ಬಾಲಿವುಡ್ ಖ್ಯಾತ ನಿರ್ದೇಶಕ ಕಬೀರ್ ಖಾನ್ ಟ್ರೋಲ್ ಗಳ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಹೆಸರಲ್ಲಿ ಖಾನ್ ಇದೆ ಎನ್ನುವ ಕಾರಣಕ್ಕೆ ಪಾಕಿಸ್ತಾನಕ್ಕೆ ಹೋಗು ಎನ್ನುತ್ತಾರೆ ಎಂದು ಕಬೀರ್ ಖಾನ್ ಬೇಸರ ಹೊರಹಾಕಿರು.

ಬಾಲಿವುಡ್ ನ ಖ್ಯಾತ ನಿರ್ದೇಶಕರಲ್ಲಿ ಕಬೀರ್ ಖಾನ್ ಕೂಡ ಒಬ್ಬರು. ಬಜರಂಗಿ ಭಾಯಿಜಾನ್, 83, ನ್ಯೂ ಯಾರ್ಕ್ ಅಂತಹ ಹಿಟ್ ಸಿನಿಮಾಗಳನ್ನು ನೀಡಿರುವ ಕಬೀರ್ ಖಾನ್ ಸದಾ ಟ್ರೋಲ್ ಗಳ ಕೆಂಗಣ್ಣಿಗೆ ಗುರಿಯಾಗುತ್ತಿರುತ್ತಾರೆ. ಕಬೀರ್ ಅವರಿಗೆ ಆಗಾಗ ಹೇಟ್ ಮೆಸೇಜ್ ಗಳು ಬರುತ್ತಲೇ ಇರುತ್ತೆ. ಪಾಕಿಸ್ತಾನಕ್ಕೆ ಹೋಗಿ ಎಂದು ಅನೇಕರು ಕಾಮೆಂಟ್ ಮಾಡುತ್ತಿರುತ್ತಾರೆ. ಈ ಬಗ್ಗೆ ನಿರ್ದೇಶಕ ಕಬೀರ್ ಖಾನ್ ಈಗ ಮೌನ ಮುರಿದಿದ್ದಾರೆ.

ದೇಶಭಕ್ತಿ ಮತ್ತು ರಾಷ್ಟ್ರೀಯತೆ ನಡುವೆ ವ್ಯತ್ಯಾಸವಿದೆ ಎಂದು ಹೇಳುವ ಜೊತೆಗೆ ಟ್ರೋಲ್ ಗಳನ್ನು ಹೇಗೆ ಎದರಿಸುತ್ತಾರೆ ಎನ್ನುವ ಬಗ್ಗೆಯೂ ಬಹಿರಂಗ ಪಡಿಸಿದರು. ಪಾಕಿಸ್ತಾನಕ್ಕೆ ಹಿಂದಿರುಗಿ ಎಂದು ಟ್ರೋಲ್ ಮಾಡಿದಾಗ ತುಂಬಾ ಬೇಸರವಾಗುತ್ತದೆ ಎಂದು ಕಬೀರ್ ಖಾನ್ ಹೇಳಿದರು.

ಎಬಿಪಿ ಸಮ್ಮೇಳನದಲ್ಲಿ ಮಾತನಾಡಿದ ಕಬೀರ್ ಖಾನ್, ಇಂದು ನಮ್ಮ ಸ್ವಂತ ಪದಗಳನ್ನು ಹೊಂದುವ ಜವಾಬ್ದಾರಿ ಇಲ್ಲ. ಇದು ತುಂಬ ಕೆಟ್ಟ ಭಾವನೆಗಳನ್ನು ನೀಡುತ್ತದೆ. ಆದರೆ ಅದೇ ವಾಸ್ತವದಲ್ಲಿ ಬದುಕುತ್ತಿದ್ದೇವೆ. ಸಾಮಾಜಿಕ ಮಾಧ್ಯಮಗಳಲ್ಲಿ ನೆಗೆಟಿವಿಟಿ ಹೆಚ್ಚು ಹರಿದಾಡುತ್ತದೆ. ಪಾಸಿಟಿವಿಟಿಗಿಂತ ನೆಗೆಟಿವಿಟಿ ಅತೀ ಹೆಚ್ಚು ಪ್ರಭಾವ ಬೀರುತ್ತೆ ಎನ್ನುವುದನ್ನು ಅರಿತುಕೊಂಡಿದ್ದೇನೆ. ನನ್ನ ಹೆಸರು ಖಾನ್ ಹಾಗಾಗಿ ಪಾಕಿಸ್ತಾನಕ್ಕೆ ಹೋಗು ಎಂದು ಅನೇಕರು ಹೇಳುತ್ತಾರೆ. ನಾನು ಪಾಕಿಸ್ತಾನಕ್ಕೆ ಹೋಗಿದ್ದೆ. ಆ ಲಷ್ಕರ್ ಸಂಘಟನೆ ಅವರು ಭಾರತಕ್ಕೆ ಹಿಂತಿರುಗಲು ಹೇಳಿದರು. ಹಾಗಾಗಿ ನಾನು ಇಲ್ಲಿಯೂ ಇಲ್ಲ, ಅಲ್ಲಿಯೂ ಇಲ್ಲ ಎಂದಿದ್ದಾರೆ.

