ಯಶ್ಗೆ ರಾವಣನ ಪಾತ್ರಕ್ಕೆ ಅಪ್ರೋಚ್ ಮಾಡಿದ್ದು ನಿಜ.. ಆದ್ರೆ ಯಶ್ ಒಪ್ಪಿಕೊಂಡಿಲ್ಲ. ಮೊದಲೆ ರಾವಣನ ಪಾತ್ರ ವಿಲನ್ ಪಾತ್ರ. ರಾವಣ ಅದರಲ್ಲೂ ಒಬ್ಬ ರಾಕ್ಷಸ ಅಂಥಾ ಪಾತ್ರ ಯಶ್ ಯಾಕೆ ಮಾಡ್ತಾರೆ ಎನ್ನುತ್ತಿದ್ದಾರೆ. 

Challenging Star Darshan ನನ್ನ ದೊಡ್ಡ ಫ್ಯಾನ್ ಅಂತೆ: ನಟ ನಾಗಭೂಷಣ್‌

ಜೊತೆಗೆ ಯಶ್ ಕೂಡ ಬಾಲಿವುಡ್ನವರನ್ನೆ  ನಾನು ಇಲ್ಲಿಗೆ ಕರೆಸ್ತೀನಿ. ನಾನ್ಯಾಕೆ ಅಲ್ಲಿಗೆ ಹೋಗಲಿ ಎಂದಿದ್ದರು. ಅಂದಹಾಗೆ ಯಶ್ ಕೆಜಿಎಫ್ ಸಿನಿಮಾ ಬಾಲಿವುಡ್ ನಲ್ಲಿ ಬಾರೀ ಸೌಂಡ್ ಮಾಡಿತ್ತು. ಇದರಿಂದಾಗಿಯೇ ಬಾಲಿವುಡ್ ಮಂದಿ  ರಾಕಿಭಾಯ್ಗೆ ಹಲವು ಸಿನಿಮಾಗಳನ್ನು ಮಾಡಲು ಮಾತುಕತೆ ಮಾಡುತ್ತಲೆ ಇದ್ದಾರೆ. ಆದ್ರೆ ನಮ್ ರಾಮಾಚಾರಿ ಲೆಕ್ಕಾಚಾರವೇ ಬೇರೆ. ಯಶ್ 19 ಸಿನಿಮಾದ ಮೇಲೆ ಫುಲ್ ಫೋಕಸ್ ಮಾಡಿದ್ದಾರೆ. ಅದಾದ ನಂತರ ಕೆಜಿಎಫ್ 3. ಇವೆಲ್ಲ ಮುಗಿಯೋ ಹೊತ್ಗೆ 5 ವರ್ಷ ಆಗೋಗುತ್ತೆ. ಮುಂದಕ್ಕೆ ಯೋಚನೆ ಮಾಡ್ಬೇಕಿದೆ. ಈ ಗ್ಯಾಪಲ್ಲಿ ಯಶ್ ಯಾವಾಗ ರಾಔಣ ಆಗ್ತಾರೋ ಕಾದು ನೋಡಬೇಕಿದೆ.

Follow Us:
Download App:
  • android
  • ios