83 Movie: ರಣವೀರ್‌ ಸಿಂಗ್‌ ಸಂಭಾವನೆ ಬಿಟ್ಟುಕೊಡುವ ಸಾಧ್ಯತೆ

ಟ್ರೋಲ್ ಗಳ ಬಗ್ಗೆ ಮಾತನಾಡಿದ ನಂತರ ಕಬೀರ್ ಖಾನ್ ದೇಶಭಕ್ತಿ ಮತ್ತು ರಾಷ್ಟ್ರೀಯತೆ ನಡುವಿನ ವ್ಯತ್ಯಾಸದ ಬಗ್ಗೆ ಬಹಿರಂಗ ಪಡಿಸಿದರು. ಪ್ರತಿಯೊಬ್ಬ ಚಲನಚಿತ್ರ ನಿರ್ಮಾಪಕರು ತಮ್ಮದೇ ಆದ ಆಲೋಚನೆಗಳನ್ನು ಹೊಂದಿರಬೇಕು (ಅವರು ಮಾಡುವ ಸಿನಿಮಾಗಳಲ್ಲಿ). ನಾವು ಕೆಲವೊಮ್ಮೆ ಚಲನಚಿತ್ರಗಳಲ್ಲಿ ತ್ರಿವರ್ಣ ಧ್ವಜವನ್ನು ತೋರಿಸುತ್ತೇವೆ, ಆದರೆ ಇಂದು ದೇಶಭಕ್ತಿ ಮತ್ತು ರಾಷ್ಟ್ರೀಯತೆ ನಡುವೆ ವ್ಯತ್ಯಾಸವಿದೆ. ಎಂದು ಅವರ 83 ಸಿನಿಮಾದ ಉದಾಹರಣೆಯನ್ನು ನೀಡಿದರು.

Kichcha Sudeep: 36 ವರ್ಷದ ಹಳೆಯ ಕನಸನ್ನು ನನಸು ಮಾಡಿಕೊಂಡ ಕಿಚ್ಚ

ಕಬೀರ್ ಖಾನ್ ಸಿನಿಮಾ ವಿಚಾರಕ್ಕೆ ಬರುವುದಾದರೆ, ಇತ್ತೀಚಿಗಷ್ಟೆ ಬಿಡುಗಡೆಯಾದ ಕಬೀರ್ ಖಾನ್ ನಿರ್ದೇಶನದ 83 ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. 1983ರಲ್ಲಿ ಟೀಂ ಇಂಡಿಯಾ ವಿಶ್ವಕಪ್ ಗೆದ್ದ ರೋಚಕ ಕ್ಷಣವನ್ನು ತೆರೆಮೇಲೆ ಅದ್ಭುತವಾಗಿ ಕಟ್ಟಿಕೊಟ್ಟಿದ್ದರು ಕಬೀರ್ ಖಾನ್. ಈ ಸಿನಿಮಾ ಕಲೆಕ್ಷನ್​ 100 ಕೋಟಿ ರೂಪಾಯಿ ದಾಟಿತ್ತು. ಇತ್ತೀಚೆಗೆ ಚಿತ್ರ ಒಟಿಟಿಯಲ್ಲಿ ತೆರೆಗೆ ಬಂದಿದೆ. ವಿಶೇಷ ಎಂದರೆ ಎರಡು ಒಟಿಟಿ ಪ್ಲಾಟ್​ ಫಾರ್ಮ್​ ಗಳಲ್ಲಿ ಈ ಚಿತ್ರ ರಿಲೀಸ್​ ಆಗಿದೆ. ನೆಟ್​ಫ್ಲಿಕ್ಸ್ ಹಾಗೂ ಡಿಸ್ನಿ ಪ್ಲಸ್​ ಹಾಟ್​ ಸ್ಟಾರ್​ನಲ್ಲಿ ಈ ಚಿತ್ರ ಬಿಡುಗಡೆ ಆಗಿದೆ. ಈ ಚಿತ್ರದಲ್ಲಿ ರಣವೀರ್ ಸಿಂಗ್, ಖ್ಯಾತ ಕ್ರಿಕೆಟಿಗ ಲೆಜೆಂಡ್ ಕಪಿಲ್ ದೇವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಕಪಿಲ್ ಪತ್ನಿಯ ಪಾತ್ರದಲ್ಲಿ ದೀಪಿಕಾ ಪಡುಕೋಣೆ ಕಾಣಿಸಿಕೊಂಡಿದ್ದರು.